ಭಾರತ- ಪಾಕ್ ಪಂದ್ಯಕ್ಕೂ ಮುನ್ನ ಐಪಿಎಲ್- ಪಿಎಸ್ಎಲ್ ತಂಡಗಳ ನಡುವೆ ಪೋಸ್ಟರ್ ವಾರ್
India vs Pakistan Asia Cup 2025: ಏಷ್ಯಾಕಪ್ 2025 ರಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ನಿರೀಕ್ಷಿತ ಪಂದ್ಯಕ್ಕೂ ಮುನ್ನ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟರ್ ಯುದ್ಧ ಶುರುವಾಗಿದೆ. ಪಂಜಾಬ್ ಕಿಂಗ್ಸ್ ಪಾಕಿಸ್ತಾನವನ್ನು ಅವಮಾನಿಸುವ ಪೋಸ್ಟರ್ ಹಂಚಿಕೊಂಡಿದ್ದರೆ, ಕರಾಚಿ ಕಿಂಗ್ಸ್ ಪ್ರತಿಕ್ರಿಯಿಸಿದೆ. ಭಾರತೀಯ ಅಭಿಮಾನಿಗಳು ಕರಾಚಿ ಕಿಂಗ್ಸ್‌ನ ಪ್ರತಿಕ್ರಿಯೆಯನ್ನು ಗೇಲಿ ಮಾಡಿದ್ದಾರೆ. ಪಂದ್ಯದ ಮೊದಲೇ ಉಭಯ ದೇಶಗಳ ಅಭಿಮಾನಿಗಳಲ್ಲಿ ಉತ್ಸಾಹ ಹೆಚ್ಚಿದೆ.

2025 ರ ಏಷ್ಯಾಕಪ್‌ನಲ್ಲಿ (Asia Cup 2025) ಭಾರತ ಮತ್ತು ಪಾಕಿಸ್ತಾನ (India vs Pakistan) ನಡುವಿನ ಪಂದ್ಯಕ್ಕೆ ಕೆಲವೇ ಗಂಟೆಗಳು ಬಾಕಿ ಉಳಿದಿವೆ. ಉಭಯ ದೇಶಗಳ ಅಭಿಮಾನಿಗಳು ಈ ಪಂದ್ಯಕ್ಕಾಗಿ ಕಾದು ಕುಳಿತಿದ್ದಾರೆ. ಪಹಲ್ಗಾಮ್ ದಾಳಿಯ ನಂತರ, ಭಾರತ ತಂಡವು ಮೊದಲ ಬಾರಿಗೆ ಪಾಕಿಸ್ತಾನದ ವಿರುದ್ಧ ಆಡಲಿದೆ. ಆದಾಗ್ಯೂ ಈ ಪಂದ್ಯವನ್ನು ಬಹಿಷ್ಕರಿಸಬೇಕು ಎಂಬುದು ಭಾರತೀಯರ ಒತ್ತಾಯವಾಗಿದೆ. ಈ ನಡುವೆ ಉಭಯ ದೇಶಗಳಲ್ಲಿ ನಡೆಯುವ ಐಪಿಎಲ್ ಹಾಗೂ ಪಿಎಸ್ಎಲ್ ತಂಡಗಳ ನಡುವೆ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟರ್ ವಾರ್ ಶುರುವಾಗಿದೆ.
ವಾಸ್ತವವಾಗಿ ಐಪಿಎಲ್ ತಂಡವಾದ ಪಂಜಾಬ್ ಕಿಂಗ್ಸ್ ನಿನ್ನೆಯಷ್ಟೇ ಪಾಕಿಸ್ತಾನವನ್ನು ವಿಭಿನ್ನ ರೀತಿಯಲ್ಲಿ ಅವಮಾನಿಸಿತ್ತು. ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯದ ಬಗ್ಗೆ ಪಂಜಾಬ್ ಕಿಂಗ್ಸ್ ತನ್ನ ಅಧಿಕೃತ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಪೋಸ್ಟರ್ ಒಂದನ್ನು ಹಂಚಿಕೊಂಡಿತ್ತು. ಆ ಪೋಸ್ಟರ್ಗೆ ಹಾಲಿ ಚಾಂಪಿಯನ್‌ಗಳ ಎರಡನೇ ಪಂದ್ಯ, ಎಂಬ ಶೀರ್ಷಿಕೆ ನೀಡಿದ್ದ ಫ್ರಾಂಚೈಸಿ, ಈ ಪೋಸ್ಟ್‌ನಲ್ಲಿ ಸೂರ್ಯಕುಮಾರ್ ಯಾದವ್ ಅವರ ಫೋಟೋ ಮತ್ತು ಭಾರತೀಯ ತಂಡದ ಲೋಗೋವನ್ನು ಮಾತ್ರ ಬಳಸಿತ್ತು. ಅದರಂತೆ ಎದುರಾಳಿ ತಂಡದ ಬಗ್ಗೆಗಿನ ಮಾಹಿತಿ ಹಾಕುವ ಜಾಗವನ್ನು ಹಾಗೆಯೇ ಖಾಲಿ ಬಿಟ್ಟಿತ್ತು. ಪಂಜಾಬ್ ಕಿಂಗ್ಸ್‌ನ ಈ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿತ್ತು. ಈ ಪೋಸ್ಟ್ ನೋಡಿದವರಿಗೆ ಇದು ಪಾಕಿಸ್ತಾನಕ್ಕೆ ಮುಜುಗರವನ್ನುಂಟು ಮಾಡಲೆಂದೇ ಮಾಡಿರುವ ಪೋಸ್ಟ್ ಎಂಬುದು ಸ್ಪಷ್ಟವಾಗಿ ಅರ್ಥವಾಗಿತ್ತು.
Game 2️⃣ for the defending champions. Let’s goooo 💪#AsiaCup2025 #INDv pic.twitter.com/BgeoRfJjMo
— Punjab Kings (@PunjabKingsIPL) September 11, 2025
Game 2️⃣ for Men in Green. Let’s goooo ✈️#AsiaCup2025 pic.twitter.com/t812uktDsa
— Karachi Kings (@KarachiKingsARY) September 12, 2025
ಇದೀಗ ಪಂಜಾಬ್ ಕಿಂಗ್ಸ್‌ನ ಈ ಪೋಸ್ಟರ್ಗೆ ಪ್ರತಿಕಾರವಾಗಿ ಪೋಸ್ಟ್ವೊಂದನ್ನು ಹಂಚಿಕೊಂಡಿರುವ ಪಾಕಿಸ್ತಾನ ಸೂಪರ್ ಲೀಗ್ನ ಫ್ರಾಂಚೈಸಿಯಾದ ಕರಾಚಿ ಕಿಂಗ್ಸ್, ಆ ಪೋಸ್ಟರ್ನಲ್ಲಿ ಪಾಕಿಸ್ತಾನ ನಾಯಕ ಸಲ್ಮಾನ್ ಅಲಿ ಅಘಾ ಭಾರತೀಯ ನಾಯಕನ ವಿರುದ್ಧ ಐಕಾನಿಕ್ ಬುರ್ಜ್ ಖಲೀಫಾ ವಿರುದ್ಧ ಚೆಸ್ ಆಡುತ್ತಿರುವಂತೆ ಚಿತ್ರಿಸಲಾಗಿದೆ. ಆದರೆ ಇಲ್ಲಿ ಸೂರ್ಯಕುಮಾರ್ ಅವರ ಆಕೃತಿ ಸಂಪೂರ್ಣವಾಗಿ ಶ್ಯಾಡೋ ರೀತಿಯಲ್ಲಿ ಚಿತ್ರಿಸಿದೆ. ಹಾಗೆಯೇ ಈ ಪೋಟೋಗೆ ಗೇಮ್ ಫಾರ್ ಮೆನ್ ಇನ್ ಗ್ರೀನ್. ಲೆಟ್ಸ್ ಗೋ. ಎಂಬ ಶೀರ್ಷಿಕೆಯನ್ನು ನೀಡಿದೆ.
wow copycat , no original idea
— Stumper (@TheStumpStory) September 12, 2025
Come out with some original content ..Don’t copy @PunjabKingsIPL
— 🏏 Paglu (@CrickitPaglu) September 13, 2025
ಆದಾಗ್ಯೂ, ಕರಾಚಿ ಕಿಂಗ್ಸ್‌ನ ಈ ಪೋಸ್ಟರ್ ಅನ್ನು ಭಾರತೀಯ ಅಭಿಮಾನಿಗಳು ಗೇಲಿ ಮಾಡಿದ್ದಾರೆ. ‘ಪಂಜಾಬ್ ಕಿಂಗ್ಸ್ ಪೋಸ್ಟರ್ ಅನ್ನೇ ಕರಾಚಿ ಕಿಂಗ್ಸ್ ನಕಲು ಮಾಡಿದೆ. ನಿಮಗೆ ಸ್ವಂತವಾಗಿ ಏನನ್ನು ಮಾಡಲು ಬರುವುದಿಲ್ಲವಾ?. ವಾವ್ ಕಾಪಿಕ್ಯಾಟ್, ಸ್ವಂತದ್ದು ಅಂತ ಏನು ಇಲ್ಲ ಎಂದು ಕಾಮೆಂಟ್ ಮಾಡುವ ಮೂಲಕ ಗೇಲಿ ಮಾಡಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
