AUS vs SA: 3ನೇ ಟಿ20 ಪಂದ್ಯವನ್ನೂ ಸೋತ ಆಫ್ರಿಕಾ; ಸರಣಿ ಕ್ಲೀನ್ ಸ್ವೀಪ್ ಮಾಡಿದ ಆಸ್ಟ್ರೇಲಿಯಾ

AUS vs SA: ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ನಡುವೆ ನಡೆದ ಮೂರು ಪಂದ್ಯಗಳ ಟಿ20 ಸರಣಿಯನ್ನು ಆಸೀಸ್ ಪಡೆ ಕ್ಲೀನ್ ಸ್ವೀಪ್ ಮಾಡಿದೆ. ಸರಣಿಯ ಮೂರನೇ ಮತ್ತು ಅಂತಿಮ ಟಿ20 ಪಂದ್ಯದಲ್ಲಿ ಆತಿಥೇಯರ ವಿರುದ್ಧ 5-ವಿಕೆಟ್‌ಗಳ ಭರ್ಜರಿ ಜಯವನ್ನು ಸಾಧಿಸಿದ ಆಸ್ಟ್ರೇಲಿಯಾ ಪಂದ್ಯದೊಂದಿಗೆ ಸರಣಿಯನ್ನು 3-0 ಅಂತರದಿಂದ ಸೀಲ್ ಮಾಡಿದೆ.

AUS vs SA: 3ನೇ ಟಿ20 ಪಂದ್ಯವನ್ನೂ ಸೋತ ಆಫ್ರಿಕಾ; ಸರಣಿ ಕ್ಲೀನ್ ಸ್ವೀಪ್ ಮಾಡಿದ ಆಸ್ಟ್ರೇಲಿಯಾ
ಸರಣಿ ಗೆದ್ದ ಆಸ್ಟ್ರೇಲಿಯಾ
Follow us
ಪೃಥ್ವಿಶಂಕರ
|

Updated on: Sep 04, 2023 | 7:44 AM

ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ (Australia vs South Africa) ನಡುವೆ ನಡೆದ ಮೂರು ಪಂದ್ಯಗಳ ಟಿ20 ಸರಣಿಯನ್ನು ಆಸೀಸ್ ಪಡೆ ಕ್ಲೀನ್ ಸ್ವೀಪ್ ಮಾಡಿದೆ. ಸರಣಿಯ ಮೂರನೇ ಮತ್ತು ಅಂತಿಮ ಟಿ20 ಪಂದ್ಯದಲ್ಲಿ ಆತಿಥೇಯರ ವಿರುದ್ಧ 5-ವಿಕೆಟ್‌ಗಳ ಭರ್ಜರಿ ಜಯವನ್ನು ಸಾಧಿಸಿದ ಆಸ್ಟ್ರೇಲಿಯಾ ಪಂದ್ಯದೊಂದಿಗೆ ಸರಣಿಯನ್ನು 3-0 ಅಂತರದಿಂದ ಸೀಲ್ ಮಾಡಿದೆ. ಇದರೊಂದಿಗೆ ದಕ್ಷಿಣ ಆಫ್ರಿಕಾ ವಿರುದ್ಧ ಟಿ20 ಮಾದರಿಯಲ್ಲಿ ಮೊದಲ ಬಾರಿಗೆ ಕ್ಲೀನ್ ಸ್ವೀಪ್ ಮಾಡಿದ ದಾಖಲೆಯನ್ನು ಆಸ್ಟ್ರೇಲಿಯಾ ನಿರ್ಮಿಸಿದೆ. ಅಲ್ಲದೆ ಆರನ್ ಫಿಂಚ್ ನಿವೃತ್ತಿಯ ನಂತರ ಮೊದಲ ಬಾರಿಗೆ ರಾಷ್ಟ್ರೀಯ ತಂಡದ ನಾಯಕತ್ವ ವಹಿಸಿದ್ದ ಮಿಚೆಲ್ ಮಾರ್ಷ್‌ಗೆ (Mitchell Marsh) ಅವಿಸ್ಮರಣೀಯ ಗೆಲುವು ಸಹ ಆಗಿದೆ.

190 ರನ್‌ಗಳ ಬೃಹತ್ ಟಾರ್ಗೆಟ್

ಮೊದಲ ಎರಡು ಪಂದ್ಯಗಳಲ್ಲಿ ಕಳಪೆ ಪ್ರದರ್ಶನ ನೀಡಿದ ದಕ್ಷಿಣ ಆಫ್ರಿಕಾ, ಮೂರನೇ ಟಿ20 ಪಂದ್ಯದಲ್ಲಿ ತನ್ನ ಬ್ಯಾಟಿಂಗ್ ಪರಾಕ್ರಮ ತೋರಿತ್ತು. ಪಂದ್ಯದಲ್ಲಿ ನಾಯಕ ಐಡೆನ್ ಮಾರ್ಕ್ರಾಮ್, ಡೊನೊವನ್ ಫೆರೇರಾ, ಟ್ರಿಸ್ಟಾನ್ ಸ್ಟಬ್ಸ್ ಮತ್ತು ರೀಜಾ ಹೆಂಡ್ರಿಕ್ಸ್ ಅವರ ಬ್ಯಾಟಿಂಗ್‌ ಬಲದಿಂದಾಗಿ 190 ರನ್‌ಗಳ ಬೃಹತ್ ಟಾರ್ಗೆಟ್ ಸೆಟ್ ಮಾಡಿತು.

AUS vs SA: ಮಾರ್ಷ್​ ಸಿಡಿಲಬ್ಬರಕ್ಕೆ ಟಿ20 ಸರಣಿ ಸೋತ ಸೌತ್ ಆಫ್ರಿಕಾ

ಫೆರೇರಾ ಸ್ಫೋಟಕ ಬ್ಯಾಟಿಂಗ್

ತಂಡದ ಪರ ಆರಂಭಿಕ ರೀಜಾ ಹೆಂಡ್ರಿಕ್ಸ್ 30 ಎಸೆತಗಳಲ್ಲಿ 2 ಸಿಕ್ಸರ್ ಹಾಗೂ 2 ಬೌಂಡರಿ ಸಹಾಯದಿಂದ 48 ರನ್ ಬಾರಿಸಿದರೆ, ಮಧ್ಯಮ ಕ್ರಮಾಂಕದಲ್ಲಿ ಇನ್ನಿಂಗ್ಸ್​ಗೆ ಜೀವ ತುಂಬಿದ ನಾಯಕ ಮಾರ್ಕ್ರಾಮ್ 23 ಎಸೆತಗಳಲ್ಲಿ 4 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ 41 ರನ್ ಬಾರಿಸಿದರು. ಇನ್ನು ಕೆಳಕ್ರಮಾಂಕದಲ್ಲಿ ಸ್ಫೋಟಕ ಇನ್ನಿಂಗ್ಸ್ ಆಡಿದ ಡೊನೊವನ್ ಫೆರೇರಾ 21 ಎಸೆತಗಳಲ್ಲಿ 1 ಬೌಂಡರಿ ಹಾಗೂ 5 ಸಿಕ್ಸರ್ ನೆರವಿನಿಂದ 48 ರನ್​ಗಳ ಕಾಣಿಕೆ ನೀಡಿದರು.

ಆಸೀಸ್ ಕಳಪೆ ಆರಂಭ

ಆಫ್ರಿಕಾ ನೀಡಿದ 190 ರನ್​ಗಳ ಬೃಹತ್ ಗುರಿ ಬೆನ್ನಟ್ಟಿದ ಆಸೀಸ್​ಗೆ ಉತ್ತಮ ಆರಂಭ ಸಿಗಲಿಲ್ಲ. ಆರಂಭಿಕ ಶಾರ್ಟ್​ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರು. ಹಾಗೆಯೇ ಮೊದಲೆರಡು ಪಂದ್ಯಗಳಲ್ಲಿ ಬ್ಯಾಟ್‌ನಿಂದ ಹೀರೋ ಆಗಿದ್ದ ನಾಯಕ ಮಾರ್ಷ್ ಕೂಡ ಹೆಚ್ಚು ಹೊತ್ತು ಮೈದಾನದಲ್ಲಿ ನಿಲ್ಲಲಿಲ್ಲ. ಆದರೆ ವಿಕೆಟ್ ಕೀಪರ್ ಜೋಶ್ ಇಂಗ್ಲಿಸ್‌ ಜೊತೆಯಾದ ಮತ್ತೊಬ್ಬ ಆರಂಭಿಕ ಹೆಡ್ ತಂಡದ ಪರ ಸ್ಫೋಟಕ ಇನ್ನಿಂಗ್ಸ್ ಕಟ್ಟಿದರು.

ಶತಕ ವಂಚಿತ ಹೆಡ್

ಈ ಹಂತದಲ್ಲಿ 42 ಎಸೆತಗಳಲ್ಲಿ 1 ಬೌಂಡರಿ 4 ಸಿಕ್ಸರ್ ನೆರವಿನಿಂದ 42 ರನ್ ಬಾರಿಸಿದ್ದ ಇಂಗ್ಲಿಸ್‌ ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿಕೊಂಡರು. ಇತ್ತ ಶತಕದಂಚಿನಲ್ಲಿ ಎಡವಿದ ಟ್ರಾವಿಸ್ ಹೆಡ್ 48 ಎಸೆತಗಳಲ್ಲಿ 8 ಬೌಂಡರಿ ಹಾಗೂ 6 ಸಿಕ್ಸರ್ ನೆರವಿನಿಂದ 91 ರನ್ ಸಿಡಿಸಿ 9 ರನ್​ಗಳಿಂದ ಶತಕವಂಚಿತರಾದರು. ಅಂತಿಮವಾಗಿ ಆಲ್​ರೌಂಡರ್ ಮಾರ್ಕಸ್ ಸ್ಟೊಯಿನಿಸ್ ಅಜೇಯ 37 ರನ್ ಸಿಡಿಸಿ ತಂಡಕ್ಕೆ ಗೆಲುವು ತಂದುಕೊಟ್ಟರು.

ಇದೀಗ ಮೂರು ಪಂದ್ಯಗಳ ಟಿ20 ಸರಣಿ ಆಡಿ ಮುಗಿಸಿರುವ ಎರಡು ತಂಡಗಳು. ಸೆಪ್ಟೆಂಬರ್ 7 ರಿಂದ ಪ್ರಾರಂಭವಾಗುವ ಐದು ಪಂದ್ಯಗಳ ಏಕದಿನ ಸರಣಿಯಲ್ಲಿ ಭಾಗಿಯಾಗಲಿವೆ. ಈ ಸರಣಿ ವಿಶ್ವಕಪ್‌ ದೃಷ್ಟಿಯಿಂದ ಎರಡೂ ತಂಡಗಳ ಸಿದ್ಧತೆಗೆ ನಿರ್ಣಾಯಕವಾಗಿರುತ್ತದೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ