IND vs SA: ಆಫ್ರಿಕಾ ನೆಲದಲ್ಲಿ ಧೋನಿ ದಾಖಲೆ ಮುರಿಯುತ್ತಾರಾ ರಿಷಬ್ ಪಂತ್?
IND vs SA: ದಕ್ಷಿಣ ಆಫ್ರಿಕಾದಲ್ಲಿ ಆಡುವ ಅವಕಾಶವನ್ನು ನೀಡಿದರೆ, ಅವರು ಟೆಸ್ಟ್‌ನಲ್ಲಿ 100 ವಿಕೆಟ್ ಗಳಿಸಿದ ಆರನೇ ವೇಗದ ಭಾರತೀಯ ಕೀಪರ್ ಆಗುತ್ತಾರೆ. ಧೋನಿ 36 ಟೆಸ್ಟ್‌ಗಳಲ್ಲಿ ಈ ಸಾಧನೆ ಮಾಡಿದ್ದರು.
ಭಾರತದ ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ರಿಷಬ್ ಪಂತ್ ಪ್ರಸ್ತುತ ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತದ ಮಾಜಿ ನಾಯಕ ಎಂಎಸ್ ಧೋನಿ ಅವರ ದಾಖಲೆಯನ್ನು ಸರಿಗಟ್ಟಲು ಸಿದ್ಧರಾಗಿದ್ದಾರೆ. ಅವರು ಇದುವರೆಗೆ 25 ಟೆಸ್ಟ್‌ಗಳಲ್ಲಿ ಗ್ಲೌಸ್‌ನೊಂದಿಗೆ 97 ವಿಕೆಟ್‌ಗಳನ್ನು ಪಡೆದಿದ್ದಾರೆ (ಕ್ಯಾಚ್, ಸ್ಟಂಪ್). ದಕ್ಷಿಣ ಆಫ್ರಿಕಾದಲ್ಲಿ ಆಡುವ ಅವಕಾಶವನ್ನು ನೀಡಿದರೆ, ಅವರು ಟೆಸ್ಟ್‌ನಲ್ಲಿ 100 ವಿಕೆಟ್ ಗಳಿಸಿದ ಆರನೇ ವೇಗದ ಭಾರತೀಯ ಕೀಪರ್ ಆಗುತ್ತಾರೆ. ಧೋನಿ 36 ಟೆಸ್ಟ್‌ಗಳಲ್ಲಿ ಈ ಸಾಧನೆ ಮಾಡಿದ್ದರು.
37 ಟೆಸ್ಟ್ ಪಂದ್ಯಗಳಲ್ಲಿ ಈ ದಾಖಲೆ ಮಾಡಿರುವ ವೃದ್ಧಿಮಾನ್ ಸಹಾ ಧೋನಿಗೆ ಹತ್ತಿರವಾಗಿದ್ದಾರೆ. ಭಾರತದ ಮಾಜಿ ಕೀಪರ್‌ಗಳಾದ ಕಿರಣ್ ಮೋರೆ, ನಯನ್ ಮೊಂಗಿಯಾ ಮತ್ತು ಸೈಯದ್ ಕಿರ್ಮಾನಿ ಕ್ರಮವಾಗಿ 39, 41 ಮತ್ತು 42 ಟೆಸ್ಟ್‌ಗಳಲ್ಲಿ ಮೈಲಿಗಲ್ಲನ್ನು ತಲುಪಿದರು. ನ್ಯೂಜಿಲೆಂಡ್ ವಿರುದ್ಧದ ತವರಿನಲ್ಲಿ ನಡೆದ ಟೆಸ್ಟ್ ಸರಣಿಗೆ ಆಯ್ಕೆಗಾರರು ಪಂತ್ ಅವರಿಗೆ ವಿಶ್ರಾಂತಿ ನೀಡಿದ್ದರು. ಹೀಗಾಗಿ ಪಂತ್ ಧೋನಿ ದಾಖಲೆ ಮುರಿಯಲು ಆಫ್ರಿಕಾ ಪ್ರವಾಸದವರೆಗೆ ಕಾಯಬೇಕಾಯ್ತು.
ಭಾರತ ಕ್ರಿಕೆಟ್ ತಂಡ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಮೂರು ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಲಿದೆ. ದಕ್ಷಿಣ ಆಫ್ರಿಕಾ ವಿರುದ್ಧದ ಮೂರು ಟೆಸ್ಟ್‌ಗಳ ಸರಣಿಯ ಮೊದಲ ಪಂದ್ಯ ಡಿಸೆಂಬರ್ 26 ರಂದು ಸೆಂಚುರಿಯನ್‌ನ ಸೂಪರ್‌ಸ್ಪೋರ್ಟ್ ಪಾರ್ಕ್‌ನಲ್ಲಿ ಆರಂಭವಾಗಲಿದೆ. ಎರಡನೇ ಟೆಸ್ಟ್ ಜನವರಿ 3 ರಂದು ಜೋಹಾನ್ಸ್‌ಬರ್ಗ್‌ನ ವಾಂಡರರ್ಸ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಮೂರನೇ ಮತ್ತು ಅಂತಿಮ ಟೆಸ್ಟ್ ಜನವರಿ 11 ರಂದು ಕೇಪ್ ಟೌನ್‌ನ ನ್ಯೂಲ್ಯಾಂಡ್ಸ್‌ನಲ್ಲಿ ಪ್ರಾರಂಭವಾಗುತ್ತದೆ.