VVS Laxman: ಯಶ್ ಧುಲ್ ಶತಕ ಸಿಡಿಸುತ್ತಿದ್ದಂತೆ ಡಗೌಟ್ನಲ್ಲಿದ್ದ ವಿವಿಎಸ್ ಲಕ್ಷ್ಮಣ್ ಮಾಡಿದ್ದೇನು ನೋಡಿ
Ind vs Aus U19 World Cup: ಐಸಿಸಿ ಅಂಡರ್-19 ವಿಶ್ವಕಪ್ನಲ್ಲಿ ಭಾರತ ತಂಡ ಆಸ್ಟ್ರೇಲಿಯಾವನ್ನು ಸೋಲಿಸಿ ಫೈನಲ್ಗೆ ಪ್ರವೇಶಿಸಿದೆ. ಈ ಪಂದ್ಯದಲ್ಲಿ ಯಶ್ ಧುಲ್ ಅವರ ಶತಕದ ಬೊಂಬಾಟ್ ಆಟಕ್ಕೆ ಎಲ್ಲರೂ ಮನಸೋತಿದ್ದಾರೆ. ಅದರಲ್ಲಿ ವಿವಿಎಸ್ ಲಕ್ಷ್ಮಣ್ ಕೂಡ ಒಬ್ಬರು.
ಐಸಿಸಿ ಅಂಡರ್ 19 ವಿಶ್ವಕಪ್ (U19 World Cup) ಸೆಮಿ ಫೈನಲ್ ಪಂದ್ಯದಲ್ಲಿ ಭಾರತ ಅಂಡರ್ 19 ತಂಡ ಆಸ್ಟ್ರೇಲಿಯಾವನ್ನು ಬಗ್ಗು ಬಡಿದು ಫೈನಲ್ಗೇರಿದೆ. ಈ ಮೂಲಕ ಸತತ ನಾಲ್ಕನೇ ಬಾರಿಗೆ ಫೈನಲ್ ಪ್ರವೇಶಿಸಿದ ಮೊದಲ ತಂಡ ಎಂಬ ವಿಶೇಷ ಸಾಧನೆ ಮಾಡಿತು. ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದು ನಾಯಕ ಯಶ್ ಧುಲ್ (Yash Dhull). 110 ಎಸೆತಗಳಲ್ಲಿ 10 ಬೌಂಡರಿ, 1 ಸಿಕ್ಸರ್ ಸಿಡಿಸಿ 110 ರನ್ ಬಾರಿಸಿ ಆಕರ್ಷಕ ಶತಕ ಸಿಡಿಸಿ ತಂಡಕ್ಕೆ ಉಪಯುಕ್ತವಾದ ಕೊಡುಗೆ ನೀಡಿದರು. ಈ ಮೂಲಕ ನೂತನ ದಾಖಲೆ ಕೂಡ ಬರೆದರು. ಐಸಿಸಿ ಅಂಡರ್-19 ವಿಶ್ವಕಪ್ನಲ್ಲಿ ಭಾರತ ಪರ ವಿರಾಟ್ ಕೊಹ್ಲಿ ಮತ್ತು ಉನ್ಮುಕ್ತ್ ಚಂದ್ ಬಳಿಕ ಶತಕ ಬಾರಿಸಿದ ಮೂರನೇ ನಾಯಕ ಎಂದ ಸಾಧನೆ ಮಾಡಿದರು. ಯಶ್ ಅವರ ಬೊಂಬಾಟ್ ಆಟಕ್ಕೆ ಎಲ್ಲರೂ ಮನಸೋತಿದ್ದಾರೆ. ಅದರಲ್ಲಿ ವಿವಿಎಸ್ ಲಕ್ಷ್ಮಣ್ ಕೂಡ ಒಬ್ಬರು. ಹೌದು, ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್ಸಿಎ) ಅಧ್ಯಕ್ಷನಾಗಿರುವ ವಿವಿಎಸ್ ಲಕ್ಷ್ಮಣ್ (VVS Laxman) ಅವರು ಸದ್ಯ ವೆಸ್ಟ್ ಇಂಡೀಸ್ನಲ್ಲಿ ಭಾರತ ಅಂಡರ್- 19 ತಂಡದ ಜೊತೆ ಕಾರ್ಯನಿರ್ವಹಿಸುತ್ತಿದ್ದಾರೆ.
ಸೆಮಿ ಫೈನಲ್ ಪಂದ್ಯದ ವೇಳೆಯು ಲಕ್ಷ್ಮಣ್ ಅವರು ಗ್ರೌಂಡ್ನಲ್ಲಿ ಹಾಜರಿದ್ದರು. ಈ ಪಂದ್ಯದಲ್ಲಿ ಯಶ್ ದುಲ್ ಅವರು 98 ರನ್ ಗಳಿಸಿದ್ದಾಗ ಮಿಡ್ ವಿಕೆಟ್ ಕಡೆ ಚೆಂಡನ್ನು ಹೊಡೆದು 2 ರನ್ ಬಾರಿಸಿ ಆಕರ್ಷಕ ಶತಕ ಸಿಡಿಸಿದರು. ಖುಷಿಯಲ್ಲಿ ಕುಣಿದು ಹೆಲ್ಮೆಟ್ ತೆಗೆದು ಶತಕದ ಸಂಭ್ರಮಾಚರಣೆಯನ್ನು ಮಾಡಿದರು. ಇತ್ತ ಡಗೌಟ್ನಲ್ಲಿದ್ದ ಲಕ್ಷ್ಮಣ್ ಕೂಡ ಈ ಖುಷಿಯಲ್ಲಿ ಪಾಲ್ಗೊಂಡು ಯಶ್ ಅವರ ಶತಕಕ್ಕೆ ಚಪ್ಪಾಳೆ ತಟ್ಟಿ ಗೌರವ ಸೂಚಿಸಿದರು.
View this post on Instagram
ಆಂಟಿಗುವಾದ ಕೂಲಿಡ್ಜ್ ಕ್ರಿಕೆಟ್ ಗ್ರೌಂಡ್ನಲ್ಲಿ ಬುಧವಾರ ನಡೆದ ಮಹತ್ವದ ಸೆಮಿಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಭಾರತ ನಿಗದಿತ 50 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 290 ರನ್ ಕಲೆಹಾಕಿತು. ಭಾರತ ತಂಡದ ಮೊತ್ತ 37 ರನ್‌ಗಳಾಗುವಷ್ಟರಲ್ಲೇ ಆರಂಭಿಕರಿಬ್ಬರು ಕೂಡ ವಿಕೆಟ್ ಕಳೆದುಕೊಂಡು ಫೆವಿಲಿಯನ್ ಸೇರಿಕೊಂಡರೂ ನಾಯಕ ಯಶ್ ಧುಲ್ ಹಾಗೂ ಶೇಕ್ ರಶೀದ್ ಅಮೋಘ ಆಟ ಆಸೀಸ್ ಬೌಲರ್‌ಗಳನ್ನು ಕಂಗೆಡುವಂತೆ ಮಾಡಿತು. ಇಬ್ಬರು ಕೂಡ ಎಲ್ಲೂ ಆಘಾತವಾಗದಂತೆ ನೋಡಿಕೊಂಡು ಭರ್ಜರಿ ದ್ವಿಶತಕದ ಜೊತೆಯಾಟ (204 ರನ್) ಆಡಿದರು. ನಾಯಕ ಯಶ್ ಧುಲ್ ಭರ್ಜರಿ ಶತಕ ದಾಖಲಿಸಿದರೆ, ರಶೀದ್ 94 ರನ್‌ಗಳಿಗೆ ವಿಕೆಟ್ ಕಳೆದುಕೊಳ್ಳುವ ಮೂಲಕ ಶತಕ ವಂಚಿತವಾದರು.
ತಂಡದ ಮೊತ್ತ 241 ರನ್‌ಗಳಾಗುವಷ್ಟರಲ್ಲಿ ಈ ಜೋಡಿ ಬೇರ್ಪಟ್ಟಿತು. ಇದಾದ ಬಳಿಕ ಅಂತಿಮ ಓವರ್‌ನಲ್ಲಿ ವಿಕೆಟ್ ಕೀಪರ್ ಬ್ಯಾಟರ್ ದಿನೇಶ್ ಬಾನಾ ನಾಲ್ಕು ಎಸೆತಗಳನ್ನು ಎದುರಿಸಿ 20 ರನ್ ದೋಚುವ ಮೂಲಕ ತಂಡದ ಮೊತ್ತ 290 ತಲುಪಲು ಕಾರಣವಾದರು. ಯಶ್ 110 ಎಸೆತಗಳಲ್ಲಿ 10 ಬೌಂಡರಿ, 1 ಸಿಕ್ಸರ್ ಸಿಡಿಸಿ 110 ರನ್ ಬಾರಿಸಿದರು.
ಇತ್ತ 291 ರನ್ಗಳ ಕಠಿಣ ಟಾರ್ಗೆಟ್ ಬೆನ್ನಟ್ಟಿದ ಆಸ್ಟ್ರೇಲಿಯಾ 100 ರನ್ ಆಗುವ ಹೊತ್ತಿಗೆ ಪ್ರಮುಖ 5 ವಿಕೆಟ್ ಕಳೆದುಕೊಂಡಿತು. ತಂಡದ ಪರ ಲಚ್ಲನ್ ಶಾ 51 ರನ್ ಗಳಿಸಿದರೆ, ಕೋರೆ ಮಿಲ್ಲರ್ 38 ಮತ್ತು ಕ್ಯಾಂಪ್ಬೆಲ್ 30 ರನ್ ಗಳಿಸಿದ್ದೇ ಹೆಚ್ಚು. ಭಾರತೀಯರ ಬೌಲಿಂಗ್ ದಾಳಿಗೆ 41.5 ಓವರ್‌ನಲ್ಲಿ 194 ರನ್ಗೆ ಸರ್ವಪತನ ಕಂಡಿತು. ಭಾರತ ಪರ ವಿಕ್ಕಿ ಒತ್ಸವ್ 3 ವಕೆಟ್ ಕಿತ್ತರೆ, ನಿಶಾಂತ್ ಸಿಂಧು ಮತ್ತು ರವಿ ಕಮಾರ್ ತಲಾ 2 ವಿಕೆಟ್ ಪಡೆದರು.
Ind vs WI: ರೋಹಿತ್ ಪಡೆಯ ಟ್ರೈನಿಂಗ್ ಸೆಷನ್ ಕ್ಯಾನ್ಸಲ್: ಭಾರತ-ವೆಸ್ಟ್ ಇಂಡೀಸ್ ಏಕದಿನ ಅನುಮಾನ
India vs West Indies: ಭಾರತದ 3 ಆಟಗಾರರಿಗೆ ಪಾಸಿಟಿವ್: ಸರಣಿಗೆ ಹೊಸ ಸ್ಟಾರ್ ಆಟಗಾರನನ್ನು ಆಯ್ಕೆ ಮಾಡಿದ ಬಿಸಿಸಿಐ