India vs West Indies 2nd ODI Playing 11: ಟಾಸ್ ಗೆದ್ದ ವಿಂಡೀಸ್; ಕನ್ನಡಿಗನಿಗೆ ಕೋಕ್! ಉಭಯ ತಂಡಗಳು ಹೀಗಿವೆ
India vs West Indies 2nd ODI Playing 11: ವೆಸ್ಟ್ ಇಂಡೀಸ್ ನಾಯಕ ನಿಕೋಲಸ್ ಪೂರನ್ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಭಾರತದ ಈ ಪಂದ್ಯದೊಂದಿಗೆ ವೇಗದ ಬೌಲರ್ ಅವೇಶ್ ಖಾನ್ ಪಾದಾರ್ಪಣೆ ಮಾಡುತ್ತಿದ್ದಾರೆ.
ಭಾರತ ಮತ್ತು ವೆಸ್ಟ್ ಇಂಡೀಸ್ (India and West Indies) ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಯ ಎರಡನೇ ಪಂದ್ಯವು ಭಾನುವಾರ ಜುಲೈ 24 ರಂದು ಪೋರ್ಟ್ ಆಫ್ ಸ್ಪೇನ್‌ನ ಕ್ವೀನ್ಸ್ ಪಾರ್ಕ್ ಓವಲ್‌ನಲ್ಲಿ ನಡೆಯಲಿದೆ. ಶುಕ್ರವಾರ ಜುಲೈ 22 ರಂದು ಈ ಮೈದಾನದಲ್ಲಿ ಮೊದಲ ಪಂದ್ಯ ನಡೆದಿದ್ದು, ಇದರಲ್ಲಿ ಭಾರತ ರೋಚಕ ಶೈಲಿಯಲ್ಲಿ 3 ರನ್‌ಗಳ ಜಯ ಸಾಧಿಸಿದೆ. ಇದೀಗ ವೆಸ್ಟ್ ಇಂಡೀಸ್ ಸರಣಿಯಲ್ಲಿ ಪುನರಾಗಮನ ಮಾಡಲು ಪ್ರಯತ್ನಿಸುತ್ತಿದೆ. ವೆಸ್ಟ್ ಇಂಡೀಸ್ ನಾಯಕ ನಿಕೋಲಸ್ ಪೂರನ್ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಭಾರತದ ಈ ಪಂದ್ಯದೊಂದಿಗೆ ವೇಗದ ಬೌಲರ್ ಅವೇಶ್ ಖಾನ್ (Avesh Khan) ಪಾದಾರ್ಪಣೆ ಮಾಡುತ್ತಿದ್ದಾರೆ.
ಇಂದಿನ ಪ್ಲೇಯಿಂಗ್ XI
ವೆಸ್ಟ್ ಇಂಡೀಸ್: ನಿಕೋಲಸ್ ಪೂರನ್ (ನಾಯಕ), ಶೈ ಹೋಪ್, ಬ್ರೂಕ್ಸ್, ಬ್ರಾಂಡನ್ ಕಿಂಗ್, ಕೈಲ್ ಮೇಯರ್ಸ್, ರೋವ್ಮನ್ ಪೊವೆಲ್, ಜೇಡನ್ ಸೀಲ್ಸ್, ಅಲ್ಜಾರಿ ಜೋಸೆಫ್, ರೊಮಾರಿಯೋ ಶೆಫರ್ಡ್, ಹೇಡನ್ ವಾಲ್ಷ್ ಜೂನಿಯರ್, ಅಕಿಲ್ ಹೊಸೈನ್.
ಭಾರತ: ಶಿಖರ್ ಧವನ್ (ನಾಯಕ), ಶುಭಮನ್ ಗಿಲ್, ಶ್ರೇಯಸ್ ಅಯ್ಯರ್, ದೀಪಕ್ ಹೂಡಾ, ಸೂರ್ಯಕುಮಾರ್ ಯಾದವ್, ಸಂಜು ಸ್ಯಾಮ್ಸನ್, ಅಕ್ಷರ್ ಪಟೇಲ್, ಶಾರ್ದೂಲ್ ಠಾಕೂರ್, ಮೊಹಮ್ಮದ್ ಸಿರಾಜ್, ಅವೇಶ್ ಖಾನ್, ಯುಜ್ವೇಂದ್ರ ಚಾಹಲ್
Congratulations to @Avesh_6 who is all set to make his ODI debut for #TeamIndia #WIvIND pic.twitter.com/4Tgqhs07qn
— BCCI (@BCCI) July 24, 2022
ಐಪಿಎಲ್‌ನಲ್ಲಿ ಮಿಂಚಿದ ಆವೇಶ್
ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಅವೇಶ್ ಖಾನ್ ಅಮೋಘ ಆಟ ಪ್ರದರ್ಶಿಸಿ ತಮ್ಮದೇ ಛಾಪು ಮೂಡಿಸಿದ್ದಾರೆ. ಐಪಿಎಲ್-2021ರಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಅವೇಶ್ ಎರಡನೇ ಸ್ಥಾನದಲ್ಲಿದ್ದಾರೆ. ಅವೇಶ್ 14ನೇ ಸೀಸನ್ನಲ್ಲಿ 16 ಪಂದ್ಯಗಳನ್ನು ಆಡಿ 24 ವಿಕೆಟ್ಗಳನ್ನು ಪಡೆದರು. ಆದರೆ, ಈ ವರ್ಷ ಅವರು ದೆಹಲಿ ಪರ ಆಡಲಿಲ್ಲ. ಹೊಸ ತಂಡ ಲಕ್ನೋ ಸೂಪರ್‌ಜೈಂಟ್ಸ್ ಪರ ಆಡಿದ್ದರು. ಐಪಿಎಲ್-2022ರಲ್ಲಿ ಲಕ್ನೋ ಪರ ಆಡಿದ್ದ ಅವೇಶ್ 13 ಪಂದ್ಯಗಳಲ್ಲಿ 18 ವಿಕೆಟ್ ಕಬಳಿಸಿದ್ದಾರೆ.
ಭಾರತದ ವಿಶಿಷ್ಟ ದಾಖಲೆ
ಎರಡನೇ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡವನ್ನು ಮಣಿಸಿ ಸರಣಿ ಗೆಲ್ಲುವ ನಿರೀಕ್ಷೆಯಲ್ಲಿ ಟೀಂ ಇಂಡಿಯಾ ಇದೆ. ಭಾರತ ತಂಡ ಈ ಪಂದ್ಯದಲ್ಲಿ ಗೆದ್ದರೆ ವೆಸ್ಟ್ ಇಂಡೀಸ್ ವಿರುದ್ಧ ಸತತ 12 ಏಕದಿನ ಸರಣಿ ಗೆದ್ದ ತಂಡ ಎನಿಸಿಕೊಳ್ಳಲಿದೆ. ಇಲ್ಲಿಯವರೆಗೆ, ಯಾವುದೇ ತಂಡವು ಏಕದಿನದಲ್ಲಿ ಯಾವುದೇ ತಂಡದ ವಿರುದ್ಧ ಸತತ 12 ಸರಣಿಗಳನ್ನು ಗೆದ್ದಿಲ್ಲ. 2006ರಲ್ಲಿ ಕೊನೆಯ ಬಾರಿಗೆ ವೆಸ್ಟ್ ಇಂಡೀಸ್ ಭಾರತವನ್ನು ಸೋಲಿಸಿತ್ತು.
ಇಲ್ಲಿ ಆಡಿದ 71 ಪಂದ್ಯಗಳಲ್ಲಿ ಮೊದಲು ಬ್ಯಾಟ್ ಮಾಡಿದ ತಂಡಗಳು 31ರಲ್ಲಿ ಗೆಲುವು ಸಾಧಿಸಿವೆ.ಎರಡನೇ ಇನಿಂಗ್ಸ್‌ನಲ್ಲಿ ಬ್ಯಾಟಿಂಗ್ ಮಾಡಿದ ತಂಡಗಳು 35 ಪಂದ್ಯಗಳಲ್ಲಿ ಜಯ ಸಾಧಿಸಿವೆ. ಇಲ್ಲಿ ಭಾರತ ಅತ್ಯಧಿಕ ತಂಡದ ಸ್ಕೋರ್‌ನ ದಾಖಲೆ ನಿರ್ಮಿಸಿತು. 2007ರ ವಿಶ್ವಕಪ್‌ನಲ್ಲಿ ಭಾರತ ಬರ್ಮುಡಾ ವಿರುದ್ಧ 413/7 ರನ್ ಗಳಿಸಿತ್ತು.
Published On - 6:41 pm, Sun, 24 July 22