PAK W vs BAN W: 13 ಎಸೆತಗಳಲ್ಲಿ ಅರ್ಧದಷ್ಟು ತಂಡ ಪೆವಿಲಿಯನ್​ಗೆ! ಪಾಕ್ ಮಣಿಸಿ ಮೊದಲ ಗೆಲುವು ಕಂಡ ಬಾಂಗ್ಲಾ

| Updated By: ಪೃಥ್ವಿಶಂಕರ

Updated on: Mar 14, 2022 | 2:51 PM

PAK W vs BAN W: ಮಹಿಳಾ ವಿಶ್ವಕಪ್‌ನ 13 ನೇ ಪಂದ್ಯದಲ್ಲಿ ಬಾಂಗ್ಲಾದೇಶವು ಪಾಕಿಸ್ತಾನವನ್ನು 9 ರನ್‌ಗಳಿಂದ ಸೋಲಿಸಿತು. ಮೊದಲು ಬ್ಯಾಟ್ ಮಾಡಿದ ಬಾಂಗ್ಲಾದೇಶ 50 ಓವರ್‌ಗಳಲ್ಲಿ 7 ವಿಕೆಟ್‌ಗೆ 234 ರನ್ ಗಳಿಸಿತು.

PAK W vs BAN W: 13 ಎಸೆತಗಳಲ್ಲಿ ಅರ್ಧದಷ್ಟು ತಂಡ ಪೆವಿಲಿಯನ್​ಗೆ! ಪಾಕ್ ಮಣಿಸಿ ಮೊದಲ ಗೆಲುವು ಕಂಡ ಬಾಂಗ್ಲಾ
ಬಾಂಗ್ಲಾ ತಂಡ
Follow us on

ಹ್ಯಾಮಿಲ್ಟನ್‌ನ ಸೆಡಾನ್ ಪಾರ್ಕ್‌ನಲ್ಲಿ ಬಾಂಗ್ಲಾದೇಶದ ಆಟಗಾರ್ತಿಯರು ಮಹಿಳಾ ವಿಶ್ವಕಪ್​ ಇತಿಹಾಸ ನಿರ್ಮಿಸಿದ್ದಾರೆ. ಮಹಿಳಾ ವಿಶ್ವಕಪ್‌ನ (Women’s World Cup 2022) 13 ನೇ ಪಂದ್ಯದಲ್ಲಿ ಬಾಂಗ್ಲಾದೇಶವು ಪಾಕಿಸ್ತಾನವನ್ನು (Pakistan Women vs Bangladesh Women) 9 ರನ್‌ಗಳಿಂದ ಸೋಲಿಸಿತು. ಮೊದಲು ಬ್ಯಾಟ್ ಮಾಡಿದ ಬಾಂಗ್ಲಾದೇಶ 50 ಓವರ್‌ಗಳಲ್ಲಿ 7 ವಿಕೆಟ್‌ಗೆ 234 ರನ್ ಗಳಿಸಿತು. ಪ್ರತಿಕ್ರಿಯೆಯಾಗಿ ಒಂದು ಹಂತದಲ್ಲಿ ಗೆಲುವಿಗೆ ಸನಿಹದಲ್ಲಿದ್ದ ಪಾಕಿಸ್ತಾನ (PAK W vs BAN W) ಅಂತಿಮವಾಗಿ 50 ಓವರ್‌ಗಳಲ್ಲಿ 225 ರನ್ ಗಳಿಸಲಷ್ಟೇ ಶಕ್ತವಾಯಿತು. ಬಾಂಗ್ಲಾದೇಶದ ಗೆಲುವಿನಲ್ಲಿ ಫಾತಿಮಾ ಖಾತೂನ್ ಪ್ರಮುಖ ಪಾತ್ರ ವಹಿಸಿದ್ದರು. ಫಾತಿಮಾ ಬ್ಯಾಟ್‌ನಿಂದ ಖಾತೆ ತೆರೆಯಲು ಸಾಧ್ಯವಾಗದಿದ್ದರೂ ಬೌಲಿಂಗ್‌ನಲ್ಲಿ ಈ ಬೌಲರ್ 38 ರನ್‌ಗಳಿಗೆ 3 ವಿಕೆಟ್‌ಗಳನ್ನು ಕಬಳಿಸುವ ಮೂಲಕ ಬಾಂಗ್ಲಾದೇಶಕ್ಕೆ ಐತಿಹಾಸಿಕ ಗೆಲುವು ನೀಡಿದರು. ಬಾಂಗ್ಲಾದೇಶದ ಈ ಗೆಲುವು ಬಹಳ ವಿಶೇಷವಾಗಿದ್ದು ಆ ವಿಶೇಷತೆಗಳ ಬಗ್ಗೆ ನಾವೀಗ ನಿಮಗೆ ಹೇಳಲಿದ್ದೇವೆ.

ವಿಶ್ವಕಪ್‌ನಲ್ಲಿ ಬಾಂಗ್ಲಾದೇಶಕ್ಕೆ ಮೊದಲ ಜಯ
ಬಾಂಗ್ಲಾದೇಶ ಮಹಿಳಾ ಕ್ರಿಕೆಟ್ ತಂಡವು ಮೊದಲ ಬಾರಿಗೆ ವಿಶ್ವಕಪ್‌ನಲ್ಲಿ ಭಾಗವಹಿಸುತ್ತಿದ್ದು, ಈ ಪಂದ್ಯಾವಳಿಯಲ್ಲಿ ಮೊದಲ ಗೆಲುವು ಸಾಧಿಸಿದೆ. ಕಳೆದೆರಡು ಪಂದ್ಯಗಳಲ್ಲಿ ಹೀನಾಯವಾಗಿ ಸೋತಿದ್ದ ಬಾಂಗ್ಲಾದೇಶ, ಪಾಕಿಸ್ತಾನವನ್ನು ಮೊದಲ ಬಲಿಪಶುವನ್ನಾಗಿ ಮಾಡಿಕೊಂಡಿತ್ತು.

ಇತಿಹಾಸ ಪುನರಾವರ್ತಿಸಿದ ಬಾಂಗ್ಲಾದೇಶದ ಮಹಿಳಾ ತಂಡ
ಕುತೂಹಲಕಾರಿ ವಿಷಯವೆಂದರೆ, ಬಾಂಗ್ಲಾದೇಶದ ಪುರುಷರ ತಂಡವು 1999 ರಲ್ಲಿ ತಮ್ಮ ಮೊದಲ ವಿಶ್ವಕಪ್ ಅನ್ನು ಆಡಿತ್ತು. ತಮ್ಮ ಮೊದಲ ಗೆಲುವನ್ನು ತಂಡವು ಮೂರನೇ ಪಂದ್ಯದಲ್ಲಿ ದಾಖಲಿಸಿತ್ತು. ಪುರುಷರ ತಂಡ 1999ರಲ್ಲಿ ಸ್ಕಾಟ್ಲೆಂಡ್ ತಂಡವನ್ನು 22 ರನ್‌ಗಳಿಂದ ಸೋಲಿಸಿತ್ತು. ಇದಕ್ಕೆ ಹೋಲಿಕೆ ಎಂಬಂತೆ ಮಹಿಳಾ ತಂಡವು ತನ್ನ ಮೊದಲ ವಿಶ್ವಕಪ್‌ನ ಮೂರನೇ ಪಂದ್ಯದಲ್ಲಿ ಪಾಕಿಸ್ತಾನವನ್ನು ಮಣಿಸಿ ಮೊದಲ ಗೆಲುವು ದಾಖಲಿಸಿದೆ.

ಬಾಂಗ್ಲಾದೇಶದ ಅದ್ಭುತ ಪುನರಾಗಮನ
ಈ ಪಂದ್ಯದಲ್ಲಿ ಬಾಂಗ್ಲಾದೇಶ ಸೋಲು ಖಚಿತ ಎನಿಸಿತು. ಪಾಕಿಸ್ತಾನದ ಸ್ಕೋರ್ ಒಂದು ಸಮಯದಲ್ಲಿ 2 ವಿಕೆಟ್ ನಷ್ಟಕ್ಕೆ 183 ರನ್ ಆದರೆ ನಂತರ ಕೇವಲ 5 ರನ್ ಗಳಿಸುವಷ್ಟರಲ್ಲಿ 5 ವಿಕೆಟ್ ಕಳೆದುಕೊಂಡಿತು ಮತ್ತು ಅಂತಿಮವಾಗಿ ತಂಡವು 215 ರನ್ ಗಳಿಸಲಷ್ಟೇ ಶಕ್ತವಾಯಿತು.

ಇಂಗ್ಲೆಂಡ್ ಹಿಂದಿಕ್ಕಿದ ಬಾಂಗ್ಲಾದೇಶ
ಬಾಂಗ್ಲಾದೇಶ ಮಹಿಳಾ ಕ್ರಿಕೆಟ್ ತಂಡ ಪಾಕಿಸ್ತಾನವನ್ನು ಸೋಲಿಸಿದ ತಕ್ಷಣ ಅಂಕಪಟ್ಟಿಯಲ್ಲಿ ಇಂಗ್ಲೆಂಡ್‌ಗಿಂತ ಮೇಲಕ್ಕೆ ಏರಿದೆ. ಈ ಟೂರ್ನಿಯಲ್ಲಿ ಇಂಗ್ಲೆಂಡ್ ಇದುವರೆಗೆ 3 ಪಂದ್ಯಗಳಲ್ಲಿ ಮೂರರಲ್ಲೂ ಸೋಲು ಕಂಡಿದ್ದು, ಬಾಂಗ್ಲಾದೇಶ ತನ್ನ ಖಾತೆ ತೆರೆದು ಆರನೇ ಸ್ಥಾನ ಪಡೆದುಕೊಂಡಿದೆ.

ಇದನ್ನೂ ಓದಿ:IND vs WI, WWC 2022: ಮಹಿಳಾ ವಿಶ್ವಕಪ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದು ವಿಶ್ವ ದಾಖಲೆ ಬರೆದ ಜೂಲನ್ ಗೋಸ್ವಾಮಿ!