T20 World Cup: ಟಿ20 ವಿಶ್ವಕಪ್ನಲ್ಲಿಂದು ಎರಡು ಕದನ: ನಿರ್ಣಾಯಕ ಪಂದ್ಯದಲ್ಲಿ ದ. ಆಫ್ರಿಕಾ-ಶ್ರೀಲಂಕಾ ಮುಖಾಮುಖಿ
South Africa and Sri Lanka: ಮಾಡು ಇಲ್ಲವೇ ಮಡಿ ಸ್ಥಿತಿಯಲ್ಲಿ ಸಿಲುಕಿರುವ ದಕ್ಷಿಣ ಆಫ್ರಿಕಾ ಹಾಗೂ ಶ್ರೀಲಂಕಾಕ್ಕೆ ಈ ಪಂದ್ಯ ಮಹತ್ವದ್ದಾಗಿದೆ. ಉಭಯ ತಂಡಗಳು ಇದುವರೆಗೂ ಆಡಿರುವ 2 ಪಂದ್ಯಗಳಲ್ಲಿ ತಲಾ 1 ಸೋಲು, ಗೆಲುವು ಕಂಡಿವೆ.
ಐಸಿಸಿ ಟಿ20 ವಿಶ್ವಕಪ್ನಲ್ಲಿಂದು (T20 World Cup) ಎರಡು ಮಹಾ ಕದನ ನಡೆಯಲಿದೆ. ಮಧ್ಯಾಹ್ನ ಆರಂಭವಾಗಲಿರವ ಮೊದಲ ಪಂದ್ಯದಲ್ಲಿ ತೆಂಬ ಬವುಮಾ ನಾಯಕತ್ವದ ದಕ್ಷಿಣ ಆಫ್ರಿಕಾ ಮತ್ತು ದಸನ್ ಶನುಕಾ ನೇತೃತ್ವದ ಶ್ರೀಲಂಕಾ (South Africa vs Sri Lanka) ತಂಡ ಮುಖಾಮುಖಿ ಆಗುತ್ತಿದೆ. ಸಂಜೆ ನಡೆಯಲಿರುವ ಮತ್ತೊಂದು ಪಂದ್ಯದಲ್ಲಿ ಇಯಾನ್ ಮಾರ್ಗನ್ ಅವರ ಇಂಗ್ಲೆಂಡ್ ಮತ್ತು ಆ್ಯರೋನ್ ಫಿಂಚ್ ನಾಯಕತ್ವದ ಆಸ್ಟ್ರೇಲಿಯಾ (England vs Australia) ತಂಡ ಸೆಣೆಸಾಟ ನಡೆಸಲಿದೆ.
ಮಾಡು ಇಲ್ಲವೇ ಮಡಿ ಸ್ಥಿತಿಯಲ್ಲಿ ಸಿಲುಕಿರುವ ದಕ್ಷಿಣ ಆಫ್ರಿಕಾ ಹಾಗೂ ಶ್ರೀಲಂಕಾಕ್ಕೆ ಈ ಪಂದ್ಯ ಮಹತ್ವದ್ದಾಗಿದೆ. ಉಭಯ ತಂಡಗಳು ಇದುವರೆಗೂ ಆಡಿರುವ 2 ಪಂದ್ಯಗಳಲ್ಲಿ ತಲಾ 1 ಸೋಲು, ಗೆಲುವು ಕಂಡಿವೆ. ಕಳೆದ ಪಂದ್ಯದಿಂದ ಹೊರಗುಳಿದಿದ್ದ ದಕ್ಷಿಣ ಆಫ್ರಿಕಾ ತಂಡದ ವಿಕೆಟ್ ಕೀಪರ್ ಕ್ವಿಂಟನ್ ಡಿ ಕಾಕ್ ಹನ್ನೊಂದರ ಬಳಗಕ್ಕೆ ವಾಪಸಾಗುವ ಸಾಧ್ಯತೆಗಳಿವೆ. ಡಿಕಾಕ್ ತಂಡಕ್ಕೆ ವಾಪಸಾದರೆ ಅಗ್ರಕ್ರಮಾಂಕದ ಬ್ಯಾಟಿಂಗ್‌ಗೆ ಮತ್ತಷ್ಟು ಬಲಬಂತಾಗುತ್ತದೆ. ಇದರ ಜೊತೆಗೆ ಆಫ್ರಿಕಾ ತನ್ನ ಬೌಲಿಂಗ್ ಪಡೆಯ ಮೇಲೆ ಹೆಚ್ಚು ವಿಶ್ವಾಸವಿರಿಸಿದೆ.
ಮೊದಲ ಪಂದ್ಯದಲ್ಲಿ ಆಸೀಸ್ ಎದುರು ಸೋಲಿನಲ್ಲೂ ಪ್ರಬಲ ಪೈಪೋಟಿ ನೀಡಿದ್ದ ದ.ಆಫ್ರಿಕಾ, ಎರಡನೇ ಪಂದ್ಯದಲ್ಲಿ ವಿಂಡೀಸ್ ತಂಡವನ್ನು ಮಣಿಸಿತ್ತು. ಮತ್ತೊಂದೆಡೆ, ಆಸ್ಟ್ರೇಲಿಯಾ ಎದುರು ಹೀನಾಯ ಸೋಲು ಕಂಡಿರುವ ಶ್ರೀಲಂಕಾ ತಂಡ ಗೆಲುವಿನ ಹಳಿಗೇರುವ ತವಕದಲ್ಲಿದೆ. ಲಂಕಾ ಕಳೆದ ಪಂದ್ಯದಲ್ಲಿ ಭರ್ಜರಿ ಆರಂಭ ಪಡೆದರೂ ದಿಢೀರ್ ಬ್ಯಾಟಿಂಗ್ ಕುಸಿತ ಕಂಡು ಸೋಲುಂಡಿತ್ತು. ತಂಡ ಸಾಂಘಿಕ ಪ್ರದರ್ಶನ ತೋರಿದರಷ್ಟೇ ಗೆಲುವು ಒಲಿಯಲಿದೆ.
ಉಭಯ ತಂಡಗಳು ಈವರೆಗೆ 16 ಟಿ20 ಪಂದ್ಯಗಳಲ್ಲಿ ಮುಖಾಮುಖಿ ಆಗಿವೆ. ಇದರಲ್ಲಿ ದಕ್ಷಿಣ ಆಫ್ರಿಕಾ 11 ಮತ್ತು ಶ್ರೀಲಂಕಾ 5 ಪಂದ್ಯಗಳಲ್ಲಿ ಗೆದ್ದ ಇತಿಹಾಸವಿದೆ. ಈ ಪಂದ್ಯ ಮಧ್ಯಾಹ್ನ 3.30ಕ್ಕೆ ಆರಂಭವಾಗಲಿದೆ.
ಇನ್ನು ಇಂದು ನಡೆಯಲಿರುವ ಮತ್ತೊಂದು ಪಂದ್ಯದಲ್ಲಿ ಇಂಗ್ಲೆಂಡ್ (England) ಹಾಗೂ ಆಸ್ಪ್ರೇಲಿಯಾ (Australia) ಸೆಣೆಸಾಟ ನಡೆಸಲಿವೆ. ಈ ಪಂದ್ಯದಲ್ಲಿ ಗೆಲ್ಲುವ ತಂಡ ಗುಂಪು-1ರಲ್ಲಿ ಅಗ್ರಸ್ಥಾನ ಪಡೆಯಲಿದ್ದು, ಸೆಮೀಸ್ ಹೊಸ್ತಿಲು ತಲುಪಲಿದೆ. ಹೈವೋಲ್ಟೇಜ್ ಪಂದ್ಯಕ್ಕೆ ಎರಡೂ ತಂಡಗಳು ಅಜೇಯವಾಗಿ ಕಾಲಿಡಲಿವೆ. ಇಂಗ್ಲೆಂಡ್ ತಂಡವು ವೆಸ್ಟ್‌ಇಂಡೀಸ್, ಬಾಂಗ್ಲಾದೇಶ ವಿರುದ್ಧ ಗೆದ್ದರೆ ಆಸ್ಪ್ರೇಲಿಯಾ ತಂಡವು ದಕ್ಷಿಣ ಆಫ್ರಿಕಾ ಹಾಗೂ ಶ್ರೀಲಂಕಾ ವಿರುದ್ಧ ಜಯಭೇರಿ ಬಾರಿಸಿತ್ತು. ಎರಡೂ ತಂಡಗಳಲ್ಲಿ ಸ್ಫೋಟಕ ಬ್ಯಾಟ್ಸ್‌ಮನ್‌ಗಳಿದ್ದು, ಬಲಿಷ್ಠ ಬೌಲಿಂಗ್ ಪಡೆಗಳನ್ನು ಹೊಂದಿವೆ.
ಕಳಪೆ ಫಾರ್ಮ್‌ನಿಂದಾಗಿಯೇ 14ನೇ ಐಪಿಎಲ್‌ನಲ್ಲಿ ಸನ್‌ರೈಸರ್ಸ್ ತಂಡ ನಾಯಕತ್ವದ ಜತೆಗೆ ಹನ್ನೊಂದರ ಬಳಗದಿಂದಲೂ ಹೊರಬಿದ್ದಿದ್ದ ಡೇವಿಡ್ ವಾರ್ನರ್ (65) ಶ್ರೀಲಂಕಾ ಎದುರು ಸ್ಫೋಟಿಸುವ ಮೂಲಕ ಭರ್ಜರಿ ಫಾರ್ಮ್‌ಗೆ ಮರಳಿದ್ದಾರೆ. ನಾಯಕ ಆರನ್ ಫಿಂಚ್ ಹಾಗೂ ವಾರ್ನರ್ ಜೋಡಿ ಬಿರುಸಿನ ಬ್ಯಾಟಿಂಗ್ ಮೂಲಕ ಗಮನಸೆಳೆದಿತ್ತು. ಗ್ಲೆನ್ ಮ್ಯಾಕ್ಸ್‌ವೆಲ್, ಸ್ಟೀವನ್ ಸ್ಮಿತ್, ಮಾರ್ಕಸ್ ಸ್ಟೋಯಿನಿಸ್ ಒಳಗೊಂಡ ಬ್ಯಾಟಿಂಗ್ ಪಡೆ ಬಲಿಷ್ಠವಾಗಿದ್ದರೆ, ಬೌಲರ್‌ಗಳಾದ ಜೋಸ್ ಹ್ಯಾಸ್‌ವುಡ್, ಮಿಚೆಲ್ ಸ್ಟಾರ್ಕ್, ಆಡಂ ಜಂಪಾ ಉತ್ತಮ ಲಯದಲ್ಲಿದ್ದಾರೆ.
ಇತ್ತ ಇಂಗ್ಲೆಂಡ್ ಮೊಯಿನ್ ಅಲಿ, ಆದಿಲ್ ರಶೀದ್ ಸ್ಪಿನ್ ವಿಭಾಗದಲ್ಲಿ ಗಮನಸೆಳೆಯುತ್ತಿದ್ದರೆ, ಜೇಸನ್ ರಾಯ್, ಜೋಸ್ ಬಟ್ಲರ್, ಜಾನಿ ಬೇರ್‌ಸ್ಟೋ ಒಳಗೊಂಡ ಬ್ಯಾಟಿಂಗ್ ಪಡೆ ಬಲಿಷ್ಠವಾಗಿದೆ.
ಉಭಯ ತಂಡಗಳು ಟಿ20 ಯಲ್ಲಿ ಈವರೆಗೆ 19 ಪಂದ್ಯಗಳಲ್ಲಿ ಮುಖಾಮುಖಿ ಆಗಿವೆ. ಇದರಲ್ಲಿ ಆಸ್ಟ್ರೇಲಿಯಾ 10 ಮತ್ತು ಇಂಗ್ಲೆಂಡ್ 8 ಪಂದ್ಯಗಳಲ್ಲಿ ಗೆದ್ದರೆ 1 ಪಂದ್ಯ ರದ್ದಾಗಿದೆ. ಈ ಪಂದ್ಯ ರಾತ್ರಿ 7.30ಕ್ಕೆ ಆರಂಭವಾಗಲಿದೆ.
Asif Ali: ಗೆಲ್ಲಲು ಬೇಕಾಗಿದ್ದು 24 ರನ್: ಒಂದೇ ಓವರ್ನಲ್ಲಿ 4 ಸಿಕ್ಸರ್ ಸಿಡಿಸಿ ಪಂದ್ಯ ಫಿನಿಶ್ ಮಾಡಿದ ಅಸಿಫ್ ಅಲಿ
Rashid Khan: ರಶೀದ್ ಖಾನ್ ವಿಶೇಷ ದಾಖಲೆ: ಪಾಕ್ ವಿರುದ್ಧ ಸೋತರೂ ಪ್ರಶಂಸೆಗೆ ಪಾತ್ರವಾದ ಅಫ್ಘಾನಿಸ್ತಾನ
(South Africa and Sri Lanka arrive in match 25 of ICC T20 World Cup 2021 at the Sharjah Cricket Stadium)