ಭಾರತ-ಇಂಗ್ಲೆಂಡ್ ಟೆಸ್ಟ್ ಸರಣಿಯ ಬಿಗ್ ಅಪ್‌ಡೇಟ್; ರದ್ದಾದ ಮ್ಯಾಂಚೆಸ್ಟರ್ ಟೆಸ್ಟ್‌ ಬಗ್ಗೆ ಮಂಡಳಿಗಳ ಮಹತ್ವದ ನಿರ್ಧಾರ

IND vs ENG: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಮತ್ತು ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ ಮುಂದಿನ ವರ್ಷ ಟೆಸ್ಟ್ ಪಂದ್ಯ ಆಡಲು ಒಪ್ಪಿಕೊಂಡಿವೆ.

ಭಾರತ-ಇಂಗ್ಲೆಂಡ್ ಟೆಸ್ಟ್ ಸರಣಿಯ ಬಿಗ್ ಅಪ್‌ಡೇಟ್; ರದ್ದಾದ ಮ್ಯಾಂಚೆಸ್ಟರ್ ಟೆಸ್ಟ್‌ ಬಗ್ಗೆ ಮಂಡಳಿಗಳ ಮಹತ್ವದ ನಿರ್ಧಾರ
ಜೋ ರೂಟ್ ಮತ್ತು ವಿರಾಟ್ ಕೊಹ್ಲಿ
TV9kannada Web Team

| Edited By: pruthvi Shankar

Sep 25, 2021 | 5:25 PM

ಭಾರತ ಮತ್ತು ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿಯ ಐದನೇ ಪಂದ್ಯವನ್ನು ರದ್ದುಗೊಳಿಸಿದಾಗಿನಿಂದ, ಅದನ್ನು ಹೇಗೆ ಸರಿದೂಗಿಸಲಾಗುತ್ತದೆ ಎಂದು ಎಲ್ಲರೂ ಕಾಯುತ್ತಿದ್ದಾರೆ. ಭಾರತವನ್ನು ಸರಣಿಯ ವಿಜೇತರೆಂದು ಪರಿಗಣಿಸಲಾಗುತ್ತದೆಯೇ ಅಥವಾ ಎರಡೂ ತಂಡಗಳು ಮತ್ತೊಮ್ಮೆ ಟೆಸ್ಟ್ ಆಡುತ್ತವೆಯೇ? ಎಂಬ ನಾನಾ ಪ್ರಶ್ನೆಗಳು ಎದ್ದಿವೆ. ಈಗ ಈ ವಿಷಯದ ಬಗ್ಗೆ ಇತ್ತೀಚಿನ ಮಾಹಿತಿ ಹೊರಬರುತ್ತಿದ್ದು, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಮತ್ತು ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ ಮುಂದಿನ ವರ್ಷ ಟೆಸ್ಟ್ ಪಂದ್ಯ ಆಡಲು ಒಪ್ಪಿಕೊಂಡಿವೆ. ಮುಂದಿನ ವರ್ಷ ಏಕದಿನ ಮತ್ತು ಟಿ 20 ಸರಣಿ ಆಡಲು ಭಾರತ ತಂಡ ಇಂಗ್ಲೆಂಡ್ ಪ್ರವಾಸ ಕೈಗೊಳ್ಳಬೇಕು. ಆ ಸಮಯದಲ್ಲಿ ಈ ಟೆಸ್ಟ್ ಪಂದ್ಯವನ್ನು ಕೂಡ ಆಡಲಾಗುತ್ತದೆ.

ಕ್ರಿಕೆಟ್ ವೆಬ್‌ಸೈಟ್ ESPN-Cricinfo ವರದಿಯ ಪ್ರಕಾರ, BCCI ಮತ್ತು ECB ಈ ಟೆಸ್ಟ್ ಪಂದ್ಯದ ಸ್ಥಳದ ನಿಗದಿಯನ್ನು ಮುಂದಿನ ವರ್ಷದ ಸೀಮಿತ ಓವರ್ ಸರಣಿಯಲ್ಲಿ ಮಾಡಲಾಗುವುದು ಎಂದು ಒಪ್ಪಿಕೊಂಡಿವೆ. ಇದು ಮ್ಯಾಂಚೆಸ್ಟರ್ ಟೆಸ್ಟ್ ರದ್ದಾದ ನಂತರ ECBಗೆ ಆದ ನಷ್ಟವನ್ನು ಸರಿದೂಗಿಸುತ್ತದೆ. ಆದರೆ, ಎರಡೂ ಮಂಡಳಿಗಳು ಇದನ್ನು ಅಧಿಕೃತವಾಗಿ ಘೋಷಿಸಿಲ್ಲ. ಅಲ್ಲದೆ, ಈ ಪಂದ್ಯವು ಪ್ರಸ್ತುತ ಸರಣಿಯ ಭಾಗವಾಗಿದೆಯೇ ಅಥವಾ ಸರಣಿಯಿಂದ ಪ್ರತ್ಯೇಕವಾಗಿ ಇರಿಸಲಾಗುತ್ತದೆಯೇ ಎಂಬುದು ಸ್ಪಷ್ಟವಾಗಿಲ್ಲ. ಹಾಗಾಗಿ ಸರಣಿಯ ಫಲಿತಾಂಶ ಇನ್ನೂ ಸ್ಪಷ್ಟವಾಗಿಲ್ಲ.

ಭಾರತೀಯ ತಂಡದಲ್ಲಿ ಕೊರೊನಾ ಪ್ರಕರಣಗಳು ಐದು ಪಂದ್ಯಗಳ ಸರಣಿಯ ನಾಲ್ಕನೇ ಟೆಸ್ಟ್​ವರೆಗೂ, ಭಾರತ ತಂಡವು 2-1ರಲ್ಲಿ ಮುನ್ನಡೆ ಸಾಧಿಸತ್ತು. ಆದರೆ ಈ ಸಮಯದಲ್ಲಿ ಭಾರತೀಯ ಶಿಬಿರದಲ್ಲಿ ಕೊರೊನಾ ಸೋಂಕಿನ ಪ್ರಕರಣಗಳು ಬರಲಾರಂಭಿಸಿದವು. ತಂಡದ ಮುಖ್ಯ ಕೋಚ್ ರವಿಶಾಸ್ತ್ರಿ ಮತ್ತು ಇತರ ಸಹಾಯಕ ಸಿಬ್ಬಂದಿಗಳು ನಾಲ್ಕನೇ ಟೆಸ್ಟ್ ಪಂದ್ಯದ ಮಧ್ಯದಲ್ಲಿ ಸೋಂಕಿಗೆ ಒಳಗಾದರು. ಅದೇ ಸಮಯದಲ್ಲಿ, ಮ್ಯಾಂಚೆಸ್ಟರ್‌ನಲ್ಲಿ ಸೆಪ್ಟೆಂಬರ್ 10 ರಿಂದ ಆರಂಭವಾಗಬೇಕಿದ್ದ ಕೊನೆಯ ಟೆಸ್ಟ್‌ಗೆ ಒಂದು ದಿನ ಮೊದಲು ತಂಡದ ಜೂನಿಯರ್ ಫಿಸಿಯೋ ಸೋಂಕಿಗೆ ಒಳಗಾದ ನಂತರ ಭಾರತೀಯ ಆಟಗಾರರು ಕೊನೆಯ ಟೆಸ್ಟ್ ಆಡಲು ನಿರಾಕರಿಸಿದರು. ಇದರ ನಂತರ, ಪಂದ್ಯ ಆರಂಭಕ್ಕೆ ಎರಡು ಗಂಟೆಗಳ ಮೊದಲು ಅದನ್ನು ರದ್ದುಗೊಳಿಸಲು ನಿರ್ಧರಿಸಲಾಯಿತು.

ಜುಲೈ 2022 ರಲ್ಲಿ ಭಾರತ ಇಂಗ್ಲೆಂಡ್ ಪ್ರವಾಸ ವರದಿಗಳ ಪ್ರಕಾರ, ಟೆಸ್ಟ್ ಪಂದ್ಯ ರದ್ದಾದ ಕಾರಣ, ಆಂಗ್ಲ ಮಂಡಳಿಗೆ ಕೋಟಿಗಟ್ಟಲೆ ನಷ್ಟವಾಗುವ ಸಾಧ್ಯತೆ ಇದೆ. ಇಂತಹ ಪರಿಸ್ಥಿತಿಯಲ್ಲಿ, ಇಂಗ್ಲೆಂಡ್ ಅದನ್ನು ಸರಿದೂಗಿಸುವುದು ಅತ್ಯಂತ ಮುಖ್ಯವಾಗಿದೆ. ಭಾರತೀಯ ಮಂಡಳಿಯು ಈ ವಿಷಯದಲ್ಲಿ ಇಂಗ್ಲಿಷ್ ಮಂಡಳಿಗೆ ಸಹಾಯ ಮಾಡಲು ಮುಂದಾಗಿದೆ. ಆದ್ದರಿಂದ ಮುಂದಿನ ವರ್ಷ ಜುಲೈನಲ್ಲಿ ನಡೆಯಲಿರುವ ಪ್ರವಾಸದಲ್ಲಿ ಒಂದು ಟೆಸ್ಟ್ ಆಡಲು ಅಥವಾ ಎರಡು ಹೆಚ್ಚುವರಿ ಟಿ 20 ಪಂದ್ಯಗಳನ್ನು ಆಡಲು ಪ್ರಸ್ತಾಪಿಸಲಾಯಿತು. ಅದರಲ್ಲಿ ಈಗ ಟೆಸ್ಟ್ ಆಡಲು ಒಪ್ಪಲಾಗಿದೆ. ಜುಲೈ 2022 ರಲ್ಲಿ ಇಂಗ್ಲೆಂಡ್ ಪ್ರವಾಸದಲ್ಲಿ ಭಾರತ ತಂಡ 3 ಏಕದಿನ ಮತ್ತು 3 ಟಿ 20 ಪಂದ್ಯಗಳನ್ನು ಆಡಲಿದೆ. ಆ ಸಮಯದಲ್ಲಿ ಈ ಒಂದು ಪಂದ್ಯವನ್ನು ಆಡಲಾಗುತ್ತದೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada