SRH vs PBKS, IPL 2021: ಸನ್​ರೈಸರ್ಸ್​ ವಿರುದ್ದ ಪಂಜಾಬ್ ಕಿಂಗ್ಸ್​ಗೆ ರೋಚಕ ಜಯ

TV9 Digital Desk

| Edited By: Zahir Yusuf

Updated on:Sep 25, 2021 | 11:19 PM

Sunrisers Hyderabad vs Punjab Kings: ಉಭಯ ತಂಡಗಳು ಇದುವರೆಗೆ 17 ಪಂದ್ಯಗಳಲ್ಲಿ ಮುಖಾಮುಖಿ ಆಗಿವೆ. ಇದರಲ್ಲಿ ಸನ್‌ರೈಸರ್ಸ್‌ ಹೈದರಾಬಾದ್ ತಂಡ 12 ಪಂದ್ಯಗಳಲ್ಲಿ ಜಯಿಸಿದರೆ, ಪಂಜಾಬ್ ಕಿಂಗ್ಸ್ 5 ಪಂದ್ಯಗಳಲ್ಲಿ ಗೆಲುವು ದಾಖಲಿಸಿದೆ.

SRH vs PBKS, IPL 2021: ಸನ್​ರೈಸರ್ಸ್​ ವಿರುದ್ದ ಪಂಜಾಬ್ ಕಿಂಗ್ಸ್​ಗೆ ರೋಚಕ ಜಯ
SRH vs PBKS

ಇಂಡಿಯನ್ ಪ್ರೀಮಿಯರ್ ಲೀಗ್ 14ನೇ ಆವೃತ್ತಿಯಲ್ಲಿ (IPL 2021) 37ನೇ ಪಂದ್ಯದಲ್ಲಿ ಕೆ. ಎಲ್ ರಾಹುಲ್ (KL Rahul) ನೇತೃತ್ವದ ಪಂಜಾಬ್ ಕಿಂಗ್ಸ್ (SRH vs PBKS) ತಂಡ ಕೇನ್ ವಿಲಿಯಮ್ಸನ್ (Kane Williamson) ನಾಯಕತ್ವದ ಸನ್​ರೈಸರ್ಸ್ ಹೈದಾರಬಾದ್ ವಿರುದ್ದ 5 ರನ್​ಗಳ ರೋಚಕ ಜಯ ಸಾಧಿಸಿದೆ. ಪಂಜಾಬ್ ನೀಡಿದ 126 ರನ್​ಗಳ ಟಾರ್ಗೆಟ್ ಬೆನ್ನತ್ತಿದ ಎಸ್​ಆರ್​ಹೆಚ್​ ತಂಡವು ಅಂತಿಮವಾಗಿ 120 ರನ್​ಗಳಿಸಲಷ್ಟೇ ಶಕ್ತರಾದರು. ಇದಕ್ಕೂ ಮುನ್ನ ಟಾಸ್ ಗೆದ್ದ ಸನ್​ರೈಸರ್ಸ್​ ಹೈದರಾಬಾದ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಪಂಜಾಬ್ ಕಿಂಗ್ಸ್​ ನಿಗದಿತ 20 ಓವರ್​ಗಳಲ್ಲಿ 7 ವಿಕೆಟ್ ನಷ್ಟಕ್ಕೆ 125 ರನ್​ ಕಲೆಹಾಕಿತು. ಈ ಮೊತ್ತವನ್ನು ಬೆನ್ನತ್ತಿದ ಸನ್​ರೈಸರ್ಸ್​ ಹೈದರಾಬಾದ್ ತಂಡವನ್ನು ಕಟ್ಟಿಹಾಕುವಲ್ಲಿ ಪಂಜಾಬ್ ಕಿಂಗ್ಸ್​ ಬೌಲರುಗಳು ಯಶಸ್ವಿಯಾದರು. ಅದರಂತೆ ಅಂತಿಮ ಓವರ್​ನಲ್ಲಿ 17 ರನ್​ಗಳ ಅವಶ್ಯಕತೆ ಪಡೆದ ಸನ್​ರೈಸರ್ಸ್​ ಹೈದರಾಬಾದ್  ಕೇವಲ 11 ರನ್​ಗಳಿಸಲಷ್ಟೇ ಶಕ್ತರಾದರು. ಇದರೊಂದಿಗೆ ಪಂಜಾಬ್ ಕಿಂಗ್ಸ್​ ತಂಡವು 5 ರನ್​ಗಳ ರೋಚಕ ಜಯ ಸಾಧಿಸಿತು.

ಸಂಕ್ಷಿಪ್ತ ಸ್ಕೋರ್ ವಿವರ:

PBKS 125/7 (20)

ಐಡೆನ್ ಮಾರ್ಕ್ರಂ- 27

ಕೆಎಲ್ ರಾಹುಲ್-21

ಜೇಸನ್ ಹೋಲ್ಡರ್-19/3

SRH 120/7 (20)

ಜೇಸನ್ ಹೋಲ್ಡರ್- 47

ವೃದ್ದಿಮಾನ್ ಸಾಹಾ-31

ರವಿ ಬಿಷ್ಣೋಯ್-24/3

ಸನ್ ರೈಸರ್ಸ್ ಹೈದರಾಬಾದ್ ಪ್ಲೇಯಿಂಗ್ ಇಲೆವೆನ್: ಡೇವಿಡ್ ವಾರ್ನರ್, ವೃದ್ಧಿಮಾನ್ ಸಾಹಾ, ಕೇನ್ ವಿಲಿಯಮ್ಸನ್ (ನಾಯಕ), ಮನೀಶ್ ಪಾಂಡೆ, ಕೇದರ್ ಜಾಧವ್, ಅಬ್ದುಲ್ ಸಮದ್, ಜೇಸನ್ ಹೋಲ್ಡರ್, ರಶೀದ್ ಖಾನ್, ಭುವನೇಶ್ವರ್ ಕುಮಾರ್, ಸಂದೀಪ್ ಶರ್ಮಾ, ಖಲೀಲ್ ಅಹ್ಮದ್

ಪಂಜಾಬ್ ಕಿಂಗ್ಸ್ ಪ್ಲೇಯಿಂಗ್ ಇಲೆವೆನ್: ಕೆಎಲ್ ರಾಹುಲ್ (ನಾಯಕ), ಮಯಾಂಕ್ ಅಗರ್ವಾಲ್, ಕ್ರಿಸ್ ಗೇಲ್, ಐಡೆನ್ ಮಾರ್ಕ್ರಮ್, ನಿಕೋಲಸ್ ಪೂರನ್, ದೀಪಕ್ ಹೂಡಾ, ರವಿ ಬಿಷ್ಣೋಯ್, ಮೊಹಮ್ಮದ್ ಶಮಿ, ಹರಪ್ರೀತ್ ಬ್ರಾರ್, ಅರ್ಷದೀಪ್ ಸಿಂಗ್, ನಾಥನ್ ಎಲ್ಲಿಸ್

LIVE NEWS & UPDATES

The liveblog has ended.
  • 25 Sep 2021 11:16 PM (IST)

    ಪಂಜಾಬ್ ಕಿಂಗ್ಸ್​- ಗೆಲುವಿನ ಸಂಭ್ರಮ

  • 25 Sep 2021 11:08 PM (IST)

    ಪಂಜಾಬ್ ಕಿಂಗ್ಸ್​ಗೆ 5 ರನ್​ಗಳ ರೋಚಕ

    ಸನ್​ರೈಸರ್ಸ್​ ವಿರುದ್ದ ಪಂಜಾಬ್ ಕಿಂಗ್ಸ್​ಗೆ ರೋಚಕ ಜಯ

    PBKS 125/7 (20)

    SRH 120/7 (20)

  • 25 Sep 2021 11:07 PM (IST)

    ಕೊನೆಯ ಓವರ್​- ನಾಥನ್ ಎಲ್ಲಿಸ್

    ಮೊದಲ ಎಸೆತ- 1 ರನ್( ಬೈಸ್)

    2ನೇ ಎಸೆತ- ಭರ್ಜರಿ ಸಿಕ್ಸರ್ ( ಜೇಸನ್ ಹೋಲ್ಡರ್)

    3ನೇ ಎಸೆತ- ಯಾವುದೇ ರನ್ ಇಲ್ಲ

    4ನೇ ಎಸೆತ- 1 ರನ್ (ಜೇಸನ್ ಹೋಲ್ಡರ್)

    2 ಎಸೆತಗಳಲ್ಲಿ 10 ರನ್​ಗಳ ಅವಶ್ಯಕತೆ

    5ನೇ ಎಸೆತ- ವೈಡ್

    2 ಎಸೆತಗಳಲ್ಲಿ 9 ರನ್​ಗಳ ಅವಶ್ಯಕತೆ

    5ನೇ ಮರು ಎಸೆತ- 2 ರನ್

    1 ಎಸೆತದಲ್ಲಿ 7 ರನ್​ಗಳ ಅವಶ್ಯಕತೆ

    6ನೇ ಎಸೆತ- 1 ರನ್

    ಪಂಜಾಬ್ ಕಿಂಗ್ಸ್​ಗೆ 5 ರನ್​ಗಳ ರೋಚಕ ಜಯ

  • 25 Sep 2021 11:02 PM (IST)

    ಕೊನೆಯ ಓವರ್- ನಾಥನ್ ಎಲ್ಲಿಸ್

    ಮೊದಲ ಎಸೆತ- 1 ರನ್( ಬೈಸ್)

    2ನೇ ಎಸೆತ- ಭರ್ಜರಿ ಸಿಕ್ಸರ್ ( ಜೇಸನ್ ಹೋಲ್ಡರ್)

  • 25 Sep 2021 11:01 PM (IST)

    6 ಎಸೆತಗಳಲ್ಲಿ 17 ರನ್​ಗಳ ಅವಶ್ಯಕತೆ

    ಕ್ರೀಸ್​ನಲ್ಲಿ ಹೋಲ್ಡರ್-ಭುವನೇಶ್ವರ್ ಕುಮಾರ್

    SRH 109/7 (19)

      

  • 25 Sep 2021 11:00 PM (IST)

    SRH 109/7 (19)

    ಸನ್ ರೈಸರ್ಸ್ ಹೈದರಾಬಾದ್ ಗೆ 6 ಎಸೆತಗಳಲ್ಲಿ 17 ರನ್​ಗಳ ಅವಶ್ಯಕತೆ

  • 25 Sep 2021 10:59 PM (IST)

    ಕ್ರೀಸ್​ನಲ್ಲಿ ಹೋಲ್ಡರ್-ಭುವನೇಶ್ವರ್ ಕುಮಾರ್

    ಸನ್ ರೈಸರ್ಸ್ ಹೈದರಾಬಾದ್ ಗೆ 8 ಎಸೆತಗಳಲ್ಲಿ 20 ರನ್​ಗಳ ಅವಶ್ಯಕತೆ

  • 25 Sep 2021 10:56 PM (IST)

    ರಶೀದ್ ಖಾನ್ ಔಟ್

    ಅರ್ಷದೀಪ್ ಎಸೆತದಲ್ಲಿ ಬಿಗ್ ಹಿಟ್​ಗೆ ಮುಂದಾದ ರಶೀದ್ ಖಾನ್...ಸುಲಭ ಕ್ಯಾಚ್ ಹಿಡಿದ ಅರ್ಷದೀಪ್ ಸಿಂಗ್

    SRH 105/7 (18.1)

      

  • 25 Sep 2021 10:55 PM (IST)

    2 ಓವರ್​ನಲ್ಲಿ 21 ರನ್​ಗಳ ಅವಶ್ಯಕತೆ

    ಸನ್ ರೈಸರ್ಸ್ ಹೈದರಾಬಾದ್ ಗೆ 12 ಎಸೆತಗಳಲ್ಲಿ 21 ರನ್​ಗಳ ಅವಶ್ಯಕತೆ

    SRH 105/6 (18)

      

  • 25 Sep 2021 10:52 PM (IST)

    ಜೇಸನ್ ಹೋಲ್ಡರ್​ ಅಬ್ಬರ

    ಮೊಹಮ್ಮದ್ ಶಮಿ ಎಸೆತದಲ್ಲಿ ಭರ್ಜರಿ ಹೊಡೆತ...ಸಿಕ್ಸ್

    SRH 103/6 (17.3)

      

  • 25 Sep 2021 10:50 PM (IST)

    3 ಓವರ್​ನಲ್ಲಿ 30 ರನ್​ಗಳ ಟಾರ್ಗೆಟ್

    SRH 96/6 (17)

    ಸನ್ ರೈಸರ್ಸ್ ಹೈದರಾಬಾದ್ ಗೆ 18 ಎಸೆತಗಳಲ್ಲಿ 30 ರನ್​ಗಳ ಅವಶ್ಯಕತೆ
    ಕ್ರೀಸ್​ನಲ್ಲಿ ಜೇಸನ್ ಹೋಲ್ಡರ್-ರಶೀದ್ ಖಾನ್ ಬ್ಯಾಟಿಂಗ್
  • 25 Sep 2021 10:46 PM (IST)

    ಸಾಹಾ ಔಟ್

    ಬ್ಯಾಟರುಗಳ ನಡುವೆ ಹೊಂದಾಣಿಕೆಯ ಕೊರತೆ..ವೃದ್ದಿಮಾನ್ ಸಾಹಾ (31) ರನೌಟ್

  • 25 Sep 2021 10:42 PM (IST)

    16 ಓವರ್ ಮುಕ್ತಾಯ

    SRH 91/5 (16)

    ಸನ್ ರೈಸರ್ಸ್ ಹೈದರಾಬಾದ್ ಗೆ 24 ಎಸೆತಗಳಲ್ಲಿ 35 ರನ್​ಗಳ ಅವಶ್ಯಕತೆ

      

  • 25 Sep 2021 10:40 PM (IST)

    ಬ್ಯಾಕ್ ಟು ಬ್ಯಾಕ್ ಜೇ-ಸಿಕ್ಸ್​

    ನಾಥನ್ ಎಲ್ಲಿಸ್ ಎಸೆತದಲ್ಲಿ ಬ್ಯಾಕ್ ಟು ಬ್ಯಾಕ್ ಸಿಕ್ಸ್​ ಸಿಡಿಸಿದ ಜೇಸನ್ ಹೋಲ್ಡರ್. ಮೊದಲ ಸಿಕ್ಸ್​ ಓವರ್ ಸ್ಕ್ವೇರ್ ಲೆಗ್​ನತ್ತ...2ನೇ ಸಿಕ್ಸ್​ ಲಾಂಗ್​ ಆನ್​ನತ್ತ

  • 25 Sep 2021 10:37 PM (IST)

    ಜೇಸನ್ ಕ್ರ್ಯಾಕಿಂಗ್ ಸಿಕ್ಸ್

    ಬಿಷ್ಣೋಯ್ ಎಸೆತದಲ್ಲಿ ಜೇಸನ್ ಹೋಲ್ಡರ್ ಸ್ಟ್ರೈಟ್ ಹಿಟ್ ಸಿಕ್ಸ್

  • 25 Sep 2021 10:34 PM (IST)

    6 ಓವರ್​ನಲ್ಲಿ 62 ರನ್​ಗಳ ಅವಶ್ಯಕತೆ

    ಪಂಜಾಬ್ ಉತ್ತಮ ಬೌಲಿಂಗ್​. ಎಸ್​ಆರ್​ಹೆಚ್​ಗೆ 36 ಎಸೆತಗಳಲ್ಲಿ 62 ರನ್​ಗಳ ಅವಶ್ಯಕತೆ

    SRH 64/5 (14)

      

  • 25 Sep 2021 10:31 PM (IST)

    ಅಬ್ದುಲ್ ಸಮದ್ ಔಟ್

    ರವಿ ಬಿಷ್ಣೋಯ್ ಎಸೆತದಲ್ಲಿ ಬಿಗ್ ಹಿಟ್​ಗೆ ಮುಂದಾದ ಸಮದ್...ನೇರವಾಗಿ ಚೆಂಡು ಕ್ರಿಸ್ ಗೇಲ್ ಕೈಗೆ...ಅಬ್ದುಲ್ ಸಮದ್ (1) ಔಟ್.

    SRH 60/5 (13)

      

  • 25 Sep 2021 10:26 PM (IST)

    ಬಿಷ್ಣೋಯ್ ಬ್ಯೂಟಿ...ಬೌಲ್ಡ್

    ರವಿ ಬಿಷ್ಣೋಯ್ ಗೂಗ್ಲಿಗೆ ಕೇದರ್ ಜಾಧವ್ (12) ಬೌಲ್ಡ್

    SRH 56/4 (12.2)

      

  • 25 Sep 2021 10:24 PM (IST)

    12 ಓವರ್ ಮುಕ್ತಾಯ

    SRH 56/3 (12)

    ಸನ್ ರೈಸರ್ಸ್ ಹೈದರಾಬಾದ್​ಗೆ 48 ಎಸೆತಗಳಲ್ಲಿ 70 ರನ್​ಗಳ ಅವಶ್ಯಕತೆ

      

  • 25 Sep 2021 10:21 PM (IST)

    12ನೇ ಓವರ್​ನಲ್ಲಿ ಅರ್ಧಶತಕ ಪೂರೈಸಿದ ಎಸ್​ಆರ್​ಹೆಚ್

    ಕ್ರೀಸ್​ನಲ್ಲಿ ವೃದ್ದಿಮಾನ್ ಸಾಹಾ ಹಾಗೂ ಕೇದರ್ ಜಾಧವ್ ಬ್ಯಾಟಿಂಗ್

  • 25 Sep 2021 10:18 PM (IST)

    ಪಂಜಾಬ್ ಕಿಂಗ್ಸ್​ ಉತ್ತಮ ಬೌಲಿಂಗ್

  • 25 Sep 2021 10:16 PM (IST)

    10 ಓವರ್ ಮುಕ್ತಾಯ

    ಪಂಜಾಬ್ ಕಿಂಗ್ಸ್​ ಉತ್ತಮ ಬೌಲಿಂಗ್

    ಮೊದಲ 10 ಓವರ್​ನಲ್ಲಿ ನೀಡಿದ್ದು ಕೇವಲ 43 ರನ್​ಗಳು ಮಾತ್ರ

    SRH 43/3 (10)

      

  • 25 Sep 2021 10:08 PM (IST)

    SRH 39/3 (9)

    ಸನ್​ರೈಸರ್ಸ್​ ಹೈದರಾಬಾದ್ ನಿಧಾನಗತಿಯ ಬ್ಯಾಟಿಂಗ್

    9 ಓವರ್​ಗಳಲ್ಲಿ 3 ವಿಕೆಟ್ ಕಳೆದುಕೊಂಡು ಕಲೆಹಾಕಿದ್ದು ಕೇವಲ 39 ರನ್​

  • 25 Sep 2021 10:06 PM (IST)

    ಸಾಹಾ ಹಾಗೂ ಜಾಧವ್ ಬ್ಯಾಟಿಂಗ್

    ಕ್ರೀಸ್​ನಲ್ಲಿ ವೃದ್ದಿಮಾನ್ ಸಾಹಾ ಹಾಗೂ ಕೇದರ್ ಜಾಧವ್ ಬ್ಯಾಟಿಂಗ್.

    SRH 33/3 (8.2)

      

  • 25 Sep 2021 10:04 PM (IST)

    ಮೂರನೇ ವಿಕೆಟ್ ಪತನ

    ರವಿ ಬಿಷ್ಣೋಯ್ ಎಸೆತದಲ್ಲಿ 13 ರನ್​ಗಳಿಸಿದ್ದ ಮನೀಷ್ ಪಾಂಡೆ ಕ್ಲೀನ್ ಬೌಲ್ಡ್

    ಪಂಜಾಬ್ ಕಿಂಗ್ಸ್​ಗೆ 3ನೇ ಯಶಸ್ಸು

    SRH 32/3 (8)

      

  • 25 Sep 2021 10:01 PM (IST)

    ವೆಲ್ಕಂ ಬೌಂಡರಿ

    ರವಿ ಬಿಷ್ಣೋಯ್ ಎಸೆತದಲ್ಲಿ ಲೆಗ್​ ಸೈಡ್​ನತ್ತ ಭರ್ಜರಿ ಹೊಡೆತ... ಮನೀಷ್ ಪಾಂಡೆ ಬ್ಯಾಟ್​ನಿಂದ ಫೋರ್​

  • 25 Sep 2021 09:55 PM (IST)

    ಪವರ್​ಪ್ಲೇ ಮುಕ್ತಾಯ

    ಪವರ್​ಪ್ಲೇ ಮುಕ್ತಾಯ: ಪಂಜಾಬ್​ ಕಿಂಗ್ಸ್​ ಮೇಲುಗೈ

    ಮೊದಲ 6 ಓವರ್​ನಲ್ಲಿ ಕೇವಲ 20 ರನ್​ ನೀಡಿ 2 ವಿಕೆಟ್ ಪಡೆದಿರುವ ಪಂಜಾಬ್ ಕಿಂಗ್ಸ್​ ಬೌಲರುಗಳು.

    SRH 20/2 (6)

    PBKS 125/7 (20)

     

  • 25 Sep 2021 09:44 PM (IST)

    ನಾಥನ್ ಎಲ್ಲಿಸ್ ಪದಾರ್ಪಣೆ

    ಐಪಿಎಲ್​ನಲ್ಲಿ ಚೊಚ್ಚಲ ಓವರ್ ಎಸೆದ ಆಸೀಸ್​ ವೇಗಿ ನಾಥನ್ ಎಲ್ಲಿಸ್.

    ಜೇ ರಿಚರ್ಡ್ಸನ್​ ಬದಲಿ ಆಟಗಾರನಾಗಿ ಐಪಿಎಲ್​ ದ್ವಿತಿಯಾರ್ಧದಲ್ಲಿ ಅವಕಾಶ

  • 25 Sep 2021 09:41 PM (IST)

    3 ಓವರ್ ಮುಕ್ತಾಯ

    SRH 10/2 (3)

     

    ಕ್ರೀಸ್​ನಲ್ಲಿ ಮನೀಷ್ ಪಾಂಡೆ ಹಾಗೂ ವೃದ್ದಿಮಾನ್ ಸಾಹಾ ಬ್ಯಾಟಿಂಗ್

  • 25 Sep 2021 09:38 PM (IST)

    ಶಮಿ ಸೂಪರ್ ಬೌಲಿಂಗ್

    ಕೇನ್ ವಿಲಿಯಮ್ಸನ್​ ಔಟ್...ಶಮಿ ಎಸೆತದಲ್ಲಿ ಬ್ಯಾಟ್ ಇನ್​ ಸೈಡ್​ ಎಡ್ಜ್​...ಬೌಲ್ಡ್​...ಪಂಜಾಬ್ ಕಿಂಗ್ಸ್​ಗೆ 2ನೇ ಯಶಸ್ಸು

    SRH 10/2 (2.2)

     

  • 25 Sep 2021 09:37 PM (IST)

    ಮೊದಲ ಬೌಂಡರಿ

    ಅರ್ಷದೀಪ್ ಎಸೆದ 2ನೇ ಓವರ್​ನ ಕೊನೆಯ ಎಸೆತದಲ್ಲಿ ಕವರ್ಸ್​ನತ್ತ ಬೌಂಡರಿ ಬಾರಿಸಿದ ವೃದ್ದಿಮಾನ್ ಸಾಹಾ

  • 25 Sep 2021 09:36 PM (IST)

    ಮೊದಲ ಓವರ್​ನಲ್ಲೇ ಮೊದಲ ವಿಕೆಟ್

    ಮೊದಲ ಓವರ್​ನಲ್ಲಿ ಡೇವಿಡ್ ವಾರ್ನರ್ ವಿಕೆಟ್ ಪಡೆದ ಮೊಹಮ್ಮದ್ ಶಮಿ

    ಶಮಿ ಎಸೆದ ಆಫ್​ ಸೈಡ್ ಎಸೆತವನ್ನು ಮುಟ್ಟಲು ಹೋಗಿ ಕೀಪರ್​ಗೆ ಕ್ಯಾಚ್ ನೀಡಿ ಹೊರ ನಡೆದ ವಾರ್ನರ್ (2)

  • 25 Sep 2021 09:17 PM (IST)

    126 ರನ್​ಗಳ ಟಾರ್ಗೆಟ್ ನೀಡಿದ ಪಂಜಾಬ್ ಕಿಂಗ್ಸ್​

  • 25 Sep 2021 09:15 PM (IST)

    ಟಾರ್ಗೆಟ್- 126

  • 25 Sep 2021 09:14 PM (IST)

    ಸನ್​ರೈಸರ್ಸ್​ ಹೈದರಾಬಾದ್ ಉತ್ತಮ ಬೌಲಿಂಗ್

    PBKS 125/7 (20)

  • 25 Sep 2021 09:11 PM (IST)

    ಪಂಜಾಬ್ ಕಿಂಗ್ಸ್​ ಇನಿಂಗ್ಸ್​ ಅಂತ್ಯ

    PBKS 125/7 (20)

      

  • 25 Sep 2021 09:10 PM (IST)

    ಬ್ರಾರ್ ಬೌಂಡರಿ

    ಭುವಿ ಎಸೆತದಲ್ಲಿ ಹಾಫ್​ ಸೈಡ್​ನತ್ತ ಬ್ರಾರ್ ಬೌಂಡರಿ

  • 25 Sep 2021 09:09 PM (IST)

    7ನೇ ವಿಕೆಟ್ ಪತನ

    ಭುವನೇಶ್ವರ್ ಕುಮಾರ್ ಎಸೆತದಲ್ಲಿ ಮನೀಷ್ ಪಾಂಡೆಗೆ ಕ್ಯಾಚ್ ನೀಡಿದ ನಾಥನ್ ಎಲ್ಲಿಸ್

  • 25 Sep 2021 09:07 PM (IST)

    ಅಂತಿಮ ಓವರ್​- ಭುವನೇಶ್ವರ್ ಕುಮಾರ್

    2ನೇ ಎಸೆತದಲ್ಲಿ ನಾಥನ್ ಎಲ್ಲಿಸ್​ ಭರ್ಜರಿ ಹೊಡೆತ...ಸ್ಟ್ರೈಟ್ ಹಿಟ್​...ಸಿಕ್ಸರ್

  • 25 Sep 2021 09:05 PM (IST)

    ರನ್​ಗಾಗಿ ಪಂಜಾಬ್ ಪರದಾಟ

    19ನೇ ಓವರ್ ಮುಕ್ತಾಯದ ವೇಳೆಗೆ ಪಂಜಾಬ್ ಕಿಂಗ್ಸ್ ಮೊತ್ತ 111

    PBKS 111/6 (19)

     

  • 25 Sep 2021 09:01 PM (IST)

    18 ಓವರ್ ಮುಕ್ತಾಯ

    ಪಂಜಾಬ್ ಕಿಂಗ್ಸ್​- 104/6 (18)

  • 25 Sep 2021 08:58 PM (IST)

    PBKS 100/6 (17)

    ಅಂತಿಮ 3 ಓವರ್

    ಕ್ರೀಸ್​ನಲ್ಲಿ ಹರ್ಪ್ರೀತ್ ಬ್ರಾರ್ ಮತ್ತು ನಾಥನ್ ಎಲ್ಲಿಸ್ ಬ್ಯಾಟಿಂಗ್.

  • 25 Sep 2021 08:57 PM (IST)

    17ನೇ ಓವರ್​ನಲ್ಲಿ 100 ರನ್​ ಪೂರೈಸಿದ ಪಂಜಾಬ್ ಕಿಂಗ್ಸ್​

    ಪಂಜಾಬ್ ಕಿಂಗ್ಸ್​ ನಿಧಾನಗತಿಯ ಬ್ಯಾಟಿಂಗ್...17ನೇ ಓವರ್​ನಲ್ಲಿ 100 ರನ್ ಪೂರೈಕೆ

    ಅಂತಿಮ ಮೂರು ಓವರ್​ಗಳಲ್ಲಿ ಎಷ್ಟು ರನ್ ಬರಲಿದೆ ಕಾದು ನೋಡಬೇಕಿದೆ.

  • 25 Sep 2021 08:52 PM (IST)

    ಪಂಜಾಬ್ ಕಿಂಗ್ಸ್​ 6ನೇ ವಿಕೆಟ್ ಪತನ

    ಪಂಜಾಬ್ ಕಿಂಗ್ಸ್​ 6ನೇ ವಿಕೆಟ್ ಪತನ

    ಜೇಸನ್ ಹೋಲ್ಡರ್ ಎಸೆತದಲ್ಲಿ ವಿಕೆಟ್ ಒಪ್ಪಿಸಿದ ದೀಪಕ್ ಹೂಡಾ...13 ರನ್​ಗೆ ಹೂಡಾ ಇನಿಂಗ್ಸ್​ ಅಂತ್ಯ

    PBKS 96/6 (15.4)

      

  • 25 Sep 2021 08:46 PM (IST)

    ಹೂಡಾ ರಾಕೆಟ್ ಶಾಟ್

    ಸಮದ್ ಎಸೆತದಲ್ಲಿ ದೀಪಕ್ ಹೂಡಾ ಕವರ್ಸ್​ನತ್ತ ರಾಕೆಟ್​ ಶಾಟ್....ಫೋರ್

  • 25 Sep 2021 08:46 PM (IST)

    ಫುಲ್​ ಟಾಸ್-ಔಟ್..!

    ಅಬ್ದುಲ್ ಸಮದ್ ಫುಲ್​ ಟಾಸ್ ಎಸೆತಕ್ಕೆ ಕ್ಯಾಚ್ ನೀಡಿ ಹೊರನಡೆದ ಐಡೆನ್ ಮಾರ್ಕ್ರಂ

  • 25 Sep 2021 08:45 PM (IST)

    14 ಓವರ್​ ಮುಕ್ತಾಯ: ರನ್​ಗಾಗಿ ಪರದಾಡುತ್ತಿರುವ ಪಂಜಾಬ್ ಕಿಂಗ್ಸ್​

    PBKS 84/4 (14)

     

  • 25 Sep 2021 08:39 PM (IST)

    ಮಾರ್ಕ್ರಂ ಬ್ಯೂಟಿ..!

    ಖಲೀಲ್ ಅಹ್ಮದ್ ಔಟ್ ಸೈಡ್ ಆಫ್​ ಸ್ಟಂಪ್ ಎಸೆತಕ್ಕೆ ಭರ್ಜರಿ ಉತ್ತರ ನೀಡಿದ ಮಾರ್ಕ್ರಂ...ಫೋರ್

  • 25 Sep 2021 08:33 PM (IST)

    12 ಓವರ್ ಮುಕ್ತಾಯ

    PBKS 68/4 (12)

    ಕ್ರೀಸ್​ನಲ್ಲಿ ಐಡೆನ್ ಮಾರ್ಕ್ರಂ ಹಾಗೂ ದೀಪಕ್ ಹೂಡಾ ಬ್ಯಾಟಿಂಗ್

     

  • 25 Sep 2021 08:32 PM (IST)

    ಏಟಿಗೆ ಎದಿರೇಟು- ಪೂರನ್ ಔಟ್

    ಸಿಕ್ಸ್ ಬಾರಿಸಿದ ಬೆನ್ನಲ್ಲೇ ಪೂರನ್ ವಿಕೆಟ್ ಪಡೆದ ಸಂದೀಪ್ ಶರ್ಮಾ...ನೇರವಾಗಿ ಬಂದ ಚೆಂಡನ್ನು ಅಷ್ಟೇ ವೇಗವಾಗಿ ಹಿಡಿದ ಸಂದೀಪ್ ಶರ್ಮಾ.

  • 25 Sep 2021 08:31 PM (IST)

    ಪೂರನ್ ಪವರ್

    ಸಂದೀಪ್ ಶರ್ಮಾ ಎಸೆತದಲ್ಲಿ ಡೀಪ್ ಮಿಡ್​ ವಿಕೆಟ್​ನತ್ತ ಪೂರನ್ ಭರ್ಜರಿ ಸಿಕ್ಸರ್

  • 25 Sep 2021 08:26 PM (IST)

    ಡೇಂಜರಸ್ ಗೇಲ್ ವಿಕೆಟ್ ಪಡೆದ ರಶೀದ್ ಖಾನ್

  • 25 Sep 2021 08:25 PM (IST)

    ರಶೀದ್ ಖಾನ್ ಸ್ಪಿನ್ ಮೋಡಿ- ಗೇಲ್ ಔಟ್

    ರಶೀದ್ ಖಾನ್ ಸ್ಪಿನ್ ಮೋಡಿ- ಕ್ರಿಸ್ ಗೇಲ್ ಎಲ್​ಬಿಡಬ್ಲ್ಯೂ....ಬಲವಾದ ಮನವಿ...ಅಂಪೈರ್​ ಔಟ್ ಎಂದು ತೀರ್ಪು..ಮೂರನೇ ಅಂಪೈರ್ ಮೊರೆ ಹೋದ ಗೇಲ್...ಔಟ್ ಎಂದು ತೀರ್ಪು ನೀಡಿದ ಥರ್ಡ್​ ಅಂಪೈರ್. ಕ್ರಿಸ್ ಗೇಲ್ (14) ಇನಿಂಗ್ಸ್ ಅಂತ್ಯ

  • 25 Sep 2021 08:23 PM (IST)

    ಸನ್​ರೈಸರ್ಸ್​ ಉತ್ತಮ ಬೌಲಿಂಗ್

  • 25 Sep 2021 08:21 PM (IST)

    10 ಓವರ್​ ಮುಕ್ತಾಯ: ಪಂಜಾಬ್ ನಿಧಾನಗತಿಯ ಬ್ಯಾಟಿಂಗ್

    PBKS 55/2 (10)

      ಕ್ರೀಸ್​ನಲ್ಲಿ ಕ್ರಿಸ್ ಗೇಲ್ ಹಾಗೂ ಐಡೆನ್ ಬ್ಯಾಟಿಂಗ್

  • 25 Sep 2021 08:14 PM (IST)

    ಮಾರ್ಕ್ರಂ ಮಾರ್ಕ್​

    ರಶೀದ್ ಖಾನ್ ಎಸೆತದಲ್ಲಿ ಮಿಡ್​ ವಿಕೆಟ್​ನತ್ತ ಆಕರ್ಷಕ ಶಾಟ್...ಐಡೆನ್ ಮಾರ್ಕ್ರಂ ಬ್ಯಾಟ್​ನಿಂದ ಬೌಂಡರಿ

    PBKS 45/2 (9)

      

  • 25 Sep 2021 08:06 PM (IST)

    ಕ್ಯಾಚ್ ಡ್ರಾಪ್

    ಖಲೀಲ್ ಅಹ್ಮದ್ ಎಸೆತದಲ್ಲಿ ಐಡೆನ್ ಮಾರ್ಕ್ರಂ ಭರ್ಜರಿ ಹೊಡೆತ...ಕ್ಯಾಚ್ ಕೈಚೆಲ್ಲಿದ ಡೇವಿಡ್ ವಾರ್ನರ್

    PBKS 32/2 (7)

     

  • 25 Sep 2021 08:01 PM (IST)

    ಪವರ್​ಪ್ಲೇ ಮುಕ್ತಾಯ: ಎಸ್​ಆರ್​ಹೆಚ್​ ಮೇಲುಗೈ

    ಪಂಜಾಬ್ ಆರಂಭಿಕ ಬ್ಯಾಟರುಗಳಾದ ಕೆಎಲ್ ರಾಹುಲ್ ಹಾಗೂ ಮಯಾಂಕ್ ಅಗರ್ವಾಲ್ ಔಟ್.

    ಮೊದಲ 6 ಓವರ್​ನಲ್ಲಿ ಸನ್​ರೈಸರ್ಸ್​ ಬೌಲರುಗಳು ನೀಡಿದ್ದು ಕೇವಲ 29 ರನ್​.

    PBKS 29/2 (6)

     

  • 25 Sep 2021 07:57 PM (IST)

    PBKS 27/2 (5)

    ಕ್ರೀಸ್​ನಲ್ಲಿ ಕ್ರಿಸ್ ಗೇಲ್ ಹಾಗೂ ಐಡೆನ್ ಮಾರ್ಕ್ರಂ ಬ್ಯಾಟಿಂಗ್

    PBKS 27/2 (5)

      

  • 25 Sep 2021 07:56 PM (IST)

    ಪಂಜಾಬ್ ಕಿಂಗ್ಸ್​ಗೆ ಆರಂಭಿಕ ಆಘಾತ

    ಜೇಸನ್ ಹೋಲ್ಡರ್ ಎಸೆತದಲ್ಲಿ ಕ್ಯಾಚ್ ನೀಡಿ ಹೊರನಡೆದ ಮಯಾಂಕ್ ಅಗರ್ವಾಲ್ (5)

    PBKS 27/2 (4.5)

      

  • 25 Sep 2021 07:50 PM (IST)

    ಕೆಎಲ್ ರಾಹುಲ್ ಔಟ್

    ಜೇಸನ್ ಹೊಲ್ಡರ್ ಎಸೆತದಲ್ಲಿ ಮಿಡ್​ ವಿಕೆಟ್​ನತ್ತ ಬಾರಿಸಿದ ಕೆಎಲ್ ರಾಹುಲ್...ಸಬ್​ ಫೀಲ್ಡರ್ ಸುಚಿತ್​ ಕೈಗೆ ಕ್ಯಾಚ್...ಕೆಎಲ್ ರಾಹುಲ್ (21) ಇನಿಂಗ್ಸ್​ ಅಂತ್ಯ

  • 25 Sep 2021 07:47 PM (IST)

    ಫೈನ್ ಲೆಗ್ ಫೋರ್...!

    ಸ್ಕೂಪ್...ಅಥವಾ ಶಾಟ್...ಫೈನ್​ ಲೆಗ್​ನತ್ತ ಆಕರ್ಷಕವಾಗಿ ಬಾರಿಸಿದ ಕೆಎಲ್ ರಾಹುಲ್...ಭುವಿ ಎಸೆತದಲ್ಲಿ ಬೌಂಡರಿ

  • 25 Sep 2021 07:43 PM (IST)

    ಮೂರು ಓವರ್ ಮುಕ್ತಾಯ

    PBKS 19/0 (3)

  • 25 Sep 2021 07:43 PM (IST)

    ಸಂದೀಪ್ ಟು ರಾಹುಲ್

    ಮತ್ತೊಮ್ಮೆ ಬ್ಯಾಟ್ ಎಡ್ಜ್​...ಫಸ್ಟ್​ ಸ್ಲಿಪ್ ಮೂಲಕ ಮತ್ತೊಂದು ಬೌಂಡರಿ- ಫೋರ್

  • 25 Sep 2021 07:38 PM (IST)

    ಇನಿಂಗ್ಸ್​ನ ಮೊದಲ ಬೌಂಡರಿ

    ಭುವನೇಶ್ವರ್ ಕುಮಾರ್ ಅವರ ಎಸೆತದಲ್ಲಿ ಬ್ಯಾಟ್ ಬದಿ ತಾಗಿ ಸ್ಕ್ವೇರ್ ಥರ್ಡ್​ ಮ್ಯಾನ್​ನತ್ತ ಚಿಮ್ಮಿದ ಚೆಂಡು...ಬೌಂಡರಿ, ಕೆಎಲ್ ರಾಹುಲ್​​ ಬ್ಯಾಟ್​​ನಿಂದ ಇನಿಂಗ್ಸ್​​ನ ಮೊದಲ ಫೋರ್

  • 25 Sep 2021 07:35 PM (IST)

    ಮೊದಲ ಓವರ್​ ಮುಕ್ತಾಯ

    PBKS 3/0 (1)

      ಕ್ರೀಸ್​ನಲ್ಲಿ ಕೆಎಲ್ ರಾಹುಲ್ ಹಾಗೂ ಮಯಾಂಕ್ ಅಗರ್ವಾಲ್ ಬ್ಯಾಟಿಂಗ್

  • 25 Sep 2021 07:33 PM (IST)

    ಮೊದಲ ಓವರ್

    ಮೊದಲ ಓವರ್​- ಸಂದೀಪ್ ಶರ್ಮಾ

    ಪಂಜಾಬ್ ಕಿಂಗ್ಸ್​ ಆರಂಭಿಕರು- ಕೆಎಲ್ ರಾಹುಲ್ ಹಾಗೂ ಮಯಾಂಕ್ ಅರ್ಗವಾಲ್

  • 25 Sep 2021 07:26 PM (IST)

    ಕಣಕ್ಕಿಳಿಯುವ ಕಲಿಗಳು

    ಸನ್ ರೈಸರ್ಸ್ ಹೈದರಾಬಾದ್ ಪ್ಲೇಯಿಂಗ್ ಇಲೆವೆನ್: ಡೇವಿಡ್ ವಾರ್ನರ್, ವೃದ್ಧಿಮಾನ್ ಸಾಹಾ, ಕೇನ್ ವಿಲಿಯಮ್ಸನ್ (ನಾಯಕ), ಮನೀಶ್ ಪಾಂಡೆ, ಕೇದರ್ ಜಾಧವ್, ಅಬ್ದುಲ್ ಸಮದ್, ಜೇಸನ್ ಹೋಲ್ಡರ್, ರಶೀದ್ ಖಾನ್, ಭುವನೇಶ್ವರ್ ಕುಮಾರ್, ಸಂದೀಪ್ ಶರ್ಮಾ, ಖಲೀಲ್ ಅಹ್ಮದ್

    ಪಂಜಾಬ್ ಕಿಂಗ್ಸ್ ಪ್ಲೇಯಿಂಗ್ ಇಲೆವೆನ್: ಕೆಎಲ್ ರಾಹುಲ್ (ನಾಯಕ), ಮಯಾಂಕ್ ಅಗರ್ವಾಲ್, ಕ್ರಿಸ್ ಗೇಲ್, ಐಡೆನ್ ಮಾರ್ಕ್ರಮ್, ನಿಕೋಲಸ್ ಪೂರನ್, ದೀಪಕ್ ಹೂಡಾ, ರವಿ ಬಿಷ್ಣೋಯ್, ಮೊಹಮ್ಮದ್ ಶಮಿ, ಹರಪ್ರೀತ್ ಬ್ರಾರ್, ಅರ್ಷದೀಪ್ ಸಿಂಗ್, ನಾಥನ್ ಎಲ್ಲಿಸ್

  • 25 Sep 2021 07:24 PM (IST)

    ಟಾಸ್ ವೀಡಿಯೋ

  • 25 Sep 2021 07:13 PM (IST)

  • 25 Sep 2021 07:08 PM (IST)

    ಸನ್ ರೈಸರ್ಸ್ ಹೈದರಾಬಾದ್ ಪ್ಲೇಯಿಂಗ್ ಇಲೆವೆನ್

    ಸನ್ ರೈಸರ್ಸ್ ಹೈದರಾಬಾದ್ ಪ್ಲೇಯಿಂಗ್ ಇಲೆವೆನ್: ಡೇವಿಡ್ ವಾರ್ನರ್, ವೃದ್ಧಿಮಾನ್ ಸಾಹಾ, ಕೇನ್ ವಿಲಿಯಮ್ಸನ್ (ನಾಯಕ), ಮನೀಶ್ ಪಾಂಡೆ, ಕೇದರ್ ಜಾಧವ್, ಅಬ್ದುಲ್ ಸಮದ್, ಜೇಸನ್ ಹೋಲ್ಡರ್, ರಶೀದ್ ಖಾನ್, ಭುವನೇಶ್ವರ್ ಕುಮಾರ್, ಸಂದೀಪ್ ಶರ್ಮಾ, ಖಲೀಲ್ ಅಹ್ಮದ್

  • 25 Sep 2021 07:07 PM (IST)

    ಪಂಜಾಬ್ ಕಿಂಗ್ಸ್ ಪ್ಲೇಯಿಂಗ್ ಇಲೆವೆನ್

    ಪಂಜಾಬ್ ಕಿಂಗ್ಸ್ (ಪ್ಲೇಯಿಂಗ್ ಇಲೆವೆನ್): ಕೆಎಲ್ ರಾಹುಲ್ (ನಾಯಕ), ಮಯಾಂಕ್ ಅಗರ್ವಾಲ್, ಕ್ರಿಸ್ ಗೇಲ್, ಐಡೆನ್ ಮಾರ್ಕ್ರಮ್, ನಿಕೋಲಸ್ ಪೂರನ್, ದೀಪಕ್ ಹೂಡಾ, ರವಿ ಬಿಷ್ಣೋಯ್, ಮೊಹಮ್ಮದ್ ಶಮಿ, ಹರಪ್ರೀತ್ ಬ್ರಾರ್, ಅರ್ಷದೀಪ್ ಸಿಂಗ್, ನಾಥನ್ ಎಲ್ಲಿಸ್

  • 25 Sep 2021 07:02 PM (IST)

    ಟಾಸ್ ಗೆದ್ದ ಸನ್​ರೈಸರ್ಸ್​ ಹೈದರಾಬಾದ್: ಬೌಲಿಂಗ್ ಆಯ್ಕೆ

    ಟಾಸ್ ಗೆದ್ದ ಸನ್​ರೈಸರ್ಸ್​ ಹೈದರಾಬಾದ್ ನಾಯಕ ಕೇನ್ ವಿಲಿಯಮ್ಸನ್: ಬೌಲಿಂಗ್ ಆಯ್ಕೆ

  • 25 Sep 2021 06:59 PM (IST)

    ಲೆಜೆಂಡ್​ಗಳ ಭೇಟಿ: ಕುಂಬ್ಳೆ-ಲಕ್ಷ್ಮಣ್

  • 25 Sep 2021 06:50 PM (IST)

    ಹೆಡ್​ ಟು ಹೆಡ್

  • 25 Sep 2021 06:48 PM (IST)

    ಸನ್​ರೈಸರ್ಸ್​ ಹೈದರಾಬಾದ್​-ಪಂಜಾಬ್ ಕಿಂಗ್ಸ್​ ಮುಖಾಮುಖಿ ಅಂಕಿ ಅಂಶಗಳು

Published On - Sep 25,2021 6:48 PM

Follow us on

Related Stories

Most Read Stories

Click on your DTH Provider to Add TV9 Kannada