Asif Ali: ಗೆಲ್ಲಲು ಬೇಕಾಗಿದ್ದು 24 ರನ್: ಒಂದೇ ಓವರ್​ನಲ್ಲಿ 4 ಸಿಕ್ಸರ್ ಸಿಡಿಸಿ ಪಂದ್ಯ ಫಿನಿಶ್ ಮಾಡಿದ ಅಸಿಫ್ ಅಲಿ

Watch Asif Ali slam 4 sixes vs Afghanistan: ಪಾಕಿಸ್ತಾನದ ಅಸಿಫ್ ಅಲಿ ಒಂದೇ ಓವರ್​ನಲ್ಲಿ 4 ಸಿಕ್ಸರ್ ಎತ್ತಿ 24 ರನ್ ಗಳಿಸಿ ಅಫ್ಘಾನಿಸ್ತಾದ ಸೋಲಿಗೆ ಕಾರಣರಾದರು. ಪಂದ್ಯ ಮುಗಿದ ಬಳಿಕ ಮಾತನಾಡಿದ ಅವರು, ನನ್ನ ಹೊಡೆತಗಳಲ್ಲಿ ನನಗೆ ವಿಶ್ವಾಸವಿತ್ತು, ಅದು ಫಲಿತಾಂಶ ತಂದುಕೊಟ್ಟಿದೆ ಎಂದು ಹೇಳಿದ್ದಾರೆ.

Asif Ali: ಗೆಲ್ಲಲು ಬೇಕಾಗಿದ್ದು 24 ರನ್: ಒಂದೇ ಓವರ್​ನಲ್ಲಿ 4 ಸಿಕ್ಸರ್ ಸಿಡಿಸಿ ಪಂದ್ಯ ಫಿನಿಶ್ ಮಾಡಿದ ಅಸಿಫ್ ಅಲಿ
Asif Ali Afghanistan vs Pakistan
Follow us
TV9 Web
| Updated By: Vinay Bhat

Updated on: Oct 30, 2021 | 8:43 AM

ಟಿ20 ವಿಶ್ವಕಪ್​ನಲ್ಲಿ (T20 World Cup) ಶುಕ್ರವಾರ ನಡೆದ ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನ (Afghanistan vs Pakistan) ನಡುವಣ ಪಂದ್ಯ ಕೊನೆಯ ಹಂತದ ವರೆಗೂ ರೋಚಕತೆ ಸೃಷ್ಟಿಸಿತ್ತು. ಬಹುತೇಕ ಅಫ್ಘಾನ್ ಕಡೆ ವಾಲಿದ್ದ ಪಂದ್ಯ ಒಂದು ಓವರ್ ಎಲ್ಲವನ್ನೂ ಅದಲು-ಬದಲು ಮಾಡಾಕಿತು. ಗೆಲ್ಲಲು 149 ರನ್ ಗುರಿ ಪಡೆದ ಪಾಕಿಸ್ತಾನ 6 ಬಾಲ್ ಬಾಕಿ ಇರುವಂತೆ 5 ವಿಕೆಟ್​​ಗಳಿಂದ ಸೋಲಿಸಿತು. ಸ್ಕೋರ್ ಬೋರ್ಡ್​ನಲ್ಲಿರುವ ಅಂಕಿ ಅಂಶ ಹೇಳುವುದಕ್ಕಿಂತಲೂ ಈ ಗೆಲುವು ಪಡೆಯಲು ಪಾಕಿಸ್ತಾನ ಬಹಳ ಕಷ್ಟಪಡಬೇಕಾಯಿತು. ನ್ಯೂಜಿಲೆಂಡ್ (New Zealand) ತಂಡದ ವಿರುದ್ಧ ಸ್ವಲ್ಪದರಲ್ಲಿ ಬಚಾವಾಗಿದ್ದ ಪಾಕಿಸ್ತಾನ ತಂಡ ಅಫ್ಘಾನಿಸ್ತಾನ ವಿರುದ್ಧವೂ ಸ್ವಲ್ಪದರಲ್ಲಿ ಸೋಲಿನಿಂದ ಪಾರಾಯಿತು. 18 ಓವರ್​ವರೆಗೂ ಅಫ್ಘಾನಿಸ್ತಾನ ಗೆಲುವಿನ ಆಸೆಯಲ್ಲೇ ಇತ್ತು. ಆದರೆ, ಕರೀಮ್ ಜನತ್ ಮಾಡಿದ 19ನೇ ಓವರ್ ಪಾಕಿಸ್ತಾನಕ್ಕೆ (Pakistan Cricket Team) ಟ್ವಿಸ್ಟ್ ಕೊಟ್ಟಿತು. ಅಸಿಫ್ ಅಲಿ (Asif Ali) ಒಂದೇ ಓವರ್​ನಲ್ಲಿ 4 ಸಿಕ್ಸರ್ ಎತ್ತಿ 24 ರನ್ ಗಳಿಸಿ ಅಫ್ಘಾನಿಸ್ತಾದ ಸೋಲಿಗೆ ಕಾರಣರಾದರು. 2 ಓವರ್​ನಲ್ಲಿ 24 ರನ್ ಗಳಿಸಬೇಕಿದ್ದ ಪಾಕಿಸ್ತಾನ ಆ ಒಂದೇ ಓವರಲ್ಲಿ ಗುರಿ ಮುಟ್ಟಿ ಸತತ 3ನೇ ಗೆಲುವು ಪಡೆದು ಸೆಮಿ ಫೈನಲ್ ಹಾದಿಯನ್ನು ಬಹುತೇಕ ಮುಟ್ಟಿತು.

ಪಂದ್ಯ ಮುಗಿದ ಬಳಿಕ ಈ ಬಗ್ಗೆ ಮಾತನಾಡಿದ ಅಸಿಫ್ ಅಲಿ, ‘ನನ್ನ ಹೊಡೆತಗಳಲ್ಲಿ ನನಗೆ ವಿಶ್ವಾಸವಿತ್ತು, ಅದು ಫಲಿತಾಂಶ ತಂದುಕೊಟ್ಟಿದೆ. ಬೌಂಡರಿಯ ಲಾಂಗರ್ ಸೈಡ್ ಕಡೆ ನಾನು ಸಿಕ್ಸ್ ಹೊಡೆಯಲು ಟಾರ್ಗೆಟ್ ಮಾಡಿದ್ದೆ. ಕೊನೆಯ ಹಂತದಲ್ಲಿ ನಾನು ಬ್ಯಾಟಿಂಗ್​ಗೆ ಬರುವುದರಿಂದ ನನಗೆ ಗೊತ್ತು ನನ್ನ ಕೆಲಸ ಸಿಕ್ಸ್ ಬಾರಿಸುವುದೆಂದು. ಅದಕ್ಕಾಗಿ ನೆಟ್​ನಲ್ಲಿ ಸಾಕಷ್ಟು ಅಭ್ಯಾಸ ನಡೆಸಿದ್ದೆ. ಸಾಮಾಜಿಕ ತಾಣಗಳಲ್ಲಿ ನನ್ನ ಬಗ್ಗೆ ಏನು ಹೇಳಿದರು ಎಂಬ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಟಿವಿ ನೋಡುವುದಿಲ್ಲ. ಇದು ನನ್ನ ಫೋಕಸ್​ಗೆ ಕೆಲಸಕ್ಕೆ ಸಹಕಾರಿಯಾಗಿದೆ’ ಎಂದು ಹೇಳಿದ್ದಾರೆ.

ಅಫ್ಘಾನಿಸ್ತಾನ ನೀಡಿದ 148 ರನ್‌ಗಳ ಗುರಿ ಬೆನ್ನಟ್ಟಿದ ಪಾಕಿಸ್ತಾನ ತಂಡ ಆರಂಭಿಕ ಆಘಾತವನ್ನು ಅನುಭವಿಸಿತು. 12 ರನ್‌ಗಳಿದ್ದಾಗ ಮೊಹಮ್ಮದ್ ರಿಜ್ವಾನ್ ವಿಕೆಟ್ ಕಳೆದುಕೊಂಡಿತು. ಆದರೆ 2ನೇ ವಿಕೆಟ್‌ಗೆ ಬಾಬರ್ ಅಜಮ್ ಹಾಗೂ ಫಕರ್ ಜಮಾನ್ 63 ರನ್‌ಗಳ ಜೊತೆಯಾಟವನ್ನು ನೀಡಿದರು. ಅದಾದ ನಂತರ 97 ರನ್‌ಗಳಿಸಿದ್ದಾಗ ಮೊಹಮ್ಮದ್ ಹಫೀಜ್ ವಿಕೆಟ್ ಕಳೆದುಕೊಂಡರು. ನಂತರ ಅರ್ಧಶತಕ ಗಳಿಸಿದ್ದ ನಾಯಕ ಬಾಬರ್ ಅಜಾಮ್ ಕೂಡ ರಶೀದ್‌ ಖಾನ್​ಗೆ ವಿಕೆಟ್ ಒಪ್ಪಿಸಿದರು. ಬಳಿಕ ಅನುಭವಿ ಶೋಯೆಬ್ ಮಲಿಕ್ ಕೂಡ ನವೀನ್ ಉಲ್ ಹಕ್ ಎಸೆತಕ್ಕೆ ಔಟಾದರು.

ಈ ಮೂಲಕ ಪಾಕಿಸ್ತಾನ 124 ರನ್‌ಗಳಿಗೆ 5 ವಿಕೆಟ್ ಕಳೆದುಕೊಂಡು ಸೋಲಿನ ಸುಳಿಗೆ ಸಿಲುಕಿತು. ಅಂತಿಮ 12 ಎಸೆತಗಳಲ್ಲಿ ಪಾಕಿಸ್ತಾನ ತಂಡಕ್ಕೆ ಗೆಲ್ಲಲು 24 ರನ್‌ಗಳ ಅವಶ್ಯಕತೆಯಿತ್ತು. ಈ ಸಂದರ್ಭ ಎಲ್ಲರೂ ಅಫ್ಘಾನ್​ಗೇ ಗೆಲುವೆಂದು ಅಂದುಕೊಂಡಿದ್ದರು. ಕರೀಮ್ ಜನತ್ ಎಸೆದ ಈ 19ನೇ ಓವರ್‌ಅನ್ನು ಆಸಿಫ್ ಅಲಿ ಎದುರಿಸಿದರು. ಈ ಓವರ್‌ನಲ್ಲಿ ಆಸಿಫ್ ಅಲಿ ನಾಲ್ಕು ಭರ್ಜರಿ ಸಿಕ್ಸರ್ ಸಿಡಿಸುವ ಮೂಲಕ ಪಾಕಿಸ್ತಾನಕ್ಕೆ ಗೆಲುವನ್ನು ತಂದಿತ್ತರು, ಅಫ್ಘಾನಿಸ್ತಾನ ತಂಡದ ಕೈಯಲ್ಲಿದ್ದ ಗೆಲುವನ್ನು ಕಿತ್ತರು.

Rashid Khan: ರಶೀದ್ ಖಾನ್ ವಿಶೇಷ ದಾಖಲೆ: ಪಾಕ್ ವಿರುದ್ಧ ಸೋತರೂ ಪ್ರಶಂಸೆಗೆ ಪಾತ್ರವಾದ ಅಫ್ಘಾನಿಸ್ತಾನ

(Pakistan Asif Ali slam 4 sixes in an over and He said I have confidence in my hitting and that paid off)