AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Virat Kohli: ಟಿ20 ಕ್ರಿಕೆಟ್​ನಲ್ಲಿ ರೋಹಿತ್ ದಾಖಲೆ ಮುರಿದ ಕೊಹ್ಲಿ; ಹೊಸ ದಾಖಲೆ ಯಾವುದು ಗೊತ್ತಾ?

Virat Kohli: ಭಾರತದ ಶ್ರೇಷ್ಠ ಮಾಜಿ ಬ್ಯಾಟ್ಸ್‌ಮನ್ ಸಚಿನ್ ತೆಂಡೂಲ್ಕರ್ ಶತಕಗಳ ಪಟ್ಟಿಯಲ್ಲಿ ಮುಂದಿದ್ದಾರೆ. ಸಚಿನ್ ತೆಂಡೂಲ್ಕರ್ ಬಳಿಕ ಈಗ ಕೊಹ್ಲಿ ಭಾರತೀಯ ಆಟಗಾರರ ಪಟ್ಟಿಯಲ್ಲಿ 2ನೇ ಸ್ಥಾನ ಪಡೆದಿದ್ದಾರೆ.

Virat Kohli: ಟಿ20 ಕ್ರಿಕೆಟ್​ನಲ್ಲಿ ರೋಹಿತ್ ದಾಖಲೆ ಮುರಿದ ಕೊಹ್ಲಿ; ಹೊಸ ದಾಖಲೆ ಯಾವುದು ಗೊತ್ತಾ?
ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಕೂಡ ಟಿ20 ಶ್ರೇಯಾಂಕದಲ್ಲಿ ಸುಧಾರಣೆ ಕಂಡಿದ್ದು, ರೋಹಿತ್ ಶರ್ಮಾ 13ನೇ ಸ್ಥಾನ ಹಾಗೂ ವಿರಾಟ್ ಕೊಹ್ಲಿ 15ನೇ ಸ್ಥಾನಕ್ಕೆ ತಲುಪಿದ್ದಾರೆ.
TV9 Web
| Edited By: |

Updated on:Sep 09, 2022 | 8:49 PM

Share

ನಿನ್ನೆ ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ (Virat Kohli) 71ನೇ ಶತಕ ಸಿಡಿಸಿದ್ದರು. ಕಳೆದ ಮೂರು ವರ್ಷಗಳಲ್ಲಿ ಕೊಹ್ಲಿ ಅನೇಕ ಬಾರಿ ಶತಕದ ಸಮೀಪ ಬಂತು ವಿಕೆಟ್ ಒಪ್ಪಿಸಿದರು. ಹಾಗಾಗಿ ಅಭಿಮಾನಿಗಳು ಕೂಡ ಅವರ ಪ್ರದರ್ಶನದ ಬಗ್ಗೆ ನಿರಾಶೆಗೊಂಡಿದ್ದರು. ಆದರೆ ನಿನ್ನೆ ಅವರು 61 ಎಸೆತಗಳಲ್ಲಿ 122 ರನ್ ಗಳಿಸಿ ಅಭಿಮಾನಿಗಳ ಮುಖದಲ್ಲಿ ಮಂದಹಾಸ ಮೂಡಿಸಿದರು. ಹೀಗಾಗಿ ನಿನ್ನೆಯಿಂದಲೇ ಸಾಮಾಜಿಕ ಜಾಲತಾಣಗಳಲ್ಲಿ ಕೊಹ್ಲಿ ಹೆಚ್ಚು ಚರ್ಚೆಯಾಗುತ್ತಿದ್ದು, ಅವರು ನಿನ್ನೆಯ ಪಂದ್ಯದಲ್ಲಿ ಮಾಡಿದ ದಾಖಲೆಗಳು ಒಂದೊಂದಾಗಿ ಹೊರಬರುತ್ತಿವೆ.

ಭಾರತದ ಶ್ರೇಷ್ಠ ಮಾಜಿ ಬ್ಯಾಟ್ಸ್‌ಮನ್ ಸಚಿನ್ ತೆಂಡೂಲ್ಕರ್ ಶತಕಗಳ ಪಟ್ಟಿಯಲ್ಲಿ ಮುಂದಿದ್ದಾರೆ. ಸಚಿನ್ ತೆಂಡೂಲ್ಕರ್ ಬಳಿಕ ಈಗ ಕೊಹ್ಲಿ ಭಾರತೀಯ ಆಟಗಾರರ ಪಟ್ಟಿಯಲ್ಲಿ 2ನೇ ಸ್ಥಾನ ಪಡೆದಿದ್ದಾರೆ. ನಿನ್ನೆಯ ಶತಕ ಸಿಡಿಸಿದ ಕಾರಣ ವಿರಾಟ್ ಹೆಸರಿನಲ್ಲಿ ಹೊಸ ದಾಖಲೆ ಸೃಷ್ಟಿಯಾಗಿದೆ. ವಿರಾಟ್ ನಿನ್ನೆ ತಮ್ಮ ಅತ್ಯಧಿಕ ಟಿ20 ರನ್‌ಗಳೊಂದಿಗೆ ರೋಹಿತ್ ಶರ್ಮಾ ಅವರನ್ನು ಹಿಂದಿಕ್ಕಿದ್ದಾರೆ. ಈ ಹಿಂದೆ ರೋಹಿತ್ ಶರ್ಮಾ ಟಿ20 ಕ್ರಿಕೆಟ್​ನಲ್ಲಿ 118 ರನ್​ಗಳ ದಾಖಲೆ ಹೊಂದಿದ್ದರು, ಅದನ್ನು ಕೊಹ್ಲಿ ಮುರಿದಿದ್ದಾರೆ.

T20 ಅಂತರಾಷ್ಟ್ರೀಯ ಪಂದ್ಯಗಳಲ್ಲಿ ಅತಿ ಹೆಚ್ಚು ರನ್ ಗಳಿಸಿದ ಭಾರತೀಯ ಆಟಗಾರರ ಪಟ್ಟಿ

  1. ವಿರಾಟ್ ಕೊಹ್ಲಿ – 122* vs ಅಫ್ಘಾನಿಸ್ತಾನ, 2022
  2. ರೋಹಿತ್ ಶರ್ಮಾ – 118 ವಿರುದ್ಧ ಶ್ರೀಲಂಕಾ, 2017
  3. ಸೂರ್ಯಕುಮಾರ್ ಯಾದವ್ – 117 ವಿರುದ್ಧ ಇಂಗ್ಲೆಂಡ್, 2022
  4. ರೋಹಿತ್ ಶರ್ಮಾ – 111* ವಿರುದ್ಧ ವೆಸ್ಟ್ ಇಂಡೀಸ್, 2018

ಕೆಎಲ್ ರಾಹುಲ್ – 110* ವಿರುದ್ಧ ವೆಸ್ಟ್ ಇಂಡೀಸ್, 2016

ಟಿ20ಯಲ್ಲಿ ಶತಕ ಸಿಡಿಸಿದ ಭಾರತೀಯ ಆಟಗಾರರು

  1. ರೋಹಿತ್ ಶರ್ಮಾ – 4
  2. ಕೆಎಲ್ ರಾಹುಲ್ – 2
  3. ಸುರೇಶ್ ರೈನಾ – 1
  4. ಹರ್ಮನ್‌ಪ್ರೀತ್ ಕೌರ್ – 1
  5. ದೀಪಕ್ ಹೂಡಾ – 1
  6. ಸೂರ್ಯಕುಮಾರ್ ಯಾದವ್ – 1
  7. ವಿರಾಟ್ ಕೊಹ್ಲಿ – 1

Published On - 8:48 pm, Fri, 9 September 22

Follow Us
‘ಬುಲ್ಲಿ’ ಸಿನಿಮಾದ ಸುದ್ದಿಗೋಷ್ಠಿಯಲ್ಲಿ ಪುನೀತ್ ನೆನಪು ಮಾಡಿಕೊಂಡ ಊರ್ವಶಿ
‘ಬುಲ್ಲಿ’ ಸಿನಿಮಾದ ಸುದ್ದಿಗೋಷ್ಠಿಯಲ್ಲಿ ಪುನೀತ್ ನೆನಪು ಮಾಡಿಕೊಂಡ ಊರ್ವಶಿ
ಸಂಪುಟ ವಿಸ್ತರಣೆ ಕ್ಲೈಮ್ಯಾಕ್ಸ್: ಕುತೂಹಲ ಮೂಡಿಸಿದ ರಾಹುಲ್ ಗಾಂಧಿ ನಡೆ
ಸಂಪುಟ ವಿಸ್ತರಣೆ ಕ್ಲೈಮ್ಯಾಕ್ಸ್: ಕುತೂಹಲ ಮೂಡಿಸಿದ ರಾಹುಲ್ ಗಾಂಧಿ ನಡೆ
ಯಾದಗಿರಿಯಲ್ಲಿ ಒಂದೂವರೆ ಗಂಟೆ ಅಬ್ಬರಿಸಿದ ಮಳೆ: ನಿಟ್ಟುಸಿರುವ ಬಿಟ್ಟ ರೈತರು
ಯಾದಗಿರಿಯಲ್ಲಿ ಒಂದೂವರೆ ಗಂಟೆ ಅಬ್ಬರಿಸಿದ ಮಳೆ: ನಿಟ್ಟುಸಿರುವ ಬಿಟ್ಟ ರೈತರು
ಕನ್ನಡ ಚಿತ್ರರಂಗಕ್ಕೆ ಮರಳಿದ ನಟಿ ಊರ್ವಶಿ: ಶೀರ್ಷಿಕೆ, ಫಸ್ಟ್ ಲುಕ್ ಪೋಸ್ಟರ್
ಕನ್ನಡ ಚಿತ್ರರಂಗಕ್ಕೆ ಮರಳಿದ ನಟಿ ಊರ್ವಶಿ: ಶೀರ್ಷಿಕೆ, ಫಸ್ಟ್ ಲುಕ್ ಪೋಸ್ಟರ್
ಬೆಂಗಳೂರಿನ ಬ್ಯಾಡರಹಳ್ಳಿಯಲ್ಲಿ ಐದನೇ ಬಾರಿ ಚಿರತೆ ಪ್ರತ್ಯಕ್ಷ!
ಬೆಂಗಳೂರಿನ ಬ್ಯಾಡರಹಳ್ಳಿಯಲ್ಲಿ ಐದನೇ ಬಾರಿ ಚಿರತೆ ಪ್ರತ್ಯಕ್ಷ!
ತಾಯಿ ನಮ್ಮನ್ನಗಲಿದ್ದಾರೆ ಎನ್ನುವುದು ನೆನಸಿಕೊಳ್ಳಲಿಕ್ಕೂ ಸಾಧ್ಯವಿಲ್ಲ: hdk
ತಾಯಿ ನಮ್ಮನ್ನಗಲಿದ್ದಾರೆ ಎನ್ನುವುದು ನೆನಸಿಕೊಳ್ಳಲಿಕ್ಕೂ ಸಾಧ್ಯವಿಲ್ಲ: hdk
37 ಟಿಎಂಸಿ ಸಾಮರ್ಥ್ಯದ ಹೇಮಾವತಿಯಲ್ಲಿ ಉಳಿದಿದ್ದು ಕೇವಲ 24 ಟಿಎಂಸಿ
37 ಟಿಎಂಸಿ ಸಾಮರ್ಥ್ಯದ ಹೇಮಾವತಿಯಲ್ಲಿ ಉಳಿದಿದ್ದು ಕೇವಲ 24 ಟಿಎಂಸಿ
ಕಾವೇರಿ ಜಲ ವಿವಾದ: ಸಂಕಷ್ಟ ಸೂತ್ರ ಪಾಲಿಸುವಂತೆ CWRC ಸಲಹೆ
ಕಾವೇರಿ ಜಲ ವಿವಾದ: ಸಂಕಷ್ಟ ಸೂತ್ರ ಪಾಲಿಸುವಂತೆ CWRC ಸಲಹೆ
ಭೋಪಾಲ್‌ನಲ್ಲಿ ಹಿಂಸಾಚಾರಕ್ಕೆ ತಿರುಗಿದ ರೈತರ ಪ್ರತಿಭಟನೆ
ಭೋಪಾಲ್‌ನಲ್ಲಿ ಹಿಂಸಾಚಾರಕ್ಕೆ ತಿರುಗಿದ ರೈತರ ಪ್ರತಿಭಟನೆ
ಕುತೂಹಲಕಾರಿ ಘಟ್ಟ ತಲುಪಿದ ಸಂಪುಟ ವಿಸ್ತರಣೆ ಕಸರತ್ತು
ಕುತೂಹಲಕಾರಿ ಘಟ್ಟ ತಲುಪಿದ ಸಂಪುಟ ವಿಸ್ತರಣೆ ಕಸರತ್ತು