IND vs WI T20: ಇಂದು ಭಾರತ- ವೆಸ್ಟ್ ಇಂಡೀಸ್ ಅಂತಿಮ ಟಿ20: ವೈಟ್ವಾಷ್ ಮಾಡುವತ್ತ ರೋಹಿತ್ ಚಿತ್ತ
India vs West Indies, 3rd T20I: ಮೊದಲ ಎರಡೂ ಟಿ20 ಪಂದ್ಯವನ್ನು ಗೆದ್ದು ಸರಣಿ ವಶಪಡಿಸಿಕೊಂಡಿರುವ ಟೀಮ್ ಇಂಡಿಯಾ ಇದೀಗ ಕ್ಲೀನ್ಸ್ವೀಪ್ ಮೇಲೆ ಕಣ್ಣಿಟ್ಟಿದೆ. ಇಂದು ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವೆ ಅಂತಿಮ ಮೂರನೇ ಏಕದಿನ ಪಂದ್ಯ ನಡೆಯಲಿದೆ. ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನ ಇದಕ್ಕೆ ಸಜ್ಜಾಗುತ್ತಿದ್ದು, ಸಾಕಷ್ಟು ಕುತೂಹಲ ಕೆರಳಿಸಿದೆ.
ಇಂದು ಭಾರತ ಹಾಗೂ ವೆಸ್ಟ್ ಇಂಡೀಸ್ (India vs West Indies) ನಡುವೆ ಅಂತಿಮ ಮೂರನೇ ಏಕದಿನ ಪಂದ್ಯ ನಡೆಯಲಿದೆ. ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನ ಇದಕ್ಕೆ ಸಜ್ಜಾಗುತ್ತಿದ್ದು, ಸಾಕಷ್ಟು ಕುತೂಹಲ ಕೆರಳಿಸಿದೆ. ಮೊದಲ ಎರಡೂ ಟಿ20 ಪಂದ್ಯವನ್ನು ಗೆದ್ದು ಸರಣಿ ವಶಪಡಿಸಿಕೊಂಡಿರುವ ಟೀಮ್ ಇಂಡಿಯಾ ಇದೀಗ ಕ್ಲೀನ್ಸ್ವೀಪ್ ಮೇಲೆ ಕಣ್ಣಿಟ್ಟಿದೆ. ಇತ್ತ ಏಕದಿನ ಸೇರಿದಂತೆ ಈ ಪ್ರವಾಸದಲ್ಲಿ ಒಂದೇ ಒಂದು ಗೆಲುವು ಕಾಣದ ಕೆರಿಬಿಯನ್ನರು ಕನಿಷ್ಠ ಮಾನ ಉಳಿಸಿಕೊಳ್ಳಲು ಕೊನೇ ಪಂದ್ಯವನ್ನಾದರೂ ಗೆಲ್ಲುವ ಯೋಜನೆಯಲ್ಲಿದೆ. ಭಾರತ (India) ಈ ಪಂದ್ಯ ಗೆದ್ದಿದ್ದೆ ಆದರೆ ಹೊಸ ಇತಿಹಾಸ ನಿರ್ಮಿಸಿಲಿದೆ. ರೋಹಿತ್ ಶರ್ಮಾ ಪರಿಪೂರ್ಣ ನಾಯಕನಾಗಿ ಆಡಿದ ಮೂರೂ ಸರಣಿಯಲ್ಲಿ ವೈಟ್ವಾಷ್ ಗೈದ ಸಾಧನೆ ಮಾಡಲಿದ್ದಾರೆ. ಜೊತೆಗೆ ಟೀಮ್ ಇಂಡಿಯಾ ಟಿ20 ಕ್ರಿಕೆಟ್ನಲ್ಲಿ (T20I Cricket) ನಂಬರ್ ಒನ್ ಪಟ್ಟಕ್ಕೇರುವ ಸಾಧ್ಯತೆ ಕೂಡ ಇದೆ.
ಕೊಹ್ಲಿ-ಪಂತ್ ಅಲಭ್ಯ:
ಶುಕ್ರವಾರ ಇದೇ ಮೈದಾನದಲ್ಲಿ ನಡೆದಿದ್ದ ಎರಡನೇ ಟಿ20 ಪಂದ್ಯದಲ್ಲಿ ಭಾರತ ತಂಡ 8 ರನ್‌ಗಳಿಂದ ರೋಚಕ ಗೆಲುವು ಪಡೆದಿತ್ತು. ಬ್ಯಾಟ್ಸ್‌ಮನ್‌ಗಳು ಉತ್ತಮ ಪ್ರದರ್ಶನ ತೋರಿದರೆ, ಬೌಲರ್ಗಳ ಮತ್ತು ಫೀಲ್ಡರ್ಗಳ ಕಳಪೆ ಪ್ರದರ್ಶನದ ನಡುವೆಯೂ ಅಂತಿಮ ಹಂತದಲ್ಲಿ ಗೆಲುವು ಕಂಡಿತು. ಈ ಪಂದ್ಯದಲ್ಲಿ ಅರ್ಧಶತಕಗಳನ್ನು ಸಿಡಿಸಿದ್ದ ವಿರಾಟ್ ಕೊಹ್ಲಿ(52) ಹಾಗೂ ರಿಷಭ್ ಪಂತ್(52*) ಇಬ್ಬರೂ ಬಯೋ ಬಬಲ್ ತೊರೆದಿದ್ದಾರೆ. ಸತತವಾಗಿ ಕ್ರಿಕೆಟ್ ಆಡುತ್ತಿರುವ ಹಿನ್ನೆಲೆಯಲ್ಲಿ ಇವರಿಗೆ ಬಿಸಿಸಿಐ ವಿಶ್ರಾಂತಿ ನೀಡಿದ್ದು, ಇಂದಿನ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ. ಹೀಗಾಗಿ ಇವರ ಬದಲು ಯುವ ಪ್ರತಿಭೆಗಳಿಗೆ ಪ್ಲೇಯಿಂಗ್ ಇಲೆವೆನ್‌ನಲ್ಲಿ ಆಡುವ ಅವಕಾಶ ಸಿಗಲಿದೆ.
ಕಿಶನ್ ವಿಕೆಟ್ ಕೀಪರ್:
ಮೊದಲೆರಡು ಟಿ20 ಪಂದ್ಯಗಳಲ್ಲಿ ಇಶಾನ್ ಕಿಶನ್ ಅವರು ನಾಯಕ ರೋಹಿತ್ ಅವರೊಂದಿಗೆ ಇನಿಂಗ್ಸ್ ಆರಂಭಿಸಿದ್ದರು. ಆದರೆ ಯಶಸ್ವಿಯಾಗಿರಲಿಲ್ಲ. ಐಪಿಎಲ್ ನಲ್ಲಿ ದುಬಾರಿ ಆಟಗಾರನಾಗಿ ಹೊರ ಹೊಮ್ಮಿದ್ದ ಇಶಾನ್, ವಿಂಡೀಸ್ ಎದುರಿನ ಮೊದಲ ಪಂದ್ಯದಲ್ಲಿ 42 ಎಸೆತಗಳಲ್ಲಿ 35 ರನ್ ಮತ್ತು ಎರಡನೇ ಪಂದ್ಯದಲ್ಲಿ 10 ಎಸೆತಗಳಲ್ಲಿ ಎರಡು ರನ್ ಗಳಿಸಿದ್ದರು. ಇದರಿಂದಾಗಿ ಋತುರಾಜ್ ಆರಂಭಿಕನಾಗಿ ಕಣಕ್ಕಿಳಿ ದರೂ ಅಚ್ಚರಿಯೇನಿಲ್ಲ. ಆಗ ಇಶಾನ್ ನಾಲ್ಕನೇ ಕ್ರಮಾಂಕದಲ್ಲಿ ಆಡಿ ವಿಕೆಟ್ ಕೀಪರ್ ಸ್ಥಾನ ಪಡೆದುಕೊಳ್ಳಬಹುದು.
ಈ ಬಾರಿಯ ಪ್ರವಾಸದಲ್ಲಿ ಸಾಲು ಸಾಲು ನಿರಾಶೆ ಅನುಭವಿಸಿರುವ ಕೀರೊನ್ ಪೊಲಾರ್ಡ್ ಪಡೆಗೆ ಭಾರತದ ನೆಲದಲ್ಲಿ ಸಮಾಧಾನದ ಗೆಲುವು ಸಾಧಿಸುವ ಕೊನೆಯ ಅವಕಾಶ ಇದಾಗಿದೆ. ಎರಡನೇ ಪಂದ್ಯದಲ್ಲಿ ರೋವ್ಮನ್ ಪೊವೆಲ್ ಮತ್ತು ನಿಕೊಲಸ್ ಪೂರನ್ ಅರ್ಧಶತಕ ಬಾರಿಸಿದ್ದರು. ಆಲ್‌ರೌಂಡರ್ ರಾಸ್ಟನ್ ಚೇಸ್ ಕೂಡ ಉತ್ತಮವಾಗಿ ಆಡಿದ್ದರು. ಜೇಸನ್ ಹೋಲ್ಡರ್ ಮೇಲೆ ಮತ್ತಷ್ಟು ನಿರೀಕ್ಷೆಯಿದೆ.
ಈಡನ್ ಗಾರ್ಡನ್ಸ್ ಪಿಚ್ ವರದಿ:
ಮೊದಲ ಪಂದ್ಯದಲ್ಲಿ ಕಂಡಂತೆ ಕೋಲ್ಕತಾದ ಈಡನ್ ಗಾರ್ಡನ್ಸ್ ಪಿಚ್ ಬ್ಯಾಟ್ಸ್‌ಮನ್‌ಗಳಿಗೆ ನೆರವಾದರೂ, ಸ್ಪಿನ್ನರ್‌ಗಳು ಇಲ್ಲಿ ಉತ್ತಮ ತಿರುವನ್ನು ಪಡೆಯಬಲ್ಲರು. ಕಳೆದ ಪಂದ್ಯದಲ್ಲಿ ರಾಸ್ಟನ್ ಚೇಸ್ ಅತ್ಯುತ್ತಮ ಬೌಲರ್‌ಗಳಾಗಿ ಹೊರಹೊಮ್ಮಿದರು. ಇವರ ಸ್ಪಿನ್ ಮೋಡಿಯ ಎದುರು ಬ್ಯಾಟ್ಸ್‌ಮನ್‌ಗಳು ರನ್ ಹೆಕ್ಕಲು ಅಕ್ಷರಶಃ ಪರದಾಡಿದರು. ಆದರೆ, ಕೊಹ್ಲಿ-ಪಂತ್ ಅರ್ಧಶತಕ ಸಿಡಿಸಿದ್ದು ಇದೇ ಪಿಚ್‌ನಲ್ಲಿ ಎನ್ನುವುದನ್ನು ಮರೆಯಬಾರದು. ಅಂದಹಾಗೆ ಇಲ್ಲಿ ಮೊದಲು ಬ್ಯಾಟ್ ಮಾಡಿದ ತಂಡ 180 ರನ್ ಗಳಿಸಿದರೆ ಗೆಲ್ಲುವ ಉತ್ತಮ ಸಾಧ್ಯತೆ ಇದೆ.
ಭಾರತದ ಟಿ20 ತಂಡ: ರೋಹಿತ್ ಶರ್ಮಾ (ನಾಯಕ), ಇಶಾನ್ ಕಿಶನ್ (ವಿಕೆಟ್-ಕೀಪರ್), ಶ್ರೇಯಸ್ ಅಯ್ಯರ್, ಸೂರ್ಯ ಕುಮಾರ್ ಯಾದವ್, ವೆಂಕಟೇಶ್ ಅಯ್ಯರ್, ದೀಪಕ್ ಚಹಾರ್, ಶಾರ್ದೂಲ್ ಠಾಕೂರ್, ರವಿ ಬಿಷ್ಣೋಯ್, ಯುಜ್ವೇಂದ್ರ ಚಾಹಲ್ , ಮೊಹಮ್ಮದ್ ಸಿರಾಜ್, ಭುವನೇಶ್ವರ್ ಕುಮಾರ್, ಆವೇಶ್ ಖಾನ್, ಹರ್ಷಲ್ ಪಟೇಲ್, ರುತುರಾಜ್ ಗಾಯಕ್ವಾಡ್, ದೀಪಕ್ ಹೂಡಾ, ಕುಲ್ದೀಪ್ ಯಾದವ್.
ವೆಸ್ಟ್ ಇಂಡೀಸ್ ಟಿ20 ತಂಡ: ಕೀರೊನ್ ಪೊಲಾರ್ಡ್ (ನಾಯಕ), ನಿಕೋಲಸ್ ಪೂರನ್ (ಉಪನಾಯಕ), ಫ್ಯಾಬಿಯನ್ ಅಲೆನ್, ಡ್ಯಾರೆನ್ ಬ್ರಾವೋ, ರೋಸ್ಟನ್ ಚೇಸ್, ಶೆಲ್ಡನ್ ಕಾಟ್ರೆಲ್, ಡೊಮಿನಿಕ್ ಡ್ರೇಕ್ಸ್, ಜೇಸನ್ ಹೋಲ್ಡರ್, ಶಾಯ್ ಹೋಪ್, ಅಕೀಲ್ ಹೊಸೈನ್, ಬ್ರಾಂಡನ್ ಕಿಂಗ್, ರೋವ್‌ಮನ್ ಪೊವೆಲ್, ರೊಮಾರಿಯೊ ಶೆಫರ್ಡ್, ಓಡಿಯನ್ ಶೆಫರ್ಡ್, ಓಡಿಯನ್ ಕೈಲ್ ಮೇಯರ್ಸ್, ಹೇಡನ್ ವಾಲ್ಷ್ ಜೂನಿಯರ್.
India Squad For Sri Lanka: ಭಾರತ ತಂಡದಲ್ಲಿ ಹೊಸಮುಖ: ಯಾರು ಈ ಸೌರಭ್?
Published On - 7:24 am, Sun, 20 February 22