AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟಿ20 ಏಷ್ಯಾಕಪ್​ನಲ್ಲಿ ಟೀಂ ಇಂಡಿಯಾದ ದಾಖಲೆ ಹೇಗಿದೆ?

Women's Asia Cup 2026: 2026 ರ ಮಹಿಳಾ ಏಷ್ಯಾಕಪ್‌ ಆಗಸ್ಟ್ 28 ರಿಂದ ಟಿ20 ಮಾದರಿಯಲ್ಲಿ ಆರಂಭವಾಗಿದೆ. ಹರ್ಮನ್‌ಪ್ರೀತ್ ಕೌರ್ ನೇತೃತ್ವದ ಭಾರತ ತಂಡ 25 ಪಂದ್ಯಗಳಲ್ಲಿ 21 ಗೆದ್ದು, 3 ಬಾರಿ ಚಾಂಪಿಯನ್ ಆಗಿ ಪ್ರಶಸ್ತಿ ಉಳಿಸಿಕೊಳ್ಳಲು ಸಿದ್ಧವಾಗಿದೆ. ಸ್ಮೃತಿ ಮಂಧಾನ, ಶಫಾಲಿ ವರ್ಮಾ ಮತ್ತು ದೀಪ್ತಿ ಶರ್ಮಾ ಅವರಂತಹ ಪ್ರಮುಖ ಆಟಗಾರ್ತಿಯರ ಬಲದೊಂದಿಗೆ, ಭಾರತ ನಾಲ್ಕನೇ ಕಪ್ ಗೆಲ್ಲುವ ವಿಶ್ವಾಸದಲ್ಲಿದೆ.

ಪೃಥ್ವಿಶಂಕರ
|

Updated on: Aug 28, 2026 | 10:38 PM

Share
2026 ರ ಮಹಿಳಾ ಏಷ್ಯಾಕಪ್ ಶುಕ್ರವಾರದಿಂದ ಅಂದರೆ ಆಗಸ್ಟ್ 28 ರಿಂದ ಆರಂಭವಾಗಿದೆ. ಈ ವರ್ಷ, ಟೂರ್ನಮೆಂಟ್ ಟಿ20 ಮಾದರಿಯಲ್ಲಿ ನಡೆಯಲಿದೆ. ಹರ್ಮನ್ ಪ್ರೀತ್ ಕೌರ್ ನಾಯಕತ್ವದ ಭಾರತ ತಂಡ ಕೂಡ ಪ್ರಶಸ್ತಿ ಗೆಲ್ಲುವ ಇರಾದೆಯೊಂದಿಗೆ ಪಂದ್ಯಾವಳಿಯನ್ನು ಪ್ರವೇಶಿಸಿದೆ. ಹಾಗಿದ್ದರೆ ಟಿ20 ಏಷ್ಯಾಕಪ್​ನಲ್ಲಿ ಟೀಂ ಇಂಡಿಯಾದ ದಾಖಲೆ ಹೇಗಿದೆ ಎಂಬುದನ್ನು ನೋಡೋಣ(PC-PTI).

1 / 5
ಭಾರತ ಮಹಿಳಾ ತಂಡವು ಟಿ20 ಏಷ್ಯಾಕಪ್​ನಲ್ಲಿ ಉತ್ತಮ ಪ್ರದರ್ಶನ ನೀಡಿದೆ. ಒಟ್ಟಾರೆಯಾಗಿ, ಭಾರತ ಟಿ20 ಏಷ್ಯಾಕಪ್​ನಲ್ಲಿ 25 ಪಂದ್ಯಗಳನ್ನು ಆಡಿದೆ. ಈ 25 ಪಂದ್ಯಗಳಲ್ಲಿ ಹರ್ಮನ್​ಪ್ರೀತ್​ ಕೌರ್ ಪಡೆ 21 ಪಂದ್ಯಗಳನ್ನು ಗೆದ್ದಿದೆ. ಉಳಿದಂತೆ ಕೇವಲ ನಾಲ್ಕರಲ್ಲಿ ಮಾತ್ರ ಸೋತಿದೆ. ಹಾಗೆಯೇ ಭಾರತ ತಂಡವು ಮೂರು ಬಾರಿ ಟಿ20 ಏಷ್ಯಾ ಕಪ್ ಗೆದ್ದಿದೆ(PC-PTI).

2 / 5
ಟೀಂ ಇಂಡಿಯಾ 2012, 2016 ಮತ್ತು 2022 ರಲ್ಲಿ ಟ್ರೋಫಿಯನ್ನು ಗೆದ್ದಿದ್ದು, ಈ ಬಾರಿಯೂ ಉತ್ತಮ ಪ್ರದರ್ಶನ ನೀಡುವ ನಿರೀಕ್ಷೆಯಿದೆ. ತಂಡದ ಆರಂಭಿಕ ಆಟಗಾರ್ತಿಯರಾದ ಸ್ಮೃತಿ ಮಂಧಾನ ಮತ್ತು ಶಫಾಲಿ ವರ್ಮಾ ತಂಡಕ್ಕೆ ಉತ್ತಮ ಆರಂಭ ನೀಡುವ ಜವಾಬ್ದಾರಿಯನ್ನು ಹೊತ್ತಿದ್ದಾರೆ. ಟೂರ್ನಮೆಂಟ್ ಇತಿಹಾಸದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ್ತಿಯರಲ್ಲಿ ಮಂಧಾನ ಕೂಡ ಒಬ್ಬರು(PC-PTI).

3 / 5
ಜೆಮಿಮಾ ರೊಡ್ರಿಗಸ್ ಅನುಪಸ್ಥಿತಿಯಲ್ಲಿ, ನಾಯಕಿ ಹರ್ಮನ್ಪ್ರೀತ್ ಕೌರ್ ಮಧ್ಯಮ ಕ್ರಮಾಂಕದ ಜವಾಬ್ದಾರಿಯನ್ನು ಹೊರಲಿದ್ದಾರೆ. ರಿಷಾ ಘೋಷ್ ಮತ್ತು ದೀಪ್ತಿ ಶರ್ಮಾ ಈ ಪಂದ್ಯಾವಳಿಯಲ್ಲಿ ತಂಡಕ್ಕೆ ಟ್ರಂಪ್ ಕಾರ್ಡ್‌ಗಳಾಗಿದ್ದಾರೆ. ಬೌಲಿಂಗ್ ವಿಭಾಗದಲ್ಲಿ, ಕ್ರಾಂತಿ ಗೌಡ್ ಮತ್ತು ರೇಣುಕಾ ಠಾಕೂರ್ ವೇಗದ ದಾಳಿಯನ್ನು ಮುನ್ನಡೆಸಲಿದ್ದು, ಶ್ರೀ ಚರಣಿ ಮತ್ತು ರಾಧಾ ಯಾದವ್ ಸ್ಪಿನ್ ವಿಭಾಗದ ಜವಾಬ್ದಾರಿಯನ್ನು ವಹಿಸಿಕೊಳ್ಳಲಿದ್ದಾರೆ(PC-PTI).

4 / 5
ಏಷ್ಯಾಕಪ್‌ಗೆ ಭಾರತ ಮಹಿಳಾ ತಂಡ: ಹರ್ಮನ್‌ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂಧಾನ (ಉಪನಾಯಕಿ), ಶೆಫಾಲಿ ವರ್ಮಾ, ಭಾರತಿ ಫುಲ್‌ಮಾಲಿ, ದೀಪ್ತಿ ಶರ್ಮಾ, ರಿಚಾ ಘೋಷ್ (ವಿಕೆಟ್‌ಕೀಪರ್), ಜಿ. ಕಮಲಿನಿ (ವಿಕೆಟ್‌ಕೀಪರ್), ಅರುಂಧತಿ ರೆಡ್ಡಿ, ಪ್ರೇಮಾ ರಾವತ್, ರಾಧಾ ಯಾದವ್, ಶ್ರೀ ಚರಣಿ, ರೇಣುಕಾ ಸಿಂಗ್ ಠಾಕೂರ್, ನಂದನಿ ಶರ್ಮಾ, ಕ್ರಾಂತಿ ಗೌಡ್, ಪ್ರತೀಕಾ ರಾವಲ್(PC-PTI).

5 / 5
Follow Us
ನೇಪಾಳದಿಂದ ರಕ್ಷಿಸಲ್ಪಟ್ಟ 21 ಯಾತ್ರಿಕರನ್ನು ಸ್ವಾಗತಿಸಿದ ಸಚಿವ ಜೈಶಂಕರ್

ಮಂಡ್ಯದಲ್ಲಿ ಭಿಕ್ಷುಕರ ಬಳಿ ಕಂತೆ ಕಂತೆ ಹಣ ಪತ್ತೆ

ಅರಮನೆ ಪ್ರವೇಶಿಸುತ್ತಿದ್ದಂತೆ ಜನರನ್ನ ಕಂಡು ಗಾಬರಿಗೊಂಡ ಶ್ರೀರಾಮ ಆನೆ

ಬಿಗ್​​ಬಾಸ್ ಅಗ್ನಿಪರೀಕ್ಷೆ: ಗೋಲ್ಡಲ್ ಟಿಕೆಟ್ ಪಡೆಯಲು ಸ್ಪರ್ಧಿಗಳ ಹರಸಾಹಸ

Live: ಸಚಿವ ಸ್ಥಾನಕ್ಕೆ ಬಿ. ನಾಗೇಂದ್ರ ರಾಜೀನಾಮೆ ಘೋಷಣೆ

ಬೆಂಗಳೂರಿನ ಮಾಲ್​​​​ ಮೇಲೆ ಜಿಬಿಎ ಅಧಿಕಾರಿಗಳು ದಾಳಿ: 85 ಸಾವಿರ ದಂಡ

ಪಕ್ಕದಲ್ಲೇ ಮಾಂಜ್ರಾ ನದಿ ಇದ್ದರೂ ಇಸ್ಲಾಂಪುರದಲ್ಲಿ ನೀರಿಗಾಗಿ ತಪ್ಪದ ಪರದಾಟ

ಹೈಫೈವ್, ಸಿಹಿಮುತ್ತು, ತಮಾಷೆ; ಪ್ರಧಾನಿ ಮೋದಿಯ ರಕ್ಷಾಬಂಧನದ ಸಂಭ್ರಮ

ರೌಡಿಗಳ ಮಟ್ಟಹಾಕಲು ಸಿಎಂ ಡಿಕೆಶಿ ಮಾಸ್ಟರ್ ಪ್ಲಾನ್

ರಾಜ್ಯ ಸರ್ಕಾರ ದ್ವೇಷ ಭಾವನೆಯಿಂದ ವರ್ತಿಸುತ್ತಿದೆ; ಜೋಶಿ ಕಿಡಿ