ಆಸ್ಟ್ರೇಲಿಯದ ಸೀಮಿತ ಓವರ್‌ಗಳ ತಂಡದ ನಾಯಕ ಆರನ್ ಫಿಂಚ್ (Aaron Finch) ಭಾನುವಾರ ತಮ್ಮ ಕೊನೆಯ ಏಕದಿನ ಪಂದ್ಯವನ್ನು ಆಡುತ್ತಿದ್ದಾರೆ. ಫಿಂಚ್ ನ್ಯೂಜಿಲೆಂಡ್ ವಿರುದ್ಧ ಈ ಪಂದ್ಯವನ್ನು ಆಡುತ್ತಿದ್ದು, ಈ ಪಂದ್ಯದಲ್ಲೂ ಅವರ ಬ್ಯಾಟ್ಗೆ ರನ್ ಗಳಿಸಲು ಸಾಧ್ಯವಾಗಲಿಲ್ಲ. ನ್ಯೂಜಿಲೆಂಡ್ ವಿರುದ್ಧದ ಮೂರನೇ ಪಂದ್ಯ ತನ್ನ ODI ವೃತ್ತಿಜೀವನದ ಕೊನೆಯ ಪಂದ್ಯ ಎಂದು ಫಿಂಚ್ ಈಗಾಗಲೇ ಹೇಳಿದ್ದರು. ಆದರೆ, ಅವರು ಟಿ20 ಆಡುವುದನ್ನು ಮುಂದುವರಿಸಲಿದ್ದು, ಮುಂದಿನ ತಿಂಗಳಿನಿಂದ ತವರಿನಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ನಲ್ಲಿ ತಂಡದ ನಾಯಕತ್ವ ವಹಿಸಲಿದ್ದಾರೆ.
ಫಿಂಚ್ ತನ್ನ ಕೊನೆಯ ODI ಪಂದ್ಯದಲ್ಲಿ ಕೇವಲ ಐದು ರನ್ ಗಳಿಸಲಷ್ಟೇ ಶಕ್ತರಾದರು. ಜೋಶ್ ಇಂಗ್ಲಿಸ್ ಅವರೊಂದಿಗೆ ಇನ್ನಿಂಗ್ಸ್ ಆರಂಭಿಸಿದ ಫಿಂಚ್ ಜೋಡಿ ತಂಡಕ್ಕೆ 14 ರನ್ ಸೇರಿಸುವಷ್ಟರಲ್ಲಿ ಮೊದಲ ವಿಕೆಟ್ ಕೈಚೆಲ್ಲಿತು. ಐದನೇ ಓವರ್‌ನ ಮೂರನೇ ಎಸೆತದಲ್ಲಿ ಟಿಮ್ ಸೌಥಿ, ಫಿಂಚ್ ವಿಕೆಟ್ ಉರುಳಿಸುವಲ್ಲಿ ಯಶಸ್ವಿಯಾದರು. ಔಟಾಗುವುದಕ್ಕೂ ಮುನ್ನ 13 ಎಸೆತಗಳಲ್ಲಿ 5 ರನ್ಗಳಿಸಿದ ಫಿಂಚ್, ಪೆವಿಲಿಯನ್‌ಗೆ ತೆರಳುವ ವೇಳೆ ಕೈರ್ನ್ಸ್‌ನ ಕ್ರೇಜ್ಲಿ ಕ್ರೀಡಾಂಗಣದಲ್ಲಿ ನೆರೆದಿದ್ದ ಪ್ರೇಕ್ಷಕರು ಅವರ ಪರವಾಗಿ ಎದ್ದು ನಿಂತು ಚಪ್ಪಾಳೆ ತಟ್ಟಿದರು. ಫಿಂಚ್ ಕೂಡ ಬ್ಯಾಟ್ ಎತ್ತುವ ಮೂಲಕ ಪ್ರೇಕ್ಷಕರ ಶುಭಾಶಯಗಳನ್ನು ಸ್ವೀಕರಿಸಿದರು.
The end of an era.
Aaron Finch walks off to a standing ovation ??#AUSvNZ pic.twitter.com/gi1W6fwBpb
— cricket.com.au (@cricketcomau) September 11, 2022
ಇನ್ಸ್ವಿಂಗ್ ಅವರ ದೌರ್ಬಲ್ಯ
ಫಿಂಚ್ಗೆ ಅವರ ವೃತ್ತಿಜೀವನದಲ್ಲಿ ಇನ್ಸ್ವಿಂಗ್‌ನ ದೌರ್ಬಲ್ಯವನ್ನು ಸರಿಪಡಿಸಲು ಸಾಧ್ಯವಾಗಲೇ ಇಲ್ಲ. ಅವರ ಕೊನೆಯ ODI ನಲ್ಲಿಯೂ ಅವರು ಅದೇ ಎಸೆತದಲ್ಲಿ ಔಟಾದರು. ಸೌಥಿ ಆಫ್ ಸ್ಟಂಪ್ ಹೊರಗಿನಿಂದ ಚೆಂಡನ್ನು ಇನ್ಸ್ವಿಂಗ್ ಮಾಡಿದರು. ಫಿಂಚ್ ಅವರ ಬ್ಯಾಟ್ ಮತ್ತು ಪ್ಯಾಡ್ ನಡುವೆ ಅಂತರವಿತ್ತು, ಚೆಂಡು ಈ ಅಂತರದಿಂದ ಒಳನುಸುಳಿ ವಿಕೆಟ್ಗೆ ಬಡಿಯಿತು. ಹಲವು ಬಾರಿ ಫಿಂಚ್ ಈ ರೀತಿ ಔಟ್ ಆಗುವುದನ್ನು ನೋಡಲಾಗಿದೆ. ಟೀಂ ಇಂಡಿಯಾದ ಆಸ್ಟ್ರೇಲಿಯಾ ಪ್ರವಾಸದ ವೇಳೆ ಭಾರತದ ಬೌಲರ್ ಭುವನೇಶ್ವರ್ ಕುಮಾರ್ ಹಲವು ಬಾರಿ ಫಿಂಚ್ ಅವರನ್ನು ಇದೇ ರೀತಿ ಔಟ್ ಮಾಡಿದ್ದರು. ಇದಾದ ನಂತರವೂ ಅನೇಕ ಇತರ ಬೌಲರ್‌ಗಳು ಇನ್ಸ್ವಿಂಗರ್‌ನಲ್ಲಿ ಫಿಂಚ್ ಅವರನ್ನು ಬಲಿಪಶುವನ್ನಾಗಿ ಮಾಡಿದ್ದಾರೆ.
ಗೆಲುವಿನೊಂದಿಗೆ ವಿದಾಯ ಹೇಳಲಿದ್ದಾರೆ
ಸಹಜವಾಗಿ, ಫಿಂಚ್ ಅವರ ಕೊನೆಯ ODI ಪಂದ್ಯದಲ್ಲಿ ಬ್ಯಾಟ್‌ನೊಂದಿಗೆ ಅದ್ಭುತ ಪ್ರದರ್ಶನ ನೀಡಲು ಸಾಧ್ಯವಾಗದಿರಬಹುದು. ಆದರೆ ಅವರು ODI ನಾಯಕನಾಗಿ ವಿಜಯಶಾಲಿ ವಿದಾಯ ಹೇಳಲು ಪ್ರಯತ್ನಿಸಲಿದ್ದಾರೆ. ತಾವು ವಿಫಲರಾದರೂ ನಾಯಕನಾಗಿ ಫಿಂಚ್ ಈಗಾಗಲೇ ಸರಣಿ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಸರಣಿಯಲ್ಲಿ 2-0 ಮುನ್ನಡೆ ಸಾಧಿಸಲು ಆಸ್ಟ್ರೇಲಿಯಾ ಮೊದಲ ಎರಡು ODIಗಳನ್ನು ಗೆದ್ದಿದೆ. ಆದರೆ ಫಿಂಚ್ ತನ್ನ ನಾಯಕತ್ವದ ಕೊನೆಯ ಏಕದಿನ ಪಂದ್ಯವನ್ನು ಗೆದ್ದು, ಜಯದೊಂದಿಗೆ ವಿದಾಯ ಹೇಳಲು ಬಯಸುತ್ತಿದ್ದಾರೆ. ತಂಡವು ಕೂಡ ತನ್ನ ನಾಯಕನಿಗೆ ವಿಜಯೋತ್ಸವದ ವಿದಾಯವನ್ನು ಹೇಳಲು ಮೈದಾನದಲ್ಲಿ ಹೋರಾಡಲಿದೆ. ಈ ಪಂದ್ಯದಲ್ಲಿ ಫಿಂಚ್ ಬ್ಯಾಟಿಂಗ್ ಮಾಡಲು ಹೊರಬಂದಾಗ, ಇಡೀ ಕ್ರೀಡಾಂಗಣ ಮತ್ತು ನ್ಯೂಜಿಲೆಂಡ್ ತಂಡ ಅವರನ್ನು ಚಪ್ಪಾಳೆಯೊಂದಿಗೆ ಸ್ವಾಗತಿಸಿತು.
Published On - 2:18 pm, Sun, 11 September 22