Axar Patel: 35 ಎಸೆತ, 3 ಫೋರ್, 5 ಸಿಕ್ಸರ್: ಅಕ್ಷರ್ ಪಟೇಲ್ ಸ್ಫೋಟಕ ಆಟದ ವಿಡಿಯೋ ಇಲ್ಲಿದೆ ನೋಡಿ

IND vs WI ODI: ಅಕ್ಷರ್ ಪಟೇಲ್ ಕ್ರೀಸ್​ಗೆ ಬಂದಾಗ ಭಾರತದ ಗೆಲುವಿಗೆ 74 ಎಸೆತಗಳಲ್ಲಿ 114 ರನ್​ಗಳು ಬೇಕಾಗಿತ್ತು. ವೆಸ್ಟ್ ಇಂಡೀಸ್ ಇನ್ನೆರಡು ವಿಕೆಟ್ ಕಿತ್ತರೆ ಜಯ ನಮ್ಮದೇ ಎಂದು ನಂಬಿದ್ದರು. ಆದರೆ, ಕೆರಿಬಿಯನ್ ಬೌಲರ್​ಗಳನ್ನು ಅಕ್ಷರಶಃ ಕಾಡಿದ ಅಕ್ಷರ್ ಫೋರ್-ಸಿಕ್ಸರ್​ಗಳ ಮಳೆ ಸುರಿಸಿ ಭಾರತಕ್ಕೆ ಜಯ ತಂದುಕೊಟ್ಟರು.

Axar Patel: 35 ಎಸೆತ, 3 ಫೋರ್, 5 ಸಿಕ್ಸರ್: ಅಕ್ಷರ್ ಪಟೇಲ್ ಸ್ಫೋಟಕ ಆಟದ ವಿಡಿಯೋ ಇಲ್ಲಿದೆ ನೋಡಿ
Axar Patel Batting IND vs WI 2nd ODI
Edited By:

Updated on: Jul 25, 2022 | 8:41 AM

ಭಾರತ ಕ್ರಿಕೆಟ್ ತಂಡದ ಬ್ಯಾಟಿಂಗ್ ಶಕ್ತಿ ಎಷ್ಟಿದೆ ಎಂಬುದು ಕ್ರಿಕೆಟ್ ಜಗತ್ತಿಗೆ ಮತ್ತೊಮ್ಮೆ ಸಾಭೀತಾಗಿದೆ. ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ 312 ರನ್​ಗಳ ಟಾರ್ಗೆಟ್ ಅನ್ನು ಬೆನ್ನಟ್ಟಿದ ಭಾರತ (IND vs WI 2nd ODI) ಕೊನೆಯ ಓವರ್ ವರೆಗೂ ಛಲ ಬಿಡದೆ ಹೋರಾಡಿ 2 ವಿಕೆಟ್​ಗಳ ರೋಚಕ ಗೆಲುವು ಸಾಧಿಸಿದೆ. ಈ ಮೂಲಕ ಮೂರು ಪಂದ್ಯಗಳ ಏಕದಿನ ಪಂದ್ಯಗಳಲ್ಲಿ 2-0 ಅಂತರದ ಮುನ್ನಡೆ ಪಡೆದುಕೊಂಡು ಸರಣಿ ವಶಪಡಿಸಕೊಂಡಿದೆ. ಭಾರತದ ಗೆಲುವಿನಲ್ಲಿ ಶ್ರೇಯಸ್ ಅಯ್ಯರ್, ಅಕ್ಷರ್ ಪಟೇಲ್ ಹಾಗೂ ಸಂಜು ಸ್ಯಾಮ್ಸನ್ (Sanju Samson) ಹೀಗೆ ಮೂವರು ಬ್ಯಾಟರ್​ಗಳು ಅರ್ಧಶತಕ ಸಿಡಿಸಿ ನೆರವಾದರು. ಅದರಲ್ಲೂ ಅಕ್ಷರ್ ಪಟೇಲ್ (Axar Patel) ಕೊನೆಯ ವರೆಗೂ ನಿಂತು ವಿನ್ನಿಂಗ್ ಶಾಟ್ ಹೊಡಯುವ ಮೂಲಕ ಟೀಮ್ ಇಂಡಿಯಾಕ್ಕೆ ಗೆಲುವು ತಂದಿಟ್ಟರು. ಕೇವಲ 35 ಎಸೆತಗಳಲ್ಲಿ 3 ಫೋರ್ ಹಾಗೂ 5 ಅಮೋಘ ಸಿಕ್ಸ್ ಸಿಡಿಸಿ ಮನಮೋಹಕ ಬ್ಯಾಟಿಂಗ್ ನಡೆಸಿದ ಅಕ್ಷರ್ ಅಜೇಯ 64 ರನ್ ಚಚ್ಚಿದರು.

ಅಕ್ಷರ್ ಪಟೇಲ್ ಕ್ರೀಸ್​ಗೆ ಬಂದಾಗ ಭಾರತದ ಗೆಲುವಿಗೆ 74 ಎಸೆತಗಳಲ್ಲಿ 114 ರನ್​ಗಳ ಅವಶ್ಯತೆಯಿತ್ತು. ಭಾರತಕ್ಕೆ ಗೆಲುವು ದೂರದ ಮಾತಾಗಿದ್ದರೆ ವೆಸ್ಟ್ ಇಂಡೀಸ್ ಇನ್ನೆರಡು ವಿಕೆಟ್ ಕಿತ್ತರೆ ಜಯ ನಮ್ಮದೇ ಎಂದು ನಂಬಿದ್ದರು. ಆದರೆ, ಎಲ್ಲರ ಯೋಜನೆಯನ್ನು ಉಲ್ಟಾ ಮಾಡಿದ್ದು ಅಕ್ಷರ್. ವೆಸ್ಟ್ ಇಂಡೀಸ್ ಬೌಲರ್​ಗಳನ್ನು ಅಕ್ಷರಶಃ ಕಾಡಿದ ಅಕ್ಷರ್ ಫೋರ್, ಸಿಕ್ಸರ್​ಗಳ ಮಳೆ ಸುರಿಸಿದರು. ಈ ವರ್ಷ ಬ್ಯಾಟಿಂಗ್​ನಲ್ಲಿ ಸಾಕಷ್ಟು ಸುಧಾರಣೆ ಕಂಡಿರುವ ಇವರು ಸರಿಯಾದ ಸಮಯದಲ್ಲಿ ತಂಡದ ಗೆಲುವಿಗೆ ಹೋರಾಡಿ ಉಪಯುಕ್ತ ಕಾಣಿಕೆ ನೀಡಿದರು. ಅದರಲ್ಲೂ ಅಕ್ಷರ್ 49.4ನೇ ಓವರ್​ನಲ್ಲಿ ಸಿಕ್ಸ್ ಸಿಡಿಸಿ ವಿನ್ನಿಂಗ್ ಶಾಟ್ ಹೊಡೆದಿದ್ದು ಅದ್ಭುತವಾಗಿತ್ತು. ಇಲ್ಲಿದೆ ನೋಡಿ ಪಟೇಲ್ ಆಟದ ವಿಡಿಯೋ.

ಇದನ್ನೂ ಓದಿ
Axar Patel: ಕೊನೆಯ ಓವರ್ ವರೆಗೂ ರೋಚಕ ಕಾದಾಟ: ಸಿಕ್ಸ್ ಸಿಡಿಸಿ ಗೆಲುವು ತಂದುಕೊಟ್ಟ ಅಕ್ಷರ್ ಪಟೇಲ್
India vs West Indies, 2nd ODI: ಹೋಪ್ ಭರ್ಜರಿ ಶತಕ; ಭಾರತಕ್ಕೆ 312 ರನ್ ಟಾರ್ಗೆಟ್
CWG 2022: ಸ್ಕ್ವಾಷ್‌ ಸ್ಪರ್ಧೆಯಲ್ಲಿ ಭಾರತದ ಪರ ಪದಕ್ಕಾಗಿ ಸೆಣಸಲಿರುವ 9 ಆಟಗಾರರಿವರು!
ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ 50 ಸಾವಿರಕ್ಕೂ ಹೆಚ್ಚು ಎಸೆತಗಳನ್ನು ಎಸೆದ ಮೂವರು ದಿಗ್ಗಜ ಬೌಲರ್‌ಗಳು ಯಾರು ಗೊತ್ತಾ?

ದ್ವಿತೀಯ ಏಕದಿನ ಪಂದ್ಯದಲ್ಲಿ ಮೊದಲು ಟಾಸ್​ ಗೆದ್ದು ಬ್ಯಾಟಿಂಗ್​ ಆಯ್ದುಕೊಂಡ ವೆಸ್ಟ್ ಇಂಡೀಸ್ ತಂಡಕ್ಕೆ ಶಾಯ್​ ಹೋಪ್​ ಮತ್ತು ಕೈಲ್​ ಮೇಯರ್ಸ್​ ಚುರುಕಿನ ಆರಂಭ ನೀಡಿದರು. ಮೊದಲ ವಿಕೆಟ್​ಗೆ ಇವರಿಬ್ಬರು 65 ರನ್​ ಗಳಿಸಿದರು. ಮೇಯರ್ಸ್​ 39 ರನ್​ ಗಳಿಸಿ ಔಟಾದರೆ, ನಂತರದ ಬಂದ ಶಾಮಾರ್ಹ್​ ಬ್ರೂಕ್ಸ್​ 35 ರನ್​ ಮಾಡಿದರು. ಬ್ರೆಂಡೆನ್​ ಕಿಂಗ್​ ಸೊನ್ನೆ ಸುತ್ತಿದ್ದು ತಂಡಕ್ಕೆ ಹಿನ್ನಡೆಯಾಯಿತು.

ಆದರೆ, ಮೂರು ಪ್ರಮುಖ ವಿಕೆಟ್​ ಕಳೆದುಕೊಂಡಿದ್ದ ವೇಳೆ ಮೈದಾನಕ್ಕಿಳಿದ ನಾಯಕ ನಿಕೋಲಸ್​ ಪೂರನ್​ ಅವರು ಹೋಪ್ ಜೊತೆಗೂಡಿ ಭಾರತೀಯ ಬೌಲರ್​ಗಳನ್ನು ದಂಡಿಸಿದರು. 77 ಎಸೆತಗಳಲ್ಲಿ 6 ಸಿಕ್ಸರ್​, 1 ಬೌಂಡರಿ ಬಾರಿಸಿ 74 ರನ್​ ಸಿಡಿಸಿದರು. ಇನ್ನೊಂದೆಡೆ ತಾಳ್ಮೆಯಿಂದಲೇ ದೊಡ್ಡ ಇನಿಂಗ್ಸ್​ ಕಟ್ಟಿದ ಹೋಪ್​ ಆಕರ್ಷಕ ಶತಕ ಬಾರಿಸಿದರು. 3 ಸಿಕ್ಸರ್​, 8 ಬೌಂಡರಿ ಸಮೇತ 115 ರನ್​ ಗಳಿಸಿದರು. ಪರಿಣಾಮ ವೆಸ್ಟ್ ಇಂಡೀಸ್ ನಿಗದಿತ 50 ಓವರ್​ಗಳಲ್ಲಿ 311 ರನ್​ ಗಳಿಸಿತು.

ವಿಂಡೀಸ್ ನೀಡಿದ್ದ 312 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಭಾರತ ತಂಡವು 49.4 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು ಗುರಿ ತಲುಪಿತು. ಶ್ರೇಯಸ್ ಅಯ್ಯರ್(63), ಸಂಜು ಸಾಮ್ಸನ್(54) ಹಾಗೂ ಅಕ್ಷರ್ ಪಟೇಲ್ ಅರ್ಧಶತಕ ಸಿಡಿಸುವ ಮೂಲಕ ಭಾರತಕ್ಕೆ ಗೆಲುವು ತಂದಿಟ್ಟರು. ಪಂದ್ಯಶ್ರೇಷ್ಠ ಪ್ರಶಸ್ತಿ ಅಕ್ಷರ್ ಬಾಜಿಕೊಂಡರು. ಅಂತಿಮ ಮೂರನೇ ಏಕದಿನ ಪಂದ್ಯ ಜುಲೈ 27ಕ್ಕೆ ನಡೆಯಲಿದೆ.