AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರತಿಷ್ಠಿತ ಸರಣಿಗೆ ಬಲಿಷ್ಠ ಆಸ್ಟ್ರೇಲಿಯಾ ತಂಡ ಪ್ರಕಟ

ಆಸ್ಟ್ರೇಲಿಯಾ ಮತ್ತು ಸೌತ್ ಆಫ್ರಿಕಾ ನಡುವಣ ಏಕದಿನ ಸರಣಿಯು ಸೆಪ್ಟೆಂಬರ್ 24 ರಿಂದ ಶುರುವಾಗಲಿದೆ. ಮೂರು ಪಂದ್ಯಗಳ ಈ ಸರಣಿಯ ಮುಕ್ತಾಯದ ಬಳಿಕ ಉಭಯ ತಂಡಗಳು ಟೆಸ್ಟ್ ಸರಣಿಯನ್ನು ಆಡಲಿವೆ. ಈ ಸರಣಿಯು ಅಕ್ಟೋಬರ್ 9 ರಿಂದ ಆರಂಭವಾಗಲಿದ್ದು, ತಂಡಗಳು ಒಟ್ಟು ಮೂರು ಟೆಸ್ಟ್ ಪಂದ್ಯಗಳಲ್ಲಿ ಮುಖಾಮುಖಿಯಾಗಲಿವೆ.

ಪ್ರತಿಷ್ಠಿತ ಸರಣಿಗೆ ಬಲಿಷ್ಠ ಆಸ್ಟ್ರೇಲಿಯಾ ತಂಡ ಪ್ರಕಟ
ಆಸ್ಟ್ರೇಲಿಯಾ ತಂಡImage Credit source: GettyImages
ಝಾಹಿರ್ ಯೂಸುಫ್
|

Updated on: Sep 07, 2026 | 8:23 AM

Share

ಬಹುನಿರೀಕ್ಷಿತ ಸೌತ್ ಆಫ್ರಿಕಾ ವಿರುದ್ಧದ ಟೆಸ್ಟ್ ಹಾಗೂ ಏಕದಿನ ಸರಣಿಗಳಿಗಾಗಿ ಆಸ್ಟ್ರೇಲಿಯಾ ತಂಡವನ್ನು ಪ್ರಕಟಿಸಲಾಗಿದೆ. ಅನುಭವಿ ಹಾಗೂ ಯುವ ಆಟಗಾರರನ್ನು ಒಳಗೊಂಡಿರುವ ಟೆಸ್ಟ್​ ತಂಡಕ್ಕೆ ಪ್ಯಾಟ್ ಕಮಿನ್ಸ್ ನಾಯಕರಾದರೆ, ಏಕದಿನ ತಂಡವನ್ನು ಮಿಚೆಲ್ ಮಾರ್ಷ್​ ಮುನ್ನಡೆಸಲಿದ್ದಾರೆ.

ಲಾಬುಶೇನ್​ಗೆ ಕೊನೆಯ ಚಾನ್ಸ್​!

ಕಳೆದ ಕೆಲ ಸಮಯದಿಂದ ಕಳಪೆ ಫಾರ್ಮ್​ನಲ್ಲಿರುವ ಮಧ್ಯಮ ಕ್ರಮಾಂಕದ ಬ್ಯಾಟರ್ ಮಾರ್ನಸ್ ಲಾಬುಶೇನ್ ಕೊನೆಗೂ ತಮ್ಮ ಸ್ಥಾನ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಆಯ್ಕೆ ಸಮಿತಿ ಅವರ ಮೇಲಿನ ನಂಬಿಕೆಯನ್ನು ಮುಂದುವರಿಸಿದ್ದು, ಫಾರ್ಮ್‌ಗೆ ಮರಳಲು ಇದೊಂದು ಸುವರ್ಣ ಅವಕಾಶವಾಗಿದೆ. ಅಂದರೆ ಸೌತ್ ಆಫ್ರಿಕಾ ಸರಣಿಯು ಮಾರ್ನಸ್ ಲಾಬುಶೇನ್​ಗೆ ನೀಡಲಾದ ಕೊನೆಯ ಚಾನ್ಸ್ ಆಗಿದೆ.

ಯುವ ಆಟಗಾರರ ಎಂಟ್ರಿ:

ಮತ್ತೊಂದೆಡೆ, ಉದಯೋನ್ಮುಖ ಆಲ್ ರೌಂಡರ್ ಕೂಪರ್ ಕೊನೊಲಿ, ಎಡಗೈ ಸ್ಪಿನ್ನರ್ ಮ್ಯಾಥ್ಯೂ ಕುಹ್ನೆಮನ್ ಮತ್ತು ವೇಗಿ ಮೈಕೆಲ್ ನೇಸರ್ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಇವರ ಸೇರ್ಪಡೆಯು ಆಸ್ಟ್ರೇಲಿಯಾದ ಬೌಲಿಂಗ್ ಮತ್ತು ಆಲ್ ರೌಂಡ್ ವಿಭಾಗಕ್ಕೆ ಹೆಚ್ಚಿನ ಬಲ ತುಂಬಿದೆ.

ವಿವಾದದ ಬಳಿಕ ಮೊದಲ ಪ್ರವಾಸ!

2018ರ ಕುಖ್ಯಾತ ‘ಬಾಲ್ ಟ್ಯಾಂಪರಿಂಗ್’ (ಸ್ಯಾಂಡ್‌ಪೇಪರ್ ಗೇಟ್) ವಿವಾದದ ನಂತರ ಆಸ್ಟ್ರೇಲಿಯಾ ತಂಡ ಸೌತ್ ಆಫ್ರಿಕಾದಲ್ಲಿ ಆಡಲಿರುವ ಮೊದಲ ಟೆಸ್ಟ್ ಸರಣಿ ಇದಾಗಿದೆ. ಹೀಗಾಗಿ ಈ ಸರಣಿಯು ತೀವ್ರ ಜಿದ್ದಾಜಿದ್ದಿನಿಂದ ಕೂಡಿರಲಿದ್ದು, ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (WTC) ದೃಷ್ಟಿಯಿಂದ ಎರಡೂ ತಂಡಗಳಿಗೆ ಅತ್ಯಂತ ನಿರ್ಣಾಯಕವಾಗಿದೆ. ಈ ಸರಣಿಗಾಗಿ ಪ್ರಕಟಿಸಲಾದ ಆಸ್ಟ್ರೇಲಿಯಾ ತಂಡ ಈ ಕೆಳಗಿನಂತಿದೆ…

ಆಸ್ಟ್ರೇಲಿಯಾ ಟೆಸ್ಟ್ ತಂಡ: ಪ್ಯಾಟ್ ಕಮಿನ್ಸ್ (ನಾಯಕ), ಸ್ಟೀವ್ ಸ್ಮಿತ್, ಟ್ರಾವಿಸ್ ಹೆಡ್, ಮಾರ್ನಸ್ ಲಾಬುಶೇನ್, ಮ್ಯಾಥ್ಯೂ ರೆನ್​ಶಾ, ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್), ಜೋಶ್ ಇಂಗ್ಲಿಸ್ (ವಿಕೆಟ್ ಕೀಪರ್), ಕ್ಯಾಮರೋನ್ ಗ್ರೀನ್, ಕೂಪರ್ ಕೊನೊಲಿ, ಬ್ಯೂ ವೆಬ್‌ಸ್ಟರ್, ಮಿಚೆಲ್ ಸ್ಟಾರ್ಕ್, ಜೋಶ್ ಹೇಝಲ್​ವುಡ್​, ಸ್ಕಾಟ್ ಬೋಲ್ಯಾಂಡ್, ಮೈಕೆಲ್ ನೇಸರ್, ನಾಥನ್ ಲಿಯಾನ್ ಮತ್ತು ಮ್ಯಾಥ್ಯೂ ಕುಹ್ನೆಮನ್.

ಇದನ್ನೂ ಓದಿ: ದುಲೀಪ್ ಟ್ರೋಫಿ ಫೈನಲ್: ಮೊದಲ ದಿನವೇ ಇತಿಹಾಸ ಬರೆದ ಈಸ್ಟ್ ಝೋನ್

ಆಸ್ಟ್ರೇಲಿಯಾ ಏಕದಿನ ತಂಡ: ಮಿಚೆಲ್ ಮಾರ್ಷ್ (ನಾಯಕ), ಪ್ಯಾಟ್ ಕಮಿನ್ಸ್, ಮಿಚೆಲ್ ಸ್ಟಾರ್ಕ್, ಟ್ರಾವಿಸ್ ಹೆಡ್, ಕ್ಯಾಮರೋನ್ ಗ್ರೀನ್, ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್), ಜೋಶ್ ಇಂಗ್ಲಿಸ್ (ವಿಕೆಟ್ ಕೀಪರ್), ಆ್ಯಡಂ ಝಂಪಾ, ಜೋಶ್ ಹೇಝಲ್‌ವುಡ್, ನಾಥನ್ ಎಲ್ಲಿಸ್, ಮ್ಯಾಥ್ಯೂ ರೆನ್‌ಶಾ, ಕ್ಸೇವಿಯರ್ ಬಾರ್ಟ್ಲೆಟ್, ಕೂಪರ್ ಕೊನೊಲಿ, ಜೋಯಲ್ ಡೇವಿಸ್, ಸ್ಪೆನ್ಸರ್ ಜಾನ್ಸನ್, ಒಲಿವರ್ ಪೀಕ್ ಮತ್ತು ಬಿಲ್ಲಿ ಸ್ಟಾನ್ಲೇಕ್.

Follow Us