Ind vs WI: ರೋಹಿತ್ ಪಡೆಯ ಟ್ರೈನಿಂಗ್ ಸೆಷನ್ ಕ್ಯಾನ್ಸಲ್: ಭಾರತ-ವೆಸ್ಟ್ ಇಂಡೀಸ್ ಏಕದಿನ ಅನುಮಾನ
India vs West Indies: ಭಾರತ- ವೆಸ್ಟ್ ಇಂಡೀಸ್ ಏಕದಿನ ಸರಣಿ ನಿಗದಿತ ದಿನಾಂಕಕ್ಕೆ ಆರಂಭವಾಗುವುದು ಅನುಮಾನ ಎನ್ನಲಾಗುತ್ತಿದೆ. ಫೆಬ್ರವರಿ 6ಕ್ಕೆ ಆರಂಭವಾಗಬೇಕಿದ್ದ ಇಂಡೋ- ವಿಂಡೀಸ್ ಮೊದಲ ಏಕದಿನ ಸರಣಿ ಮುಂದಕ್ಕೋಗುವ ಎಲ್ಲ ಲಕ್ಷಣಗಳು ಗೋಚರಿಸುತ್ತಿದೆ.
ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿ ಆರಂಭಕ್ಕೂ ಮುನ್ನವೇ ಭಾರತ (India vs West Indies) ತಂಡಕ್ಕೆ ದೊಡ್ಡ ಆಘಾತ ಉಂಟಾಗಿದೆ. ಟೀಮ್ ಇಂಡಿಯಾ (Team India) ಮೇಲೆ ಕೊರೊನಾ ಕರಿನೆರಳು ಬಿದ್ದಿದ್ದು ಆಟಗಾರರು ಮತ್ತು ತರಬೇತಿ ಸಿಬ್ಬಂದಿ ಒಳಗೊಂಡಂತೆ ಒಟ್ಟು 8 ಸದಸ್ಯರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಶಿಖರ್ ಧವನ್, ಶ್ರೇಯಸ್ ಅಯ್ಯರ್, ರುತುರಾಜ್ ಗಾಯಕ್ವಾಡ್ ಮತ್ತು ಸ್ಯಾಂಡ್ಬೈ ಬೌಲರ್ ನವ್ದೀಪ್ ಸೈನಿ ಒಂದುಕಡೆಯಾದರೆ ಇತ್ತ ನಾಲ್ಕು ತರಬೇತಿ ಸಿಬ್ಬಂದಿಗಳಿಗೆ ಆರ್ಟಿ-ಪಿಸಿಆರ್ ಟೆಸ್ಟ್ನಲ್ಲಿ ಕೋವಿಡ್ ಪಾಸಿಟಿವ್ (Covid- 19) ಕಾಣಿಸಿಕೊಂಡಿದೆ. ಟೀಮ್ ಇಂಡಿಯಾ ಸ್ಪಿನ್ನರ್ ಅಕ್ಷರ್ ಪಟೇಲ್ ಅವರಿಗೆ ಮನೆಯಲ್ಲೇ ಪಾಸಿಟಿವ್ ಬಂದ ಕಾರಣ ಅವರು ಅಹ್ಮದಾಬಾದ್ಗೆ ಪ್ರಯಾಣ ಬೆಳೆಸಿಲ್ಲ. ಈ ಮಹತ್ವದ ಬೆಳವಣಿಗೆ ಬೆನ್ನಲ್ಲೇ ಇದೀಗ ಭಾರತ- ವೆಸ್ಟ್ ಇಂಡೀಸ್ ಏಕದಿನ ಸರಣಿ ನಿಗದಿತ ದಿನಾಂಕಕ್ಕೆ ಆರಂಭವಾಗುವುದು ಅನುಮಾನ ಎನ್ನಲಾಗುತ್ತಿದೆ. ಫೆಬ್ರವರಿ 6ಕ್ಕೆ ಆರಂಭವಾಗಬೇಕಿದ್ದ ಇಂಡೋ- ವಿಂಡೀಸ್ ಮೊದಲ ಏಕದಿನ ಸರಣಿ ಮುಂದಕ್ಕೋಗುವ ಎಲ್ಲ ಲಕ್ಷಣಗಳು ಗೋಚರಿಸುತ್ತಿದೆ.
ಬಿಸಿಸಿಐ ಗುರುವಾರ ಮತ್ತೊಂದು ಸುತ್ತಿನ ಆರ್ಟಿ- ಪಿಸಿಆರ್ ಪರೀಕ್ಷೆ ನಡೆಸಲು ನಿರ್ಧರಿಸಿದೆ. ಪಾಸಿಟಿವ್ ಆದವರು ಕೊಠಡಿಗಳಲ್ಲಿ ಪ್ರತ್ಯೇಕವಾಗುಳಿದು, ಸರಕಾರದ ಮಾರ್ಗಸೂಚಿಯನ್ನು ಪಾಲಿಸಲಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಇನ್ಸೈಡ್ ಸ್ಫೋರ್ಟ್ಸ್ಗೆ ಬಿಸಿಸಿಐ ಮೂಲಗಳು ಮಾಹಿತಿ ತಿಳಿಸಿದ್ದು, “ಸದ್ಯಕ್ಕೆ ನಿಗದಿತ ದಿನಾಂಕದಂದೇ ಸರಣಿ ಆರಂಭವಾಗಲಿದೆ. ಆದರೆ, ಎಲ್ಲಾದರು ಇಂದು ಅಥವಾ ನಾಳೆ ತಂಡದಲ್ಲಿ ಪಾಸಿಟಿವ್ ಕೇಸ್ಗಳ ಸಂಖ್ಯೆ ಅಧಿಕವಾದರೆ ಪಂದ್ಯದ ಆರಂಭವನ್ನು ಮುಂದೂಡಬೇಕಾದ ಅನಿವಾರ್ಯತೆ ಎದುರಾಗಬಹುದು,” ಎಂದು ಹೇಳಿದ್ದಾರೆ.
ಸದ್ಯಕ್ಕೆ ಭಾರತದ ಟ್ರೈನಿಂಗ್ ಸೆಷನ್ ಅನ್ನು ಸ್ಥಗಿತಗೊಳಿಸಲಾಗಿದೆ. ಇಂದು ಮತ್ತೆ ಎಲ್ಲಾ ಆಟಗಾರರನ್ನು ಕೋವಿಡ್ ಟೆಸ್ಟ್‌ಗೆ ಒಳಪಡಿಸಲು ಬಿಸಿಸಿಐ ನಿರ್ಧರಿಸಿದೆ. ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಗಾಗಿ ಅಹ್ಮದಾಬಾದ್ಗೆ ತೆರಳುವ ಮುನ್ನ ಮನೆಯಲ್ಲಿ ಭಾರತದ ಎಲ್ಲ ಆಟಗಾರರಿಗೆ ಆರ್ಟಿಪಿಸಿಆರ್ ಟೆಸ್ಟ್ ಮಾಡಿಸುವಂತೆ ಸೂಚಿಸಲಾಗಿತ್ತು. ಅದರಲ್ಲಿ ಎಲ್ಲರಿಗೂ ನೆಗೆಟಿವ್ ಬಂದಿತ್ತು.
ನಂತರ ಜ. 31 ಸೋಮವಾರ ನಡೆಸಿದ ಆರ್ಟಿಪಿಸಿಆರ್ ಟೆಸ್ಟ್ನಲ್ಲಿ ಮೊದಲು ಧವನ್ ಮತ್ತು ನವ್ದೀಪ್ ಸೈನಿಗೆ ಪಾಸಿಟಿವ್ ಬಂದಿದೆ. ಫೀಲ್ಡಿಂಗ್ ಕೋಚ್ ಟಿ. ದಿಲೀಪ್ ಮತ್ತು ಮತ್ತೊಬ್ಬರಿಗೆ ಕೊರೊನಾ ದೃಢಪಟ್ಟಿದೆ. ಫೆ. 1 ರಂದು ರುತುರಾಜ್ ಗಾಯಕ್ವಾಡ್ಗೆ ಫೆ. 2 ರಂದು ಶ್ರೇಯಸ್ ಅಯ್ಯರ್ ಮತ್ತು ಸ್ಫೋಟರ್ಸ್ ಮಸಾಜ್ ಥೆರಪಿಯವರಾದ ರಾಜೀವ್ ಕುಮಾರ್ಗೆ ಪಾಸಿಟಿವ್ ಕಂಡುಬಂದಿದೆ ಎಂದು ಬಿಸಿಸಿಐ ಹೇಳಿದೆ. ಇದರ ಬೆನ್ನಲ್ಲೇ ಭಾರತ ಏಕದಿನ ತಂಡಕ್ಕೆ ಹಿರಿಯ ಆಯ್ಕೆ ಸಮಿತಿ ಮಯಾಂಕ್ ಅಗರ್ವಾಲ್ ಅವರನ್ನು ಆಯ್ಕೆ ಮಾಡಿದೆ.
ಮೂರು ಪಂದ್ಯಗಳ ಏಕದಿನ ಸರಣಿಯು ಅಹ್ಮದಾಬಾದ್‌ನಲ್ಲಿ ಫೆ.6 ರಿಂದ ಆರಂಭವಾಗಲಿದೆ. ಇದು ಭಾರತದ 1000ನೇ ಏಕದಿನ ಪಂದ್ಯವಾಗಿದೆ. ಹೀಗಿರುವಾಗ ತಂಡದ ಆಟಗಾರರು ಹಾಗೂ ಸಹಾಯಕ ಸಿಬ್ಬಂದಿ ವರ್ಗದವರಿಗೆ ಕೊರೊನಾ ಇರುವುದು ಬುಧವಾರ ಗೊತ್ತಾಗಿದೆ. ಉಭಯ ತಂಡಗಳು ಒಂದೇ ಹೊಟೇಲ್‌ನಲ್ಲಿ ತಂಗಿದ್ದು ಪ್ರತ್ಯೇಕ ಮಹಡಿಯಲ್ಲಿವೆ. ಬಿಸಿಸಿಐ ಗುರುವಾರ ಮತ್ತೊಂದು ಸುತ್ತಿನ ಪರೀಕ್ಷೆ ನಡೆಸಲು ನಿರ್ಧರಿಸಿದೆ. ಪಾಸಿಟಿವ್ ಆದವರು ಕೊಠಡಿಗಳಲ್ಲಿ ಪ್ರತ್ಯೇಕವಾಗುಳಿದು, ಸರಕಾರದ ಮಾರ್ಗಸೂಚಿಯನ್ನು ಪಾಲಿಸಲಿದ್ದಾರೆ ಎನ್ನಲಾಗಿದೆ.
India vs West Indies: ಭಾರತದ 3 ಆಟಗಾರರಿಗೆ ಪಾಸಿಟಿವ್: ಸರಣಿಗೆ ಹೊಸ ಸ್ಟಾರ್ ಆಟಗಾರನನ್ನು ಆಯ್ಕೆ ಮಾಡಿದ ಬಿಸಿಸಿಐ
U19 World Cup: ಆಸ್ಟ್ರೇಲಿಯಾ ಎದುರು ಬ್ಯಾಟಿಂಗ್-ಬೌಲಿಂಗ್ನಲ್ಲಿ ಧೂಳೆಬ್ಬಿಸಿದ ಯಶ್ ಪಡೆ: ಫೈನಲ್ಗೇರಿದ ಭಾರತ ತಂಡ