ಪ್ರಧಾನಿ ಮೋದಿ ಸ್ವೀಕರಿಸಿದ ಉಡುಗೊರೆ, ಸ್ಮರಣಿಕೆಗಳ ಹರಾಜು; ಕ್ರೀಡಾಪಟುಗಳು ಕೊಟ್ಟ ಗಿಫ್ಟ್​ಗಳಿಗೆ ಭರ್ಜರಿ ಬೇಡಿಕೆ

| Updated By: ಪೃಥ್ವಿಶಂಕರ

Updated on: Sep 25, 2021 | 3:11 PM

ಇದು ಭವಾನಿ ದೇವಿಯ ಖಡ್ಗದಿಂದ ಹಿಡಿದು ಸುಹಾಸ್ ಅವರ ಬ್ಯಾಡ್ಮಿಂಟನ್ ರಾಕೆಟ್​ವರೆಗೆ ಎಲ್ಲವನ್ನೂ ಒಳಗೊಂಡಿದೆ. ಹರಾಜು ಸೆಪ್ಟೆಂಬರ್ 17 ರಂದು ಪ್ರಾರಂಭವಾಗಿದ್ದು, ಅಕ್ಟೋಬರ್ 7 ರವರೆಗೆ ಮುಂದುವರಿಯುತ್ತದೆ.

ಪ್ರಧಾನಿ ಮೋದಿ ಸ್ವೀಕರಿಸಿದ ಉಡುಗೊರೆ, ಸ್ಮರಣಿಕೆಗಳ ಹರಾಜು; ಕ್ರೀಡಾಪಟುಗಳು ಕೊಟ್ಟ ಗಿಫ್ಟ್​ಗಳಿಗೆ ಭರ್ಜರಿ ಬೇಡಿಕೆ
ಕ್ರೀಡಾಪಟುಗಳು ಕೊಟ್ಟ ಗಿಫ್ಟ್​ಗಳಿಗೆ ಭರ್ಜರಿ ಬೇಡಿಕೆ
Follow us on

ಕೆಲವು ತಿಂಗಳ ಹಿಂದೆ, ಟೋಕಿಯೊ ಒಲಿಂಪಿಕ್ಸ್ ನಡೆಯಿತು. ಸ್ವಲ್ಪ ಸಮಯದ ನಂತರ, ಟೋಕಿಯೊ ಪ್ಯಾರಾಲಿಂಪಿಕ್ ಕ್ರೀಡಾಕೂಟವನ್ನು ನಡೆಸಲಾಯಿತು. ಈ ಎರಡರಲ್ಲೂ ಭಾರತೀಯ ಆಟಗಾರರು ಐತಿಹಾಸಿಕ ಸಾಧನೆಗಳನ್ನು ಮಾಡಿದ್ದಾರೆ. ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತ 19 ಪದಕಗಳನ್ನು ತನ್ನದಾಗಿಸಿಕೊಂಡಿತು. ಇದು ಭಾರತದ ಅತ್ಯುತ್ತಮ ಪ್ರದರ್ಶನವಾಗಿದೆ. ಇದಕ್ಕೂ ಮುನ್ನ ಭಾರತವು ಏಳು ಒಲಿಂಪಿಕ್ ಪದಕಗಳನ್ನು ಗೆದ್ದಿತ್ತು. ಇದು ಕೂಡ ಇದುವರೆಗಿನ ಅತ್ಯುತ್ತಮ ಪ್ರದರ್ಶನವಾಗಿದೆ. ಏತನ್ಮಧ್ಯೆ, ಪ್ರದರ್ಶನದ ನಂತರ, ಭಾರತದ ಪ್ರಧಾನಿ ನರೇಂದ್ರ ಮೋದಿ ಎಲ್ಲಾ ಆಟಗಾರರನ್ನು ಭೇಟಿಯಾಗಿದ್ದರು. ಆಟಗಾರರು ಸಹ ಪ್ರಧಾನಿ ಅವರಿಗೆ ಕೆಲವು ಉಡುಗೊರೆಗಳನ್ನು ನೀಡಿದ್ದರು. ಈಗ ಆ ಎಲ್ಲಾ ಉಡುಗೊರೆಗಳನ್ನು ಹರಾಜಿಗೆ ಇಡಲಾಗಿದೆ. ಈ ಎಲ್ಲಾ ಹರಾಜುಗಳನ್ನು ಆನ್‌ಲೈನ್‌ನಲ್ಲಿ ನಡೆಸಲಾಗುವುದು ಮತ್ತು ನೀವು pmmementos.gov.in/ ನಲ್ಲಿ ಈ ಹರಾಜಿನಲ್ಲಿ ಭಾಗವಹಿಸಬಹುದು.

ಇದು ಭವಾನಿ ದೇವಿಯ ಖಡ್ಗದಿಂದ ಹಿಡಿದು ಸುಹಾಸ್ ಅವರ ಬ್ಯಾಡ್ಮಿಂಟನ್ ರಾಕೆಟ್​ವರೆಗೆ ಎಲ್ಲವನ್ನೂ ಒಳಗೊಂಡಿದೆ. ಹರಾಜು ಸೆಪ್ಟೆಂಬರ್ 17 ರಂದು ಪ್ರಾರಂಭವಾಗಿದ್ದು, ಅಕ್ಟೋಬರ್ 7 ರವರೆಗೆ ಮುಂದುವರಿಯುತ್ತದೆ. ನೀವು ಕೂಡ ಈ ಐತಿಹಾಸಿಕ ವಿಷಯಗಳನ್ನು ಆನ್‌ಲೈನ್‌ನಲ್ಲಿ ಭಾಗವಹಿಸುವ ಮೂಲಕ ನಿಮ್ಮ ನೆಚ್ಚಿನ ಆಟಗಾರರ ಕ್ರೀಡಾ ಸಲಕರಣೆಗಳನ್ನ ಮನೆಗೆ ತರಬಹುದು. ನೀವು ಮಾಡಬೇಕಾಗಿರುವುದು www.pmmementos.gov.in ಗೆ ಲಾಗ್ ಇನ್ ಮಾಡಿ ಮತ್ತು ಈ ಇ-ಹರಾಜಿನಲ್ಲಿ ಭಾಗವಹಿಸಿ. ಈ ಎಲ್ಲಾ ಹಣವನ್ನು ನಮ್ಮಿ ಗಂಗಾ ಯೋಜನೆಗೆ ದಾನ ಮಾಡಲಾಗುತ್ತದೆ. ಈ ಯೋಜನೆ ಬಡ ನಾಗರಿಕರಿಗೆ ಸಹಾಯ ಮಾಡುತ್ತದೆ.

ಒಲಿಂಪಿಕ್ಸ್‌ನಲ್ಲಿ ಭಾರತದ ಐತಿಹಾಸಿಕ ಪ್ರದರ್ಶನ
ಈ ವರ್ಷದ ಒಲಿಂಪಿಕ್ಸ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ಭಾರತ 7 ಪದಕಗಳನ್ನು ಗೆದ್ದಿದೆ. ಈ 7 ಪದಕಗಳಲ್ಲಿ 4 ಕಂಚಿನ ಪದಕಗಳು, 2 ಬೆಳ್ಳಿ ಪದಕಗಳು ಮತ್ತು ಒಂದು ಚಿನ್ನದ ಪದಕ ಸೇರಿವೆ. ನಿರ್ದಿಷ್ಟವಾಗಿ ಹೇಳುವುದಾದರೆ, ಪುರುಷರ ಹಾಕಿ ತಂಡವು 41 ವರ್ಷಗಳ ನಂತರ ಒಲಿಂಪಿಕ್ ಪದಕ ಗೆದ್ದಿತು. ಅಥ್ಲೆಟಿಕ್ಸ್ ನಲ್ಲಿ, 100 ವರ್ಷಗಳಲ್ಲಿ ಮೊದಲ ಬಾರಿಗೆ, ಭಾರತದ ನೀರಜ್ ಚಿನ್ನದ ಪದಕ ಗೆದ್ದರು. ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾರತವು ಪದಕದ ಓಟದಲ್ಲಿ 48 ನೇ ಸ್ಥಾನ ಗಳಿಸಿದೆ. ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತ ಇತಿಹಾಸ ನಿರ್ಮಿಸಿದೆ. ಗ್ರ್ಯಾಂಡ್ ಟೋಕಿಯೋ ಪ್ಯಾರಾಲಿಂಪಿಕ್ಸ್ ಅನ್ನು ಆಗಸ್ಟ್ 24 ರಿಂದ ಸೆಪ್ಟೆಂಬರ್ 5 ರವರೆಗೆ ಆಡಲಾಯಿತು. ಇದರಲ್ಲಿ ಭಾರತವು 19 ಪದಕಗಳನ್ನು ಗೆದ್ದಿದೆ.