2022ರ ಏಷ್ಯಾಕಪ್‌ನಿಂದ (Asia Cup 2022) ಭಾರತ ತಂಡದ ಪ್ರಯಾಣ ಮುಗಿದಿದೆ. ಏಷ್ಯಾಕಪ್ 2022ರ ಸೂಪರ್-4 ಸುತ್ತಿನಲ್ಲಿ ಪಾಕಿಸ್ತಾನ ಮತ್ತು ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಟೀಂ ಇಂಡಿಯಾ ಸೋಲು ಅನುಭವಿಸಬೇಕಾಯಿತು. ಭಾರತದ ವಿರುದ್ಧ ಪಾಕಿಸ್ತಾನ 6 ವಿಕೆಟ್‌ಗಳ ಜಯ ಸಾಧಿಸಿದರೆ, ಶ್ರೀಲಂಕಾ ವಿರುದ್ಧ 6 ವಿಕೆಟ್‌ಗಳಿಂದ ಸೋತಿತು. ಹೀಗಾಗಿ ಏಷ್ಯಾಕಪ್ 2022 ರಿಂದ ನಿರ್ಗಮಿಸಿದ ನಂತರ, ಟೀಮ್ ಇಂಡಿಯಾದ ಬೌಲರ್‌ಗಳ ಬಗ್ಗೆ ಪ್ರಶ್ನೆಗಳು ಎದ್ದಿವೆ. ವಾಸ್ತವವಾಗಿ, ಪಾಕಿಸ್ತಾನ ಮತ್ತು ಶ್ರೀಲಂಕಾ ತಂಡಗಳ ವಿರುದ್ಧ ಡೆತ್ ಓವರ್‌ಗಳಲ್ಲಿ ಭಾರತೀಯ ಬೌಲರ್‌ಗಳು ನಿರಾಸೆ ಅನುಭವಿಸಿದರು. ಬೌಲಿಂಗ್ನಲ್ಲಿ ನಿರಾಸೆ ಮೂಡಿಸಿರುವ ಇಂತಹ ಬೌಲರ್ಗಳಿಗೆ ಭಾರತ ತಂಡದಲ್ಲಿ ಸ್ಥಾನ ಸಿಗುವ ಬಗ್ಗೆ ಪ್ರಶ್ನೆಗಳು ಎದ್ದಿವೆ.
ಭುವನೇಶ್ವರ್ ಕುಮಾರ್
ಭುವನೇಶ್ವರ್ ಕುಮಾರ್ ಏಷ್ಯಾಕಪ್ 2022 ರಲ್ಲಿ ಟೀಮ್ ಇಂಡಿಯಾದ ಅತ್ಯಂತ ಅನುಭವಿ ವೇಗದ ಬೌಲರ್ ಆಗಿದ್ದಾರೆ. ಜಸ್ಪ್ರೀತ್ ಬುಮ್ರಾ ಅವರ ಅನುಪಸ್ಥಿತಿಯಲ್ಲಿ, ಭುವಿ ತಮ್ಮ ಬೌಲಿಂಗ್ನಿಂದ ಎಲ್ಲರಿಗೂ ನಿರಾಶೆ ಮೂಡಿಸಿದ್ದಾರೆ. ವಾಸ್ತವವಾಗಿ, ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ, ಭುವನೇಶ್ವರ್ ಕುಮಾರ್ 19 ನೇ ಓವರ್‌ನಲ್ಲಿ 19 ರನ್ ನೀಡಿದರೆ, ಶ್ರೀಲಂಕಾ ವಿರುದ್ಧ 19 ನೇ ಓವರ್‌ನಲ್ಲಿ 14 ರನ್ ನೀಡಿದರು. ಎರಡೂ ಪಂದ್ಯಗಳಲ್ಲಿ ಭುವನೇಶ್ವರ್ ಕುಮಾರ್ ಅವರ ಓವರ್ ಟರ್ನಿಂಗ್ ಪಾಯಿಂಟ್ ಆದ ಕಾರಣ ಪಂದ್ಯ ಭಾರತದ ಕೈ ತಪ್ಪಿತು. ಇದೀಗ ಭಾರತ ತಂಡದಲ್ಲಿ ಭುವನೇಶ್ವರ್ ಕುಮಾರ್ ಸ್ಥಾನದ ಬಗ್ಗೆ ಅನುಭವಿಗಳು ನಿರಂತರವಾಗಿ ಪ್ರಶ್ನೆಗಳನ್ನು ಎತ್ತುತ್ತಿದ್ದಾರೆ.
ಅವೇಶ್ ಖಾನ್
ಏಷ್ಯಾಕಪ್ 2022 ರ ಸೂಪರ್-4 ರೌಂಡ್‌ನಲ್ಲಿ ಅವೇಶ್ ಖಾನ್ ಟೀಂ ಇಂಡಿಯಾದ ಭಾಗವಾಗಿರಲಿಲ್ಲ. ಆದರೆ, ಯುವ ಬೌಲರ್ ಗುಂಪು-ಹಂತದ ಪಂದ್ಯದಲ್ಲಿ ದುಬಾರಿ ಎನಿಸಿಕೊಂಡರು. ವಿಶೇಷವಾಗಿ ಅವೇಶ್ ರನ್ ರೇಟ್ ತೀರ ದುಬಾರಿಯಾಗಿತ್ತು. ಪಾಕಿಸ್ತಾನ ವಿರುದ್ಧದ ಮೊದಲ ಪಂದ್ಯದಲ್ಲಿ ಅವೇಶ್ ಖಾನ್ 2 ಓವರ್‌ಗಳಲ್ಲಿ 19 ರನ್ ನೀಡಿ 1 ವಿಕೆಟ್ ಪಡೆದರೆ, ಹಾಂಕಾಂಗ್ ವಿರುದ್ಧದ ಪಂದ್ಯದಲ್ಲಿ ಅವೇಶ್ ಖಾನ್ 4 ಓವರ್‌ಗಳಲ್ಲಿ 53 ರನ್ ನೀಡಿ ದುಬಾರಿಯಾದರು. ಅಂತಹ ಸಂದರ್ಭಗಳಲ್ಲಿ, ಟಿ20 ವಿಶ್ವಕಪ್ ತಂಡದಲ್ಲಿ ಅವೇಶ್ ಖಾನ್ ಅವರ ಉಪಸ್ಥಿತಿಯನ್ನು ಪ್ರಶ್ನಿಸಲಾಗಿದೆ.
ರವಿಚಂದ್ರನ್ ಅಶ್ವಿನ್
ಭಾರತದ ಆಫ್-ಸ್ಪಿನ್ನರ್ ಅಶ್ವಿನ್ ಏಷ್ಯಾಕಪ್ 2022 ರಲ್ಲಿ ಕೇವಲ 1 ಪಂದ್ಯದಲ್ಲಿ ಅವಕಾಶ ಪಡೆದರು. ಈ ದಿಗ್ಗಜ ಆಫ್ ಸ್ಪಿನ್ನರ್ ಶ್ರೀಲಂಕಾ ವಿರುದ್ಧ 4 ಓವರ್‌ಗಳಲ್ಲಿ 32 ರನ್ ಗಳಿಸಿ 1 ವಿಕೆಟ್ ಪಡೆದರು. ಭಾರತ ತಂಡದಲ್ಲಿ ಯುಜ್ವೇಂದ್ರ ಚಹಾಲ್ ಮತ್ತು ರವಿ ಬಿಷ್ಣೋಯ್ ಅವರಂತಹ ಲೆಗ್ ಸ್ಪಿನ್ನರ್‌ಗಳಿದ್ದಾರೆ. ಹಾಗಾಗಿ ರವಿ ಅಶ್ವಿನ್ ಟಿ20 ವಿಶ್ವಕಪ್‌ನ ಭಾಗವಾಗುತ್ತಾರೆಯೇ ಎಂದು ಹೇಳುವುದು ಕಷ್ಟ. ರವಿ ಅಶ್ವಿನ್ ಅಗತ್ಯವಿದ್ದರೆ ಬ್ಯಾಟಿಂಗ್ ಮಾಡುವ ಸಾಮಥ್ರ್ಯ ಕೂಡ ಹೊಂದಿದ್ದಾರೆ. ಆದರೆ ಅಶ್ವಿನ್ ಬೌಲಿಂಗ್ನಲ್ಲಿ ಯಾವುದೇ ಮ್ಯಾಜಿಕ್ ಕಾಣುತ್ತಿಲ್ಲ. ಹೀಗಾಗಿ ಟೀಂ ಇಂಡಿಯಾದಲ್ಲಿ ಯುವ ಆಟಗಾರರ ಪೈಪೋಟಿ ಹೆಚ್ಚಾಗಿರುವುದರಿಂದ ತಂಡದಲ್ಲಿ ಅಶ್ವಿನ್ ಅಧ್ಯಾಯ ಮುಗಿದಂತೆ ತೋರುತ್ತಿದೆ.
ಅರ್ಷದೀಪ್ ಸಿಂಗ್
ಪಾಕಿಸ್ತಾನದ ವಿರುದ್ಧ ಮೊಹಮ್ಮದ್ ಆಸಿಫ್ ಹಿಡಿದ ಕ್ಯಾಚ್ ಅನ್ನು ಕೈಬಿಟ್ಟಿದ್ದಕ್ಕಾಗಿ ಅರ್ಷದೀಪ್ ಸಿಂಗ್ ಅವರನ್ನು ಸಾಮಾಜಿಕ ಮಾಧ್ಯಮದಲ್ಲಿ ಟ್ರೋಲ್ ಮಾಡಲಾಗಿತ್ತು. ಪಾಕಿಸ್ತಾನ ಮತ್ತು ಶ್ರೀಲಂಕಾ ವಿರುದ್ಧದ ಡೆತ್ ಓವರ್‌ಗಳಲ್ಲಿ ಯುವ ವೇಗದ ಬೌಲರ್ ಅದ್ಭುತವಾಗಿ ಬೌಲಿಂಗ್ ಮಾಡಿದರೂ, ಜಸ್ಪ್ರೀತ್ ಬುಮ್ರಾ ಪುನರಾಗಮನದ ನಂತರ ಅರ್ಷ್‌ದೀಪ್ ಸಿಂಗ್ ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆಯುತ್ತಾರೆಯೇ ಎಂಬುದು ಪ್ರಶ್ನೆ. ಏತನ್ಮಧ್ಯೆ, 2022 ರ ಏಷ್ಯಾಕಪ್‌ನಲ್ಲಿ ಅರ್ಷದೀಪ್ ಸಿಂಗ್ ಅವರ ಪ್ರದರ್ಶನದ ಬಗ್ಗೆ ಮಾತನಾಡುವುದಾದರೆ, ಪಾಕಿಸ್ತಾನ ವಿರುದ್ಧದ ಮೊದಲ ಪಂದ್ಯದಲ್ಲಿ, ಇಬ್ಬರೂ ಆಟಗಾರರನ್ನು ಬಲಿ ಪಡೆದು, 3.5 ಓವರ್‌ಗಳಲ್ಲಿ 33 ರನ್ ನೀಡಿದರು. ಹಾಂಕಾಂಗ್ ವಿರುದ್ಧ 4 ಓವರ್‌ಗಳಲ್ಲಿ 44 ರನ್‌ಗಳಿಗೆ 1 ವಿಕೆಟ್ ಪಡೆದರೆ, ಪಾಕಿಸ್ತಾನ ವಿರುದ್ಧ ಸೂಪರ್-4 ಸುತ್ತಿನ ಪಂದ್ಯದಲ್ಲಿ 3.5 ಓವರ್‌ಗಳಲ್ಲಿ 27 ರನ್‌ಗಳಿಗೆ 1 ವಿಕೆಟ್ ಪಡೆದರು. ಶ್ರೀಲಂಕಾ ವಿರುದ್ಧ 3.5 ಓವರ್‌ಗಳಲ್ಲಿ 40 ರನ್ ನೀಡಿ ದುಬಾರಿಯಾದರು.