Sam Northeast: ಏಕಾಂಗಿಯಾಗಿ 410 ರನ್ ಗಳಿಸಿದ ಇಂಗ್ಲೆಂಡ್‌ ಬ್ಯಾಟರ್! 18 ವರ್ಷಗಳ ನಂತರ ಲಾರಾ ದಾಖಲೆ ನೆನಪು

TV9kannada Web Team

TV9kannada Web Team | Edited By: pruthvi Shankar

Updated on: Jul 23, 2022 | 10:02 PM

Sam Northeast: ನಾರ್ತ್‌ಈಸ್ಟ್ ಕೇವಲ 450 ಎಸೆತಗಳಲ್ಲಿ 45 ಬೌಂಡರಿ ಮತ್ತು ಮೂರು ಸಿಕ್ಸರ್‌ಗಳನ್ನು ಒಳಗೊಂಡ ಈ 410 ರನ್‌ಗಳನ್ನು ಗಳಿಸಿದರು.

Jul 23, 2022 | 10:02 PM
ಇಂಗ್ಲೆಂಡ್‌ನ ಕೌಂಟಿ ಚಾಂಪಿಯನ್‌ಶಿಪ್‌ನಲ್ಲಿ, ಜುಲೈ 23 ಶನಿವಾರ ಇತಿಹಾಸದಲ್ಲಿ ದಾಖಲಾಗಿದೆ. ಗ್ಲಾಮೊರ್ಗಾನ್ ಕೌಂಟಿ ತಂಡದ ಬ್ಯಾಟ್ಸ್‌ಮನ್ ಸ್ಯಾಮ್ ನಾರ್ತ್‌ಈಸ್ಟ್ ಇಂಗ್ಲಿಷ್ ಕೌಂಟಿ ಚಾಂಪಿಯನ್‌ಶಿಪ್ ಡಿವಿಷನ್ ಎರಡರ ಪಂದ್ಯದಲ್ಲಿ 410 ರನ್‌ಗಳ (ಔಟಾಗದೆ) ಬೆರಗುಗೊಳಿಸುವ ಇನ್ನಿಂಗ್ಸ್‌ ಆಡಿ, ದಂತಕಥೆಗಳ ಪಟ್ಟಿಯಲ್ಲಿ ತಮ್ಮ ಹೆಸರನ್ನು ದಾಖಲಿಸಿದ್ದಾರೆ.

1 / 5
ಲೀಸೆಸ್ಟರ್‌ಶೈರ್ ಮತ್ತು ಗ್ಲಾಮೊರ್ಗಾನ್ ನಡುವೆ ನಡೆಯುತ್ತಿರುವ ಈ ಪಂದ್ಯದ ನಾಲ್ಕನೇ ದಿನದಂದು ಗ್ಲಾಮೊರ್ಗನ್ ಐದು ವಿಕೆಟ್‌ಗೆ 795 ರನ್ ಗಳಿಸಿ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು. ಇದರಲ್ಲಿ ಕೇವಲ 410 ರನ್‌ಗಳು ಸ್ಯಾಮ್ ನಾರ್ತ್‌ಈಸ್ಟ್ ಅವರ ಬ್ಯಾಟ್​ನಿಂದ ಬಂದವು.

2 / 5
Sam Northeast: ಏಕಾಂಗಿಯಾಗಿ 410 ರನ್ ಗಳಿಸಿದ ಇಂಗ್ಲೆಂಡ್‌ ಬ್ಯಾಟರ್! 18 ವರ್ಷಗಳ ನಂತರ ಲಾರಾ ದಾಖಲೆ ನೆನಪು

ನಾರ್ತ್‌ಈಸ್ಟ್ ಕೇವಲ 450 ಎಸೆತಗಳಲ್ಲಿ 45 ಬೌಂಡರಿ ಮತ್ತು ಮೂರು ಸಿಕ್ಸರ್‌ಗಳನ್ನು ಒಳಗೊಂಡ ಈ 410 ರನ್‌ಗಳನ್ನು ಗಳಿಸಿದರು. ಪಂದ್ಯದ ಕೊನೆಯ ದಿನದಂದು ಫಲಿತಾಂಶವನ್ನು ಪಡೆಯುವ ಭರವಸೆಯಲ್ಲಿ ಇನ್ನಿಂಗ್ಸ್ ಡಿಕ್ಲೇರ್ ಮಾಡುವ ನಿರ್ಧಾರವನ್ನು ತೆಗೆದುಕೊಳ್ಳಬೇಕಾಗಿತ್ತು, ಇದರಿಂದಾಗಿ ಅವರು ವಿಂಡೀಸ್ ಶ್ರೇಷ್ಠ ಬ್ಯಾಟ್ಸ್‌ಮನ್ ಬ್ರಿಯಾನ್ ಲಾರಾ ಅವರ 501 ರನ್‌ಗಳ (ಔಟಾಗದೆ) ವಿಶ್ವ ದಾಖಲೆಗೆ ಸವಾಲು ಹಾಕಲು ಸಾಧ್ಯವಾಗಲಿಲ್ಲ.

3 / 5
Sam Northeast: ಏಕಾಂಗಿಯಾಗಿ 410 ರನ್ ಗಳಿಸಿದ ಇಂಗ್ಲೆಂಡ್‌ ಬ್ಯಾಟರ್! 18 ವರ್ಷಗಳ ನಂತರ ಲಾರಾ ದಾಖಲೆ ನೆನಪು

ಆದಾಗ್ಯೂ, ಸ್ಯಾಮ್ ನಾರ್ತ್‌ಈಸ್ಟ್ ಖಂಡಿತವಾಗಿಯೂ ಲಾರಾ ಪಟ್ಟಿಯಲ್ಲಿ ತನ್ನ ಹೆಸರನ್ನು ಬರೆದಿದ್ದಾರೆ. 18 ವರ್ಷಗಳ ನಂತರ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 400ಕ್ಕೂ ಹೆಚ್ಚು ರನ್ ಗಳಿಸಿದ್ದು ಇದೇ ಮೊದಲು. ಈ 32 ವರ್ಷದ ಬ್ಯಾಟ್ಸ್‌ಮನ್​ಗೂ ಮೊದಲು ಕೊನೆಯ ಬಾರಿಗೆ 2004 ರಲ್ಲಿ, ಆಂಟಿಗುವಾ ಟೆಸ್ಟ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಬ್ರಿಯಾನ್ ಲಾರಾ ಅವರ ಅಜೇಯ 400 ರನ್​ಗಳ ಇನ್ನಿಂಗ್ಸ್ ಟೆಸ್ಟ್‌ನಲ್ಲಿ ಗರಿಷ್ಠ ಸ್ಕೋರ್ ಆಗಿದೆ.

4 / 5
Sam Northeast: ಏಕಾಂಗಿಯಾಗಿ 410 ರನ್ ಗಳಿಸಿದ ಇಂಗ್ಲೆಂಡ್‌ ಬ್ಯಾಟರ್! 18 ವರ್ಷಗಳ ನಂತರ ಲಾರಾ ದಾಖಲೆ ನೆನಪು

ಅಂದಹಾಗೆ, ಈ ಇನ್ನಿಂಗ್ಸ್‌ನೊಂದಿಗೆ, ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಗರಿಷ್ಠ ವೈಯಕ್ತಿಕ ಸ್ಕೋರ್ ಗಳಿಸಿದ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ನಾರ್ತ್‌ಈಸ್ಟ್ ಒಂಬತ್ತನೇ ಸ್ಥಾನ ಪಡೆದಿದ್ದಾರೆ. 1994 ರಲ್ಲಿ ಇಂಗ್ಲಿಷ್ ಕೌಂಟಿಯಲ್ಲಿ ವಾರ್ವಿಕ್‌ಷೈರ್‌ಗಾಗಿ 501 ರನ್ (ಔಟಾಗದೆ) ಗಳಿಸಿದ್ದರು .

5 / 5

ತಾಜಾ ಸುದ್ದಿ

Follow us on

Most Read Stories

Click on your DTH Provider to Add TV9 Kannada