‘ಬಾಬರ್ ಶ್ರೇಷ್ಠ ಬ್ಯಾಟ್ಸ್‌ಮನ್’; ಕೊಹ್ಲಿ ಹೇಳಿಕೆಯ ಹಳೆಯ ವಿಡಿಯೋ ವೈರಲ್
Virat Kohli: ವಾಸ್ತವವಾಗಿ ಕಳೆದ ವರ್ಷ ನಡೆದ ಏಷ್ಯಾಕಪ್ ಸಮಯದಲ್ಲಿ ಚಿತ್ರಿಕರಿಸಲಾಗಿದ್ದ ಈ ವಿಡಿಯೋ ಇದೀಗ ಭಾರಿ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ವಿರಾಟ್ ಕೊಹ್ಲಿ ತಮ್ಮ ಹಾಗೂ ಪಾಕಿಸ್ತಾನ ತಂಡದ ಹಾಲಿ ನಾಯಕ ಬಾಬರ್ ಆಜಮ್ ನಡುವಿನ ಮೊದಲ ಭೇಟಿಯ ಬಗ್ಗೆ ಮಾತನಾಡಿದ್ದಾರೆ.
ಪ್ರಸ್ತುತ ವಿಶ್ವ ಕ್ರಿಕೆಟ್‌ನ ಶ್ರೇಷ್ಠ ಬ್ಯಾಟ್ಸ್‌ಮನ್ ಎಂದೊಡನೆ ನಮಗೆಲ್ಲರಿಗೂ ಥಟ್ಟನೇ ನೆನಪಾಗುವುದು ರನ್ ಮೆಷಿನ್ ವಿರಾಟ್ ಕೊಹ್ಲಿ (Virat Kohli). ಇದು ಟೀಂ ಇಂಡಿಯಾ (Team India) ಅಭಿಮಾನಿಗಳ ಅಭಿಪ್ರಾಯ ಮಾತ್ರವಲ್ಲ, ವಿಶ್ವ ಕ್ರಿಕೆಟ್‌ನ ಅಸಂಖ್ಯಾತ ಅಭಿಮಾನಿಗಳ ಮಾತಾಗಿದೆ. ಆದರೆ ಇದೇ ಪ್ರಶ್ನೆಯನ್ನು ವಿರಾಟ್ ಕೊಹ್ಲಿಗೆ ಕೇಳಿದರೆ, ಅವರ ಬಾಯಿಯಿಂದ ಯಾವ ಉತ್ತರ ಬರುತ್ತದೆ ಎಂಬುದನ್ನು ಕೇಳುವುದು ಎಲ್ಲ ಅಭಿಮಾನಿಗಳಿಗೆ ಇಷ್ಟದ ವಿಷಯವಾಗಿದೆ. ಇದೀಗ ಏಷ್ಯಾಕಪ್ (Asia Cup 2023) ಆರಂಭಕ್ಕೆ ಕೆಲವೇ ದಿನಗಳು ಬಾಕಿ ಇರುವಾಗ ಕಿಂಗ್ ಕೊಹ್ಲಿಯ ಹಳೆಯ ವಿಡಿಯೋ ಒಂದು ಸಾಕಷ್ಟು ವೈರಲ್ ಆಗುತ್ತಿದ್ದು, ಈ ವಿಡಿಯೋದಲ್ಲಿ ಪ್ರಸ್ತುತ ಕ್ರಿಕೆಟ್‌ನ ಬೆಸ್ಟ್ ಬ್ಯಾಟ್ಸ್‌ಮನ್ ಬಗ್ಗೆ ಕೊಹ್ಲಿ ಮುಕ್ತವಾಗಿ ಮಾತನಾಡಿದ್ದಾರೆ.
ವಾಸ್ತವವಾಗಿ ಕಳೆದ ವರ್ಷ ನಡೆದ ಏಷ್ಯಾಕಪ್ ಸಮಯದಲ್ಲಿ ಚಿತ್ರಿಕರಿಸಲಾಗಿದ್ದ ಈ ವಿಡಿಯೋ ಇದೀಗ ಭಾರಿ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ವಿರಾಟ್ ಕೊಹ್ಲಿ ತಮ್ಮ ಹಾಗೂ ಪಾಕಿಸ್ತಾನ ತಂಡದ ಹಾಲಿ ನಾಯಕ ಬಾಬರ್ ಆಜಮ್ ನಡುವಿನ ಮೊದಲ ಭೇಟಿಯ ಬಗ್ಗೆ ಮಾತನಾಡಿದ್ದಾರೆ.
IND vs WI: ಅಭಿಮಾನಿ ನೀಡಿದ ವಿಶೇಷ ಉಡುಗೊರೆಗೆ ಮನಸೋತ ಕೊಹ್ಲಿ; ವಿಡಿಯೋ ನೋಡಿ
ಬಾಬರ್ ಶ್ರೇಷ್ಠ ಬ್ಯಾಟ್ಸ್‌ಮನ್ – ವಿರಾಟ್
ಕಳೆದ ವರ್ಷದ ಏಷ್ಯಾಕಪ್ ಆರಂಭಕ್ಕೂ ಮುನ್ನ ಸ್ಟಾರ್ ಸ್ಪೋಟ್ರ್ಸ್ ಕೊಹ್ಲಿಯೊಂದಿಗೆ ವಿಶೇಷ ಸಂವಾದ ನಡೆಸಿತ್ತು. ಈ ಸಂವಾದದಲ್ಲಿ ಬಾಬರ್ ಅವರೊಂದಿಗಿನ ಮೊದಲ ಭೇಟಿಯನ್ನು ಕೊಹ್ಲಿ ನೆನಪಿಸಿಕೊಂಡಿದ್ದರು. 2019ರಲ್ಲಿ ನಾನು ಮೊದಲ ಬಾರಿಗೆ ಬಾಬರ್ ಆಜಂ ಅವರನ್ನು ಭೇಟಿಯಾಗಿದ್ದೆ. ಭಾರತ-ಪಾಕ್ ಪಂದ್ಯದ ನಂತರ ನನ್ನ ಬಳಿ ಬಂದ ಮತ್ತೊಬ್ಬ ಪಾಕ್ ಆಟಗಾರ ಇಮಾದ್ ವಾಸಿಮ್, ಬಾಬರ್ ಆಜಮ್ ನಿಮ್ಮನ್ನು ಭೇಟಿಯಾಗಲು ಬಯಸುತ್ತಿದ್ದಾರೆ ಎಂದರು. ವಾಸ್ತವವಾಗಿ ಇಮಾದ್ ವಾಸಿಮ್ಗೂ ನನಗೂ ಬಹಳ ಹಿಂದಿನಿಂದಲೂ ಪರಿಚಯವಿದೆ. ಅಂಡರ್ 19 ವಿಶ್ವಕಪ್ನಿಂದಲೂ ಇಮಾದ್ ಪರಿಚಯ ನನಗಿದೆ.
ಇಮಾದ್ ಹೇಳಿದ ಬಳಿಕ ನಾನು ಬಾಬರ್ ಅವರನ್ನು ಭೇಟಿಯಾದೆ. ಆಗ ನಾವಿಬ್ಬರೂ ಕ್ರಿಕೆಟ್ ಬಗ್ಗೆ ಸಾಕಷ್ಟು ಚರ್ಚಿಸಿದ್ದೇವು. ನಾನು ಇಂದಿಗೂ ಅವರ ಬಗ್ಗೆ ಗೌರವವನ್ನು ಹೊಂದಿದ್ದೇನೆ. ಕ್ರಿಕೆಟ್‌ನ ಪ್ರತಿಯೊಂದು ಸ್ವರೂಪದಲ್ಲೂ ಬಾಬರ್ ವಿಶ್ವದ ಅಗ್ರ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರು ಎಂಬುದರಲ್ಲಿ ಸಂದೇಹವಿಲ್ಲ. ಅವರು ಸ್ಥಿರವಾಗಿ ಬ್ಯಾಟಿಂಗ್ ಮಾಡುವುದನ್ನು ನೋಡಿ ಖುಷಿಯಾಗಿದೆ ಎಂದಿದ್ದರು. ಕೊಹ್ಲಿ, ಬಾಬರ್ ಬಗ್ಗೆ ಮೆಚ್ಚುಗೆ ಮಾತನಾಡಿರುವ ಹಳೆಯ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ.
A bond beyond boundaries!
Here’s what @imVkohli had to say about his 1st interaction with @babarazam258 & his genuine admiration for the Pakistani skipper!
Put your #HandsUpForIndia & tune-in to #INDvPAK on #AsiaCupOnStar Sep 2, Saturday | 2 PM Onwards | Star Sports Network pic.twitter.com/vvkbrePWFe
— Star Sports (@StarSportsIndia) August 12, 2023
ಮತ್ತೊಮ್ಮೆ ಮುಖಾಮುಖಿ
ಇನ್ನು ಬಾಬರ್ ಭೇಟಿಗೂ ಮುನ್ನ ನಡೆದ ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯದಲ್ಲಿ ಕೊಹ್ಲಿ ಪಾಕಿಸ್ತಾನದ ವಿರುದ್ಧ 77 ಎಸೆತಗಳಲ್ಲಿ 65 ರನ್ ಬಾರಿಸಿದ್ದರು. ಇದರಿಂದಾಗಿ ಭಾರತ 89 ರನ್‌ಗಳಿಂದ ಸುಲಭವಾಗಿ ಗೆಲುವು ಸಾಧಿಸಿತ್ತು. ಪ್ರಸ್ತುತ ವಿರಾಟ್ ಕೊಹ್ಲಿ ತಮ್ಮ ಅಂತರಾಷ್ಟ್ರೀಯ ವೃತ್ತಿ ಜೀವನದಲ್ಲಿ ಒಟ್ಟು 76 ಶತಕಗಳನ್ನು ಸಿಡಿಸಿದ್ದರೆ, ಅದೇ ಸಮಯದಲ್ಲಿ, ಬಾಬರ್ ಅಜಮ್ 30 ಶತಕಗಳನ್ನು ಗಳಿಸುವ ಮೂಲಕ ಕ್ರಿಕೆಟ್ ಜಗತ್ತಿನಲ್ಲಿ ಛಾಪು ಮೂಡಿಸಿದ್ದಾರೆ. ಇದೀಗ ಆಗಸ್ಟ್ 30 ರಿಂದ ಆರಂಭವಾಗಲಿರುವ ಏಷ್ಯಾಕಪ್ ಹಾಗೂ ವಿಶ್ವಕಪ್ ಪಂದ್ಯಾವಳಿಯಲ್ಲಿ ಉಭಯ ತಂಡಗಳು ಮುಖಾಮುಖಿಯಾಗುತ್ತಿದ್ದು, ಈ ಹೈವೋಲ್ಟೇಜ್ ಕದನದಲ್ಲಿ ಈ ಇಬ್ಬರು ಅತ್ಯುತ್ತಮ ಬ್ಯಾಟ್ಸ್‌ಮನ್‌ಗಳ ಪ್ರದರ್ಶನ ಹೇಗಿರಲಿದೆ ಎಂಬುದನ್ನು ಕಾದು ನೋಡಬೇಕಿದೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:20 am, Sun, 13 August 23