
ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ 2ನೇ ದಿನ ಉಭಯ ತಂಡಗಳಿಗೆ ಸಮವಾಗಿ ಹಂಚಿಕೆಯಾಗಿದೆ. ಇಂದು ನಡೆದ ಮೊದಲ ಸೆಷನ್‌ನಲ್ಲಿ ಭಾರತ ತಂಡ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ವಿಕೆಟ್‌ಗಳನ್ನು ಕಬಳಿಸುವ ಮೂಲಕ ಭರ್ಜರಿ ಪುನರಾಗಮನ ಮಾಡಿತು. ಆದರೆ ಎರಡನೇ ಸೆಷನ್ನಿಂದಲೇ ಅದ್ಭುತ ಬೌಲಿಂಗ್ ಪ್ರದರ್ಶಿಸಿದ ಕಾಂಗರೂ ಪಡೆ ಎರಡನೇ ದಿನವೂ ಮೇಲುಗೈ ಸಾಧಿಸಿದೆ. ಮೊದಲ ಇನಿಂಗ್ಸ್‌ನಲ್ಲಿ ಆಸ್ಟ್ರೇಲಿಯಾ ತಂಡ 469 ರನ್‌ಗಳಿಗೆ ಆಲೌಟ್ ಆಗಿತ್ತು. ಎರಡನೇ ದಿನದಾಟದ ಅಂತ್ಯಕ್ಕೆ ಭಾರತ ತಂಡ 38 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 151 ರನ್ ಗಳಿಸಿದೆ. 18 ತಿಂಗಳ ನಂತರ ಟೆಸ್ಟ್‌ಗೆ ಮರಳುತ್ತಿರುವ ರಹಾನೆ ಮತ್ತು ಕೆಎಸ್ ಭರತ್ ಪ್ರಸ್ತುತ ಅಜೇಯರಾಗಿ ಉಳಿದಿದ್ದಾರೆ. ಜಡೇಜಾ ಮತ್ತು ರಹಾನೆ 60+ ರನ್ ಜೊತೆಯಾಟವನ್ನು ಹಂಚಿಕೊಂಡು ಭಾರತದ ಇನ್ನಿಂಗ್ಸ್ಗೆ ಜೀವ ತುಂಬಿದರು. ಭಾರತ ತಂಡ ಆಸ್ಟ್ರೇಲಿಯಕ್ಕಿಂತ 318 ರನ್‌ಗಳಷ್ಟು ಹಿಂದಿದ್ದು, ಇದೀಗ ಫಾಲೋ ಆನ್ ತಪ್ಪಿಸಲು 269 ರನ್‌ಗಳ ಬೃಹತ್ ಮೊತ್ತವನ್ನು ಗಳಿಸಬೇಕಾಗಿದೆ.
ತನ್ನ ಮೊದಲ ಇನ್ನಿಂಗ್ಸ್ ಆರಂಭಿಸಿರುವ ಭಾರತ, 2ನೇ ದಿನದಾಟದಂತ್ಯಕ್ಕೆ ಪ್ರಮುಖ 5 ವಿಕೆಟ್ ಕಳೆದುಕೊಂಡು 151 ರನ್ ಕಲೆಹಾಕಿದೆ. ರಹಾನೆ ಹಾಗೂ ಭರತ್ ಅಜೇಯರಾಗಿ ಉಳಿದಿದ್ದಾರೆ. ಆಸೀಸ್ ಇನ್ನಿಂಗ್ಸ್ ಹಿಮ್ಮೆಟ್ಟಿಸಲು ಭಾರತ ಇನ್ನು 318 ರನ್ ಬಾರಿಸಬೇಕಿದೆ.
ಭಾರತಕ್ಕೆ ಆಸರೆಯಾಗಿ ಕಾಣುತ್ತಿದ್ದ ಜಡೇಜಾ ಕೂಡ ಔಟಾಗಿದ್ದಾರೆ.
48 ರನ್ ಬಾರಿಸಿದ್ದ ರವೀಂದ್ರ ಜಡೇಜಾ , ಸ್ಮಿತ್ಗೆ ಕ್ಯಾಚ್ ನೀಡಿ ಔಟಾದರು.
ಜಡೇಜಾ 51 ಎಸೆತಗಳಲ್ಲಿ 48 ರನ್‌ಗಳ ಅದ್ಭುತ ಇನ್ನಿಂಗ್ಸ್ ಆಡಿದರು.
ಕೇವಲ 71 ರನ್‌ಗಳಿಗೆ 4 ವಿಕೆಟ್ ಕಳೆದುಕೊಂಡಿದ್ದ ಟೀಂ ಇಂಡಿಯಾಕ್ಕೆ ರಹಾನೆ ಹಾಗೂ ಜಡೇಜಾ ಆಸರೆಯಾಗಿದ್ದಾರೆ. ಈ ಇಬ್ಬರ ಜೊತೆಯಾಟದಿಂದ ಭಾರತ 100 ರನ್ ಪೂರೈಸಿದೆ.
19ನೇ ಓವರ್‌ನ ಎರಡನೇ ಎಸೆತದಲ್ಲಿ ಮಿಚೆಲ್ ಸ್ಟಾರ್ಕ್ ವಿರಾಟ್ ಕೊಹ್ಲಿಗೆ ಪೆವಿಲಿಯನ್ ಹಾದಿ ತೋರಿಸಿದರು. ಎರಡನೇ ಸ್ಲಿಪ್‌ನಲ್ಲಿ ಸ್ಟಾರ್ಕ್ ಎಸೆತದಲ್ಲಿ ಕೊಹ್ಲಿ ಸ್ಮಿತ್ಗೆ ಕ್ಯಾಚಿತ್ತು ಔಟಾದರು. ಕೊಹ್ಲಿ ಕೇವಲ 14 ರನ್ ಗಳಿಸಲಷ್ಟೇ ಶಕ್ತರಾದರು.
ಭಾರತ 50 ರನ್ ಪೂರ್ಣಗೊಳಿಸಿದ ಬೆನ್ನಲ್ಲೇ 3ನೇ ವಿಕೆಟ್ ಕಳೆದುಕೊಂಡಿದೆ.
ತಂಡದ ನಂಬಿಕಸ್ಥ ಬ್ಯಾಟರ್ ಪೂಜಾರ ಕ್ಲಿನ್ ಬೌಲ್ಡ್ ಆಗಿದ್ದಾರೆ.
ಪೂಜಾರಗೆ 14 ರನ್ ಮಾತ್ರ ಗಳಿಸಲು ಸಾಧ್ಯವಾಯಿತು.
ಮೊದಲ ಇನ್ನಿಂಗ್ಸ್ ಆರಂಭಿಸಿರುವ ಭಾರತ 50 ರನ್‌ಗಳ ಒಳಗೆ ಪ್ರಮುಖ 2 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ.
ಇದೀಗ ಭಾರತಕ್ಕೆ ಕೊಹ್ಲಿ- ಪೂಜಾರ ಆಸರೆಯಾಗಬೇಕಿದೆ.
ಸ್ಕಾಟ್ ಬೌಲ್ಯಾಂಡ್ ಭಾರತಕ್ಕೆ 2ನೇ ಆಘಾತ ನೀಡಿದ್ದಾರೆ.
ಶುಭಮನ್ ಗಿಲ್ ಬೋಲ್ಡ್ ಆಗಿದ್ದಾರೆ.
ಗಿಲ್ 15 ಎಸೆತಗಳಲ್ಲಿ 13 ರನ್ ಗಳಿಸಲಷ್ಟೇ ಶಕ್ತರಾದರು.
ಪ್ಯಾಟ್ ಕಮಿನ್ಸ್ ಭಾರತಕ್ಕೆ ದೊಡ್ಡ ಹೊಡೆತ ನೀಡಿದರು. ಆರನೇ ಓವರ್‌ನ ಕೊನೆಯ ಎಸೆತದಲ್ಲಿ ಕಮ್ಮಿನ್ಸ್, ರೋಹಿತ್ ಅವರನ್ನು ಎಲ್‌ಬಿಡಬ್ಲ್ಯೂ ಆಗಿ ಔಟ್ ಮಾಡಿದರು. ರೋಹಿತ್ ಅವರ ಕಳಪೆ ಫಾರ್ಮ್ ಇಲ್ಲಿಯೂ ಮುಂದುವರೆದಿದೆ. ಅವರು 15 ರನ್ ಗಳಿಸಲಷ್ಟೇ ಶಕ್ತರಾದರು.
ಭಾರತದ ಬ್ಯಾಟಿಂಗ್ ಶುರುವಾಗಿದೆ. ಮಿಚೆಲ್ ಸ್ಟಾರ್ಕ್ ಅವರ ಓವರ್‌ನ ಎರಡನೇ ಎಸೆತದಲ್ಲಿ ರೋಹಿತ್ ಶರ್ಮಾ ಬೌಂಡರಿ ಬಾರಿಸುವ ಮೂಲಕ ಭಾರತದ ಖಾತೆ ತೆರೆದರು.
ಆಸ್ಟ್ರೇಲಿಯ ಮೊದಲ ಇನ್ನಿಂಗ್ಸ್‌ನಲ್ಲಿ 469 ರನ್‌ಗಳಿಗೆ ಆಲೌಟ್ ಆಗಿದೆ. 2ನೇ ದಿನದ ಮೊದಲ ಸೆಷನ್ ಮತ್ತು ಎರಡನೇ ಸೆಷನ್ ಬಹುತೇಕ ಭಾರತದ ಹೆಸರಿನಲ್ಲಿತ್ತು. ಭಾರತದ ಬೌಲರ್‌ಗಳು ಆಸ್ಟ್ರೇಲಿಯಾಕ್ಕೆ 500ರ ಗಡಿ ದಾಟಲು ಅವಕಾಶ ನೀಡಲಿಲ್ಲ. ಪ್ಯಾಟ್ ಕಮಿನ್ಸ್ ರೂಪದಲ್ಲಿ ಆಸ್ಟ್ರೇಲಿಯಾ ಅಂತಿಮ ವಿಕೆಟ್ ಕಳೆದುಕೊಂಡು ಆಲೌಟ್ ಆಯಿತು.
ಸಿರಾಜ್ ಎಸೆತದಲ್ಲಿ ನಾಥನ್ ಲಿಯಾನ್ ಎಲ್ ಬಿಡಬ್ಲ್ಯೂ ಆಗಿ ಔಟಾದರು. ಲಿಯಾನ್ 9 ರನ್ ಗಳಿಸಲಷ್ಟೇ ಶಕ್ತವಾದರು. ಇದರೊಂದಿಗೆ ಆಸ್ಟ್ರೇಲಿಯಾದ 9 ವಿಕೆಟ್‌ಗಳು ಪತನಗೊಂಡಿವೆ.
ಅಲೆಕ್ಸ್ ಕ್ಯಾರಿ ಅರ್ಧಶತಕ ಪೂರೈಸಲು ಸಾಧ್ಯವಾಗದೆ 48 ರನ್‌ಗಳಿಗೆ ವಿಕೆಟ್ ಒಪ್ಪಿಸಿದ್ದಾರೆ. ರವೀಂದ್ರ ಜಡೇಜಾ ಅವರ ಓವರ್‌ನ ನಾಲ್ಕನೇ ಎಸೆತದಲ್ಲಿ ಅವರು 48 ರನ್‌ಗಳಿಗೆ ಎಲ್ಬಿಡಬ್ಲ್ಯೂ ಆಗಿ ಔಟಾದರು. ಆಸ್ಟ್ರೇಲಿಯಾದ 8 ವಿಕೆಟ್‌ಗಳು ಪತನಗೊಂಡಿವೆ.
ಎರಡನೇ ಸೆಷನ್ ಆಟ ಆರಂಭವಾಗಿದೆ. ಆಸ್ಟ್ರೇಲಿಯಾ ತನ್ನ ಇನ್ನಿಂಗ್ಸ್ ಅನ್ನು 422 ರನ್‌ಗಳಿಂದ ಮುಂದಕ್ಕೆ ಕೊಂಡೊಯ್ಯಲು ಯತ್ನಿಸಲಿದೆ.
ಮೊದಲ ಸೆಷನ್ ಮುಗಿದಿದೆ. ಎರಡನೇ ದಿನದ ಮೊದಲ ಸೆಷನ್ ಭಾರತದ ಹೆಸರಲ್ಲಿತ್ತು. ಭೋಜನ ವಿರಾಮದ ವೇಳೆಗೆ ಆಸ್ಟ್ರೇಲಿಯಾ 7 ವಿಕೆಟ್‌ಗೆ 422 ರನ್ ಗಳಿಸಿದೆ. ಮೊದಲ ಸೆಷನ್‌ನಲ್ಲಿ ಸ್ಟೀವ್ ಸ್ಮಿತ್ ಶತಕ ಬಾರಿಸಿದರು.
104ನೇ ಓವರ್‌ನ 5ನೇ ಎಸೆತದಲ್ಲಿ ಮಿಚೆಲ್ ಸ್ಟಾರ್ಕ್ ರನೌಟ್ ಆದರು. ಸ್ಟಾರ್ಕ್ ಅವರು ಸಿಂಗಲ್ ತೆಗೆದುಕೊಳ್ಳಲು ಪ್ರಯತ್ನಿಸುತ್ತಿದ್ದರು, ಆದರೆ ಅಕ್ಷರ್ ಪಟೇಲ್ ಅವರ ನೇರ ಎಸೆತದಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ.
121 ರನ್‌ಗಳಿಗೆ ಸ್ಟೀವ್ ಸ್ಮಿತ್ ಇನ್ನಿಂಗ್ಸ್ ಮುಗಿದಿದೆ.
99ನೇ ಓವರ್‌ನ ಮೊದಲ ಎಸೆತದಲ್ಲಿ ಠಾಕೂರ್ ಸ್ಮಿತ್ ಅವರನ್ನು ಬೌಲ್ಡ್ ಮಾಡಿದರು.
ಎರಡನೇ ದಿನದ ಮೊದಲ ಸೆಷನ್‌ನಲ್ಲಿ ಭಾರತಕ್ಕೆ ಮತ್ತೊಂದು ದೊಡ್ಡ ಯಶಸ್ಸು ಸಿಕ್ಕಿತು.
ಆಸೀಸ್ 5ನೇ ವಿಕೆಟ್ ಪತನವಾಗಿದೆ
ಹೆಡ್ ವಿಕೆಟ್ ಬಳಿಕ ಬಂದಿದ್ದ ಗ್ರೀನ್ ಕೂಡ ಮೊದಲ ಸ್ಲಿಪ್ನಲ್ಲಿ ಗಿಲ್ಗೆ ಕ್ಯಾಚಿತ್ತು ಔಟಾದರು.
ಕೊನೆಗೂ ಹೆಡ್ ವಿಕೆಟ್ ಪತನವಾಗಿದೆ
163 ರನ್‌ಗಳಿಗೆ ಹೆಡ್ ಕೀಪರ್ ಕೈಗೆ ಕ್ಯಾಚಿತ್ತು ಔಟಾದರು.
ಟ್ರಾವಿಸ್ ಹೆಡ್ 150 ರನ್ ಪೂರೈಸಿದ್ದಾರೆ. ಮೊಹಮ್ಮದ್ ಶಮಿ ಎಸೆತವನ್ನು ಬೌಂಡರಿ ಬಾರಿಸುವ ಮೂಲಕ ತಮ್ಮ 150 ರನ್ ಪೂರೈಸಿದರು.
86ನೇ ಓವರ್‌ನ ಮೂರನೇ ಎಸೆತದಲ್ಲಿ ಸ್ಮಿತ್ ಬೌಂಡರಿ ಬಾರಿಸಿ ಫೈನಲ್ನಲ್ಲಿ ಶತಕ ಸಿಡಿಸಿದ್ದರು. ಇದು ಅವರ 31ನೇ ಟೆಸ್ಟ್ ಶತಕವಾಗಿದೆ. ಟ್ರಾವಿಸ್ ಹೆಡ್ ನಂತರ ಸ್ಮಿತ್ ಅದ್ಭುತ ಇನ್ನಿಂಗ್ಸ್ ಆಡುತ್ತಿದ್ದಾರೆ.
ಲಂಡನ್‌ನಲ್ಲಿ ಮೋಡ ಕವಿದ ವಾತಾವರಣವಿದೆ. ವಾತಾವರಣವೂ ತಂಪಾಗಿದೆ. ಮಳೆಯಾಗುವ ಸಾಧ್ಯತೆ ಇದೆ ಎಂದು ಓವಲ್ನ ಹವಾಮಾನದ ಬಗ್ಗೆ ದಿನೇಶ್ ಕಾರ್ತಿಕ್ ಮಾಹಿತಿ ನೀಡಿದ್ದಾರೆ.
Published On - 2:12 pm, Thu, 8 June 23