IND vs WI T20: ಕೊಹ್ಲಿ-ಪಂತ್ ಔಟ್: 3ನೇ ಟಿ20ಗೆ ಭಾರತದಲ್ಲಿ ದೊಡ್ಡ ಬದಲಾವಣೆ: ಇಲ್ಲಿದೆ ಸಂಭಾವ್ಯ ಪ್ಲೇಯಿಂಗ್ XI

| Updated By: Vinay Bhat

Updated on: Feb 20, 2022 | 9:00 AM

India Playing XI 3rdd T20 vs West Indies: ವೆಸ್ಟ್ ಇಂಡೀಸ್ ವಿರುದ್ಧದ ಮೂರನೇ ಟಿ20 ಪಂದ್ಯಕ್ಕೆ ರಿಷಭ್ ಪಂತ್ ಮತ್ತು ವಿರಾಟ್ ಕೊಹ್ಲಿ ಅಲಭ್ಯರಾಗಿರುವ ಕಾರಣ ಇವರ ಬದಲು ಯುವ ಪ್ರತಿಭೆಗಳಿಗೆ ಪ್ಲೇಯಿಂಗ್‌ ಇಲೆವೆನ್‌ನಲ್ಲಿ ಆಡುವ ಅವಕಾಶ ಸಿಗಲಿದೆ.

IND vs WI T20: ಕೊಹ್ಲಿ-ಪಂತ್ ಔಟ್: 3ನೇ ಟಿ20ಗೆ ಭಾರತದಲ್ಲಿ ದೊಡ್ಡ ಬದಲಾವಣೆ: ಇಲ್ಲಿದೆ ಸಂಭಾವ್ಯ ಪ್ಲೇಯಿಂಗ್ XI
India Playing XI vs WI 3rd T20
Follow us on

ವೆಸ್ಟ್ ಇಂಡೀಸ್ ವಿರುದ್ಧದ ಮೊದಲೆರಡು ಟಿ20 ಪಂದ್ಯದಲ್ಲಿ ಗೆದ್ದು ಬೀಗಿರುವ ಭಾರತ (India vs West Indies) ತಂಡ ಇದೀಗ  ಅಂತಿಮ ಮೂರನೇ ಕದನಕ್ಕೆ ಸಜ್ಜಾಗಿದೆ. ಈಗಾಗಲೇ ಸರಣಿ ವಶಪಡಿಸಿಕೊಂಡಿರುವ ರೋಹಿತ್ ಶರ್ಮಾ (Rohit Sharma) ಬಳಗ ವೈಟ್​ವಾಷ್ ಮಾಡಲು ಎದುರು ನೋಡುತ್ತಿದೆ. ಈಡನ್ ಗಾರ್ಡನ್ಸ್ ಮೈದಾನ ಈ ರೋಚಕ ಕದನಕ್ಕೆ ಸಾಕ್ಷಿಯಾಗಲಿದ್ದು, ಹೈವೋಲ್ಟೇಜ್ ಪಂದ್ಯ ನಿರೀಕ್ಷಿಸಲಾಗಿದೆ. ಇನ್ನೊಂದೆಡೆ ಭಾರತಕ್ಕೆ ಆಗಮಿಸಿದ ಬಳಿಕ ಗೆಲುವಿನ ಮುಖವನ್ನೇ ಕಾಣದ ವೆಸ್ಟ್‌ ಇಂಡೀಸ್‌ಗೆ ಇದು ಕೊನೆಯ ಅವಕಾಶ. ಈ ಪಂದ್ಯವನ್ನು ಗೆದ್ದರೆ ಒಂದಿಷ್ಟು ಪ್ರತಿಷ್ಠೆ ಗಳಿಸ ಬಹುದು. ಇತ್ತ ಟೀಮ್ ಇಂಡಿಯಾದಲ್ಲಿ ಕೊನೇ ಪಂದ್ಯಕ್ಕೆ ದೊಡ್ಡ ಬದಲಾವಣೆ ಖಚಿತವಾಗಿದೆ. ಯಾಕಂದ್ರೆ ದ್ವಿತೀಯ ಟಿ20ಯಲ್ಲಿ ಅರ್ಧಶತಕಗಳನ್ನು ಸಿಡಿಸಿದ್ದ ವಿರಾಟ್‌ ಕೊಹ್ಲಿ(52) ಹಾಗೂ ರಿಷಭ್‌ ಪಂತ್(52*) ಇಬ್ಬರೂ ಬಯೋ ಬಬಲ್‌ ತೊರೆದಿದ್ದಾರೆ. ಸತತವಾಗಿ ಕ್ರಿಕೆಟ್ ಆಡುತ್ತಿರುವ ಹಿನ್ನೆಲೆಯಲ್ಲಿ ಇವರಿಗೆ ಬಿಸಿಸಿಐ ವಿಶ್ರಾಂತಿ ನೀಡಿದ್ದು, ಇಂದಿನ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ. ಹೀಗಾಗಿ ಇವರ ಬದಲು ಯುವ ಪ್ರತಿಭೆಗಳಿಗೆ ಪ್ಲೇಯಿಂಗ್‌ ಇಲೆವೆನ್‌ನಲ್ಲಿ (India Playing XI) ಆಡುವ ಅವಕಾಶ ಸಿಗಲಿದೆ.

ರುತುರಾಜ್ ಕಣಕ್ಕೆ:

ಮೊದಲೆರಡು ಟಿ20 ಪಂದ್ಯಗಳಲ್ಲಿ ಇಶಾನ್ ಕಿಶನ್ ಅವರು ನಾಯಕ ರೋಹಿತ್ ಅವರೊಂದಿಗೆ ಇನಿಂಗ್ಸ್ ಆರಂಭಿಸಿದ್ದರು. ಆದರೆ ಯಶಸ್ವಿಯಾಗಿರಲಿಲ್ಲ. ಐಪಿಎಲ್‌ ನಲ್ಲಿ ದುಬಾರಿ ಆಟಗಾರನಾಗಿ ಹೊರ ಹೊಮ್ಮಿದ್ದ ಇಶಾನ್, ವಿಂಡೀಸ್ ಎದುರಿನ ಮೊದಲ ಪಂದ್ಯದಲ್ಲಿ 42 ಎಸೆತಗಳಲ್ಲಿ 35 ರನ್ ಮತ್ತು ಎರಡನೇ ಪಂದ್ಯದಲ್ಲಿ 10 ಎಸೆತಗಳಲ್ಲಿ ಎರಡು ರನ್ ಗಳಿಸಿದ್ದರು. ಇದರಿಂದಾಗಿ ರುತುರಾಜ್ ಆರಂಭಿಕನಾಗಿ ಕಣಕ್ಕಿಳಿಯುವ ಸಾಧ್ಯತೆ ಹೆಚ್ಚಿದೆ. ಆಗ ಇಶಾನ್ ಮಧ್ಯಮ ಕ್ರಮಾಂಕದಲ್ಲಿ ಆಡಿ ವಿಕೆಟ್ ಕೀಪರ್ ಸ್ಥಾನ ಪಡೆದುಕೊಳ್ಳಬಹುದು.

ಕೊಹ್ಲಿ ಜಾಗಕ್ಕೆ ಅಯ್ಯರ್:

ವಿರಾಟ್ ಕೊಹ್ಲಿ ಅಲಭ್ಯರಾಗಿರುವ ಕಾರಣ ಇವರ ಮೂರನೇ ಕ್ರಮಾಂಕದಲ್ಲಿ ಶ್ರೇಯಸ್ ಅಯ್ಯರ್ ಆಡುವುದು ಖಚಿತ. ಮೊದಲೆರಡು ಪಂದ್ಯದಲ್ಲಿ ಇವರಿಗೆ ಅವಕಾಶವೇ ಸಿಗಲಿಲ್ಲ. ಹೀಗಾಗಿ ಇಂದು ಆಡುವ ಬಳಗದಲ್ಲಿ ಸ್ಥಾನ ಪಡೆದು ಮಹತ್ವದ ಪಾತ್ರ ನಿರ್ವಹಿಸಲಿದ್ದಾರೆ. ಸೂರ್ಯಕುಮಾರ್ ಯಾದವ್ ಎಂದಿನಂತೆ 4ನೇ ಕ್ರಮಾಂಕದಲ್ಲಿ ಆಡಿದರೆ, ಇಶಾನ್ ಕಿಶನ್ 5ನೇ ಸ್ಥಾನದಲ್ಲಿ ಬ್ಯಾಟ್ ಬೀಸಲಿದ್ದಾರೆ. ಭರವಸೆ ಮೂಡಿಸಿರುವ ಆಲ್ರೌಂಡರ್ ವೆಂಕಟೇಶ್ ಅಯ್ಯರ್​ಗೆ 6ನೇ ಕ್ರಮಾಂಕ ಫಿಕ್ಸ್ ಆಗಿದೆ.

ಆವೇಶ್ ಖಾನ್ ಪದಾರ್ಪಣೆ:

ಅವಕಾಶಕ್ಕಾಗಿ ಕಾಯುತ್ತಿರುವ ಐಪಿಎಲ್​ನ ಸ್ಟಾರ್ ವೇಗಿ ಆವೇಶ್ ಖಾನ್​ ಸ್ಥಾನ ಪಡೆಯಬಹುದು ಸಂಭವವಿದೆ. ದೀಪಕ್ ಚಹರ್ ಅಥವಾ ಕಳೆದ ಪಂದ್ಯದಲ್ಲಿ ದುಬಾರಿಯಾಗಿದ್ದ ಹರ್ಷಲ್ ಪಟೇಲ್​ರನ್ನು ಕೈಬಿಡುವ ಸಾಧ್ಯತೆ ಇದ್ದು ಇವರ ಜಾಗಕ್ಕೆ ಆವೇಶ್ ಆಯ್ಕೆ ಆಗಬಹುದು. ಹೀಗಾದಲ್ಲಿ ಮತ್ತೊಬ್ಬ ಆಟಗಾರ ಭಾರತ ಪರ ಅಂತರರಾಷ್ಟ್ರೀಯ ಕ್ರಿಕೆಟ್​ಗೆ ಪದಾರ್ಪಣೆ ಮಾಡಲಿದ್ದಾರೆ. ಮೊದಲ ಪಂದ್ಯದಲ್ಲಿ ರವಿ ಬಿಷ್ಟೋಯ್ ಟೀಮ್ ಇಂಡಿಯಾ ಪರ ಚೊಚ್ಚಲ ಪಂದ್ಯವನ್ನಾಡಿದ್ದರು. ಇದರ ನಡುವೆ ಯುಜ್ವೇಂದ್ರ ಚಹಲ್​ಗೆ ವಿಶ್ರಾಂತಿ ನೀಡಿ ಕುಲ್ದೀಪ್ ಯಾದವ್​ಗೆ ಅವಕಾಶ ನೀಡಿದರೂ ಅಚ್ಚರ ಪಡಬೇಕಿಲ್ಲ.

ಇತ್ತ ವೆಸ್ಟ್ ಇಂಡೀಸ್ ತಂಡದ ಪರ ಗಾಯದ ಸಮಸ್ಯೆಯಿಂದ ಚೇತರಿಸಿಕೊಂಡು ಕಳೆದ ಪಂದ್ಯದಲ್ಲಿ ಆಡಿದ ಜೇಸನ್ ಹೋಲ್ಡರ್ ಯಾವ ಮ್ಯಾಜಿಕ್ ಕೂಡ ಮಾಡಲಿಲ್ಲ. ಹೀಗಾಗಿ ಬ್ಯಾಟಿಂಗ್ ಅಥವಾ ಬೌಲಿಂಗ್ ವಿಭಾಗದಲ್ಲಿ ಬದಲಾವಣೆ ನಿರೀಕ್ಷಿಸಲಾಗಿದೆ. ನಿಕೋಲಸ್ ಪೂರನ್ ಫಾರ್ಮ್​ನಲ್ಲಿರುವುದು ಕೆರಿಬಿಯನ್ನರ ಮೊಗದಲ್ಲಿ ಮಂದಹಾಸ ಮೂಡಿದೆ.

ಭಾರತ ಸಂಭಾವ್ಯ ಪ್ಲೇಯಿಂಗ್ XI: ರುತುರಾಜ್ ಗಾಯಕ್ವಾಡ್, ರೋಹಿತ್ ಶರ್ಮಾ (ನಾಯಕ), ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್ (ವಿಕೆಟ್ ಕೀಪರ್), ವೆಂಕಟೇಶ್ ಅಯ್ಯರ್, ದೀಪಕ್ ಚಹರ್, ಭುವನೇಶ್ವರ್ ಕುಮಾರ್, ರವಿ ಬಿಷ್ಟೋಯ್, ಕುಲ್ದೀಪ್ ಯಾದವ್, ಆವೇಶ್ ಖಾನ್.

IND vs WI T20: ಇಂದು ಭಾರತ- ವೆಸ್ಟ್ ಇಂಡೀಸ್ ಅಂತಮ ಟಿ20: ವೈಟ್​ವಾಷ್​ ಮಾಡುವತ್ತ ರೋಹಿತ್ ಚಿತ್ತ