ಶುಕ್ರವಾರ ನಡೆದ ವಿಜಯ್ ಹಜಾರೆ ಟ್ರೋಫಿಯ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ತಮಿಳುನಾಡು ಸೌರಾಷ್ಟ್ರ ತಂಡವನ್ನು ಎರಡು ವಿಕೆಟ್‌ಗಳಿಂದ ಸೋಲಿಸಿ ಹೆಚ್ಚಿನ ಸ್ಕೋರಿಂಗ್ ಮತ್ತು ರೋಚಕ ಪಂದ್ಯದಲ್ಲಿ ಫೈನಲ್ ಪ್ರವೇಶಿಸಿತು. ಈ ಪಂದ್ಯದಲ್ಲಿ ಬ್ಯಾಟ್ಸ್‌ಮನ್‌ಗಳು ಪ್ರಾಬಲ್ಯ ಮೆರೆದರು. ಉಭಯ ತಂಡಗಳ ಬ್ಯಾಟ್ಸ್‌ಮನ್‌ಗಳು ಬಿರುಸಿನ ಸ್ಕೋರ್ ಮಾಡಿ ಬೌಲರ್‌ಗಳ ಸ್ಥಿತಿಯನ್ನು ಹಾಳು ಮಾಡಿದರು. ಆದರೂ ಅಂತಿಮವಾಗಿ ತಮಿಳುನಾಡು ಪಂದ್ಯವನ್ನು ಗೆದ್ದು ಈಗ ಫೈನಲ್‌ನಲ್ಲಿ ಹಿಮಾಚಲ ಪ್ರದೇಶವನ್ನು ಎದುರಿಸಲಿದೆ. ಮೊದಲು ಬ್ಯಾಟಿಂಗ್ ಮಾಡಿದ ಸೌರಾಷ್ಟ್ರ ಎಂಟು ವಿಕೆಟ್ ನಷ್ಟಕ್ಕೆ 310 ರನ್ ಗಳಿಸಿತು. ಈ ಕಠಿಣ ಗುರಿಯನ್ನು ತಮಿಳುನಾಡು ಎಂಟು ವಿಕೆಟ್ ಕಳೆದುಕೊಂಡು ಸಾಧಿಸಿತು.
ಬಲಿಷ್ಠ ಗುರಿ ಬೆನ್ನತ್ತಿದ ತಮಿಳುನಾಡು 23 ರನ್ ಗಳಿಗೆ ಎರಡು ವಿಕೆಟ್ ಕಳೆದುಕೊಂಡಿತು. ಎರಡನೇ ಓವರ್‌ನ ಐದನೇ ಎಸೆತದಲ್ಲಿ ಖಾತೆ ತೆರೆಯದೆ ನಾರಾಯಣ್ ಜಗದೀಸನ್ ಔಟಾದರು. ನಾಲ್ಕು ರನ್ ಗಳಿಸಿದ್ದಾಗ ನಾಯಕ ವಿಜಯ್ ಶಂಕರ್ ಔಟಾದರು. ಇದಾದ ನಂತರ ಬಾಬಾ ಅಪರಾಜಿತ್ ಮತ್ತು ಬಾಬಾ ಇಂದರ್‌ಜಿತ್ ಮೂರನೇ ವಿಕೆಟ್‌ಗೆ 97 ರನ್‌ಗಳ ಜೊತೆಯಾಟದ ಮೂಲಕ ತಂಡವನ್ನು ಮುನ್ನಡೆಸಿದರು. ಇಂದ್ರಜಿತ್ ಒಟ್ಟು 120 ರನ್ ಇದ್ದಾಗ ಔಟಾದರು. ಅವರು 58 ಎಸೆತಗಳಲ್ಲಿ ಐದು ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನಿಂದ 50 ರನ್ ಗಳಿಸಿದರು. ಇದಾದ ನಂತರ ಅಪರಾಜಿತ್ ದಿನೇಶ್ ಕಾರ್ತಿಕ್ ಬೆಂಬಲ ಪಡೆದರು. ಆದರೆ, ಕಾರ್ತಿಕ್ 31 ರನ್ ದಾಟಲು ಸಾಧ್ಯವಾಗಲಿಲ್ಲ. ಕಾರ್ತಿಕ್ ಒಟ್ಟು ತಂಡದ ಮೊತ್ತ 168 ರನ್ ಇದ್ದಾಗ ಔಟಾದರು.
ಸುಂದರ್ ಉತ್ತಮ ಇನ್ನಿಂಗ್ಸ್
ಇದಾದ ಬಳಿಕ ವಾಷಿಂಗ್ಟನ್ ಸುಂದರ್ ಮೈದಾನಕ್ಕೆ ಇಳಿದರು. ಅವರು ಅಪರಾಜಿತ್ ಅವರೊಂದಿಗೆ 76 ರನ್‌ಗಳ ಜೊತೆಯಾಟವನ್ನು ನಡೆಸಿದರು. ಈ ನಡುವೆ ಅಪರಾಜಿತ್ ಶತಕ ಪೂರೈಸಿ ಕೆಲ ಸಮಯದ ಬಳಿಕ ಔಟಾದರು. ಅಪರಾಜಿತ್ 124 ಎಸೆತಗಳಲ್ಲಿ 122 ರನ್ ಗಳಿಸಿದರು. ಅವರ ಇನ್ನಿಂಗ್ಸ್‌ನಲ್ಲಿ 12 ಬೌಂಡರಿ ಮತ್ತು ಮೂರು ಸಿಕ್ಸರ್ ಸೇರಿದ್ದವು. ಶಾರುಖ್ ಖಾನ್ 11 ಎಸೆತಗಳಲ್ಲಿ 17 ರನ್ ಗಳಿಸಿದರು. ಸುಂದರ್ ಇನ್ನೊಂದು ತುದಿಯಿಂದ ಸ್ಕೋರ್‌ಬೋರ್ಡ್ ಓಡಿಸುತ್ತಾ ತಂಡವನ್ನು ಗುರಿಯತ್ತ ಕೊಂಡೊಯ್ದರು. ಸುಂದರ್ ಔಟಾದಾಗ ತಂಡದ ಸ್ಕೋರ್ 302 ರನ್ ಆಗಿತ್ತು. ಸುಂದರ್ 61 ಎಸೆತಗಳಲ್ಲಿ ಎಂಟು ಬೌಂಡರಿಗಳ ನೆರವಿನಿಂದ 70 ರನ್ ಗಳಿಸಿದರು. ರವಿ ಸಾಯಿ ಕಿಶೋರ್ ಅಜೇಯ 12 ರನ್ ಗಳಿಸಿ ತಂಡಕ್ಕೆ ಜಯ ತಂದುಕೊಟ್ಟರು.
ಜಾಕ್ಸನ್ ಶತಕ ವ್ಯರ್ಥ
ಇದಕ್ಕೂ ಮುನ್ನ ಮೊದಲು ಬ್ಯಾಟ್ ಮಾಡಿದ ಸೌರಾಷ್ಟ್ರ ತಂಡ ಬಲಿಷ್ಠ ಸ್ಕೋರ್ ಮಾಡಿತು. ವಿಕೆಟ್ ಕೀಪರ್ ಶೆಲ್ಡನ್ ಜಾಕ್ಸನ್ ಪ್ರಮುಖ ಪಾತ್ರ ವಹಿಸಿದರು. ಜಾಕ್ಸನ್ ಅದ್ಭುತ ಶತಕ ಬಾರಿಸಿದರು. ಜಡೇಜಾ 74 ಎಸೆತಗಳಲ್ಲಿ 52 ರನ್ ಗಳಿಸಿದರು. ಇದಾದ ನಂತರ ಪ್ರೇರಕ್ ಮಂಕಡ್ ಮತ್ತು ಅರ್ಪಿತ್ ವಾಸವಡಾ ಕೂಡ ಜಾಕ್ಸನ್ ಅವರನ್ನು ಬೆಂಬಲಿಸಿದರು. ಪ್ರರೆಕ್ 37 ರನ್‌ಗಳ ಇನಿಂಗ್ಸ್ ಆಡಿದರು. ನಂತರ ಜಾಕ್ಸನ್ ಕೂಡ ಪೆವಿಲಿಯನ್‌ಗೆ ಮರಳಿದರು. ಈ ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ 125 ಎಸೆತಗಳಲ್ಲಿ 11 ಬೌಂಡರಿಗಳೊಂದಿಗೆ ನಾಲ್ಕು ಸಿಕ್ಸರ್‌ಗಳನ್ನು ಒಳಗೊಂಡ 134 ರನ್ ಗಳಿಸಿದರು. ಅರ್ಪಿತ್ 40 ಎಸೆತಗಳಲ್ಲಿ ನಾಲ್ಕು ಬೌಂಡರಿ ಹಾಗೂ ಎರಡು ಸಿಕ್ಸರ್‌ಗಳ ನೆರವಿನಿಂದ 57 ರನ್ ಗಳಿಸಿದರು.
Published On - 6:55 pm, Fri, 24 December 21