Axar Patel: ಒಂದಲ್ಲ.. ಎರಡಲ್ಲ..: ಅಕ್ಷರ್ ಪಟೇಲ್ ಸೋಲಿಗೆ ಎಷ್ಟೆಲ್ಲ ಕಾರಣ ನೀಡಿದ್ರು ನೋಡಿ

DC vs RCB, IPL 2025: ನಂತರ ಅಕ್ಷರ್ ಪಟೇಲ್ ಮಾತನಾಡಿ, ಬ್ಯಾಟಿಂಗ್ ನಲ್ಲಿ ನಾವು ಆರ್ ಸಿಬಿಗಿಂತ ಹಿಂದುಳಿದಿದ್ದೆವು. ಆದಾಗ್ಯೂ, ಇದರ ಹೊರತಾಗಿ ಅವರು ಸೋಲಿಗೆ ಹಲವು ಕಾರಣಗಳನ್ನು ನೀಡಿದರು. ‘‘ನಾವು ಬ್ಯಾಟಿಂಗ್‌ನಲ್ಲಿ 10 ರಿಂದ 15 ರನ್‌ಗಳಿಂದ ಸೋತಿದ್ದೇವೆ. ಕಡಿಮೆ ರನ್‌ಗಳ ಸಂಖ್ಯೆಗೆ ಒಂದು ಪ್ರಮುಖ ಕಾರಣವೆಂದರೆ ಬೇಗನೆ ಇಬ್ಬನಿ ಬಿದ್ದಿದ್ದು ಎಂದು ಹೇಳಿದ್ದಾರೆ.

Axar Patel: ಒಂದಲ್ಲ.. ಎರಡಲ್ಲ..: ಅಕ್ಷರ್ ಪಟೇಲ್ ಸೋಲಿಗೆ ಎಷ್ಟೆಲ್ಲ ಕಾರಣ ನೀಡಿದ್ರು ನೋಡಿ
Axar Patel Post Match Presentation

Updated on: Apr 28, 2025 | 10:42 AM

ಬೆಂಗಳೂರು (ಏ. 28): ಐಪಿಎಲ್ 2025 ರಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿರುವ ಡೆಲ್ಲಿ ಕ್ಯಾಪಿಟಲ್ಸ್, ಆರ್‌ಸಿಬಿ (Delhi Capitals vs Royal Challengers Bengaluru) ವಿರುದ್ಧ ತವರಿನಲ್ಲೇ ಹೀನಾಯ ಸೋಲು ಅನುಭವಿಸಿತು. ಈ ಋತುವಿನಲ್ಲಿ ಡೆಲ್ಲಿ ಮತ್ತು ಆರ್‌ಸಿಬಿ ನಡುವೆ ನಡೆದ ಎರಡನೇ ಪಂದ್ಯ ಇದು. ಮೊದಲ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಗೆದ್ದಿತ್ತು, ಆದರೆ ಈ ಬಾರಿ ತಮ್ಮ ತವರಿನ ಕೋಟೆಯನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಅರುಣ್ ಜೇಟ್ಲಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಡೆಲ್ಲಿ ಬ್ಯಾಟಿಂಗ್-ಬೌಲಿಂಗ್ ಮಾತ್ರವಲ್ಲದೆ ಫೀಲ್ಡಿಂಗ್​ನಲ್ಲೂ ಕಳಪೆ ಪ್ರದರ್ಶನ ತೋರಿತು. ಸೋಲಿನ ನಂತರ ದೆಹಲಿ ನಾಯಕ ಅಕ್ಷರ್ ಪಟೇಲ್ ತುಂಬಾ ನಿರಾಶೆಗೊಂಡರು.

ಪಂದ್ಯದ ನಂತರ ಅಕ್ಷರ್ ಪಟೇಲ್ ಮಾತನಾಡಿ, ಬ್ಯಾಟಿಂಗ್​ ನಲ್ಲಿ ನಾವು ಆರ್ ಸಿಬಿಗಿಂತ ಹಿಂದುಳಿದಿದ್ದೆವು. ಆದಾಗ್ಯೂ, ಇದರ ಹೊರತಾಗಿ ಅವರು ಸೋಲಿಗೆ ಹಲವು ಕಾರಣಗಳನ್ನು ನೀಡಿದರು. ‘‘ನಾವು ಬ್ಯಾಟಿಂಗ್‌ನಲ್ಲಿ 10 ರಿಂದ 15 ರನ್‌ಗಳಿಂದ ಸೋತಿದ್ದೇವೆ. ಕಡಿಮೆ ರನ್‌ಗಳ ಸಂಖ್ಯೆಗೆ ಒಂದು ಪ್ರಮುಖ ಕಾರಣವೆಂದರೆ ಬೇಗನೆ ಇಬ್ಬನಿ ಬಿದ್ದಿದ್ದು. ಈ ಪಂದ್ಯದಲ್ಲಿ ನಮ್ಮ ಫೀಲ್ಡಿಂಗ್ ತುಂಬಾ ಕಳಪೆಯಾಗಿತ್ತು. ಪಂದ್ಯದ ದಿಕ್ಕನ್ನೇ ತಿರುಗಿಸುವ ಕೆಲವು ಅವಕಾಶಗಳನ್ನು ನಾವು ಕಳೆದುಕೊಂಡೆವು’’ ಎಂದು ಹೇಳಿದ್ದಾರೆ.

ತಂಡವು ಕೆಎಲ್ ರಾಹುಲ್-ಅಕ್ಷರ್ ಮೇಲೆ ಹೆಚ್ಚು ಅವಲಂಬಿತವಾಗಿದೆ:

ಈ ಋತುವಿನಲ್ಲಿ ಕೆಎಲ್ ರಾಹುಲ್ ಡೆಲ್ಲಿ ಕ್ಯಾಪಿಟಲ್ಸ್ ಪರ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ, ಆದರೆ ಆರ್‌ಸಿಬಿ ವಿರುದ್ಧ ಅವರ ಬ್ಯಾಟಿಂಗ್ ತುಂಬಾ ನಿಧಾನವಾಗಿತ್ತು. ಕೆ. ಎಲ್. ರಾಹುಲ್ ಮತ್ತು ಅವರ ಬ್ಯಾಟಿಂಗ್ ಕ್ರಮಾಂಕದ ಬಗ್ಗೆ ಅಕ್ಷರ್ ಮಾತನಾಡಿ, ‘‘ನಾವು ಇನ್ನಿಂಗ್ಸ್‌ನಲ್ಲಿ ದಾಳಿ ಮಾಡಲು ಪ್ರಯತ್ನಿಸಿದಾಗಲೆಲ್ಲಾ ನಮ್ಮ ವಿಕೆಟ್‌ಗಳು ಬೀಳುತ್ತಿದ್ದವು. ನಾನು ಕೆಳ ಕ್ರಮಾಂದಲ್ಲಿ ಆಡಿದರೂ ಅಥವಾ ಮೇಲಿನ ಕ್ರಮಾಂಕದಲ್ಲಿ ಆಡಲು ಬಂದರೂ, ಕೆಎಲ್ ರಾಹುಲ್ ತುಂಬಾ ಚೆನ್ನಾಗಿ ಬ್ಯಾಟಿಂಗ್ ಮಾಡುತ್ತಿದ್ದರು ಮತ್ತು ಅವರಿಗೆ ಒಂದು ಅವಕಾಶ ನೀಡಬೇಕಿತ್ತು’’ ಎಂದು ಹೇಳಿದ್ದಾರೆ.

ಇದನ್ನೂ ಓದಿ
ಅಕ್ಷರ್ ಪಟೇಲ್ ಕಳಪೆ ನಾಯಕತ್ವ ಮತ್ತು 13 ನೇ ಓವರ್..: DC ಸೋಲಿಗೆ 4 ಕಾರಣ
ಕೊಹ್ಲಿ-ರಾಹುಲ್ ಜಗಳಕ್ಕೆ ಏನು ಕಾರಣ?: ಪಂದ್ಯದ ನಂತರವೂ ಫೈಟ್ ನಡೆದಿದ್ದೇಕೆ?
ಕೃನಾಲ್ ಆಲ್​ರೌಂಡರ್ ಆಟ; ಆರ್​ಸಿಬಿಗೆ 7ನೇ ಜಯ
ಬುಮ್ರಾ ಬೌಲಿಂಗ್​ನಲ್ಲಿ ಸಿಕ್ಸರ್ ಬಾರಿಸಿದ ರವಿ ಬಿಷ್ಣೋಯ್; ವಿಡಿಯೋ

DC vs RCB, IPL 2025: ಅಕ್ಷರ್ ಪಟೇಲ್ ಕಳಪೆ ನಾಯಕತ್ವ ಮತ್ತು 13 ನೇ ಓವರ್..: ಈ 4 ತಪ್ಪುಗಳಿಂದ ಡೆಲ್ಲಿಗೆ ಸೋಲು

ಈ ಪಂದ್ಯವನ್ನು ಆರ್‌ಸಿಬಿ 6 ವಿಕೆಟ್‌ಗಳಿಂದ ಗೆದ್ದುಕೊಂಡಿತು:

ಈ ಪಂದ್ಯದ ಬಗ್ಗೆ ಹೇಳುವುದಾದರೆ, ಡೆಲ್ಲಿ ಕ್ಯಾಟಲ್ಸ್‌ಗೆ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಸಿಕ್ಕಿತು. ಅದರತೆ ಕ್ರೀಸ್​ಗೆ ಇಳಿದ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಆರಂಭ ಉತ್ತಮವಾಗಿರಲಿಲ್ಲ. ತಂಡವು ನಿಯಮಿತ ಅಂತರದಲ್ಲಿ ವಿಕೆಟ್‌ಗಳನ್ನು ಕಳೆದುಕೊಳ್ಳುತ್ತ ಸಾಗಿತು. ಪರಿಣಾಮವಾಗಿ ದೆಹಲಿ ತಂಡವು ನಿಗದಿತ 20 ಓವರ್‌ಗಳಲ್ಲಿ 162 ರನ್‌ಗಳ ಗುರಿಯನ್ನು ತಲುಪುವಲ್ಲಿ ಯಶಸ್ವಿಯಾಯಿತು. ಡೆಲ್ಲಿ ಕಡಿಮೆ ರನ್ ಗಳಿಸಿದ್ದರೂ, ಬೌಲಿಂಗ್‌ನಲ್ಲಿ ಅವರ ಆರಂಭವೂ ಸ್ಫೋಟಕವಾಗಿತ್ತು. ಆರ್​ಸಿಬಿ ತಂಡವು ಕೇವಲ 26 ರನ್‌ಗಳಿಗೆ ಮೂರು ವಿಕೆಟ್‌ಗಳನ್ನು ಕಳೆದುಕೊಂಡಿತ್ತು, ಆದರೆ ಅದಾದ ನಂತರ ವಿರಾಟ್ ಕೊಹ್ಲಿ ಮತ್ತು ಕೃನಾಲ್ ಪಾಂಡ್ಯ ಒಟ್ಟಾಗಿ ಪಂದ್ಯವನ್ನು ಸಂಪೂರ್ಣವಾಗಿ ಆರ್‌ಸಿಬಿಯ ಬ್ಯಾಗ್‌ಗೆ ಹಾಕಿದರು. ಕೃನಾಲ್ ಮತ್ತು ವಿರಾಟ್ ಅರ್ಧಶತಕ ಗಳಿಸುವುದರೊಂದಿಗೆ ಆರ್‌ಸಿಬಿ 9 ವಿಕೆಟ್‌ಗಳಿಂದ ಪಂದ್ಯವನ್ನು ಗೆದ್ದಿತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ