ಭಾರತೀಯ ಕ್ರಿಕೆಟ್ನಲ್ಲಿ (Indian Cricket Team) ಕೊರೊನಾ ಆತಂಕ ಮನೆಮಾಡಿದೆ. ಒಬ್ಬರ ಹಿಂದೆ ಒಬ್ಬರಂತೆ ಪ್ರಮುಖ ಆಟಗಾರರಿಗೆ ಕೊರೊನಾ (Corona) ಪಾಸಿಟಿವ್ ಕಂಡುಬರುತ್ತಿದೆ. ಈಗಾಗಲೇ ಟೀಮ್ ಇಂಡಿಯಾ ಆಟಗಾರರಾದ ಶಿಖರ್ ಧವನ್, ಶ್ರೇಯಸ್ ಅಯ್ಯರ್, ರುತುರಾಜ್ ಗಾಯಕ್ವಾಡ್ ಮತ್ತು ನವ್ದೀಪ್ ಸೈನಿಗೆ ಆರ್ಟಿ-ಪಿಸಿಆರ್ ಟೆಸ್ಟ್ನಲ್ಲಿ ಕೋವಿಡ್ ಇರುವುದು ಕಂಡುಬಂದಿದೆ. ಇದೀಗ ಮತ್ತೊಬ್ಬ ಸ್ಟಾರ್ ಆಟಗಾರ ಕೊರೊನಾಕ್ಕೆ ತುತ್ತಾಗಿದ್ದಾರೆ. ಹೌದು, ಆಲ್ರೌಂಡರ್ ಅಕ್ಷರ್ ಪಟೇಲ್ (Axar Patel) ಅವರಿಗೆ ಕೊರೊನಾ ಪಾಸಿಟಿವ್ ಬಂದಿದೆ ಎಂದು ವರದಿಯಾಗಿದೆ. ಆದರೆ, ಇವರು ಸದ್ಯ ಟೀಮ್ ಇಂಡಿಯಾ ಕ್ಯಾಂಪ್ ಜೊತೆಗೆ ಅಹ್ಮದಾಬಾದ್ನಲ್ಲಿಲ್ಲ. ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಗೆ ಆಯ್ಕೆಯಾಗದ ಅಕ್ಷರ್ ಟಿ20 ಸರಣಿಯಲ್ಲಿ ಮಾತ್ರ ಕಣಕ್ಕಿಳಿಯಲಿದ್ದಾರೆ. ಹೀಗಾಗಿ ಇವರು ಮನೆಯಲ್ಲೇ ಇದ್ದಾರೆ. ಇಲ್ಲಿಯೇ ಇವರಿಗೆ ಕೊರೊನಾ ಪಾಸಿಟಿವ್ ದೃಢವಾಗಿದೆ ಎಂದು ವರದಿಯಾಗಿದೆ.
ಅಕ್ಷರ್ ಪಟೇಲ್ ಈ ಹಿಂದೆ ಅನೇಕ ಪಂದ್ಯಗಳಿಂದ ಹೊರಗುಳಿದಿದ್ದರು. ಇಂಜುರಿಯಿಂದಾಗಿ ಕಳೆದ ದಕ್ಷಿಣ ಆಫ್ರಿಕಾ ಪ್ರವಾಸಕ್ಕೂ ಇವರು ಅಲಭ್ಯರಾಗಿದ್ದರು. ಸದ್ಯ ಫೆಬ್ರವರಿ 16 ರಿಂದ ಆರಂಭವಾಗಲಿರುವ ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿ ವೇಳೆ ಇವರು ಗುಣಮುಖರಾಗದಿದ್ದಲ್ಲಿ ಈ ಸರಣಿಗೂ ಅಲಭ್ಯರಾಗುವುದು ಖಚಿತ.
ಮಯಾಂಕ್ ಇನ್ – ಟ್ರೈನಿಂಗ್ ಸೆಷನ್ ಕ್ಯಾನ್ಸಲ್:
ಭಾರತದ ಕೆಲ ಆಟಗಾರರು ಮತ್ತು ತರಬೇತಿ ಸಿಬ್ಬಂದಿ ಒಳಗೊಂಡಂತೆ ಒಟ್ಟು 8 ಸದಸ್ಯರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಹೀಗಾಗಿ ಭಾರತದ ಟ್ರೈನಿಂಗ್ ಸೆಷನ್ ಅನ್ನು ಸ್ಥಗಿತಗೊಳಿಸಲಾಗಿದೆ. ಇಂದು ಮತ್ತೆ ಎಲ್ಲಾ ಆಟಗಾರರನ್ನು ಕೋವಿಡ್ ಟೆಸ್ಟ್‌ಗೆ ಒಳಪಡಿಸಲು ಬಿಸಿಸಿಐ ನಿರ್ಧರಿಸಿದೆ. ಈ ಮಹತ್ವದ ಬೆಳವಣಿಗೆ ಬೆನ್ನಲ್ಲೇ ಇದೀಗ ಭಾರತ- ವೆಸ್ಟ್ ಇಂಡೀಸ್ ಏಕದಿನ ಸರಣಿ ನಿಗದಿತ ದಿನಾಂಕಕ್ಕೆ ಆರಂಭವಾಗುವುದು ಅನುಮಾನ ಎನ್ನಲಾಗುತ್ತಿದೆ. ಫೆಬ್ರವರಿ 6ಕ್ಕೆ ಆರಂಭವಾಗಬೇಕಿದ್ದ ಇಂಡೋ- ವಿಂಡೀಸ್ ಮೊದಲ ಏಕದಿನ ಸರಣಿ ಮುಂದಕ್ಕೋಗುವ ಎಲ್ಲ ಲಕ್ಷಣಗಳು ಗೋಚರಿಸುತ್ತಿದೆ.
ಬಿಸಿಸಿಐ ಗುರುವಾರ ಮತ್ತೊಂದು ಸುತ್ತಿನ ಆರ್ಟಿ- ಪಿಸಿಆರ್ ಪರೀಕ್ಷೆ ನಡೆಸಲು ನಿರ್ಧರಿಸಿದೆ. ಪಾಸಿಟಿವ್ ಆದವರು ಕೊಠಡಿಗಳಲ್ಲಿ ಪ್ರತ್ಯೇಕವಾಗುಳಿದು, ಸರಕಾರದ ಮಾರ್ಗಸೂಚಿಯನ್ನು ಪಾಲಿಸಲಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಇನ್ಸೈಡ್ ಸ್ಫೋರ್ಟ್ಸ್ಗೆ ಬಿಸಿಸಿಐ ಮೂಲಗಳು ಮಾಹಿತಿ ತಿಳಿಸಿದ್ದು, “ಸದ್ಯಕ್ಕೆ ನಿಗದಿತ ದಿನಾಂಕದಂದೇ ಸರಣಿ ಆರಂಭವಾಗಲಿದೆ. ಆದರೆ, ಎಲ್ಲಾದರು ಇಂದು ಅಥವಾ ನಾಳೆ ತಂಡದಲ್ಲಿ ಪಾಸಿಟಿವ್ ಕೇಸ್ಗಳ ಸಂಖ್ಯೆ ಅಧಿಕವಾದರೆ ಪಂದ್ಯದ ಆರಂಭವನ್ನು ಮುಂದೂಡಬೇಕಾದ ಅನಿವಾರ್ಯತೆ ಎದುರಾಗಬಹುದು,” ಎಂದು ಹೇಳಿದ್ದಾರೆ.
ಈ ಬೆಳವಣಿಗೆ ಮಧ್ಯೆ ಮತ್ತೊಬ್ಬ ಹೊಸ ಆಟಗಾರ ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಗೆ ಆಯ್ಕೆಯಾಗಿದ್ದಾರೆ. ಬಿಸಿಸಿಐ ಈ ಬಗ್ಗೆ ಪ್ರಕಟಣೆ ಹೊರಡಿಸಿದ್ದು, “ಆರ್ಟಿ-ಪಿಸಿಆರ್ ಟೆಸ್ಟ್ನಲ್ಲಿ ಭಾರತದ 7 ಮಂದಿಗೆ ಕೊರೊನಾ ಪಾಸಿಟಿವ್ ಕಂಡುಬಂದ ನಂತರ ಭಾರತ ಏಕದಿನ ತಂಡಕ್ಕೆ ಹಿರಿಯ ಆಯ್ಕೆ ಸಮಿತಿ ಮಯಾಂಕ್ ಅಗರ್ವಾಲ್ ಅವರನ್ನು ಆಯ್ಕೆ ಮಾಡಿದೆ,” ಎಂದು ಬಿಸಿಸಿಐ ತಿಳಿಸಿದೆ.
VVS Laxman: ಯಶ್ ಧುಲ್ ಶತಕ ಸಿಡಿಸುತ್ತಿದ್ದಂತೆ ಡಗೌಟ್ನಲ್ಲಿದ್ದ ವಿವಿಎಸ್ ಲಕ್ಷ್ಮಣ್ ಮಾಡಿದ್ದೇನು ನೋಡಿ
Ind vs WI: ರೋಹಿತ್ ಪಡೆಯ ಟ್ರೈನಿಂಗ್ ಸೆಷನ್ ಕ್ಯಾನ್ಸಲ್: ಭಾರತ-ವೆಸ್ಟ್ ಇಂಡೀಸ್ ಏಕದಿನ ಅನುಮಾನ
Published On - 12:37 pm, Thu, 3 February 22