ಕ್ರಿಕೆಟಿಗ ಗ್ಲೆನ್ ಮ್ಯಾಕ್ಸ್​ವೆಲ್- ವಿನಿ ರಾಮನ್ ದಂಪತಿಗಳಿಗೆ ಗಂಡು ಮಗು ಜನನ

|

Updated on: Sep 15, 2023 | 5:50 PM

Glenn Maxwell: ಆಸ್ಟ್ರೇಲಿಯಾದ ಸ್ಟಾರ್ ಆಲ್ ರೌಂಡರ್ ಗ್ಲೆನ್ ಮ್ಯಾಕ್ಸ್​ವೆಲ್ ಮನೆಗೆ ಹೊಸ ಅತಿಥಿಯ ಆಗಮನವಾಗಿದೆ. ಮ್ಯಾಕ್ಸ್‌ವೆಲ್ ಪತ್ನಿ ವಿನಿ ರಾಮನ್ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ವಿನಿ ರಾಮನ್ ಮತ್ತು ಗ್ಲೆನ್ ಮ್ಯಾಕ್ಸ್‌ವೆಲ್ ಇಬ್ಬರೂ ತಮ್ಮ ಮಗನೊಂದಿಗಿನ ಫೋಟೋವನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಳ್ಳುವ ಮೂಲಕ ಈ ಸಿಹಿ ಸುದ್ದಿಯನ್ನು ಹಂಚಿಕೊಂಡಿದ್ದಾರೆ.

ಕ್ರಿಕೆಟಿಗ ಗ್ಲೆನ್ ಮ್ಯಾಕ್ಸ್​ವೆಲ್- ವಿನಿ ರಾಮನ್ ದಂಪತಿಗಳಿಗೆ ಗಂಡು ಮಗು ಜನನ
ಗ್ಲೆನ್ ಮ್ಯಾಕ್ಸ್​ವೆಲ್- ವಿನಿ ರಾಮನ್
Follow us on

ಆಸ್ಟ್ರೇಲಿಯಾದ ಸ್ಟಾರ್ ಆಲ್ ರೌಂಡರ್ ಗ್ಲೆನ್ ಮ್ಯಾಕ್ಸ್​ವೆಲ್ (Glenn Maxwell) ಮನೆಗೆ ಹೊಸ ಅತಿಥಿಯ ಆಗಮನವಾಗಿದೆ. ಮ್ಯಾಕ್ಸ್‌ವೆಲ್ ಪತ್ನಿ ವಿನಿ ರಾಮನ್ (Vini Raman) ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ವಿನಿ ರಾಮನ್ ಮತ್ತು ಗ್ಲೆನ್ ಮ್ಯಾಕ್ಸ್‌ವೆಲ್ ಇಬ್ಬರೂ ತಮ್ಮ ಮಗನೊಂದಿಗಿನ ಫೋಟೋವನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಳ್ಳುವ ಮೂಲಕ ಈ ಸಿಹಿ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ತಮ್ಮ ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ವಿನಿ ರಾಮನ್ ತಮ್ಮ ಮಗನ ಹೆಸರನ್ನು ಕೂಡ ಹಂಚಿಕೊಂಡಿದ್ದು, ಈ ದಂಪತಿಗಳು ತಮ್ಮ ಮಗನಿಗೆ ಲೋಗನ್ ಮೇವರಿಕ್ ಮ್ಯಾಕ್ಸ್​ವೆಲ್ (Logan Maverick Maxwell) ಎಂದು ಹೆಸರಿಸಿದ್ದಾರೆ.

ಗಂಡು ಮಗು ಜನನ

ಸೆಪ್ಟೆಂಬರ್ 11 ರಂದು ಮ್ಯಾಕ್ಸ್‌ವೆಲ್ ಪತ್ನಿ ವಿನಿ ರಾಮನ್ ಗಂಡು ಮಗುವಿಗೆ ಜನ್ಮ ನೀಡಿದ್ದು, ಈ ಸಿಹಿ ಸುದ್ದಿಯ ನಂತರ, ವಿನಿ ಮತ್ತು ಮ್ಯಾಕ್ಸ್‌ವೆಲ್ ದಂಪತಿಗಳಿಗೆ ಸೋಶಿಯಲ್​ ಮೀಡಿಯಾದಲ್ಲಿ ಅಭಿನಂನೆ ಮಹಾಪೂರವೇ ಹರಿದುಬರುತ್ತಿದೆ. ಈ ಮೊದಲು ಅಂದರೆ ಮೇ ತಿಂಗಳಿನಲ್ಲಿ ವಿನಿ ರಾಮನ್ ತಮ್ಮ ಮಗು ಶೀಘ್ರದಲ್ಲೇ ಮನೆಗೆ ಬರಲಿದೆ ಎಂದು ಸಿಹಿ ಸುದ್ದಿಯನ್ನು ಹಂಚಿಕೊಂಡಿದ್ದರು. ಅಲ್ಲದೆ ಜುಲೈ ತಿಂಗಳಿನಲ್ಲಿ ವಿನಿ ರಾಮನ್ ಅವರಿಗೆ ಹಿಂದೂ ಸಂಪ್ರದಾಯದ ಪ್ರಕಾರ ಸೀಮಂತ ಕೂಡ ಮಾಡಲಾಗಿತ್ತು.

ಗ್ಲೆನ್ ಮ್ಯಾಕ್ಸ್‌ವೆಲ್ ಅವರ ಪತ್ನಿ ವಿನಿ ರಾಮನ್ ಭಾರತೀಯ ಮೂಲದವರಾಗಿದ್ದಾರೆ. ಆದರೆ ಅವರು ಹುಟ್ಟಿದ್ದು ಆಸ್ಟ್ರೇಲಿಯಾದಲ್ಲಿ. ವಿನಿ ಪೋಷಕರು ಕೆಲವು ವರ್ಷಗಳ ಹಿಂದೆ ಕೆಲಸದ ನಿಮಿತ್ತ ಆಸ್ಟ್ರೇಲಿಯಾಕ್ಕೆ ತೆರಳಿ ಅಲ್ಲಿಯೇ ನೆಲೆಸಿದ್ದಾರೆ. ವಿನಿ ಅವರು ವೈದ್ಯಕೀಯ ವಿಜ್ಞಾನವನ್ನು ಅಧ್ಯಯನ ಮಾಡಿದ್ದು ವೃತ್ತಿಯಲ್ಲಿ ಫಾರ್ಮಾಸಿಸ್ಟ್ ಆಗಿದ್ದಾರೆ. 2019 ರಲ್ಲಿ ಮೊದಲ ಬಾರಿಗೆ ಭೇಟಿಯಾಗಿದ್ದ ವಿನಿ ರಾಮನ್ ಹಾಗೂ ಗ್ಲೆನ್ ಮ್ಯಾಕ್ಸ್‌ವೆಲ್ ಮಾರ್ಚ್ 18, 2022 ರಂದು ಕ್ರಿಶ್ಚಿಯನ್ ಸಂಪ್ರದಾಯದಂತೆ ಮತ್ತು ಮಾರ್ಚ್ 27, 2022 ರಂದು ತಮಿಳು ಸಂಪ್ರದಾಯದಂತೆ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದರು.

ತಂಡಕ್ಕೆ ಮ್ಯಾಕ್ಸ್​ವೆಲ್ ರೀ ಎಂಟ್ರಿ

ಈ ವರ್ಷದ ಮಾರ್ಚ್‌ನಲ್ಲಿ ವಾಂಖೆಡೆಯಲ್ಲಿ ಭಾರತದ ವಿರುದ್ಧದ ಏಕದಿನ ಪಂದ್ಯದಲ್ಲಿ ಕಾಣಿಸಿಕೊಂಡಿದ್ದ ಮ್ಯಾಕ್ಸ್‌ವೆಲ್ ಅಂದಿನಿಂದ ಆಸ್ಟ್ರೇಲಿಯಾ ಪರ ಆಡಿಲ್ಲ. ಕಳೆದ ವರ್ಷ ನವೆಂಬರ್‌ನಲ್ಲಿ ಗೆಳೆಯನ ಬರ್ತ್​ ಡೇ ಪಾರ್ಟಿಯಲ್ಲಿ ಮ್ಯಾಕ್ಸ್‌ವೆಲ್ ತಮ್ಮ ಕಾಲನ್ನು ಮುರಿದುಕೊಂಡಿದ್ದರು. ಆ ಬಳಿಕ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಗ್ಲೆನ್, ಇದೀಗ ಏಕದಿನ ವಿಶ್ವಕಪ್ ಮೂಲಕ ಆಸೀಸ್ ತಂಡದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 5:40 pm, Fri, 15 September 23