ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಮತ್ತೊಂದು ದ್ವಿಶತಕದ ದಾಖಲೆ ಬರೆದ ರೋಹಿತ್ ಶರ್ಮಾ..!
Rohit Sharma: ಕೊಲಂಬೊದಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ರೋಹಿತ್ ಬಾಂಗ್ಲಾದೇಶದ ಬ್ಯಾಟ್ಸ್‌ಮನ್ ಮೆಹದಿ ಹಸನ್ ಅವರ ಕ್ಯಾಚ್ ಹಿಡಿಯುವ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 200 ಕ್ಯಾಚ್‌ಗಳನ್ನು ಪೂರೈಸಿದ ಸಾಧನೆ ಮಾಡಿದರು.
ಏಷ್ಯಾಕಪ್ (Asia Cup 2023) ಸೂಪರ್ 4 ಸುತ್ತಿನ ಅಂತಿಮ ಪಂದ್ಯದಲ್ಲಿ ಕಣಕ್ಕಿಳಿದಿರುವ ಟೀಂ ಇಂಡಿಯಾ 266 ರನ್ಗಳ ಟಾರ್ಗೆಟ್ ಬೆನ್ನಟ್ಟಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಬಾಂಗ್ಲಾ ನಾಯಕ ಬಾಬರ್ ಹಾಗೂ ಹೃದಯ್ ಅವರ ಅರ್ಧಶತಕದ ನೆರವಿನಿಂದ ಭಾರತಕ್ಕೆ (India vs Bangladesh) ಸ್ಪರ್ಧಾತ್ಮಕ ಮೊತ್ತವನ್ನು ಸವಾಲಾಗಿ ನೀಡಿದೆ. ಇನ್ನು ಈ ಪಂದ್ಯದಲ್ಲಿ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದ ರೋಹಿತ್ ಶರ್ಮಾ ಬ್ಯಾಟಿಂಗ್ನಲ್ಲಿ ಯಾವುದೇ ಪ್ರಭಾವ ಬೀರಲಿಲ್ಲ. ಆದರೆ ಬ್ಯಾಟಿಂಗ್ನಲ್ಲಿ ವಿಫಲರಾದ ರೋಹಿತ್ ಶರ್ಮಾ (Rohit Sharma), ಇದೇ ಬಾಂಗ್ಲಾದೇಶ ವಿರುದ್ಧ ಫೀಲ್ಡಿಂಗ್ನಲ್ಲಿ ದ್ವಿಶತಕದ ಸಾಧನೆ ಮಾಡಿದ್ದಾರೆ. ಕೊಲಂಬೊದಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ರೋಹಿತ್ ಬಾಂಗ್ಲಾದೇಶದ ಬ್ಯಾಟ್ಸ್‌ಮನ್ ಮೆಹದಿ ಹಸನ್ ಅವರ ಕ್ಯಾಚ್ ಹಿಡಿಯುವ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 200 ಕ್ಯಾಚ್‌ಗಳನ್ನು ಪೂರೈಸಿದ ಸಾಧನೆ ಮಾಡಿದರು.
ರೋಹಿತ್ ದ್ವಿಶತಕ
ಬಾಂಗ್ಲಾದೇಶದ ಬ್ಯಾಟ್ಸ್‌ಮನ್ ಮೆಹದಿ ಹಸನ್ ಅವರ ಕ್ಯಾಚ್ ಪಡೆಯುವ ಮೂಲಕ ರೋಹಿತ್ ಶರ್ಮಾ, ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 200ನೇ ಕ್ಯಾಚ್ ಪೂರ್ಣಗೊಳಿಸಿದ್ದು, ಈ ಸಾಧನೆ ಮಾಡಿದ ಐದನೇ ಭಾರತೀಯ ಎನಿಸಿಕೊಂಡಿದ್ದಾರೆ. ರಾಹುಲ್ ದ್ರಾವಿಡ್ ಫೀಲ್ಡರ್ ಆಗಿ ಗರಿಷ್ಠ 333 ಕ್ಯಾಚ್‌ಗಳನ್ನು ಪಡೆದ ದಾಖಲೆ ಹೊಂದಿದ್ದು, ಇವರ ನಂತರ ವಿರಾಟ್ ಕೊಹ್ಲಿ 303 ಕ್ಯಾಚ್‌ಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ. ಮೊಹಮ್ಮದ್ ಅಜರುದ್ದೀನ್ 261 ಕ್ಯಾಚ್ ಪಡೆದಿದ್ದು, ಮೂರನೇ ಸ್ಥಾನದಲ್ಲಿದ್ದರೆ, ಸಚಿನ್ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ 256 ಕ್ಯಾಚ್‌ಗಳನ್ನು ಪಡೆದು ನಾಲ್ಕನೇ ಸ್ಥಾನದಲ್ಲಿದ್ದಾರೆ.
WHAT A CATCH BY ROHIT SHARMA.
Captain Rohit Leads by example – He is one of the best fielder in the world. pic.twitter.com/0oh9bU49qG
— CricketMAN2 (@ImTanujSingh) September 15, 2023
IND vs BAN: ಬಾಂಗ್ಲಾ ವಿರುದ್ಧ ತಂಡದಲ್ಲಿ 5 ಬದಲಾವಣೆ ಮಾಡಿದ ರೋಹಿತ್! ಯಾರು ಇನ್, ಯಾರು ಔಟ್?
ರೋಹಿತ್ ಸ್ಲಿಪ್ ಸ್ಪೆಷಲಿಸ್ಟ್ ಫೀಲ್ಡರ್
ರೋಹಿತ್ ಶರ್ಮಾ ಅವರ ಫಿಟ್ನೆಸ್ ಬಗ್ಗೆ ಆಗಾಗ್ಗೆ ಪ್ರಶ್ನೆಗಳು ಉದ್ಭವಿಸುತ್ತವೆ. ಆದರೆ ಈ ಆಟಗಾರ ಅದ್ಭುತ ಫೀಲ್ಡರ್ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ರೋಹಿತ್ ಶರ್ಮಾ ವಿಶೇಷವಾಗಿ ಸ್ಲಿಪ್‌ಗಳಲ್ಲಿ ಕ್ಯಾಚ್‌ಗಳನ್ನು ಬಿಡುವುದಿಲ್ಲ. ಆದರೆ ವಿಶ್ವಕಪ್‌ಗೂ ಮುನ್ನ ರೋಹಿತ್ ಶರ್ಮಾಗೆ ಟೆನ್ಶನ್‌ನ ವಿಷಯವೆಂದರೆ ತಂಡದ ಇತರ ಆಟಗಾರರು ಔಟ್-ಫೀಲ್ಡ್‌ನಲ್ಲಿ ನಿರಂತರವಾಗಿ ಕ್ಯಾಚ್‌ಗಳನ್ನು ಬಿಡುತ್ತಿರುವುದು. ವಿಶ್ವಕಪ್ ಸಮೀಪಿಸುತ್ತಿರುವ ಸಮಯದಲ್ಲಿ ಆಟಗಾರರ ಈ ರೀತಿಯ ತಪ್ಪುಗಳು ತಂಡಕ್ಕೆ ಸಾಕಷ್ಟು ಹಿನ್ನಡೆಯುಂಟು ಮಾಡಿದೆ.
ಭಾರತದ ಕಳಪೆ ಫಿಲ್ಡಿಂಗ್
ವಾಸ್ತವವಾಗಿ, ರೋಹಿತ್ ಶರ್ಮಾ ಅವರ ಈ ಕ್ಯಾಚ್‌ಗೆ ಮುನ್ನ, ಸೂರ್ಯಕುಮಾರ್ ಯಾದವ್ ಮತ್ತು ತಿಲಕ್ ಯಾದವ್ ಅವರು ಒಂದೇ ಓವರ್‌ನಲ್ಲಿ 2 ಕ್ಯಾಚ್‌ಗಳನ್ನು ಕೈಬಿಟ್ಟಿದ್ದರು. ಶಾರ್ದೂಲ್ ಠಾಕೂರ್ ಬೌಲ್ ಮಾಡಿದ ಬಾಂಗ್ಲಾದೇಶದ ಇನ್ನಿಂಗ್ಸ್‌ನ 10 ನೇ ಓವರ್‌ನಲ್ಲಿ ಎರಡು ಅವಕಾಶಗಳನ್ನು ಸೃಷ್ಟಿಸಿದರು ಆದರೆ ಮೊದಲು ತಿಲಕ್ ವರ್ಮಾ ಸ್ಕ್ವೇರ್ ಮಿಡ್‌ವಿಕೆಟ್‌ನಲ್ಲಿ ಕ್ಯಾಚ್ ಅನ್ನು ಕೈಬಿಟ್ಟರೆ, ನಂತರ ಸೂರ್ಯ ಸ್ಲಿಪ್‌ನಲ್ಲಿ ಕ್ಯಾಚ್ ಕೈಬಿಟ್ಟರು. ಆದರೆ, ಇದಾದ ಬಳಿಕ ರೋಹಿತ್ ಅವರೇ ಉದಾಹರಣೆಯಾಗಿ ಅದ್ಭುತ ಕ್ಯಾಚ್ ಹಿಡಿದರು.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ