ಅಫ್ರಿದಿ ಮದುವೆಯಲ್ಲಿ ಭಾಗಿಯಾಗಿ ವದಂತಿಗಳಿಗೆ ಬ್ರೇಕ್ ಹಾಕಿದ ಪಾಕ್ ನಾಯಕ ಬಾಬರ್; ವಿಡಿಯೋ ನೋಡಿ

Babar Azam: ಎಲ್ಲಾ ವದಂತಿಗಳಿಗೆ ತೆರೆ ಎಳೆದಿರುವ ನಾಯಕ ಬಾಬರ್ ಆಝಂ, ವೇಗಿ ಶಾಹೀನ್ ಶಾ ಅಫ್ರಿದಿ ಮದುವೆಯಲ್ಲಿ ಪಾಲ್ಗೊಂಡು ಸಹ ಆಟಗಾರನಿಗೆ ಶುಭಾಶಯ ಕೋರಿದ್ದಾರೆ. ಈ ಇಬ್ಬರು ಆತ್ಮೀಯವಾಗಿ ಮಾತನಾಡುತ್ತಿರುವ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ.

ಅಫ್ರಿದಿ ಮದುವೆಯಲ್ಲಿ ಭಾಗಿಯಾಗಿ ವದಂತಿಗಳಿಗೆ ಬ್ರೇಕ್ ಹಾಕಿದ ಪಾಕ್ ನಾಯಕ ಬಾಬರ್; ವಿಡಿಯೋ ನೋಡಿ
ಬಾಬರ್ ಆಝಂ, ಶಾಹೀನ್ ಅಫ್ರಿದಿ
Follow us
ಪೃಥ್ವಿಶಂಕರ
|

Updated on: Sep 20, 2023 | 10:42 AM

ಏಷ್ಯಾಕಪ್ (Asia Cup 2023) ಸೂಪರ್ 4 ಸುತ್ತಿನಲ್ಲಿ ಕಳಪೆ ಪ್ರದರ್ಶನ ನೀಡಿದ ಪಾಕಿಸ್ತಾನ ತಂಡ ಎರಡು ಬ್ಯಾಕ್ ಟು ಬ್ಯಾಕ್ ಪಂದ್ಯಗಳನ್ನು ಸೋತು ಏಷ್ಯಾಕಪ್​ನಿಂದ ಹೊರಬಿದ್ದಿತ್ತು. ಆ ಬಳಿಕ ತಂಡದ ಆಟಗಾರರ ಕಳಪೆ ಪ್ರದರ್ಶನಕ್ಕೆ ಅಸಮಾಧಾನಗೊಂಡಿದ್ದ ತಂಡದ ನಾಯಕ ಬಾಬರ್ ಆಝಂ (Babar Azam), ಡ್ರೆಸಿಂಗ್ ಕೋಣೆಯಲ್ಲಿ ಆಟಗಾರರ ವಿರುದ್ಧ ಹರಿಹಾಯ್ದಿದ್ದರು. ಈ ವೇಳೆ ಬಾಬರ್ ಮಾತಿಗೆ ಅಡ್ಡ ಬಂದಿದ್ದ ತಂಡದ ವೇಗದ ಬೌಲರ್ ಶಾಹೀನ್ ಶಾ ಅಫ್ರಿದಿ (Shaheen Afridi), ಬಾಬರ್ ಬಳಿ ವಾಗ್ವದ ನಡೆಸಿದ್ದರು ಎಂದು ಹಲವು ಮಾಧ್ಯಮಗಳು ವರದಿ ಮಾಡಿದ್ದವು. ಆದರೀಗ ಈ ಎಲ್ಲಾ ವದಂತಿಗಳಿಗೆ ತೆರೆ ಎಳೆದಿರುವ ನಾಯಕ ಬಾಬರ್ ಆಝಂ, ವೇಗಿ ಶಾಹೀನ್ ಶಾ ಅಫ್ರಿದಿ ಮದುವೆಯಲ್ಲಿ ಪಾಲ್ಗೊಂಡು ಸಹ ಆಟಗಾರನಿಗೆ ಶುಭಾಶಯ ಕೋರಿದ್ದಾರೆ. ಈ ಇಬ್ಬರು ಆತ್ಮೀಯವಾಗಿ ಮಾತನಾಡುತ್ತಿರುವ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ.

ಅಸಮಾಧಾನಗೊಂಡಿದ್ದ ಬಾಬರ್

ಮೇಲೆ ಹೇಳಿದಂತೆ ಏಷ್ಯಾಕಪ್‌ ಸೂಪರ್ 4 ಸುತ್ತಿನಲ್ಲಿ ಪಾಕಿಸ್ತಾನ ತಂಡ ಶ್ರೀಲಂಕಾದೆದುರು ಕೊನೆಯ ಎಸೆತದಲ್ಲಿ ಸೋತು ಟೂರ್ನಿಯಿಂದ ಹೊರಬಿದ್ದಿತ್ತು. ಆ ಪಂದ್ಯದಲ್ಲಿ ಪಾಕ್ ತಂಡ ಎಲ್ಲಾ ವಿಭಾಗದಲ್ಲೂ ನಿರಸ ಪ್ರದರ್ಶನ ನೀಡಿತ್ತು. ಅಲ್ಲದೆ ಭಾರತ ವಿರುದ್ಧದ ಪಂದ್ಯದಲ್ಲೂ ಪಾಕ್ ಆಟಗಾರರ ಆಟ ತೀರ ಕಳಪೆಯಾಗಿತ್ತು. ಇದು ನಾಯಕ ಬಾಬರ್ ಅವರ ತಾಳ್ಮೆಯ ಕಟ್ಟೆ ಹೊಡೆಸಿತ್ತು. ಹೀಗಾಗಿ ಏಷ್ಯಾಕಪ್​ನಿಂದ ಹೊರಬಿದ್ದ ಬಳಿಕ ಡ್ರೆಸಿಂಗ್ ಕೋಣೆಯಲ್ಲಿ ತಂಡದ ಆಟಗಾರರಿಗೆ ನಾಯಕ ಬಾಬರ್ ಸರಿಯಾಗಿ ಕ್ಲಾಸ್ ತೆಗೆದುಕೊಂಡಿದ್ದರು.

ಈ ವೇಳೆ ಉತ್ತಮ ಪ್ರದರ್ಶನ ನೀಡಿದ ಆಟಗಾರರ ಬಗ್ಗೆ ಮೆಚ್ಚುಗೆಯ ಮಾತನಾಡುವಂತೆ ವೇಗಿ ಶಾಹೀನ್ ಕೇಳಿಕೊಂಡಿದ್ದರು. ಆದರೆ ಶಾಹೀನ್ ಮಾತಿಗೆ ಗರಂ ಆಗಿದ್ದ ಬಾಬರ್, ತಂಡದಲ್ಲಿ ಯಾರು ಉತ್ತಮ ಪ್ರದರ್ಶನ ನೀಡಿದ್ದಾರೆ ಎಂಬುದು ನನಗೆ ಗೊತ್ತು ಎಂದು ಖಾರವಾಗಿ ಉತ್ತರಿಸಿದ್ದರು. ಅಂತಿಮವಾಗಿ ಈ ಇಬ್ಬರ ವಾಕ್ಸಮರಕ್ಕೆ ವಿಕೆಟ್ ಕೀಪರ್ ಮೊಹಮ್ಮದ್ ರಿಜ್ವಾನ್ ಬ್ರೇಕ್ ಹಾಕಿದ್ದರು ಎಂದು ವರದಿಯಾಗಿತ್ತು. ಅಲ್ಲದೆ ನಾಯಕ ಬಾಬರ್ ಯಾರಿಗೂ ತಿಳಿಸದೆ ಶ್ರೀಲಂಕಾದಿಂದ ಏಕಾಂಗಿಯಾಗಿ ಪಾಕಿಸ್ತಾನಕ್ಕೆ ಹೊರಟು ಬಂದಿದ್ದಾರೆ ಎಂದು ವರದಿಯಾಗಿತ್ತು.

ಎರಡನೇ ಬಾರಿಗೆ ಅಫ್ರಿದಿ ಮದುವೆ

ವಾಸ್ತವವಾಗಿ ವೇಗಿ ಶಾಹೀನ್‌ ಅಫ್ರಿದಿ ಈ ಹಿಂದೆಯೇ ತಂಡದ ಮಾಜಿ ನಾಯಕ ಶಾಹೀದ್ ಅಫ್ರಿದಿ ಮಗಳನ್ನು ಸರಳವಾಗಿ ವರಿಸಿದ್ದರು. ಆ ವೇಳೆ ಕೇವಲ ಕುಟುಂಬದ ಆಪ್ತರು ಮಾತ್ರ ಮದುವೆಯಲ್ಲಿ ಭಾಗಿಯಾಗಿದ್ದರು. ಹೀಗಾಗಿ ಅದ್ಧೂರಿಯಾಗಿ ಮತ್ತೊಮ್ಮೆ ಮದುವೆಯಾಗಲು ಅಫ್ರಿದಿ ಬಯಸಿದ್ದರು. ಅದ್ದರಿಂದ ಏಷ್ಯಾಕಪ್ ಮುಗಿಸಿದ ಬೆನ್ನಲ್ಲೇ ಅಫ್ರಿದಿ ಹಾಗೂ ಅಂಶಾ ಕಳೆದ ಶುಕ್ರವಾರ ಕರಾಚಿಯಲ್ಲಿ ಎರಡನೇ ಬಾರಿಗೆ ವೈವಾಹಿಕ ಜೀವಾನಕ್ಕೆ ಕಾಲಿರಿಸಿದ್ದರು. ವಿವಾಹ ಸಮಾರಂಭದ ನಂತರ ಡಿಎಚ್‌ಎ ಗಾಲ್ಫ್ ಮತ್ತು ಕಂಟ್ರಿ ಕ್ಲಬ್‌ನಲ್ಲಿ ದಂಪತಿಗಳಿಗೆ ಆರತಕ್ಷತೆ ಏರ್ಪಡಿಸಲಾಗಿತ್ತು. ಆರತಕ್ಷತೆಯಲ್ಲಿ ಪಾಕಿಸ್ತಾನದ ಕ್ರಿಕೆಟ್ ತಂಡದ ಶಾಹೀನ್ ಅವರ ಸಹ ಆಟಗಾರರು ಭಾಗವಹಿಸಿದ್ದರು.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಸಂಭಾಲ್ ಜಾಮಾ ಮಸೀದಿ ಸಮೀಕ್ಷೆ ವೇಳೆ ಕಲ್ಲು ತೂರಾಟ
ಸಂಭಾಲ್ ಜಾಮಾ ಮಸೀದಿ ಸಮೀಕ್ಷೆ ವೇಳೆ ಕಲ್ಲು ತೂರಾಟ
ಇನ್ನು ಮುಂದೆ ಸುಮ್ಮನಿರಲ್ಲ: ಚೈತ್ರಾ-ಮೋಕ್ಷಿತಾಗೆ ತ್ರಿವಿಕ್ರಮ್ ಸವಾಲು
ಇನ್ನು ಮುಂದೆ ಸುಮ್ಮನಿರಲ್ಲ: ಚೈತ್ರಾ-ಮೋಕ್ಷಿತಾಗೆ ತ್ರಿವಿಕ್ರಮ್ ಸವಾಲು
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ