AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2021: ರೋಹಿತ್- ರೈನಾ ದಾಖಲೆ ಪುಡಿಪುಡಿ! ಇಂದಿನ ಪಂದ್ಯದಲ್ಲಿ ಡೇವಿಡ್ ವಾರ್ನರ್ ಮಾಡಲಿರುವ ದಾಖಲೆಗಳಿವು

IPL 2021: ಡೇವಿಡ್ ವಾರ್ನರ್ ಪಂಜಾಬ್ ಕಿಂಗ್ಸ್ ವಿರುದ್ಧ 1000 ಐಪಿಎಲ್ ರನ್ ಗಳಿಸಲು 57 ರನ್ ದೂರದಲ್ಲಿದ್ದಾರೆ. ಪ್ರಸ್ತುತ ಅವರು ಪಂಜಾಬ್ ವಿರುದ್ಧ 943 ರನ್ ಗಳಿಸಿದ್ದಾರೆ.

IPL 2021: ರೋಹಿತ್- ರೈನಾ ದಾಖಲೆ ಪುಡಿಪುಡಿ! ಇಂದಿನ ಪಂದ್ಯದಲ್ಲಿ ಡೇವಿಡ್ ವಾರ್ನರ್ ಮಾಡಲಿರುವ ದಾಖಲೆಗಳಿವು
ಡೇವಿಡ್ ವಾರ್ನರ್
TV9 Web
| Updated By: ಪೃಥ್ವಿಶಂಕರ|

Updated on: Sep 25, 2021 | 5:06 PM

Share

ಐಪಿಎಲ್ 2021 ರಲ್ಲಿ ಸನ್ ರೈಸರ್ಸ್ ಹೈದರಾಬಾದ್ ಇಂದು ಪಂಜಾಬ್ ಕಿಂಗ್ಸ್ ತಂಡವನ್ನು ಎದುರಿಸಲಿದೆ. ಈ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್‌ ಒಂದು ಮೈಲಿಗಲ್ಲು ಸಾಧಿಸಿದರೆ, ನಂತರ ಸನ್ ರೈಸರ್ಸ್ ಹೈದರಾಬಾದ್ ಬ್ಯಾಟ್ಸ್‌ಮನ್ ಡೇವಿಡ್ ವಾರ್ನರ್ ಎರಡೆರಡು ದಾಕಲೆಯನ್ನು ತಮ್ಮ ಖಾತೆಗೆ ಹಾಕಿಕೊಳ್ಳಲಿದ್ದಾರೆ. ಇಂದು ಪಂದ್ಯದ ಆರಂಭದೊಂದಿಗೆ ಎರಡೂ ಸಾಧನೆಗಳ ಸ್ಕ್ರಿಪ್ಟ್ ಬರೆಯಲಾಗುತ್ತದೆ. ಇಂದು ಪಂಜಾಬ್ ಕಿಂಗ್ಸ್ ತನ್ನ 200 ನೇ ಪಂದ್ಯವನ್ನು ಐಪಿಎಲ್​ನಲ್ಲಿ ಆಡುತ್ತಿದ್ದರೆ, ಡೇವಿಡ್ ವಾರ್ನರ್ ಇಂದು 150 ನೇ ಐಪಿಎಲ್ ಪಂದ್ಯವನ್ನು (150 ನೇ ಐಪಿಎಲ್ ಪಂದ್ಯ) ಆಡಲಿದ್ದಾರೆ. ವಾರ್ನರ್ ಈ ಸಾಧನೆ ಮಾಡಿದ ಮೂರನೇ ಸಾಗರೋತ್ತರ ಆಟಗಾರನಾಗಲಿದ್ದಾರೆ. ಅವರಿಗಿಂತ ಮೊದಲು, ಎಬಿ ಡಿವಿಲಿಯರ್ಸ್ ಮತ್ತು ಕೀರನ್ ಪೊಲ್ಲಾರ್ಡ್ ಐಪಿಎಲ್‌ನಲ್ಲಿ 150 ಪಂದ್ಯಗಳ ಗಡಿ ದಾಟಿದ್ದಾರೆ.

ಆದಾಗ್ಯೂ, ಇಂದು ಅವರ 150 ನೇ ಪಂದ್ಯದಲ್ಲಿ, ಸನ್ ರೈಸರ್ಸ್ ಹೈದರಾಬಾದ್​ನ ಎಡಗೈ ಓಪನರ್ ಕೂಡ 3 ದಾಖಲೆಗಳನ್ನು ಮುಟ್ಟುವುದನ್ನು ಕಾಣಬಹುದು. ವಾರ್ನರ್ ಐಪಿಎಲ್‌ನಲ್ಲಿ ಒಂದು ಫ್ರಾಂಚೈಸಿ ವಿರುದ್ಧ 1000 ರನ್ ಪೂರ್ಣಗೊಳಿಸಿದ ಆಟಗಾರನಾಗಲಿದ್ದಾರೆ.

ಪಂಜಾಬ್ ವಿರುದ್ಧ 1000 ರನ್ ಗಳಿಸುತ್ತಾರಾ! ವಾರ್ನರ್ ಒಂದೊಂದಾಗಿ ಮಾಡಲಿರುವ ಮೂರು ದಾಖಲೆಗಳ ಬಗ್ಗೆ ಇಲ್ಲಿದೆ ವಿವರ. ಡೇವಿಡ್ ವಾರ್ನರ್ ಪಂಜಾಬ್ ಕಿಂಗ್ಸ್ ವಿರುದ್ಧ 1000 ಐಪಿಎಲ್ ರನ್ ಗಳಿಸಲು 57 ರನ್ ದೂರದಲ್ಲಿದ್ದಾರೆ. ಪ್ರಸ್ತುತ ಅವರು ಪಂಜಾಬ್ ವಿರುದ್ಧ 943 ರನ್ ಗಳಿಸಿದ್ದಾರೆ. ಈ ಸಮಯದಲ್ಲಿ, ಅವರು ಸರಾಸರಿ 52.38 ಮತ್ತು ಸ್ಟ್ರೈಕ್ ರೇಟ್ 140.11 ಹೊಂದಿದ್ದಾರೆ. ಇಂದು, ಅವರು ಪಂಜಾಬ್ ಕಿಂಗ್ಸ್ ವಿರುದ್ಧ 1000 ರನ್ ಗಡಿ ಮುಟ್ಟಿದರೆ, ಒಂದು ಫ್ರಾಂಚೈಸಿ ವಿರುದ್ಧ ರೋಹಿತ್ ಶರ್ಮಾ ನಂತರ ಈ ಸಾಧನೆ ಮಾಡಿದ ಎರಡನೇ ಮತ್ತು ಒಟ್ಟಾರೆ ಮೊದಲ ವಿದೇಶಿ ಬ್ಯಾಟ್ಸ್‌ಮನ್ ಆಗುತ್ತಾರೆ.

ವಾರ್ನರ್ ರೋಹಿತ್ ಮತ್ತು ರೈನಾ ಅವರನ್ನು ಹಿಂದಿಕ್ಕಲಿದ್ದಾರೆ ಡೇವಿಡ್ ವಾರ್ನರ್ ಹೆಸರು ಕೂಡ ಐಪಿಎಲ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದವರಲ್ಲಿ ಒಂದಾಗಿದೆ. ಪ್ರಸ್ತುತ ಅವರು 149 ಪಂದ್ಯಗಳಲ್ಲಿ 5447 ರನ್ ಗಳಿಸಿ 5 ನೇ ಸ್ಥಾನದಲ್ಲಿದ್ದಾರೆ. ಆದರೆ ಸುರೇಶ್ ರೈನಾ ನಾಲ್ಕನೇ ಸ್ಥಾನದಲ್ಲಿ ಕುಳಿತಿದ್ದಾರೆ ಮತ್ತು ರೋಹಿತ್ ಶರ್ಮಾ ಅವರೇನು ದೂರದಲ್ಲಿಲ್ಲ. ಐಪಿಎಲ್‌ನಲ್ಲಿ ಸುರೇಶ್ ರೈನಾ 5512 ರನ್ ಗಳಿಸಿದರೆ, ರೋಹಿತ್ ಶರ್ಮಾ 5513 ರನ್ ಗಳಿಸಿದ್ದಾರೆ. ಎಡಗೈ ವಾರ್ನರ್ ಇಂದು 67 ರನ್ ಗಳ ಇನ್ನಿಂಗ್ಸ್ ಆಡಿದರೆ, ಅವರು ರೋಹಿತ್ ಮತ್ತು ರೈನಾ ಅವರ ಹಿಂದೆ ಮೂರನೇ ಸ್ಥಾನದಲ್ಲಿರುತ್ತಾರೆ ಮತ್ತು ಈ ಮೂಲಕ ಏಕಕಾಲದಲ್ಲಿ ಮೂರು ಗುರಿಗಳನ್ನು ಮುಟ್ಟುತ್ತಾರೆ.

ಧ್ರುವಂತ್​ನ ಸೀಕ್ರೆಟ್​ರೂಂನಲ್ಲಿ ಇಟ್ಟ ಬಗ್ಗೆ ಬಿಗ್ ಬಾಸ್​ಗೆ ಬೇಸರ?
ಧ್ರುವಂತ್​ನ ಸೀಕ್ರೆಟ್​ರೂಂನಲ್ಲಿ ಇಟ್ಟ ಬಗ್ಗೆ ಬಿಗ್ ಬಾಸ್​ಗೆ ಬೇಸರ?
‘ಸು ಫ್ರಮ್ ಸೋ’ ಯಶಸ್ಸಿನ ಮೂಲವನ್ನು‘45’ ನಿರ್ಮಾಪಕನಿಗೆ ಹಸ್ತಾಂತರಿಸಿದ ರಾಜ್
‘ಸು ಫ್ರಮ್ ಸೋ’ ಯಶಸ್ಸಿನ ಮೂಲವನ್ನು‘45’ ನಿರ್ಮಾಪಕನಿಗೆ ಹಸ್ತಾಂತರಿಸಿದ ರಾಜ್
ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ
ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ
ಧನುರ್ಮಾಸದಲ್ಲಿ ಶುಭಕಾರ್ಯಗಳನ್ನ ಮಾಡಬಾರದು ಯಾಕೆ ಗೊತ್ತಾ?
ಧನುರ್ಮಾಸದಲ್ಲಿ ಶುಭಕಾರ್ಯಗಳನ್ನ ಮಾಡಬಾರದು ಯಾಕೆ ಗೊತ್ತಾ?
ಇಂದು ಈ ರಾಶಿಯವರ ಹಳೆಯ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ
ಇಂದು ಈ ರಾಶಿಯವರ ಹಳೆಯ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ