ಸತತ ಎರಡನೇ ಬಾರಿಗೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಫೈನಲ್ ತಲುಪಿದ್ದ ಭಾರತ ಕ್ರಿಕೆಟ್ ತಂಡಕ್ಕೆ ಸತತ ಎರಡನೇ ಬಾರಿಗೆ ಸೋಲಿನ ಶಾಕ್ ಎದುರಾಗಿದೆ. ಮತ್ತೊಮ್ಮೆ ಟೀಂ ಇಂಡಿಯಾ ತನ್ನ ಅನುಭವಿ ಬ್ಯಾಟ್ಸ್‌ಮನ್‌ಗಳ ವೈಫಲ್ಯವನ್ನು ಅನುಭವಿಸಬೇಕಾಯಿತು. ಆಸ್ಟ್ರೇಲಿಯಾ ವಿರುದ್ಧದ ಫೈನಲ್‌ನ ಕೊನೆಯ ದಿನ ಟೀಂ ಇಂಡಿಯಾ ಕೇವಲ 234 ರನ್‌ಗಳಿಗೆ ಆಲೌಟ್ ಆಗಿದ್ದು, 209 ರನ್‌ಗಳಿಂದ ಪಂದ್ಯ ಮತ್ತು ಪ್ರಶಸ್ತಿಯನ್ನು ಕಳೆದುಕೊಂಡಿತು. ಹೀಗಾಗಿ ಆಸ್ಟ್ರೇಲಿಯಾ ವಿಶ್ವ ಟೆಸ್ಟ್ ಚಾಂಪಿಯನ್ ಆಯಿತು.
ಆಸ್ಟ್ರೇಲಿಯಾ ವಿರುದ್ಧದ ಫೈನಲ್‌ನ ಕೊನೆಯ ದಿನ ಟೀಂ ಇಂಡಿಯಾ ಕೇವಲ 234 ರನ್‌ಗಳಿಗೆ ಆಲೌಟ್ ಆಗಿದ್ದು, 209 ರನ್‌ಗಳಿಂದ ಪಂದ್ಯ ಮತ್ತು ಪ್ರಶಸ್ತಿಯನ್ನು ಕಳೆದುಕೊಂಡಿತು. ಹೀಗಾಗಿ ಆಸ್ಟ್ರೇಲಿಯಾ ವಿಶ್ವ ಟೆಸ್ಟ್ ಚಾಂಪಿಯನ್ ಆಯಿತು.
ಓವಲ್‌ನಲ್ಲಿ ಸತತ 3 ಅರ್ಧಶತಕ ಗಳಿಸಿದ್ದ ಶಾರ್ದೂಲ್ಗೆ ಈ ಬಾರಿ ಖಾತೆ ತೆರೆಯಲೂ ಸಾಧ್ಯವಾಗಲಿಲ್ಲ. ನಾಥನ್ ಲಿಯಾನ್ ಎಸೆತದಲ್ಲಿ ಠಾಕೂರ್ ಎಲ್ಬಿಡಬ್ಲ್ಯೂ ಆದರು.
ಅನುಭವಿ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಅಜಿಂಕ್ಯ ರಹಾನೆ ರೂಪದಲ್ಲಿ ಭಾರತ ತಂಡಕ್ಕೆ ಆರನೇ ಹೊಡೆತ ಬಿದ್ದಿದೆ. ತಂಡದ ಪರ ಎರಡನೇ ಇನ್ನಿಂಗ್ಸ್‌ನಲ್ಲಿ 46 ರನ್ ಗಳಿಸುವ ಮೂಲಕ ರಹಾನೆ ಮಿಚೆಲ್ ಸ್ಟಾರ್ಕ್‌ಗೆ ಬಲಿಯಾಗಿದ್ದಾರೆ. ತಂಡದ ಸ್ಕೋರ್ 56.2 ಓವರ್ ಗಳಲ್ಲಿ ಆರು ವಿಕೆಟ್ ನಷ್ಟಕ್ಕೆ 212 ರನ್ ಆಗಿದೆ.
ವಿರಾಟ್ ಕೊಹ್ಲಿ ರೂಪದಲ್ಲಿ ಭಾರತ ಕ್ರಿಕೆಟ್ ತಂಡ ನಾಲ್ಕನೇ ವಿಕೆಟ್ ಕಳೆದುಕೊಂಡಿದೆ. ಭಾರತ 179 ರನ್ ಗಳಿಸುವಷ್ಟರಲ್ಲಿ ನಾಲ್ಕನೇ ವಿಕೆಟ್ ಕಳೆದುಕೊಂಡಿತು.
ಅಂತಿಮ ದಿನದ ಆಟ ಆರಂಭವಾಗಿದೆ. ಟೀಂ ಇಂಡಿಯಾ ಪರ ಕೊಹ್ಲಿ ಹಾಗೂ ರಹಾನೆ ಬ್ಯಾಟಿಂಗ್ ಆರಂಭಿಸಿದ್ದಾರೆ. ಭಾರತ ಗೆಲ್ಲಬೇಕೆಂದರೆ 89 ಓವರ್ಗಳಲ್ಲಿ 280 ರನ್ ಬಾರಿಸಬೇಕಿದೆ.
ಟೀಂ ಇಂಡಿಯಾ ಅಜಿಂಕ್ಯ ರಹಾನೆ ಮತ್ತು ಕೊಹ್ಲಿ ಅವರಿಂದ ದೊಡ್ಡ ಜೊತೆಯಾಟವನ್ನು ನಿರೀಕ್ಷಿಸುತ್ತಿದೆ. ಇಬ್ಬರೂ ಅನುಭವಿ ಆಟಗಾರರು ಹೌದು. ಸದ್ಯ ಇವರಿಬ್ಬರು ನಾಲ್ಕನೇ ವಿಕೆಟ್‌ಗೆ ಅಜೇಯ 71 ರನ್‌ಗಳ ಜೊತೆಯಾಟವಾಡಿದ್ದಾರೆ. ಎಲ್ಲಾ ಭಾರತೀಯ ಕ್ರಿಕೆಟ್ ಅಭಿಮಾನಿಗಳು ಈ ಪಾಲುದಾರಿಕೆ ಬೆಳೆಯಲಿ ಎಂದು ಹಾರೈಸಿದ್ದಾರೆ.
Published On - 2:11 pm, Sun, 11 June 23