RR vs DC, IPL 2021: ಡೆಲ್ಲಿ ಬೌಲರುಗಳ ಎದುರು ಮಂಡಿಯೂರಿದ ರಾಜಸ್ಥಾನ್ ರಾಯಲ್ಸ್

TV9 Web
| Updated By: ಝಾಹಿರ್ ಯೂಸುಫ್

Updated on:Sep 25, 2021 | 7:21 PM

Rajasthan Royals vs Delhi Capitals: ಉಭಯ ತಂಡಗಳು ಇದುವರೆಗೆ 24 ಬಾರಿ ಮುಖಾಮುಖಿಯಾಗಿವೆ. ಅದರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವು 12 ರಲ್ಲಿ ಜಯ ಸಾಧಿಸಿದರೆ, ರಾಜಸ್ಥಾನ್ ರಾಯಲ್ಸ್​ 12 ಗೆಲುವು ದಾಖಲಿಸಿದೆ.

RR vs DC, IPL 2021: ಡೆಲ್ಲಿ ಬೌಲರುಗಳ ಎದುರು ಮಂಡಿಯೂರಿದ ರಾಜಸ್ಥಾನ್ ರಾಯಲ್ಸ್
RR vs DC

 ಅಬುಧಾಬಿಯ ಶೇಖ್ ಝಾಯೆದ್ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್​ನ 36ನೇ ಪಂದ್ಯದಲ್ಲಿ ರಿಷಭ್ ಪಂತ್ (Rishabh Pant) ನಾಯಕತ್ವದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಸಂಜು ಸ್ಯಾಮ್ಸನ್ (Sanju Samson) ನೇತೃತ್ವದ ರಾಜಸ್ಥಾನ್ ರಾಯಲ್ಸ್ (DC vs RR) ವಿರುದ್ದ 33 ರನ್​ಗಳ ಜಯ ಸಾಧಿಸಿದೆ. ಡೆಲ್ಲಿ ಕ್ಯಾಪಿಟಲ್ಸ್ ನೀಡಿದ 155 ರನ್​ಗಳ ಟಾರ್ಗೆಟ್ ಬೆನ್ನತ್ತಿದ ರಾಜಸ್ಥಾನ್​ ರಾಯಲ್ಸ್​ ನಿಗದಿತ 20 ಓವರ್​ನಲ್ಲಿ 6 ವಿಕೆಟ್ ಕಳೆದುಕೊಂಡು 121 ರನ್​ಗಳಿಸಲಷ್ಟೇ ಶಕ್ತವಾಯಿತು. ಇದಕ್ಕೂ ಮುನ್ನ ಟಾಸ್ ಗೆದ್ದ ಆರ್​ಆರ್ ನಾಯಕ ಸಂಜು ಸ್ಯಾಮ್ಸನ್ ಬೌಲಿಂಗ್ ಆಯ್ದುಕೊಂಡರು. ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡದಿಂದ ನಿರೀಕ್ಷಿತ ಬ್ಯಾಟಿಂಗ್​ ಮೂಡಿ ಬಂದಿರಲಿಲ್ಲ.

ಪವರ್​ಪ್ಲೇನಲ್ಲೇ ಶಿಖರ್ ಧವನ್ (8) ಹಾಗೂ ಪೃಥ್ವಿ ಶಾ (10) ವಿಕೆಟ್ ಒಪ್ಪಿಸಿ ನಿರಾಸೆ ಮೂಡಿಸಿದರು. ಆ ಬಳಿಕ ಜೊತೆಗೂಡಿದ ರಿಷಭ್ ಪಂತ್ ಹಾಗೂ ಶ್ರೇಯಸ್ ಅಯ್ಯರ್ ಒಂದಷ್ಟು ಪ್ರತಿರೋಧ ತೋರಿದರು. ಇದಾಗ್ಯೂ ಪಂತ್ (24) ತಂಡದ ಮೊತ್ತ 83 ರನ್​ ಆಗಿದ್ದ ವೇಳೆ ವಿಕೆಟ್ ಒಪ್ಪಿಸಿದರು. ಇನ್ನು ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ ಶ್ರೇಯಸ್ ಅಯ್ಯರ್ (43) ಸಂಜು ಸ್ಯಾಮ್ಸನ್​ ಮಾಡಿದ ಅದ್ಭುತ ಸ್ಟಂಪಿಂಗ್​ನಿಂದ ಔಟಾದರು. ಆ ಬಳಿಕ ಶಿಮ್ರಾನ್ ಹೆಟ್ಮೆಯರ್ ಬಿರುಸಿನ 28 ರನ್ ಬಾರಿಸಿದರು. ಪರಿಣಾಮ ಡೆಲ್ಲಿ ಕ್ಯಾಪಿಟಲ್ಸ್​ ನಿಗದಿತ 20 ಓವರ್​ಗಳಲ್ಲಿ 6 ವಿಕೆಟ್​ ನಷ್ಟಕ್ಕೆ 154 ರನ್​ಗಳಿಸಲು ಸಾಧ್ಯವಾಯಿತು.

155 ರನ್​ಗಳ ಟಾರ್ಗೆಟ್ ಬೆನ್ನತ್ತಿದ ರಾಜಸ್ಥಾನ್ ರಾಯಲ್ಸ್​ ಪರ ನಾಯಕ ಸಂಜು ಸ್ಯಾಮ್ಸನ್ 53 ಎಸೆತಗಳಲ್ಲಿ 70 ರನ್​ ಬಾರಿಸಿದರೂ ತಂಡವನ್ನು ಗೆಲುವಿನ ದಡ ಸೇರಿಸಲಾಗಲಿಲ್ಲ. ಅಂತಿಮವಾಗಿ ರಾಜಸ್ಥಾನ್ ರಾಯಲ್ಸ್ 6 ವಿಕೆಟ್ ಕಳೆದುಕೊಂಡು 121 ರನ್​ಗಳಿಗೆ ತನ್ನ ಇನಿಂಗ್ಸ್​ ಅಂತ್ಯಗೊಳಿಸಿತು. ಇದರೊಂದಿಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡ 33 ರನ್​ಗಳ ಭರ್ಜರಿ ಜಯ ಸಾಧಿಸಿತು.

ರಾಜಸ್ಥಾನ್ ರಾಯಲ್ಸ್ ಪ್ಲೇಯಿಂಗ್ ಇಲೆವೆನ್​:  ಯಶಸ್ವಿ ಜೈಸ್ವಾಲ್, ಸಂಜು ಸ್ಯಾಮ್ಸನ್ (ನಾಯಕ), ಲಿಯಾಮ್ ಲಿವಿಂಗ್ಸ್ಟೋನ್, ಡೇವಿಡ್ ಮಿಲ್ಲರ್, ಮಹಿಪಾಲ್ ಲೊಮರ್, ರಿಯಾನ್ ಪರಾಗ್, ರಾಹುಲ್ ತೆವಾಟಿಯಾ, ಕಾರ್ತಿಕ್ ತ್ಯಾಗಿ, ಚೇತನ್ ಸಕಾರಿಯಾ, ಮುಸ್ತಫಿಜುರ್ ರಹಮಾನ್, ತಬ್ರೇಜ್ ಶಮ್ಸಿ

ಡೆಲ್ಲಿ ಕ್ಯಾಪಿಟಲ್ಸ್ ಪ್ಲೇಯಿಂಗ್ ಇಲೆವೆನ್:   ಪೃಥ್ವಿ ಶಾ, ಶಿಖರ್ ಧವನ್, ಶ್ರೇಯಸ್ ಅಯ್ಯರ್, ರಿಷಭ್ ಪಂತ್ (ನಾಯಕ), ಲಲಿತ್ ಯಾದವ್, ಶಿಮ್ರಾನ್ ಹೆಟ್ಮೆಯರ್, ಅಕ್ಸರ್ ಪಟೇಲ್, ರವಿಚಂದ್ರನ್ ಅಶ್ವಿನ್, ಕಾಗಿಸೊ ರಬಾಡಾ, ಅನ್ರಿಕ್ ನೋಕಿಯಾ, ಅವೇಶ್ ಖಾನ್

LIVE NEWS & UPDATES

The liveblog has ended.
  • 25 Sep 2021 07:20 PM (IST)

    ಡೆಲ್ಲಿ ಕ್ಯಾಪಿಟಲ್ಸ್​ಗೆ 33 ರನ್​ಗಳ ಭರ್ಜರಿ ಜಯ

  • 25 Sep 2021 07:14 PM (IST)

    ರಾಜಸ್ಥಾನ್ ರಾಯಲ್ಸ್​ಗೆ 33 ರನ್​ಗಳ ಸೋಲು

    DC 154/6 (20)

    RR 121/6 (20)

  • 25 Sep 2021 07:11 PM (IST)

    ಕೊನೆಯ ಓವರ್​ನಲ್ಲಿ 45 ರನ್​ಗಳ ಅವಶ್ಯಕತೆ

    ಸೋಲಿನ ಸುಳಿಯಲ್ಲಿ ಸಂಜು ಸ್ಯಾಮ್ಸನ್ ನೇತೃತ್ವದ ರಾಜಸ್ಥಾನ್ ರಾಯಲ್ಸ್

  • 25 Sep 2021 07:09 PM (IST)

    ಕ್ಯಾಚ್ ಡ್ರಾಪ್

    ರಬಾಡಾ ಎಸೆತದಲ್ಲಿ ಭರ್ಜರಿ ಹೊಡೆತ…ಸಂಜು ಸ್ಯಾಮ್ಸನ್ ನೀಡಿದ ಸುಲಭ ಕ್ಯಾಚ್ ಕೈಚೆಲ್ಲಿದ ಶಿಖರ್ ಧವನ್

  • 25 Sep 2021 07:06 PM (IST)

    ಸ್ಯಾಮ್ಸನ್ ಸ್ಕೂಪ್

    ರಬಾಡ ಎಸೆತದಲ್ಲಿ ರಬಾಡ ಸ್ಕೂಪ್​…ಚೆಂಡು ಶಾರ್ಟ್ ಥರ್ಡ್​ ಮ್ಯಾನ್​ನತ್ತ ಬೌಂಡರಿಗೆ-ಫೋರ್

  • 25 Sep 2021 07:04 PM (IST)

    12 ಎಸೆತಗಳು ಬಾಕಿ

    ಕೊನೆಯ 2 ಓವರ್​ಗಳಲ್ಲಿ ರಾಜಸ್ಥಾನ್ ರಾಯಲ್ಸ್​ಗೆ ಗೆಲ್ಲಲು 54 ರನ್​ಗಳ ಅವಶ್ಯಕತೆ

    RR 101/6 (18)

     

  • 25 Sep 2021 07:00 PM (IST)

    ರಾಹುಲ್ ತಿವಾಠಿಯಾ ಔಟ್

    ಅನ್ರಿಕ್ ನೋಕಿಯಾ ಎಸೆತದಲ್ಲಿ ಭರ್ಜರಿ ಹೊಡೆತಕ್ಕೆ ಮುಂದಾಗಿ ಬೌಂಡರಿ ಲೈನ್​ನಲ್ಲಿ ಕ್ಯಾಚ್ ನೀಡಿ ಹೊರನಡೆದ ರಾಹುಲ್ ತಿವಾಠಿಯಾ

  • 25 Sep 2021 06:58 PM (IST)

    56 ರನ್​ಗಳ ಅವಶ್ಯಕತೆ

    RR 99/5 (17)

    ರಾಜಸ್ಥಾನ ರಾಯಲ್ಸ್ ಗೆ 18 ಎಸೆತಗಳಲ್ಲಿ 56 ರನ್​ಗಳ ಅವಶ್ಯಕತೆ
    ಕ್ರೀಸ್​ನಲ್ಲಿ ಸ್ಯಾಮ್ಸನ್-ತಿವಾಠಿಯಾ ಬ್ಯಾಟಿಂಗ್
  • 25 Sep 2021 06:56 PM (IST)

    ಅರ್ಧಶತಕ ಪೂರೈಸಿದ ಸಂಜು ಸ್ಯಾಮ್ಸನ್

    39 ಎಸೆತಗಳಲ್ಲಿ ಹಾಫ್ ಸೆಂಚುರಿ ಪೂರೈಸಿದ ಆರ್​ಆರ್ ನಾಯಕ ಸಂಜು ಸ್ಯಾಮ್ಸನ್

  • 25 Sep 2021 06:51 PM (IST)

    16 ಓವರ್​ ಮುಕ್ತಾಯ

    16 ಓವರ್​ ಮುಕ್ತಾಯ…ರಾಜಸ್ಥಾನ ರಾಯಲ್ಸ್ ಗೆ 24 ಎಸೆತಗಳಲ್ಲಿ 64 ರನ್​ಗಳ ಅವಶ್ಯಕತೆ

    ಕ್ರೀಸ್​ನಲ್ಲಿ ಸಂಜು ಸ್ಯಾಮ್ಸನ್​ ಹಾಗೂ ತಿವಾಠಿಯಾ ಬ್ಯಾಟಿಂಗ್

    RR 91/5 (16)

      

  • 25 Sep 2021 06:46 PM (IST)

    ಬ್ಯಾಕ್ ಟು ಬ್ಯಾಕ್ ಬೌಂಡರಿ

    ರಬಾಡಾ ಓವರ್​ನಲ್ಲಿ ಬ್ಯಾಕ್ ಟು ಬ್ಯಾಕ್ ಬೌಂಡರಿ…ಶಾರ್ಟ್​ ಲೆಂಗ್ತ್ ಎಸೆತವನ್ನು ಬೌಂಡರಿಗಟ್ಟಿದ ಸಂಜು ಸ್ಯಾಮ್ಸನ್- ಫೋರ್

  • 25 Sep 2021 06:45 PM (IST)

    ಆಕರ್ಷಕ ಹೊಡೆತ

    ಮತ್ತೊಂದು ಬೌಂಡರಿ ಬಾರಿಸಿದ ಸಂಜು ಸ್ಯಾಮ್ಸನ್…ರಬಾಡ ಎಸೆದ ಸ್ಲೋಬಾಲ್​ಗೆ ಮಿಡ್​ ಆಫ್​ನತ್ತ ಬೌಂಡರಿ ಬಾರಿಸಿದ ಸ್ಯಾಮ್ಸನ್

  • 25 Sep 2021 06:43 PM (IST)

    ಬ್ಯೂಟಿಫುಲ್ ಶಾಟ್

    ರಬಾಡ ಎಸೆತವನ್ನು ಫೈನ್​ ಲೆಗ್​ನತ್ತ ಆಕರ್ಷಕವಾಗಿ ಬಾರಿಸಿದ ಸಂಜು ಸ್ಯಾಮ್ಸನ್…ಮತ್ತೊಂದು ಫೋರ್

  • 25 Sep 2021 06:41 PM (IST)

    14ನೇ ಓವರ್ ಮುಕ್ತಾಯ

    14ನೇ ಓವರ್ ಮುಕ್ತಾಯದ ವೇಳೆ ಡೆಲ್ಲಿ ಕ್ಯಾಪಿಟಲ್ಸ್​ ಸ್ಕೋರ್ 92/2

    ರಾಜಸ್ಥಾನ್ ರಾಯಲ್ಸ್​ 68/5 (14)

  • 25 Sep 2021 06:38 PM (IST)

    ಸೂಪರ್ ಸ್ಯಾಮ್ಸನ್

    ಅನ್ರಿಕ್ ನೋಕಿಯಾ ವೇಗದ ಎಸೆತ..ಆಕರ್ಷಕವಾಗಿ ಥರ್ಡ್​ ಮ್ಯಾನ್​ ಬೌಂಡರಿಯತ್ತ ಬಾರಿಸಿದ ಸಂಜು ಸ್ಯಾಮ್ಸನ್​- ಫೋರ್

  • 25 Sep 2021 06:36 PM (IST)

    RR 59/5 (13)

    ಕ್ರೀಸ್​ನಲ್ಲಿ ರಾಹುಲ್ ತಿವಾಠಿಯಾ ಹಾಗೂ ಸಂಜು ಸ್ಯಾಮ್ಸನ್ ಬ್ಯಾಟಿಂಗ್

    ರಾಜಸ್ಥಾನ್ ರಾಯಲ್ಸ್ ಗೆ 42 ಎಸೆತಗಳಲ್ಲಿ 96 ರನ್​ಗಳ ಅವಶ್ಯಕತೆ

  • 25 Sep 2021 06:31 PM (IST)

    ಬೌಲ್ಡ್​…ಬೌಲ್ಡ್​…ಬೌಲ್ಡ್​

    ರಿಯಾನ್ ಪರಾಗ್ ಕ್ಲೀನ್ ಬೌಲ್ಡ್​…ಅಕ್ಷರ್ ಪಟೇಲ್ ಎಸೆತವನ್ನು ಗುರುತಿಸುವಲ್ಲಿ ಎಡವಿದ ಪರಾಗ್…ಕೇವಲ 2 ರನ್​ಗಳಿಸಿ ಪೆವಿಲಿಯನ್​ನತ್ತ ಹೆಜ್ಜೆಹಾಕಿದ ಯುವ ಆಟಗಾರ.

    RR 55/5 (11.5)

      

  • 25 Sep 2021 06:30 PM (IST)

    12ನೇ ಓವರ್​ನಲ್ಲಿ 50 ರನ್ ಪೂರೈಸಿದ ಆರ್​ಆರ್

    ಅಕ್ಷರ್ ಪಟೇಲ್ ಎಸೆತದಲ್ಲಿ ಸೂಪರ್ ಶಾಟ್…ಔಟ್ ಸೈಡ್​ ಆಫ್​ ಬೌಂಡರಿ ಬಾರಿಸಿದ ಸಂಜು ಸ್ಯಾಮ್ಸನ್

  • 25 Sep 2021 06:28 PM (IST)

    ರಾಜಸ್ಥಾನ್ ರಾಯಲ್ಸ್​ ನಿಧಾನಗತಿಯ ಬ್ಯಾಟಿಂಗ್

    ರಾಜಸ್ಥಾನ್ ರಾಯಲ್ಸ್​- 49/4 (11)

    ರಾಜಸ್ಥಾನ ರಾಯಲ್ಸ್‌ಗೆ 54 ಎಸೆತಗಳಲ್ಲಿ 106 ರನ್​ಗಳ ಅಗತ್ಯ
  • 25 Sep 2021 06:25 PM (IST)

    10 ಓವರ್ ಮುಕ್ತಾಯ: ಡೆಲ್ಲಿ ಕ್ಯಾಪಿಟಲ್ಸ್ ಭರ್ಜರಿ ಬೌಲಿಂಗ್

    ಮೊದಲ ಹತ್ತು ಓವರ್​ಗಳಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ನೀಡಿದ್ದು ಕೇವಲ 48 ರನ್ ಮಾತ್ರ.

    ರಬಾಡಾ ಎಸೆತದಲ್ಲಿ ಅವೇಶ್ ಖಾನ್​ಗೆ ಕ್ಯಾಚ್ ನೀಡಿ ಲೊಮರರ್ ನಿರ್ಗಮನ

    ಕ್ರೀಸ್​ನಲ್ಲಿ ಸಂಜು ಸ್ಯಾಮ್ಸನ್​ ಹಾಗೂ ರಿಯಾನ್ ಪರಾಗ್ ಬ್ಯಾಟಿಂಗ್

    RR 48/4 (10.2)

  • 25 Sep 2021 06:18 PM (IST)

    ಲೊಮರರ್​ ಭರ್ಜರಿ ಹೊಡೆತ

    ಅಶ್ವಿನ್ ಎಸೆತಕ್ಕೆ ಲೊಮರರ್ ಭರ್ಜರಿ ಪ್ರತ್ಯುತ್ತರ…ಚೆಂಡು ಬೌಂಡರಿ ದಾಟಿದ ಸಿಕ್ಸ್​

  • 25 Sep 2021 06:14 PM (IST)

    8 ಓವರ್ ಮುಕ್ತಾಯ

    DC 154/6 (20)

    RR 34/3 (8)

  • 25 Sep 2021 06:13 PM (IST)

    ಐಪಿಎಲ್ 2021 ರಲ್ಲಿ ಕಡಿಮೆ ಪವರ್‌ಪ್ಲೇ ಸ್ಕೋರ್‌ಗಳು:

    21/3 RR v DC ಅಬುಧಾಬಿ *

    21/1 MI v PBKS ಚೆನ್ನೈ

    24/4 CSK v MI ದುಬೈ

    25/1 KKR v RR ಮುಂಬೈ

  • 25 Sep 2021 06:09 PM (IST)

    ಪವರ್​ಪ್ಲೇ ಮುಕ್ತಾಯ

    ಮೊದಲ ಆರು ಓವರ್​ಗಳಲ್ಲಿ ರಾಜಸ್ಥಾನ್ ರಾಯಲ್ಸ್​ ಕಲೆಹಾಕಿದ್ದು ಕೇವಲ 21 ರನ್​ ಮಾತ್ರ. 3 ವಿಕೆಟ್ ಉರುಳಿಸಿ ಪವರ್​ಪ್ಲೇನಲ್ಲಿ ಡೆಲ್ಲಿ ಕ್ಯಾಪಿಟಲ್ಸ್​ ಸಂಪೂರ್ಣ ಮೇಲುಗೈ

  • 25 Sep 2021 06:03 PM (IST)

    5 ಓವರ್ ಮುಕ್ತಾಯ

    RR 19/3 (5)

      ಕ್ರೀಸ್​ನಲ್ಲಿ ಸಂಜು ಸ್ಯಾಮ್ಸನ್​ ಹಾಗೂ ಮಹಿಪಾಲ್ ಲೊಮರರ್ ಬ್ಯಾಟಿಂಗ್.

  • 25 Sep 2021 06:01 PM (IST)

    ಅಶ್ವಿನ್ ಮ್ಯಾಜಿಕ್- ಡೇವಿಡ್ ಮಿಲ್ಲರ್ ಔಟ್

    ಅಶ್ವಿನ್ ಎಸೆತದಲ್ಲಿ ಮುನ್ನುಗ್ಗಿ ಬಾರಿಸಲು ಬಂದ ಡೇವಿಡ್ ಮಿಲ್ಲರ್…ಚೆಂಡು ನೇರವಾಗಿ ಕೀಪರ್ ಕೈಗೆ…ಸ್ಟಂಪ್ ಔಟ್..ಡೇವಿಡ್ ಮಿಲ್ಲರ್ ಇನಿಂಗ್ಸ್ ಅಂತ್ಯ.

    RR 17/3 (4.2)

      

  • 25 Sep 2021 05:59 PM (IST)

    ನಾಟೌಟ್

    ಅನ್ರಿಕ್ ನೋಕಿಯಾ ಎಸೆತದಲ್ಲಿ ಸಂಜು ಸ್ಯಾಮ್ಸನ್ ಬ್ಯಾಟ್ ಬದಿಯಿಂದ ಚಿಮ್ಮಿದ ಚೆಂಡು…ಅತ್ಯಾದ್ಭುತ ಡೈವಿಂಗ್ ಮೂಲಕ ಕ್ಯಾಚ್ ಹಿಡಿದ ವಿಕೆಟ್ ಕೀಪರ್ ರಿಷಭ್ ಪಂತ್..ಅಂಪೈರ್ ಔಟ್ ಎಂದು ತೀರ್ಪು. ಡಿಎಸ್​ಆರ್​ ಮೊರೆ ಹೋದ ಸಂಜು ಸ್ಯಾಮ್ಸನ್​. ಮೂರನೇ ಅಂಪೈರ್ ಪರಿಶೀಲನೆ ವೇಳೆ ಚೆಂಡು ಹೆಲ್ಮೆಟ್​ಗೆ ಬಡಿದಿರುವುದು ಸ್ಪಷ್ಟ. ನಾಟೌಟ್ ಎಂದು ತೀರ್ಪು.

  • 25 Sep 2021 05:52 PM (IST)

    ಡೆಲ್ಲಿ ಕ್ಯಾಪಿಟಲ್ಸ್​ ಉತ್ತಮ ಆರಂಭ

    ಡೆಲ್ಲಿ ಕ್ಯಾಪಿಟಲ್ಸ್​ ಉತ್ತಮ ಆರಂಭ.

    ಮೊದಲ ಮೂರು ಓವರ್​ನಲ್ಲಿ 2 ವಿಕೆಟ್ ಉರುಳಿಸಿ ನೀಡಿದ್ದು ಕೇವಲ 15 ರನ್ ಮಾತ್ರ.

    ಲಿವಿಂಗ್​ಸ್ಟೋನ್ (1) ಹಾಗೂ ಯಶಸ್ವಿ ಜೈಸ್ವಾಲ್ (5) ಔಟ್.

    RR 15/2 (3)

     

  • 25 Sep 2021 05:47 PM (IST)

    2 ಓವರ್ ಮುಕ್ತಾಯ

    ರಾಜಸ್ಥಾನ್ ರಾಯಲ್ಸ್​- 11/2 (2)

      

  • 25 Sep 2021 05:45 PM (IST)

    ಆರ್​ಆರ್ ಆರಂಭಿಕರು ಔಟ್

    ಕ್ರೀಸ್​ನಲ್ಲಿ ಡೇವಿಡ್ ಮಿಲ್ಲರ್ ಹಾಗೂ ಸಂಜು ಸ್ಯಾಮ್ಸನ್​ ಬ್ಯಾಟಿಂಗ್

    ಲಿವಿಂಗ್​ಸ್ಟೋನ್ (1) ಹಾಗೂ ಯಶಸ್ವಿ ಜೈಸ್ವಾಲ್ (5) ಔಟ್.

    RR 6/2 (1.2)

  • 25 Sep 2021 05:43 PM (IST)

    ವೇಗದ ಅಸ್ತ್ರ ಅನ್ರಿಕ್ ನೋಕಿಯಾ- ಡೆಲ್ಲಿಗೆ 2ನೇ ಯಶಸ್ಸು

    ಅನ್ರಿಕ್ ನೋಕಿಯಾ ಎಸೆತದಲ್ಲಿ ಯಶಸ್ವಿ ಜೈಸ್ವಾಲ್ ಬ್ಯಾಟ್ ಬದಿ ತಗುಲಿ ಚೆಂಡು ವಿಕೆಟ್ ಕೀಪರ್ ಕೈಗೆ…ಬಲವಾದ ಮನವಿ..ಅಂಪೈರ್​ ನಾಟೌಟ್…ಡಿಆರ್​ಎಸ್​ ಮೊರೆ ಹೋದ ಡೆಲ್ಲಿ ನಾಯಕ ಪಂತ್. 3ನೇ ಅಂಪೈರ್ ತೀರ್ಪು- ಔಟ್

  • 25 Sep 2021 05:41 PM (IST)

    ಮೊದಲ ಓವರ್​ನಲ್ಲೇ ಮೊದಲ ಯಶಸ್ಸು

    ಡೆಲ್ಲಿ ಕ್ಯಾಪಿಟಲ್ಸ್​ಗೆ ಮೊದಲ ಯಶಸ್ಸು ತಂದುಕೊಟ್ಟ ಅವೇಶ್ ಖಾನ್

    ಅವೇಶ್ ಖಾನ್​ ಎಸೆತದಲ್ಲಿ ಲಿವಿಂಗ್​ಸ್ಟೋನ್ ಬ್ಯಾಟ್​ ಎಡ್ಜ್​…ವಿಕೆಟ್ ಕೀಪರ್ ರಿಷಭ್ ಪಂತ್ ಅತ್ಯುತ್ತಮ ಕ್ಯಾಚ್. ಲಿಯಾಮ್ ಲಿವಿಂಗ್​ಸ್ಟೋನ್ (1) ಔಟ್.

    RR 6/1 (1)

      

  • 25 Sep 2021 05:38 PM (IST)

    ರಾಜಸ್ಥಾನ್ ರಾಯಲ್ಸ್ ಇನಿಂಗ್ಸ್​ ಶುರು

    ಮೊದಲ ಓವರ್- ಅವೇಶ್ ಖಾನ್

    ರಾಜಸ್ಥಾನ್ ರಾಯಲ್ಸ್ ಆರಂಭಿಕರು:-

    ಲಿಯಾಮ್ ಲಿವಿಂಗ್​ಸ್ಟೋನ್ (ಇಂಗ್ಲೆಂಡ್) ಹಾಗೂ ಯಶಸ್ವಿ ಜೈಸ್ವಾಲ್

  • 25 Sep 2021 05:32 PM (IST)

    ಟಾರ್ಗೆಟ್- 155

  • 25 Sep 2021 05:31 PM (IST)

    ರಾಜಸ್ಥಾನ್ ಪರ ಮುಸ್ತಫಿಜುರ್ ಉತ್ತಮ ಬೌಲಿಂಗ್- 22/2

  • 25 Sep 2021 05:30 PM (IST)

    ಇನಿಂಗ್ಸ್​ ಬ್ರೇಕ್

  • 25 Sep 2021 05:23 PM (IST)

    ಡೆಲ್ಲಿ ಕ್ಯಾಪಿಟಲ್ಸ್​ ಇನಿಂಗ್ಸ್​ ಅಂತ್ಯ

    6 ವಿಕೆಟ್​ ನಷ್ಟಕ್ಕೆ 154 ರನ್​ ಪೇರಿಸಿದ ಡೆಲ್ಲಿ.

    ರಾಜಸ್ಥಾನ್ ರಾಯಲ್ಸ್​ಗೆ 155 ರನ್​ಗಳ ಟಾರ್ಗೆಟ್

    ಡೆಲ್ಲಿ ಕ್ಯಾಪಿಟಲ್ಸ್​- 154/6 (20)

  • 25 Sep 2021 05:21 PM (IST)

    ಕೊನೆಯ ಓವರ್- ಮುಸ್ತಫಿಜುರ್ ರಹಮಾನ್

    ಮೊದಲ ಎಸೆತದಲ್ಲಿ- ಕೇವಲ 1 ರನ್​ (ಲಲಿತ್ ಯಾದವ್)

    2ನೇ ಎಸೆತದಲ್ಲಿ- 1 ರನ್ ಮಾತ್ರ ( ಅಶ್ವಿನ್ )

    3ನೇ ಎಸೆತದಲ್ಲಿ- 1 ರನ್​ (ಲಲಿತ್ ಯಾದವ್)

    4ನೇ ಎಸೆತದಲ್ಲಿ- 2 ರನ್ ( ಅಶ್ವಿನ್ )

    5ನೇ ಎಸೆತದಲ್ಲಿ- 2 ರನ್ ( ಅಶ್ವಿನ್ )

    6ನೇ ಎಸೆತದಲ್ಲಿ- 2 ರನ್ (ಅಶ್ವಿನ್)

    ಡೆಲ್ಲಿ ಕ್ಯಾಪಿಟಲ್ಸ್​- 154/6 (20)

  • 25 Sep 2021 05:16 PM (IST)

    19 ಓವರ್ ಮುಕ್ತಾಯ

    DC 145/6 (19)

     

    ಕ್ರೀಸ್​ನಲ್ಲಿ ರವಿಚಂದ್ರನ್ ಅಶ್ವಿನ್ ಹಾಗೂ ಲಲಿತ್ ಯಾದವ್ ಬ್ಯಾಟಿಂಗ್

  • 25 Sep 2021 05:13 PM (IST)

    ಕಿಲ್ಲರ್ ಮಿಲ್ಲರ್…ಅಕ್ಷರ್ ಪಟೇಲ್ ಔಟ್

    ಚೇತನ್ ಸಕರಿಯಾ ಎಸೆತದಲ್ಲಿ ಅಕ್ಷರ್ ಪಟೇಲ್ ಭರ್ಜರಿ ಹೊಡೆತ…ಬೌಂಡರಿ ಲೈನ್​ನಲ್ಲಿ ಡೇವಿಡ್ ಮಿಲ್ಲರ್ ಉತ್ತಮ ಕ್ಯಾಚ್..12 ರನ್​ಗಳೊಂದಿಗೆ ಅಕ್ಷರ್ ಪಟೇಲ್ ಇನಿಂಗ್ಸ್​ ಅಂತ್ಯ

    DC 142/6 (18.2)

  • 25 Sep 2021 05:11 PM (IST)

    ಬಿಗ್ ಬಿಗ್ ಬಿಗ್​…ಅಕ್ಷರ್ ಶಾಟ್

    ಚೇತನ್ ಸಕರಿಯಾ ಅವರ ಮೊದಲ ಎಸೆತದಲ್ಲೇ ಕ್ಲೀನ್ ಸ್ಟೈಕ್​…ನೇರವಾಗಿ ಚೆಂಡು ಸ್ಟೇಡಿಯಂಗೆ…ಅಕ್ಷರ್ ಪಟೇಲ್​ ಬ್ಯಾಟ್​ನಿಂದ ಭರ್ಜರಿ ಸಿಕ್ಸ್​

  • 25 Sep 2021 05:09 PM (IST)

    ಕಟ್ ಶಾಟ್…ಫೋರ್

    ಕಾರ್ತಿಕ್ ತ್ಯಾಗಿ ಎಸೆತದಲ್ಲಿ ಲೆಗ್​ ಸೈಡ್​ನತ್ತ ಕಟ್​ ಶಾಟ್ ಬಾರಿಸಿದ ಲಲಿತ್ ಯಾದವ್…ಫೋರ್

    DC 135/5 (18)

  • 25 Sep 2021 05:04 PM (IST)

    ಕೊನೆಯ ಮೂರು ಓವರ್

    ಡೆಲ್ಲಿ ಕ್ಯಾಪಿಟಲ್ಸ್​ ಮೊತ್ತ- 127/5 (17.2)

  • 25 Sep 2021 05:03 PM (IST)

    ಕ್ರೀಸ್​ನಲ್ಲಿ ಅಕ್ಷರ್ ಪಟೇಲ್-ಲಲಿತ್ ಯಾದವ್

    DC 124/5 (17)

      

  • 25 Sep 2021 05:02 PM (IST)

    ಹೆಟ್ಮೆಯರ್ ಇನಿಂಗ್ಸ್​ ಅಂತ್ಯ

    16 ಎಸೆತಗಳಲ್ಲಿ 28 ರನ್ ಬಾರಿಸಿ ಮುಸ್ತಫಿಜುರ್ ರಹಮಾನ್​ಗೆ ವಿಕೆಟ್ ಒಪ್ಪಿಸಿದ ಶಿಮ್ರಾನ್ ಹೆಟ್ಮೆಯರ್

  • 25 Sep 2021 05:01 PM (IST)

    ಫಿಜ್​ ಬಿಗ್ ಫಿಶಿಂಗ್

    ಶಿಮ್ರಾನ್ ಹೆಟ್ಮೆಯರ್ ಔಟ್….ಮುಸ್ತಫಿಜುರ್ ಎಸೆತದಲ್ಲಿ ಭರ್ಜರಿ ಹೊಡೆತಕ್ಕೆ ಮುಂದಾದ ಹೆಟ್ಮೆಯರ್.. ಥರ್ಟಿ ಯಾರ್ಡ್​ ಸರ್ಕಲ್​ನಲ್ಲಿದ್ದ ಥರ್ಡ್​ ಮ್ಯಾನ್ ಫೀಲ್ಡರ್  ಚೇತನ್ ಸಕರಿಯಾಗೆ ಕ್ಯಾಚ್…ರಾಜಸ್ಥಾನ್​ಗೆ 5ನೇ ಯಶಸ್ಸು

  • 25 Sep 2021 04:57 PM (IST)

    DC 121/4 (16.1)

  • 25 Sep 2021 04:57 PM (IST)

    ಮತ್ತೊಂದು ಬೌಂಡರಿ

    ಕಾರ್ತಿಕ್ ತ್ಯಾಗಿ ಟು ಹೆಟ್ಮೆಯರ್…ಬೌನ್ಸರ್…ಅಷ್ಟೇ ನಾಜೂಕಾಗಿ ಆಡಿದ ಹೆಟ್ಮೆಯರ್…ಚೆಂಡು ಬೌಂಡರಿಗೆ…ಫೋರ್

  • 25 Sep 2021 04:54 PM (IST)

    ಹೆಟ್ಮೆಯರ್ ಅಬ್ಬರ ಶುರು

    ಕಾರ್ತಿಕ್ ತ್ಯಾಗಿ ಎಸೆತದಲ್ಲಿ ಬ್ಯಾಕ್ ಟು ಬ್ಯಾಕ್ ಬೌಂಡರಿ—ಆಫ್​ ಸೈಡ್​ನಲ್ಲಿ ವಿಂಡೀಸ್ ಎಡಗೈ ದಾಂಡಿಗ ಅಬ್ಬರ

  • 25 Sep 2021 04:50 PM (IST)

    ಶತಕ ಪೂರೈಸಿದ ಡೆಲ್ಲಿ ಕ್ಯಾಪಿಟಲ್ಸ್​

    15ನೇ ಓವರ್​ನಲ್ಲಿ ಶತಕದ ಗಟಿದಾಟಿದ ಡೆಲ್ಲಿ ಕ್ಯಾಪಿಟಲ್ಸ್​.

    ಕ್ರೀಸ್​ನಲ್ಲಿ ಶಿಮ್ರಾನ್ ಹೆಟ್ಮೆಯರ್ ಹಾಗೂ ಲಲಿತ್ ಯಾದವ್ ಬ್ಯಾಟಿಂಗ್

    DC 104/4 (15)

     

  • 25 Sep 2021 04:49 PM (IST)

    ಹಿಟ್ ಹಿಟ್​ ಹಿಟ್​

    ಹೆಟ್ಮೆಯರ್ ಹಿಟ್ಟಿಂಗ್ ಶಾಟ್​…ಚೇತನ್ ಸಕರಿಯಾ ಎಸೆತದಲ್ಲಿ ಲಾಂಗ್​ ಆನ್​ನತ್ತ ಸೂಪರ್ ಫೋರ್

  • 25 Sep 2021 04:48 PM (IST)

    ಹಿಟ್​-ಮೆಯರ್

    ಚೇತನ್ ಸಕರಿಯಾ ಎಸೆತದಲ್ಲಿ ಶ್ರಿಮಾನ್ ಹೆಟ್ಮೆಯರ್ ಕವರ್​ನತ್ತ ಭರ್ಜರಿ ಹೊಡೆತ…ಬೌಂಡರಿ ದಾಟಿದ ಚೆಂಡು-  ಫೋರ್

  • 25 Sep 2021 04:45 PM (IST)

    ಕ್ರೀಸ್​ನಲ್ಲಿ ಲಲಿತ್ ಯಾದವ್-ಹೆಟ್ಮೆಯರ್

    DC 92/4 (14)

  • 25 Sep 2021 04:43 PM (IST)

    ಶ್ರೇಯಸ್ ಅಯ್ಯರ್ ಇನಿಂಗ್ಸ್ ಅಂತ್ಯ

    32 ಎಸೆತಗಳಲ್ಲಿ 42 ರನ್​ ಬಾರಿಸಿ ಭರ್ಜರಿ ಬ್ಯಾಟಿಂಗ್ ಮಾಡುತ್ತಿದ್ದ ಅಯ್ಯರ್. ತಿವಾಠಿಯ ಎಸೆತದಲ್ಲಿ ಸಂಜು ಸ್ಯಾಮ್ಸನ್​ ಮಾಡಿದ ಚುರುಕಿನ ಸ್ಟಂಪಿಂಗ್​ಗೆ ಬಲಿ. 2 ಸಿಕ್ಸರ್​ನೊಂದಿಗೆ 42 ರನ್ ಬಾರಿಸಿದ್ದ ಶ್ರೇಯಸ್ ಅಯ್ಯರ್ ಇನಿಂಗ್ಸ್​ ಅಂತ್ಯ.

  • 25 Sep 2021 04:40 PM (IST)

    ಶ್ರೇಯಸ್ ಅಯ್ಯರ್ ಔಟ್

    ರಾಹುಲ್ ತಿವಾಠಿಯಾ ಬೌಲಿಂಗ್​ನಲ್ಲಿ ಸಂಜು ಸ್ಯಾಮ್ಸನ್ ಸೂಪರ್ ಸ್ಟಂಪ್​…ಇಂಚುಗಳ ಅಂತರದಲ್ಲಿ ಶ್ರೇಯಸ್ ಅಯ್ಯರ್ ಕಾಲು ಹೊರಗೆ…ಮೂರನೇ ಅಂಪೈರ್ ತೀರ್ಪು- ಔಟ್.

    DC 90/3 (13.1)

     

  • 25 Sep 2021 04:38 PM (IST)

    ಶೇಖ್ ಝಾಯೆದ್ ಸ್ಟೇಡಿಯಂ

    ಶೇಖ್ ಝಾಯೆದ್ ಕ್ರಿಕೆಟ್​ ಸ್ಟೇಡಿಯಂ ಯುಎಇನ ಅತ್ಯಂತ ದೊಡ್ಡ ಕ್ರಿಕೆಟ್ ಮೈದಾನ. ಶಾರ್ಜಾ ಮೈದಾನಕ್ಕೆ ಹೋಲಿಸಿದರೆ, ಇಲ್ಲಿ ರನ್​ಗಳಿಸುವುದು ಸುಲಭವಲ್ಲ. ಹೀಗಾಗಿಯೇ ಡೆಲ್ಲಿ ಕ್ಯಾಪಿಟಲ್ಸ್​ ಬ್ಯಾಟರುಗಳು ಭರ್ಜರಿ ಹೊಡೆತ ಬಾರಿಸಿದರೂ ಚೆಂಡು ಬೌಂಡರಿ ತಲುಪುತ್ತಿಲ್ಲ.

    DC 90/3 (13)

      C

  • 25 Sep 2021 04:32 PM (IST)

    DC 84/3 (12)

    ಡೆಲ್ಲಿ ಕ್ಯಾಪಿಟಲ್ಸ್​- 84/3 (12)

    ಕ್ರೀಸ್​ನಲ್ಲಿ ಶ್ರೇಯಸ್ ಅಯ್ಯರ್ ಹಾಗೂ ಶಿಮ್ರಾನ್ ಹೆಟ್ಮೆಯರ್ ಬ್ಯಾಟಿಂಗ್

      

  • 25 Sep 2021 04:30 PM (IST)

    ಫಿಜ್​ ಫಿನಿಶ್​…ರಿಷಭ್ ಪಂತ್ ಔಟ್

    ಮುಸ್ತಫಿಜುರ್ ರಹಮಾನ್ ಎಸೆತದಲ್ಲಿ ಬ್ಯಾಟ್ ಎಡ್ಜ್ ತಾಗಿ ರಿಷಭ್ ಪಂತ್ ಬೌಲ್ಡ್. 24 ಎಸೆತಗಳಲ್ಲಿ 24 ರನ್​ ಬಾರಿಸಿದ ಪಂತ್ ಇನಿಂಗ್ಸ್​ ಅಂತ್ಯ.

  • 25 Sep 2021 04:28 PM (IST)

    ಡೆಲ್ಲಿ ಕ್ಯಾಪಿಟಲ್ಸ್​ಗೆ ಅಯ್ಯರ್-ಪಂತ್ ಆಸರೆ

  • 25 Sep 2021 04:24 PM (IST)

    ಶ್ರೇ….ಎಸ್​ ಎಸ್​ ಎಸ್​ ಎಸ್​

    ಶ್ರೇಯಸ್ ಅಯ್ಯರ್ ಸಿಡಿಲಬ್ಬರ ಶುರು

    ತಬ್ರೇಜ್ ಶಮ್ಶಿ ಎಸೆತದಲ್ಲಿ ಎಕ್ಸ್​ಟ್ರಾ ಕವರ್​ನತ್ತ ಭರ್ಜರಿ ಸಿಕ್ಸ್ ಸಿಡಿಸಿದ ಅಯ್ಯರ್

  • 25 Sep 2021 04:21 PM (IST)

    10 ಓವರ್​ ಮುಕ್ತಾಯ: ರಾಜಸ್ಥಾನ್ ಉತ್ತಮ ಬೌಲಿಂಗ್

    10 ಓವರ್​ ಮುಕ್ತಾಯ: ರಾಜಸ್ಥಾನ್ ಉತ್ತಮ ಬೌಲಿಂಗ್…ಮೊದಲ 60 ಎಸೆತಗಳಲ್ಲಿ ನೀಡಿದ್ದು ಕೇವಲ 66 ರನ್​ಗಳು ಮಾತ್ರ.

  • 25 Sep 2021 04:15 PM (IST)

    9 ಓವರ್ ಮುಕ್ತಾಯ- ಟೈಮ್ ಔಟ್

    ಡೆಲ್ಲಿ ಕ್ಯಾಪಿಟಲ್ಸ್​- 56/2 (9)

    ಕ್ರೀಸ್​ನಲ್ಲಿ ಶ್ರೇಯಸ್ ಅಯ್ಯರ್ ಹಾಗೂ ರಿಷಭ್ ಪಂತ್ ಬ್ಯಾಟಿಂಗ್

  • 25 Sep 2021 04:13 PM (IST)

    ಸ್ವೀಪ್​ಪ್​ಪ್​ಪ್​ಪ್-ಬೌಂಡರಿ

    ತಬ್ರೇಜ್ ಶಮ್ಶಿ ಎಸೆತದಲ್ಲಿ ಪವರ್​ಫುಲ್ ಸ್ವೀಪ್ ಶಾಟ್- ರಿಷಭ್ ಪಂತ್ ಬ್ಯಾಟ್​ನಿಂದ ಭರ್ಜರಿ ಬೌಂಡರಿ

  • 25 Sep 2021 04:11 PM (IST)

    ರಾಜಸ್ಥಾನ್ ರಾಯಲ್ಸ್ ಭರ್ಜರಿ ಬೌಲಿಂಗ್

    8 ಓವರ್ ಮುಕ್ತಾಯ: ಡೆಲ್ಲಿ ಬ್ಯಾಟರ್​ಗಳು ಬಾರಿಸಿದ್ದು ಕೇವಲ 3 ಬೌಂಡರಿ

    DC 49/2 (8.1)

  • 25 Sep 2021 04:10 PM (IST)

    ರಾಜಸ್ಥಾನ್ ರಾಯಲ್ಸ್ ಬಿಗಿ ಬೌಲಿಂಗ್

    ಉತ್ತಮ ದಾಳಿ ಸಂಘಟಿಸುತ್ತಿರುವ ರಾಜಸ್ಥಾನ್ ರಾಯಲ್ಸ್. ಬೌಂಡರಿಗಾಗಿ ಡೆಲ್ಲಿ ಕ್ಯಾಪಿಟಲ್ಸ್ ಬ್ಯಾಟ್ಸ್​ಮನ್​ಗಳ ತಡಕಾಟ. ಅತ್ಯುತ್ತಮ ಫೀಲ್ಡಿಂಗ್ ಮೂಲಕ ರನ್​ಗತಿ ನಿಯಂತ್ರಿಸುತ್ತಿರುವ ರಾಜಸ್ಥಾನ್ ರಾಯಲ್ಸ್​ ತಂಡ.

    DC 47/2 (8)

  • 25 Sep 2021 04:04 PM (IST)

    ಐಪಿಎಲ್​ನಲ್ಲಿ ಮತ್ತೆ ಕಣಕ್ಕಿಳಿದ ತಬ್ರೇಜ್ ಶಮ್ಸಿ

    ಐಪಿಎಲ್​ನಲ್ಲಿ ಮತ್ತೆ ಕಣಕ್ಕಿಳಿದ ದಕ್ಷಿಣ ಆಫ್ರಿಕಾದ ಸ್ಪಿನ್ನರ್ ತಬ್ರೇಜ್ ಶಮ್ಸಿ. ಈ ಹಿಂದೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಪ್ರತಿನಿಧಿಸಿದ್ದರು. ಇದೀಗ ಐಪಿಎಲ್​ ದ್ವಿತಿಯಾರ್ಧದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದಲ್ಲಿ ಬದಲಿ ಆಟಗಾರನಾಗಿ ಸ್ಥಾನ ಪಡೆದಿದ್ದಾರೆ. ಅಂದಹಾಗೆ ಶಮ್ಸಿ ಪ್ರಸ್ತುತ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್​ನ ನಂಬರ್ 1 ಬೌಲರ್​ ಎಂಬುದು ವಿಶೇಷ.

  • 25 Sep 2021 04:02 PM (IST)

    ಪವರ್​ಪ್ಲೇ ಮುಕ್ತಾಯ: ರಾಜಸ್ಥಾನ್ ರಾಯಲ್ಸ್​ ಮೇಲುಗೈ

    ಪವರ್​ಪ್ಲೇ ಮುಕ್ತಾಯ: ರಾಜಸ್ಥಾನ್ ರಾಯಲ್ಸ್​ ಮೇಲುಗೈ

    DC 36/2 (6)

      ಕ್ರೀಸ್​ನಲ್ಲಿ ರಿಷಭ್ ಪಂತ್ (7) ಹಾಗೂ ಶ್ರೇಯಸ್ ಅಯ್ಯರ್ (9) ಬ್ಯಾಟಿಂಗ್

  • 25 Sep 2021 04:01 PM (IST)

    ಪಂತ್ ಪವರ್

    ಶಾಟ್ ಬೌನ್ಸ್ ಎಸೆದ ಕಾರ್ತಿಕ್ ತ್ಯಾಗಿ…ಸಂಪೂರ್ಣ ಲಾಭ ಪಡೆದುಕೊಂಡ ರಿಷಭ್ ಪಂತ್..ಶಾರ್ಟ್​ ಫೈನ್​ ಲೆಗ್​ನತ್ತ ಬೌಂಡರಿ- ತಂಡಕ್ಕೆ 4 ರನ್​ಗಳ ಸೇರ್ಪಡೆ.

  • 25 Sep 2021 03:59 PM (IST)

    ಬೌಂಡರಿ ಖಾತೆ ತೆರೆದ ಅಯ್ಯರ್

    ಕಾರ್ತಿಕ್ ತ್ಯಾಗಿ ಎಸೆತದಲ್ಲಿ ವೈಡ್ ಆಫ್ ಚೆಂಡನ್ನು ಆಫ್​ ಸೈಡ್​ನಲ್ಲಿ ಬೌಂಡರಿಗಟ್ಟಿದ ಶ್ರೇಯಸ್ ಅಯ್ಯರ್

  • 25 Sep 2021 03:56 PM (IST)

    ಡೆಲ್ಲಿ ಆರಂಭಿಕರು ಔಟ್

    ವಿಕೆಟ್ ಒಪ್ಪಿಸಿದ ಡೆಲ್ಲಿ ಕ್ಯಾಪಿಟಲ್ಸ್ ಆರಂಭಿಕರು.

    ಶಿಖರ್ ಧವನ್ (8) ಹಾಗೂ ಪೃಥ್ವಿ ಶಾ (12) ಔಟ್.

    ಕಾರ್ತಿಕ್ ತ್ಯಾಗಿ ಹಾಗೂ ಚೇತನ್ ಸಕರಿಯಾಗೆ ತಲಾ ಒಂದು ವಿಕೆಟ್

    ಕ್ರೀಸ್​ನಲ್ಲಿ ಶ್ರೇಯಸ್ ಅಯ್ಯರ್ ಹಾಗೂ ರಿಷಭ್ ಪಂತ್ ಬ್ಯಾಟಿಂಗ್

    DC 25/2 (5)

      

  • 25 Sep 2021 03:53 PM (IST)

    ಚೇತನ್ ಸಕರಿಯಾ….ಯು ಬ್ಯೂಟಿ- ಪೃಥ್ವಿ ಶಾ ಔಟ್

    ಚೇತನ್ ಸಕರಿಯಾ ಎಸೆತದಲ್ಲಿ ಲಿಯಾಮ್ ಲಿವಿಂಗ್​ಸ್ಟೋನ್​ಗೆ ಸುಲಭ ಕ್ಯಾಚ್ ನೀಡಿ ನಿರ್ಗಮಿಸಿದ ಪೃಥ್ವಿ ಶಾ (10)

    DC 21/2 (4.1)

      

  • 25 Sep 2021 03:51 PM (IST)

    ರಾಜಸ್ಥಾನ್ ರಾಯಲ್ಸ್ ಉತ್ತಮ ಬೌಲಿಂಗ್

    ರಾಜಸ್ಥಾನ್ ರಾಯಲ್ಸ್ ಉತ್ತಮ ಬೌಲಿಂಗ್- ಪವರ್​ಪ್ಲೇನಲ್ಲಿ ರನ್​ಗಾಗಿ ಪರದಾಡುತ್ತಿರುವ ಡೆಲ್ಲಿ ಕ್ಯಾಪಿಟಲ್ಸ್​

    ಕ್ರೀಸ್​ನಲ್ಲಿ ಪೃಥ್ವಿ ಶಾ ಹಾಗೂ ಶ್ರೇಯಸ್ ಅಯ್ಯರ್ ಬ್ಯಾಟಿಂಗ್.

    DC 21/1 (4)

  • 25 Sep 2021 03:49 PM (IST)

    ಕಾರ್ತಿಕ್ ತ್ಯಾಗಿ ಮ್ಯಾಜಿಕ್-ಆರ್​ಆರ್​ಗೆ ಮೊದಲ ಯಶಸ್ಸು

    8 ಎಸೆತಗಳಲ್ಲಿ 8 ರನ್​ ಬಾರಿಸಿ ವಿಕೆಟ್ ಒಪ್ಪಿಸಿದ ಶಿಖರ್ ಧವನ್. ಮೊದಲ ಯಶಸ್ಸು ತಂದುಕೊಟ್ಟ ಯುವ ವೇಗಿ ಕಾರ್ತಿಕ್ ತ್ಯಾಗಿ.

  • 25 Sep 2021 03:46 PM (IST)

    ಮೊದಲ ವಿಕೆಟ್ ಪತನ

    ಕಾರ್ತಿಕ್ ತ್ಯಾಗಿ ಕಮಾಲ್- ರಕ್ಷಣಾತ್ಮಕ ಆಟಕ್ಕೆ ಮುಂದಾದ ಶಿಖರ್ ಧವನ್..ಬ್ಯಾಟ್ ತಾಗಿ ಚೆಂಡು ವಿಕೆಟ್​ಗೆ- ಧವನ್ ಬೌಲ್ಡ್

  • 25 Sep 2021 03:45 PM (IST)

    ಡೆಲ್ಲಿ ಕ್ಯಾಪಿಟಲ್ಸ್ ನಿಧಾನಗತಿಯ ಬ್ಯಾಟಿಂಗ್

    ಡೆಲ್ಲಿ ಕ್ಯಾಪಿಟಲ್ಸ್ ನಿಧಾನಗತಿಯ ಬ್ಯಾಟಿಂಗ್. ಮೊದಲ 3 ಓವರ್​ನಲ್ಲಿ 18 ರನ್​ ಮಾತ್ರ.

  • 25 Sep 2021 03:40 PM (IST)

    2 ಓವರ್ ಮುಕ್ತಾಯ

    ಡೆಲ್ಲಿ ಕ್ಯಾಪಿಟಲ್ಸ್- 11/0 (2)

  • 25 Sep 2021 03:38 PM (IST)

    ಮೊದಲ ಬೌಂಡರಿ

    ಲೊಮರರ್ ಎಸೆತಕ್ಕೆ ಬ್ಯೂಟಿಫುಲ್​ ಸ್ಕ್ವೇರ್ ಕಟ್…ಚೆಂಡು ಬೌಂಡರಿಗೆ- ಮೊದಲ ಬೌಂಡರಿ ಬಾರಿಸಿದ ಶಿಖರ್ ಧವನ್

  • 25 Sep 2021 03:37 PM (IST)

    ದ್ವಿತೀಯ ಓವರ್-ಸ್ಪಿನ್

    ಎಡಗೈ ಸ್ಪಿನ್ನರ್ ಮಹಿಪಾಲ್ ಲೊಮರರ್​ಗೆ ಚೆಂಡು ನೀಡಿದ ಸಂಜು ಸ್ಯಾಮ್ಸನ್

  • 25 Sep 2021 03:36 PM (IST)

    ಮೊದಲ ಓವರ್ ಮುಕ್ತಾಯ

    ಮೊದಲ ಓವರ್​ನಲ್ಲಿ ಮುಸ್ತಾಫಿಜುರ್ ಉತ್ತಮ ಬೌಲಿಂಗ್. ಕೇವಲ 6 ರನ್ ಮಾತ್ರ.

    DC 6/0 (1)

     

  • 25 Sep 2021 03:32 PM (IST)

    ಡೆಲ್ಲಿ ಕ್ಯಾಪಿಟಲ್ಸ್​ ಆರಂಭಿಕರು

    ಡೆಲ್ಲಿ ಕ್ಯಾಪಿಟಲ್ಸ್​ ಆರಂಭಿಕರು

    ಪೃಥ್ವಿ ಶಾ

    ಶಿಖರ್ ಧವನ್

  • 25 Sep 2021 03:31 PM (IST)

    ಮೊದಲ ಓವರ್​

    ಮೊದಲ ಓವರ್​- ಮುಸ್ತಫಿಜುರ್ ರಹಮಾನ್

  • 25 Sep 2021 03:31 PM (IST)

    ರಾಜಸ್ಥಾನ್ ಕೋಚ್- ಕುಮಾರ ಸಂಗಾಕ್ಕರ (ಶ್ರೀಲಂಕಾ ಮಾಜಿ ಕ್ರಿಕೆಟಿಗ)

  • 25 Sep 2021 03:28 PM (IST)

    ರಾಜಸ್ಥಾನ್ ವಿರುದ್ದ ಡೆಲ್ಲಿ ಪಾರುಪತ್ಯ

  • 25 Sep 2021 03:20 PM (IST)

    ಸ್ಯಾಮ್ಸನ್​ ಸೈನ್ಯ

  • 25 Sep 2021 03:19 PM (IST)

    ಪಂತ್ ಪಡೆ

  • 25 Sep 2021 03:16 PM (IST)

    ಕಣಕ್ಕಿಳಿಯುವ ಕಲಿಗಳು

    ರಾಜಸ್ಥಾನ್ ರಾಯಲ್ಸ್ ಪ್ಲೇಯಿಂಗ್ ಇಲೆವೆನ್​: ಯಶಸ್ವಿ ಜೈಸ್ವಾಲ್, ಸಂಜು ಸ್ಯಾಮ್ಸನ್ (ನಾಯಕ), ಲಿಯಾಮ್ ಲಿವಿಂಗ್ಸ್ಟೋನ್, ಡೇವಿಡ್ ಮಿಲ್ಲರ್, ಮಹಿಪಾಲ್ ಲೊಮರ್, ರಿಯಾನ್ ಪರಾಗ್, ರಾಹುಲ್ ತೆವಾಟಿಯಾ, ಕಾರ್ತಿಕ್ ತ್ಯಾಗಿ, ಚೇತನ್ ಸಕಾರಿಯಾ, ಮುಸ್ತಫಿಜುರ್ ರಹಮಾನ್, ತಬ್ರೇಜ್ ಶಮ್ಸಿ

    ಡೆಲ್ಲಿ ಕ್ಯಾಪಿಟಲ್ಸ್ ಪ್ಲೇಯಿಂಗ್ ಇಲೆವೆನ್: ಪೃಥ್ವಿ ಶಾ, ಶಿಖರ್ ಧವನ್, ಶ್ರೇಯಸ್ ಅಯ್ಯರ್, ರಿಷಭ್ ಪಂತ್ (ನಾಯಕ), ಲಲಿತ್ ಯಾದವ್, ಶಿಮ್ರಾನ್ ಹೆಟ್ಮೆಯರ್, ಅಕ್ಸರ್ ಪಟೇಲ್, ರವಿಚಂದ್ರನ್ ಅಶ್ವಿನ್, ಕಾಗಿಸೊ ರಬಾಡಾ, ಅನ್ರಿಕ್ ನೋಕಿಯಾ, ಅವೇಶ್ ಖಾನ್

  • 25 Sep 2021 03:12 PM (IST)

    ಟಾಸ್ ವೀಡಿಯೋ

  • 25 Sep 2021 03:07 PM (IST)

    ಡೆಲ್ಲಿ ಕ್ಯಾಪಿಟಲ್ಸ್ ಪ್ಲೇಯಿಂಗ್ ಇಲೆವೆನ್

    ದೆಹಲಿ ಕ್ಯಾಪಿಟಲ್ಸ್ (ಪ್ಲೇಯಿಂಗ್ ಇಲೆವೆನ್): ಪೃಥ್ವಿ ಶಾ, ಶಿಖರ್ ಧವನ್, ಶ್ರೇಯಸ್ ಅಯ್ಯರ್, ರಿಷಭ್ ಪಂತ್ (ನಾಯಕ), ಲಲಿತ್ ಯಾದವ್, ಶಿಮ್ರಾನ್ ಹೆಟ್ಮೆಯರ್, ಅಕ್ಸರ್ ಪಟೇಲ್, ರವಿಚಂದ್ರನ್ ಅಶ್ವಿನ್, ಕಾಗಿಸೊ ರಬಾಡಾ, ಅನ್ರಿಕ್ ನೋಕಿಯಾ, ಅವೇಶ್ ಖಾನ್

  • 25 Sep 2021 03:06 PM (IST)

    ರಾಜಸ್ಥಾನ ರಾಯಲ್ಸ್ ಪ್ಲೇಯಿಂಗ್ ಇಲೆವೆನ್

    ರಾಜಸ್ಥಾನ ರಾಯಲ್ಸ್ (ಪ್ಲೇಯಿಂಗ್ ಇಲೆವೆನ್): ಯಶಸ್ವಿ ಜೈಸ್ವಾಲ್, ಸಂಜು ಸ್ಯಾಮ್ಸನ್ (ನಾಯಕ), ಲಿಯಾಮ್ ಲಿವಿಂಗ್ಸ್ಟೋನ್, ಡೇವಿಡ್ ಮಿಲ್ಲರ್, ಮಹಿಪಾಲ್ ಲೊಮರ್, ರಿಯಾನ್ ಪರಾಗ್, ರಾಹುಲ್ ತೆವಾಟಿಯಾ, ಕಾರ್ತಿಕ್ ತ್ಯಾಗಿ, ಚೇತನ್ ಸಕಾರಿಯಾ, ಮುಸ್ತಫಿಜುರ್ ರಹಮಾನ್, ತಬ್ರೇಜ್ ಶಮ್ಸಿ

  • 25 Sep 2021 03:02 PM (IST)

    ರಾಜಸ್ಥಾನ್ ರಾಯಲ್ಸ್ ತಂಡದಲ್ಲಿ 2 ಬದಲಾವಣೆ

    ಎವಿನ್ ಲೂಯಿಸ್ ಹಾಗೂ ಕ್ರಿಸ್ ಮೋರಿಸ್ ಔಟ್

    ಡೇವಿಡ್ ಮಿಲ್ಲರ್ ಹಾಗೂ ತಬ್ರೇಝ್ ಶಮ್ಸಿ ಇನ್

  • 25 Sep 2021 03:01 PM (IST)

    ಟಾಸ್ ಗೆದ್ದ ರಾಜಸ್ಥಾನ್ ರಾಯಲ್ಸ್: ಬೌಲಿಂಗ್ ಆಯ್ಕೆ

    ಟಾಸ್ ಗೆದ್ದ ರಾಜಸ್ಥಾನ್ ರಾಯಲ್ಸ್ ನಾಯಕ ಸಂಜು ಸ್ಯಾಮ್ಸನ್​- ಬೌಲಿಂಗ್ ಆಯ್ಕೆ

  • 25 Sep 2021 02:54 PM (IST)

    ಪಿಂಕ್​ ಪ್ಯಾಂಥರ್ಸ್​- ರಾಜಸ್ಥಾನ್ ರಾಯಲ್ಸ್​

  • 25 Sep 2021 02:49 PM (IST)

    ಸಖತ್ ಹಾಟ್ ಮಗಾ: ಶಿಮ್ರಾನ್ ‘ಹೀಟ್​’ಮೆಯರ್

  • 25 Sep 2021 02:43 PM (IST)

    ವಿಕೆಟ್ ಕೀಪರ್ಸ್​ ಕ್ಯಾಪ್ಟನ್ಸ್​: ಆರ್​ಆರ್​-ಡಿಸಿ ಮುಖಾಮುಖಿ ಅಂಕಿ ಅಂಶಗಳು

  • 25 Sep 2021 02:42 PM (IST)

    ಡೆಲ್ಲಿ ತಂಡದ ವೇಗದ ಅಸ್ತ್ರ: ಅನ್ರಿಕ್ ನೋಕಿಯಾ

  • 25 Sep 2021 02:41 PM (IST)

    ಡೇಂಜರ್ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಆಗಮನ

  • 25 Sep 2021 02:40 PM (IST)

    ರಾಜಸ್ಥಾನ್ ರಾಯಲ್ಸ್ ತಂಡದ ಆಗಮನ

  • Published On - Sep 25,2021 2:33 PM

    Follow us
    ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
    ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
    ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
    ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
    ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
    ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
    ‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
    ‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
    ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
    ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
    ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
    ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
    ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
    ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
    ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
    ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
    ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
    ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
    ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
    ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!