ಏಷ್ಯಾಕಪ್​ನಲ್ಲಿಂದು ಬಾಂಗ್ಲಾದೇಶ-ಅಫ್ಘಾನಿಸ್ತಾನ ಮುಖಾಮುಖಿ: ಗೆಲುವಿನ ಖಾತೆ ತೆರೆಯುತ್ತಾ ಶಕಿಬ್ ಪಡೆ?

Asia Cup 2023, Bangladesh vs Afghanistan Preview: ಹಿಂದಿನ ಪಂದ್ಯದಲ್ಲಿ, ಬಾಂಗ್ಲಾ ಪರ ಬ್ಯಾಟರ್ ನಜ್ಮುಲ್ ಹೊಸೈನ್ ಶಾಂಟೊ ಮತ್ತು ನಾಯಕ ಶಕೀಬ್ ಮಾತ್ರ ಶ್ರೇಷ್ಠ ಪ್ರದರ್ಶನ ನೀಡಿದರು. ಇದು ಗೆಲ್ಲಲೇ ಬೇಕಾಗಿರುವ ಪಂದ್ಯ ಆಗಿರುವುದರಿಂದ ಬಾಂಗ್ಲಾದೇಶ ತಮ್ಮ ತಪ್ಪುಗಳನ್ನು ಸರಿಪಡಿಸಿಕೊಳ್ಳಬೇಕಾಗಿದೆ. ಅಫ್ಘಾನಿಸ್ತಾನಕ್ಕೆ ಇದು ಟೂರ್ನಿಯಲ್ಲಿ ಆರಂಭಿಕ ಪಂದ್ಯವಾಗಿದೆ.

ಏಷ್ಯಾಕಪ್​ನಲ್ಲಿಂದು ಬಾಂಗ್ಲಾದೇಶ-ಅಫ್ಘಾನಿಸ್ತಾನ ಮುಖಾಮುಖಿ: ಗೆಲುವಿನ ಖಾತೆ ತೆರೆಯುತ್ತಾ ಶಕಿಬ್ ಪಡೆ?
AFG vs BAN Asia Cup

Updated on: Sep 03, 2023 | 11:15 AM

ಏಷ್ಯಾಕಪ್ 2023 ಟೂರ್ನಿ ರೋಚಕತೆ ಸೃಷ್ಟಿಸುತ್ತಿದೆ. ಇಂದು ಲಾಹೋರ್​ನ ಗಡಾಫಿ ಸ್ಟೇಡಿಯಂನಲ್ಲಿ ನಡೆಯಲಿರುವ ನಾಲ್ಕನೇ ಪಂದ್ಯದಲ್ಲಿ ಶಕಿಬ್ ಅಲ್ ಹಸನ್ ನಾಯಕತ್ವದ ಬಾಂಗ್ಲಾದೇಶ ಹಾಗೂ ಹಶ್ಮತುಲ್ಲಾ ಶಾಹಿದಿ ನೇತೃತ್ವದ ಅಫ್ಘಾನಿಸ್ತಾನ (Bangladesh vs Afghanistan) ತಂಡ ಮುಖಾಮುಖಿ ಆಗಲಿದೆ. ಆರಂಭಿಕ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಹೀನಾಯ ಸೋಲನ್ನು ಅನುಭವಿಸಿದ ಬಾಂಗ್ಲಾದೇಶಕ್ಕೆ ಇದು ಮಾಡು ಇಲ್ಲವೇ ಮಡಿ ಪಂದ್ಯವಾಗಿದೆ. ಇಂದಿನ ಮ್ಯಾಚ್​ನಲ್ಲಿ ಸೋತರೆ ಏಷ್ಯಾಕಪ್​ನಿಂದ ಹೊರಬೀಳಲಿದೆ. ಇತ್ತ ಅಫ್ಘಾನ್ ತಂಡಕ್ಕೆ ಇದು ಮೊದಲ ಪಂದ್ಯವಾಗಿದೆ.

ಹಿಂದಿನ ಪಂದ್ಯದಲ್ಲಿ, ಬಾಂಗ್ಲಾ ಪರ ಬ್ಯಾಟರ್ ನಜ್ಮುಲ್ ಹೊಸೈನ್ ಶಾಂಟೊ ಮತ್ತು ನಾಯಕ ಶಕಿಬ್ ಮಾತ್ರ ಶ್ರೇಷ್ಠ ಪ್ರದರ್ಶನ ನೀಡಿದರು. ಇದು ಗೆಲ್ಲಲೇ ಬೇಕಾಗಿರುವ ಪಂದ್ಯ ಆಗಿರುವುದರಿಂದ ಬಾಂಗ್ಲಾದೇಶ ತಮ್ಮ ತಪ್ಪುಗಳನ್ನು ಸರಿಪಡಿಸಿಕೊಳ್ಳಬೇಕಾಗಿದೆ. ಅಫ್ಘಾನಿಸ್ತಾನಕ್ಕೆ ಇದು ಟೂರ್ನಿಯಲ್ಲಿ ಆರಂಭಿಕ ಪಂದ್ಯವಾಗಿದೆ. ರಹಮಾನುಲ್ಲಾ ಗುರ್ಬಾಜ್, ಮೊಹಮ್ಮದ್ ನಬಿ, ಮುಜೀಬ್ ಉರ್ ರೆಹಮಾನ್ ಮತ್ತು ರಶೀದ್ ಖಾನ್ ಅವರಂತಹ ಅನುಭವಿ ಆಟಗಾರರನ್ನು ಹೊಂದಿರುವ ತಂಡದ ನಾಯಕ ಹಶ್ಮತುಲ್ಲಾ ಶಾಹಿದಿ. ಉದಯೋನ್ಮುಖ ಆಟಗಾರರಿರುವ ಅಫ್ಘಾನ್ ತಂಡ ಬಾಂಗ್ಲಾ ವಿರುದ್ಧ ಯಾವರೀತಿ ಪ್ರದರ್ಶನ ನೀಡುತ್ತೆ ಎಂಬುದು ನೋಡಬೇಕಿದೆ.

ಲಾಹೋರ್ ಪಿಚ್:

ಬಾಂಗ್ಲಾ-ಅಫ್ಘಾನ್ ಪಂದ್ಯ ನಡೆಯಲಿರುವ ಲಾಹೋರ್ ಪಿಚ್ ವೇಗದ ಬೌಲರ್‌ಗಳಿಗೆ ಬೌನ್ಸ್ ಅನ್ನು ನೀಡುವುದಿಲ್ಲ. ಇಲ್ಲಿ ಪರಿಣಾಮಕಾರಿಯಾಗಲು, ಬೌಲರ್‌ಗಳು ತಮ್ಮ ಎಸೆತಗಳಲ್ಲಿ ಬದಲಾವಣೆ ಮಾಡಬೇಕಿದೆ. ಸ್ಥಿರವಾದ ಲೈನ್ ಮತ್ತು ಲೆಂಗ್ತ್ ಅನ್ನು ಹಾಕಬೇಕು. ಪಿಚ್‌ ನಿಧಾನವಾಗಿದ್ದು, ಮಧ್ಯಮ ಓವರ್‌ಗಳಲ್ಲಿ ಸ್ಪಿನ್ನರ್‌ಗಳು ಮಾರಕವಾಗಬಹುದು. ಲಾಹೋರ್‌ನಲ್ಲಿ, ಆಫ್-ಸ್ಪಿನ್ನರ್‌ಗಳಿಗೆ ಹೋಲಿಸಿದರೆ ಲೆಗ್-ಸ್ಪಿನ್ನರ್‌ಗಳು ಹೆಚ್ಚು ಪರಿಣಾಮಕಾರಿ ಎಂದು ಸಾಬೀತಾಗಿದೆ.

ಇದನ್ನೂ ಓದಿ
ವಿಶ್ವಕಪ್​ಗೆ ಟೀಂ ಇಂಡಿಯಾ ಫೈನಲ್; ತಂಡದಲ್ಲಿ ಯಾರು ಇನ್, ಯಾರು ಔಟ್?
ಪಾಕ್ ವಿರುದ್ಧದ ಪಂದ್ಯ ರದ್ದು: ಸೂಪರ್-4 ಹಂತಕ್ಕೇರಲು ಭಾರತ ಏನು ಮಾಡಬೇಕು?
ರೌಫ್ ರಾಕೆಟ್ ವೇಗಕ್ಕೆ ಮುರಿದ ಶ್ರೇಯಸ್ ಅಯ್ಯರ್ ಬ್ಯಾಟ್!
ಏಷ್ಯಾಕಪ್ ಪಾಯಿಂಟ್ಸ್ ಟೇಬಲ್ ಹೇಗಿದೆ?

IND vs PAK: ರೌಫ್ ರಾಕೆಟ್ ವೇಗಕ್ಕೆ ಮುರಿದ ಶ್ರೇಯಸ್ ಅಯ್ಯರ್ ಬ್ಯಾಟ್! ವಿಡಿಯೋ ನೋಡಿ

ಪಂದ್ಯ ಎಷ್ಟು ಗಂಟೆಗೆ ಆರಂಭ?, ನೇರಪ್ರಸಾರ:

ಬಾಂಗ್ಲಾದೇಶ-ಅಫ್ಘಾನಿಸ್ತಾನ ನಡುವಿನ ಪಂದ್ಯ ಮಧ್ಯಾಹ್ನ 3 ಗಂಟೆಗೆ ಆರಂಭವಾಗಲಿದೆ. ಪಂದ್ಯಕ್ಕೆ ಅರ್ಧಗಂಟೆ ಮೊದಲು ಟಾಸ್ ನಡೆಯಲಿದೆ. ಪಂದ್ಯದ ಲೈವ್ ಸ್ಟ್ರೀಮಿಂಗ್ ಅನ್ನು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ನೋಡಬಹುದು (ಸ್ಟಾರ್ ಸ್ಪೋರ್ಟ್ಸ್ 1, ಸ್ಟಾರ್ ಸ್ಪೋರ್ಟ್ಸ್ 3 ಮತ್ತು ಸ್ಟಾರ್ ಸ್ಪೋರ್ಟ್ಸ್ ಸೆಲೆಕ್ಟ್ ಎಚ್‌ಡಿ). ಇದಲ್ಲದೆ, ಇದನ್ನು ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ ಅಪ್ಲಿಕೇಶನ್‌ನ ಮೊಬೈಲ್‌ನಲ್ಲಿಯೂ ಉಚಿತವಾಗಿ ವೀಕ್ಷಿಸಬಹುದು.

ಸಂಭಾವ್ಯ ಪ್ಲೇಯಿಂಗ್ ಇಲೆವೆನ್:

ಬಾಂಗ್ಲಾದೇಶ: ತೌಹಿದ್ ಹೃದಯ್, ನಯಿಮ್ ಶೇಖ್, ನಜ್ಮುಲ್ ಹೊಸೈನ್ ಶಾಂಟೊ, ಮುಶ್ಫಿಕರ್ ರಹೀಮ್ (ವಿಕೆಟ್ ಕೀಪರ್), ಅಫೀಫ್ ಹೊಸೈನ್, ಮೆಹಿದಿ ಹಸನ್ ಮಿರಾಜ್, ಶಕಿಬ್ ಅಲ್ ಹಸನ್ (ನಾಯಕ), ಮುಸ್ತಾಫಿಜುರ್ ರೆಹಮಾನ್, ತಸ್ಕಿನ್ ಅಹ್ಮದ್, ಶೋರಿಫುಲ್ ಇಸ್ಲಾಂ, ಮಹೆದಿ ಹಸನ್.

ಅಫ್ಘಾನಿಸ್ತಾನ: ರಹಮಾನುಲ್ಲಾ ಗುರ್ಬಾಜ್, ಇಬ್ರಾಹಿಂ ಜದ್ರಾನ್, ಹಶ್ಮತುಲ್ಲಾ ಶಾಹಿದಿ (ನಾಯಕ), ರಹಮತ್ ಶಾ, ನಜೀಬುಲ್ಲಾ ಝದ್ರಾನ್, ಮೊಹಮ್ಮದ್ ನಬಿ, ಕರೀಂ ಜನತ್, ರಶೀದ್ ಖಾನ್, ಮುಜೀಬ್ ಉರ್ ರೆಹಮಾನ್, ಗುಲ್ಬದಿನ್ ನೈಬ್.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:59 am, Sun, 3 September 23