
ಯಾವುದೇ ಟೂರ್ನಮೆಂಟ್‌ನಲ್ಲಿ ಭಾರತದ ವಿರುದ್ಧ ಪಂದ್ಯ ನಡೆದಾಗಲೆಲ್ಲಾ, ಪಂದ್ಯಕ್ಕೂ ಮೊದಲು ಪಾಕಿಸ್ತಾನದ (India vs Pakistan) ಕಡೆಯಿಂದ ತಲೆ ತಿರುಗುವಂತಹ ಹೇಳಿಕೆಗಳು ಕೇಳಿಬರುತ್ತವೆ. ಅಭಿಮಾನಿಗಳಿಂದ ಹಿಡಿದು, ಪಾಕ್ ತಂಡದ ಮಾಜಿ ಆಟಗಾರರು ಕೂಡ ಕೆಲವು ಅಸಾಧ್ಯವೆನಿಸುವ ಹೇಳಿಕೆಗಳನ್ನು ನೀಡಿ ನಗೆಪಾಟಲಿಗೀಡಾಗುತ್ತಾರೆ. ಇದನ್ನು ನಾವು ಹಲವು ಬಾರಿ ನೋಡಿದ್ದೇವೆ. ಇದೀಗ ಅಂತಹದ್ದೇ ಹೇಳಿಕೆಯನ್ನು ಪಾಕಿಸ್ತಾನದ ಮಾಜಿ ಆಟಗಾರ ತನ್ವೀರ್ ಅಹ್ಮದ್ (Tanvir Ahmed) ನೀಡಿದ್ದು, ಇದನ್ನು ನೋಡಿದ ಕ್ರಿಕೆಟ್ ಜಗತ್ತು ವಾಟ್ ಎ ಜೋಕ್ ಎಂದಿದೆ. ಪ್ರಸ್ತುತ ಪಾಕ್ ತಂಡದಲ್ಲಿರುವ ಆರಂಭಿಕ ಆಟಗಾರ ಸೈಮ್ ಅಯೂಬ್ (Saim Ayub), ಜಸ್ಪ್ರೀತ್ ಬುಮ್ರಾ (Jasprit Bumrah) ಅವರ ಒಂದೇ ಓವರ್‌ನಲ್ಲಿ 6 ಸಿಕ್ಸರ್‌ಗಳನ್ನು ಬಾರಿಸುವ ಸಾಮರ್ಥ್ಯ ಹೊಂದಿದ್ದಾರೆ ಎಂದು ತನ್ವೀರ್ ಅಹ್ಮದ್ ಬಹಿರಂಗ ಸವಾಲು ಹಾಕಿದ್ದಾರೆ.
ತನ್ವೀರ್ ಅಹ್ಮದ್ ಅವರ ಹೇಳಿಕೆಯನ್ನು ನೋಡಿದವರು ಇದೀಗ ಅವರನ್ನು ಗೇಲಿ ಮಾಡಲು ಆರಂಭಿಸಿದ್ದಾರೆ. ಏಕೆಂದರೆ ತನ್ವೀರ್ ಅಹ್ಮದ್ ಅತಿಯಾದ ಆತ್ಮವಿಶ್ವಾಸ ಇಟ್ಟುಕೊಂಡಿರುವ ಇದೇ ಸೈಮ್ ಅಯೂಬ್, ಒಮಾನ್ ವಿರುದ್ಧ ನಡೆದ ಪಂದ್ಯದಲ್ಲಿ ಖಾತೆಯನ್ನು ತೆರೆಯದೆ ಗೋಲ್ಡನ್ ಡಕ್ ಆದರು. ಅಂದರೆ ಸೈಮ್ ಅಯೂಬ್ ತಾವು ಎದುರಿಸಿದ ಮೊದಲ ಎಸೆತದಲ್ಲೇ ಎಲ್‌ಬಿಡಬ್ಲ್ಯೂ ಆಗಿ ಔಟಾದರು. ಇದನ್ನು ನೋಡಿದ ಅಭಿಮಾನಿಗಳು ಇದೀಗ ತನ್ವೀರ್ ಅಹ್ಮದ್ ಅವರನ್ನು ಗೇಲಿ ಮಾಡಲು ಶುರು ಮಾಡಿದ್ದಾರೆ. ಒಮಾನ್ ತಂಡದ ವಿರುದ್ಧವೇ ಸೊನ್ನೆ ಸುತ್ತಿರುವ ನಿಮ್ಮ ಆರಂಭಿಕ ಬುಮ್ರಾ ವಿರುದ್ಧ 6 ಎಸೆತಗಳಲ್ಲಿ 6 ಸಿಕ್ಸರ್‌ಗಳನ್ನು ಬಾರಿಸುವುದಿರಲಿ, ಕನಿಷ್ಠ ಒಂದು ಸಿಕ್ಸರ್ನಾದರೂ ಬಾರಿಸುತ್ತಾರಾ ನೋಡಿ ಎಂದಿದ್ದಾರೆ.
ಸೈಮ್ ಅಯೂಬ್ ಶೂನ್ಯಕ್ಕೆ ಔಟಾದ ಬಳಿಕ ತನ್ವೀರ್ ಅಹ್ಮದ್ರನ್ನು ತರಾಟೆಗೆ ತೆಗೆದುಕೊಂಡಿರುವ ಟೀಂ ಇಂಡಿಯಾ ಫ್ಯಾನ್ಸ್, ‘ಬುಮ್ರಾ ಓವರ್‌ನಲ್ಲಿ ಸಿಕ್ಸರ್ ಬಾರಿಸುವುದಿರಲಿ, ಕನಿಷ್ಠ ಮೂರು ಎಸೆತಗಳಾದರೂ ನಿಲ್ಲಲು ಹೇಳಿ. ಯುಎಇ ವಿರುದ್ಧ ಬುಮ್ರಾ ಯಾರ್ಕರ್ ಎಸೆದಿರುವುದನ್ನು ನೀವು ನೋಡಲಿಲ್ಲವೇ?. ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನ ವಿರುದ್ಧ ಸೋತಿರುವ ಪಾಕಿಸ್ತಾನ ತಂಡ, ಭಾರತಕ್ಕೆ ಸವಾಲು ಹಾಕುತ್ತಿರುವುದನ್ನು ನೋಡಿ ನಮಗೆ ನಗು ಬರುತ್ತಿದೆ’ ಎಂದು ಕಾಮೆಂಟ್ ಮಾಡಿದ್ದಾರೆ.
ಭಾರತ- ಪಾಕ್ ಪಂದ್ಯಕ್ಕೂ ಮುನ್ನ ಐಪಿಎಲ್- ಪಿಎಸ್ಎಲ್ ತಂಡಗಳ ನಡುವೆ ಪೋಸ್ಟರ್ ವಾರ್
ಬಾಬರ್ ಆಝಂ ಮತ್ತು ಮೊಹಮ್ಮದ್ ರಿಜ್ವಾನ್ ಅವರಂತಹ ಸ್ಟಾರ್ ಆಟಗಾರರು ತಂಡದಲ್ಲಿದ್ದರೂ, ಟೀಂ ಇಂಡಿಯಾ ಹಲವು ಬಾರಿ ಪಾಕಿಸ್ತಾನವನ್ನು ಮುಜುಗರಕ್ಕೀಡು ಮಾಡಿದೆ. ಪ್ರಸ್ತುತ ಅವರಿಲ್ಲದೆ ಆಡುತ್ತಿರುವ ಪಾಕಿಸ್ತಾನವನ್ನು ಭಾರತ ಸುಲಭವಾಗಿ ಸೋಲಿಸುತ್ತದೆ ಎಂಬುದು ತಜ್ಞರ ಅಭಿಪ್ರಾಯವಾಗಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ