ವಿಶ್ವಕಪ್ನಲ್ಲಿ ಅಮೆರಿಕದ ವಿರುದ್ಧ ನಡೆದ ಪಂದ್ಯದಲ್ಲಿ ಪಾಕಿಸ್ತಾನ ಸೋಲು ಕಂಡಿದೆ. ಈ ಸೋಲಿನಿಂದ ಪಾಕ್ ಸಾಕಷ್ಟು ಹಿನ್ನಡೆ ಅನುಭವಿಸಿದೆ. ಭಾರತದ ಜೊತೆಗೆ ಸೋತರೆ ಪಾಕಿಸ್ತಾನ (Pakistan) ಈ ಬಾರಿಯ ವಿಶ್ವಕಪ್ನಿಂದ ಬಹುತೇಕ ಹೊರ ಹೋದಂತೆ ಎನ್ನಲಾಗುತ್ತಿದೆ. ಪಾಕ್ ತಂಡ ಸೋತ ಬಳಿಕ ಬಾಬರ್ ಆಝಂ ಅವರು ಮಾತನಾಡಿದ್ದಾರೆ. ಅವರು ಆಡಿದ ಇಂಗ್ಲಿಷ್ ಸಾಕಷ್ಟು ಟ್ರೋಲ್ ಆಗುತ್ತಿದೆ.
ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ 20 ಓವರ್‌ಗಳಲ್ಲಿ ಕೇವಲ 159 ರನ್ ಕಲೆ ಹಾಕಿತು. ಈ ಮೊತ್ತ ಬೆನ್ನತ್ತಿದ್ದ ಅಮೆರಿಕ ತಂಡ ಒಳ್ಳೆಯ ಬ್ಯಾಟಿಂಗ್ ಮಾಡಿತು. ಕೊನೆಯ ಬಾಲ್ಗೆ ಬೇಕಿದ್ದಿದ್ದು 5ರನ್ಗಳು. ಈ ವೇಳೆ ಬೌಂಡರಿ ಬಂದಿದ್ದರಿಂದ ಸ್ಕೋರ್ ಸಮ ಆಯಿತು. ಸೂಪರ್ ಓವರ್ನಲ್ಲಿ ಅಮೆರಿಕ ಗೆದ್ದಿದೆ.
ಈ ಸೋಲಿನ ಬಗ್ಗೆ ಬಾಬರ್ ಆಝಂ ಮಾತನಾಡಿದ್ದಾರೆ. ‘ಮೊದಲ 6 ಓವರ್‌ಗಳಲ್ಲಿ ಬ್ಯಾಟಿಂಗ್ ಮಾಡುವಾಗ ನಮಗೆ ಯಾವುದೇ ಲಾಭ ಆಗಿಲ್ಲ. ಒಂದರ ಹಿಂದೆ ಒಂದರಂತೆ ವಿಕೆಟ್ಗಳು ಬಿದ್ದವು. ಬ್ಯಾಟ್ಸಮನ್ಗಳಾಗಿ ನಾವು ಪಾರ್ಟನರ್ಶಿಪ್ಗಳನ್ನು ಬೆಳೆಸಬೇಕು. ಆದರೆ, ನಾವು ಅಂದಕೊಂಡಂತೆ ಗೆಲುವು ಸಾಧಿಸಿಲ್ಲ. ನಮ್ಮ ಸ್ಪಿನ್ನರ್ಗಳು ಕೂಡ ಉತ್ತಮ ಪ್ರದರ್ಶನ ನೀಡಿಲ್ಲ. ಇದು ನಮಗೆ ದುಬಾರಿ ಆಯಿತು’ ಎಂದಿದ್ದಾರೆ ಬಾಬರ್.
‘ತುಂಬಾನೇ ಕಷ್ಟ ಇತ್ತು. ಎಲ್ಲಾ ಕ್ರೆಡಿಟ್ ಅಮೆರಿಕ ತಂಡಕ್ಕೆ ಸಲ್ಲಬೇಕು. ಎಲ್ಲಾ ವಿಭಾಗಗಳಲ್ಲಿ ನಮಗಿಂತ ಉತ್ತಮವಾಗಿ ಆಡಿದರು. ಪ್ರೊಫೆಷನಲ್ ಕ್ರಿಕೆಟರ್ ಆಗಿ ಮೈದಾನವನ್ನು ನೀವು ಅರ್ಥೈಸಿಕೊಳ್ಳಬೇಕು’ ಎಂದಿದ್ದಾರೆ ಬಾಬರ್.
ಇದನ್ನೂ ಓದಿ: ಸೂಪರ್ 8ಗೆ ಪಾಕಿಸ್ತಾನ ತಲುಪೋದು ಅನುಮಾನ? ಇಲ್ಲಿದೆ ಲೆಕ್ಕಾಚಾರ
ಬಾಬರ್ ಅವರ ಮಾತನಾಡಿದ್ದು ಬಟ್ಲರ್ ಇಂಗ್ಲಿಷ್ ಆಗಿತ್ತು. ಹೀಗಾಗಿ, ಎಲ್ಲರೂ ಇದನ್ನು ಟೀಕೆ ಮಾಡಿದ್ದಾರೆ. ‘ಪಾಕಿಸ್ತಾನದ ಬೌಲಿಂಗ್ಗಿಂತ ಬಾಬರ್ ಆಜಮ್ ಇಂಗ್ಲಿಷ್ ಉತ್ತಮವಾಗಿದೆ’ ಎಂದು ಕೆಲವರು ಟೀಕೆ ಮಾಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 9:08 am, Fri, 7 June 24