Asif Ali: ಗನ್​ನಿಂದ ಶೂಟ್ ಮಾಡೋ ರೀತಿ ಸೆಲೆಬ್ರೇಟ್ ಮಾಡಿದ ಅಸಿಫ್ ಅಲಿ: ಇಲ್ಲಿದೆ ವಿಡಿಯೋ

| Updated By: Vinay Bhat

Updated on: Oct 30, 2021 | 11:25 AM

Asif Ali Gun-shot celebration on Afghanistan vs Pakistan Match: ಅಫ್ಘಾನಿಸ್ತಾನ ವಿರುದ್ಧ ಪಾಕಿಸ್ತಾನ ರೋಚಕ ಗೆಲುವು ಸಾಧಿಸುತ್ತಿದ್ದಂತೆ ಅಸಿಫ್ ಅಲಿ ತಮ್ಮ ಬ್ಯಾಟ್ ಮೂಲಕ ಗನ್​ನಿಂದ ಶೂಟ್ ಮಾಡುವ ರೀತಿ ಸಂಭ್ರಮಾಚರಣೆ ಮಾಡಿದ್ದಾರೆ. ಈ ವಿಡಿಯೋ ವೈರಲ್ ಆಗುತ್ತಿದೆ.

Asif Ali: ಗನ್​ನಿಂದ ಶೂಟ್ ಮಾಡೋ ರೀತಿ ಸೆಲೆಬ್ರೇಟ್ ಮಾಡಿದ ಅಸಿಫ್ ಅಲಿ: ಇಲ್ಲಿದೆ ವಿಡಿಯೋ
Asif Ali gun-shot celebration
Follow us on

ಶುಕ್ರವಾರ ಅಫ್ಘಾನಿಸ್ತಾನ ವಿರುದ್ಧ ನಡೆದ ಟಿ20 ವಿಶ್ವಕಪ್​ನ (T20 World Cup) ಪಂದ್ಯದಲ್ಲಿ ಪಾಕಿಸ್ತಾನ ತಂಡ (Afghanistan vs Pakistan) ಅಂತಿಮ ಹಂತದಲ್ಲಿ ರೋಚಕ ಜಯ ಸಾಧಿಸಿದ್ದು ಸೆಮಿ ಫೈನಲ್ ಹಂತಕ್ಕೇರುವ ತುದಿಯಲ್ಲಿದೆ. ನಾಯಕ ಬಾಬರ್ ಅಜಾಮ್ (Babar Azam) ಅವರ ಅಮೋಘ ಅರ್ಧಶತಕ ಮತ್ತು ಅಸಿಫ್ ಅಲಿ (Asif Ali) ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಪಾಕ್ 5 ವಿಕೆಟ್​ಗಳ ಜಯ ಸಾಧಿಸಿತು. ಒಂದು ಹಂತದಲ್ಲಿ ಅಫ್ಘಾನಿಸ್ತಾನ (Afghanistan) ಕಡೆ ಇದ್ದ ಜಯವನ್ನು 19ನೇ ಓವರ್​ನಲ್ಲಿ, ಕೇವಲ ಒಂದೇ ಓವರ್​ನಲ್ಲಿ ಅಸಿಫ್ ಅಲಿ ಸಂಪೂರ್ಣವಾಗಿ ಪಾಕ್ ಕಡೆ ತಿರುಗಿಸಿದರು. ಕೇವಲ 7 ಎಸೆತಗಳಲ್ಲಿ ಅಜೇಯ 25 ರನ್ ಚಚ್ಚಿ ತಂಡಕ್ಕೆ ಗೆಲುವು ತಂದಿಟ್ಟರು. ಸದ್ಯ ಇವರು ತಂಡಕ್ಕೆ ಗೆಲುವು ತಂದಿಟ್ಟ ಬೆನ್ನಲ್ಲೇ ಮಾಡಿದ ಸಂಭ್ರಮಾಚರಣೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ (Viral Video) ಆಗುತ್ತಿದೆ.

ಹೌದು, 18 ಓವರ್​ವರೆಗೂ ಅಫ್ಘಾನಿಸ್ತಾನ ಗೆಲುವಿನ ಆಸೆಯಲ್ಲೇ ಇತ್ತು. ಆದರೆ, ಕರೀಮ್ ಜನತ್ ಮಾಡಿದ 19ನೇ ಓವರ್ ಪಾಕಿಸ್ತಾನಕ್ಕೆ ಟ್ವಿಸ್ಟ್ ಕೊಟ್ಟಿತು. ಅಸಿಫ್ ಅಲಿ ಒಂದೇ ಓವರ್​ನಲ್ಲಿ 4 ಸಿಕ್ಸರ್ ಎತ್ತಿ 24 ರನ್ ಗಳಿಸಿ ಪಾಕಿಸ್ತಾನದ ಗೆಲುವಿಗೆ ಕಾರಣರಾದರು. 2 ಓವರ್​ನಲ್ಲಿ 24 ರನ್ ಗಳಿಸಬೇಕಿದ್ದ ಪಾಕಿಸ್ತಾನ ಆ ಒಂದೇ ಓವರಲ್ಲಿ ಗುರಿ ಮುಟ್ಟಿ ಸತತ 3ನೇ ಗೆಲುವು ಪಡೆದು ಸೆಮಿ ಫೈನಲ್ ಹಾದಿಯನ್ನು ಬಹುತೇಕ ಮುಟ್ಟಿತು. ಈ ರೋಚಕ ಗೆಲುವು ಸಾಧಿಸುತ್ತಿದ್ದಂತೆ ಅಸಿಫ್ ಅಲಿ ತಮ್ಮ ಬ್ಯಾಟ್ ಮೂಲಕ ಗನ್​ನಿಂದ ಶೂಟ್ ಮಾಡುವ ರೀತಿ ಸಂಭ್ರಮಾಚರಣೆ ಮಾಡಿದ್ದಾರೆ.

ಥೇಟ್ ಇದೇರೀತಿಯಲ್ಲಿ ಎಂ. ಎಸ್ ಧೋನಿ ಕೂಡ ಈ ಹಿಂದೆ ಸೆಲೆಬ್ರೇಟ್ ಮಾಡಿದ್ದರು. 2005ರಲ್ಲಿ ಜೈಪುರದಲ್ಲಿ ನಡೆದ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಧೋನಿ ಶತಕ ಬಾರಿಸುತ್ತಿದ್ದಂತೆ ಬ್ಯಾಟ್ ಮೂಲಕ ಗನ್​ನಿಂದ ಶೂಟ್ ಮಾಡುವ ರೀತಿ ಸಂಭ್ರಮಿಸಿದ್ದರು. ಸದ್ಯ ಅಸಿಫ್ ಅಲಿ ಅವರ ಈ ಸೆಲೆಬ್ರೇಷನ್ ಕಂಡು ಧೋನಿ ಇದನ್ನು 16 ವರ್ಷಗಳ ಹಿಂದೆಯೇ ಮಾಡಿದ್ದರು ಎಂದು ಟ್ವೀಟ್ ಮಾಡುತ್ತಿದ್ದಾರೆ.

 

ಪಂದ್ಯ ಮುಗಿದ ಬಳಿಕ ಮಾತನಾಡಿದ ಅಸಿಫ್ ಅಲಿ, ‘ನನ್ನ ಹೊಡೆತಗಳಲ್ಲಿ ನನಗೆ ವಿಶ್ವಾಸವಿತ್ತು, ಅದು ಫಲಿತಾಂಶ ತಂದುಕೊಟ್ಟಿದೆ. ಬೌಂಡರಿಯ ಲಾಂಗರ್ ಸೈಡ್ ಕಡೆ ನಾನು ಸಿಕ್ಸ್ ಹೊಡೆಯಲು ಟಾರ್ಗೆಟ್ ಮಾಡಿದ್ದೆ. ಕೊನೆಯ ಹಂತದಲ್ಲಿ ನಾನು ಬ್ಯಾಟಿಂಗ್​ಗೆ ಬರುವುದರಿಂದ ನನಗೆ ಗೊತ್ತು ನನ್ನ ಕೆಲಸ ಸಿಕ್ಸ್ ಬಾರಿಸುವುದೆಂದು. ಅದಕ್ಕಾಗಿ ನೆಟ್​ನಲ್ಲಿ ಸಾಕಷ್ಟು ಅಭ್ಯಾಸ ನಡೆಸಿದ್ದೆ’ ಎಂದು ಹೇಳಿದರು.

ಅಫ್ಘಾನಿಸ್ತಾನ ನೀಡಿದ 148 ರನ್‌ಗಳ ಗುರಿ ಬೆನ್ನಟ್ಟಿದ ಪಾಕಿಸ್ತಾನ ತಂಡ ಆರಂಭಿಕ ಆಘಾತವನ್ನು ಅನುಭವಿಸಿತು. 12 ರನ್‌ಗಳಿದ್ದಾಗ ಮೊಹಮ್ಮದ್ ರಿಜ್ವಾನ್ ವಿಕೆಟ್ ಕಳೆದುಕೊಂಡಿತು. ಆದರೆ 2ನೇ ವಿಕೆಟ್‌ಗೆ ಬಾಬರ್ ಅಜಮ್ ಹಾಗೂ ಫಕರ್ ಜಮಾನ್ 63 ರನ್‌ಗಳ ಜೊತೆಯಾಟವನ್ನು ನೀಡಿದರು. ಇವರಿಬ್ಬರ ನಿರ್ಗಮನದ ಬಳಿಕ ಅನುಭವಿ ಶೋಯೆಬ್ ಮಲಿಕ್ ಕೂಡ ನವೀನ್ ಉಲ್ ಹಕ್ ಎಸೆತಕ್ಕೆ ಔಟಾದರು.

ಪಾಕಿಸ್ತಾನ 124 ರನ್‌ಗಳಿಗೆ 5 ವಿಕೆಟ್ ಕಳೆದುಕೊಂಡು ಸೋಲಿನ ಸುಳಿಗೆ ಸಿಲುಕಿತು. ಅಂತಿಮ 12 ಎಸೆತಗಳಲ್ಲಿ ಪಾಕಿಸ್ತಾನ ತಂಡಕ್ಕೆ ಗೆಲ್ಲಲು 24 ರನ್‌ಗಳ ಅವಶ್ಯಕತೆಯಿತ್ತು. 19ನೇ ಓವರ್‌ ಅನ್ನು ಆಸಿಫ್ ಅಲಿ ಎದುರಿಸಿದರು. ಈ ಓವರ್‌ನಲ್ಲಿ ಆಸಿಫ್ ಅಲಿ ನಾಲ್ಕು ಭರ್ಜರಿ ಸಿಕ್ಸರ್ ಸಿಡಿಸುವ ಮೂಲಕ ಪಾಕಿಸ್ತಾನಕ್ಕೆ ಗೆಲುವನ್ನು ತಂದಿತ್ತರು.

Points Table T20 World Cup: ಯಾವ ತಂಡ ಅಗ್ರಸ್ಥಾನದಲ್ಲಿದೆ?: ಇಲ್ಲಿದೆ ನೋಡಿ ಟಿ20 ವಿಶ್ವಕಪ್​ನ ಪಾಯಿಂಟ್ ಟೇಬಲ್

Asif Ali: ಗೆಲ್ಲಲು ಬೇಕಾಗಿದ್ದು 24 ರನ್: ಒಂದೇ ಓವರ್​ನಲ್ಲಿ 4 ಸಿಕ್ಸರ್ ಸಿಡಿಸಿ ಪಂದ್ಯ ಫಿನಿಶ್ ಮಾಡಿದ ಅಸಿಫ್ ಅಲಿ

(Asif Ali Gun-shot celebration video goes viral on social media After Pakistan Beat Afghanistan)