ಬಾಂಗ್ಲಾದೇಶ ಎದುರು 60 ರನ್​ಗಳಿಂದ ಸೋತ ಆಸ್ಟ್ರೇಲಿಯಾ! ಕಾಂಗರೂಗಳಿಗೆ ಇದೆಂಥಾ ಸ್ಥಿತಿ.. ಸರಣಿ ಬಾಂಗ್ಲಾ ವಶ

ಇದು ಟಿ 20 ಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಬಾಂಗ್ಲಾದೇಶದ ಅತಿದೊಡ್ಡ ಗೆಲುವು. ಮತ್ತು ಆಸ್ಟ್ರೇಲಿಯಾದ ಕೆಟ್ಟ ಸೋಲು. ಟಿ 20 ಸರಣಿಯನ್ನು ಬಾಂಗ್ಲಾದೇಶ 4-1ರಿಂದ ವಶಪಡಿಸಿಕೊಂಡಿದೆ.

ಬಾಂಗ್ಲಾದೇಶ ಎದುರು 60 ರನ್​ಗಳಿಂದ ಸೋತ ಆಸ್ಟ್ರೇಲಿಯಾ! ಕಾಂಗರೂಗಳಿಗೆ ಇದೆಂಥಾ ಸ್ಥಿತಿ.. ಸರಣಿ ಬಾಂಗ್ಲಾ ವಶ
ಬಾಂಗ್ಲಾದೇಶ ಎದುರು 60 ರನ್​ಗಳಿಂದ ಸೋತ ಆಸ್ಟ್ರೇಲಿಯಾ
Follow us
TV9 Web
| Updated By: ಪೃಥ್ವಿಶಂಕರ

Updated on: Aug 09, 2021 | 10:39 PM

ಬಾಂಗ್ಲಾದೇಶ ವಿರುದ್ಧದ ಟಿ 20 ಸರಣಿಯಲ್ಲಿ ಆಸ್ಟ್ರೇಲಿಯಾ ಕೆಟ್ಟ ಸೋಲು ಕಂಡಿದೆ. ಐದು ಪಂದ್ಯಗಳ ಸರಣಿಯ ಕೊನೆಯ ಪಂದ್ಯದಲ್ಲಿ ಆಸ್ಟ್ರೇಲಿಯಾ 60 ರನ್ ಗಳ ಭಾರೀ ಸೋಲು ಅನುಭವಿಸಿತು. ಮೊದಲು ಆಡಿದ ಬಾಂಗ್ಲಾದೇಶ ಎಂಟು ವಿಕೆಟ್ ಗೆ 122 ರನ್ ಗಳಿಸಿತ್ತು. ಇದನ್ನು ಬೆನ್ನಟ್ಟಿದ ಆಸ್ಟ್ರೇಲಿಯಾ 13.4 ಓವರ್‌ಗಳಲ್ಲಿ 62 ರನ್​ಗಳಿಗೆ ಆಲ್​ಔಟ್ ಆಯಿತು. ಇದು ಟಿ 20 ಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಬಾಂಗ್ಲಾದೇಶದ ಅತಿದೊಡ್ಡ ಗೆಲುವು. ಮತ್ತು ಆಸ್ಟ್ರೇಲಿಯಾದ ಕೆಟ್ಟ ಸೋಲು. ಟಿ 20 ಸರಣಿಯನ್ನು ಬಾಂಗ್ಲಾದೇಶ 4-1ರಿಂದ ವಶಪಡಿಸಿಕೊಂಡಿದೆ. ಬಾಂಗ್ಲಾ ಮೊದಲ ಮೂರು ಪಂದ್ಯಗಳನ್ನು ಗೆದ್ದುಕೊಂಡಿತು. ನಂತರ ಆಸ್ಟ್ರೇಲಿಯಾ ನಾಲ್ಕನೇ ಪಂದ್ಯವನ್ನು ಗೆದ್ದಿತು. ಆದರೆ ಕೊನೆಯ ಪಂದ್ಯದಲ್ಲಿ ಬಾಂಗ್ಲಾದೇಶ ಬಲಿಷ್ಠ ಆಟ ಪ್ರದರ್ಶಿಸಿ ಪ್ರಚಂಡ ಗೆಲುವು ದಾಖಲಿಸಿತು.

ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶ ಮೊಹಮ್ಮದ್ ನಯೀಮ್ (23) ಮಹ್ಮದುಲ್ಲಾ (19) ಅವರ ಅಲ್ಪ ಆದರೆ ಉಪಯುಕ್ತ ಇನ್ನಿಂಗ್ಸ್‌ಗಳಿಂದ 8 ವಿಕೆಟ್ ನಷ್ಟಕ್ಕೆ 122 ರನ್ ಗಳಿಸಿತು. ಸ್ಪಿನ್ನರ್‌ಗಳಿಗೆ ಪಿಚ್ ನಿಧಾನ ಮತ್ತು ಸಹಾಯಕವಾಗಿತ್ತು. ಅದರಲ್ಲಿ ರನ್ ಗಳಿಸುವುದು ತುಂಬಾ ಕಷ್ಟಕರವಾಗಿತ್ತು. ಈ ಕಾರಣಕ್ಕಾಗಿ, ಆಸ್ಟ್ರೇಲಿಯಾ ಮೂರು ಸ್ಪಿನ್ನರ್‌ಗಳನ್ನು ಆಷ್ಟನ್ ಅಗರ್, ಆಷ್ಟನ್ ಟರ್ನರ್ ಮತ್ತು ಮಿಚೆಲ್ ಸ್ವೇಪ್ಸನ್​ರನ್ನು ತಂಡದಲ್ಲಿ ಆಡಿಸಿತ್ತು. ಜೊತೆಗೆ ಮಿಚೆಲ್ ಸ್ಟಾರ್ಕ್, ಜೋಶ್ ಹ್ಯಾಜಲ್‌ವುಡ್ ಮತ್ತು ಆಂಡ್ರ್ಯೂ ಟೈ ಅವರ ಮೂರು ವೇಗದ ಬೌಲರ್‌ಗಳಿಗೆ ವಿಶ್ರಾಂತಿ ನೀಡಿದರು.

14 ರನ್‌ಗಳಲ್ಲಿ 7 ವಿಕೆಟ್‌ಗಳು ಬಿದ್ದವು ಬಾಂಗ್ಲಾದೇಶದ ಗುರಿಯನ್ನು ಬೆನ್ನಟ್ಟಿದ ಆಸ್ಟ್ರೇಲಿಯಾ ಎರಡನೇ ಓವರ್‌ನ ಮೊದಲ ಎಸೆತದಲ್ಲಿ ಡಾನ್ ಕ್ರಿಶ್ಚಿಯನ್ ರೂಪದಲ್ಲಿ ಮೊದಲ ವಿಕೆಟ್ ಕಳೆದುಕೊಂಡಿತು. ನಂತರ ಮಿಚೆಲ್ ಮಾರ್ಷ್ ಕೂಡ ನಾಲ್ಕು ರನ್ ಗಳಿಸಿದ ನಂತರ ಔಟಾದರು. ಮ್ಯಾಥ್ಯೂ ವೇಡ್ (22) ಮತ್ತು ಬೆನ್ ಮ್ಯಾಕ್‌ಡರ್ಮೊಟ್ (17) ಇಂತಹ ಪರಿಸ್ಥಿತಿಯಲ್ಲಿ ತಂಡವನ್ನು ಮುನ್ನಡೆಸಿ ಸ್ಕೋರ್ ಅನ್ನು 50 ರ ಸಮೀಪ ತೆಗೆದುಕೊಂಡು ಬಂದರು. ಆದರೆ ವೇಡ್ ಒಟ್ಟು 38 ಮತ್ತು ಮೆಕ್‌ಡರ್ಮೊಟ್ 48 ರನ್ ಗಳಿಸಿ ಔಟಾದರು. ಇದರ ನಂತರ ಆಸ್ಟ್ರೇಲಿಯಾ ತಂಡವು ಕಾರ್ಡ್‌ಗಳ ಪ್ಯಾಕ್‌ನಂತೆ ಕುಸಿಯಿತು. 14 ರನ್ ಗಳಲ್ಲಿ ಏಳು ವಿಕೆಟ್ ಕಳೆದುಕೊಂಡರು. ಇಬ್ಬರು ಆಸ್ಟ್ರೇಲಿಯಾದ ಬ್ಯಾಟ್ಸ್‌ಮನ್‌ಗಳು ಮಾತ್ರ ಎರಡಂಕಿಯನ್ನು ದಾಟುವಲ್ಲಿ ಯಶಸ್ವಿಯಾದರು. ಈ ರೀತಿಯಾಗಿ, ಸಗಟು ದರದಲ್ಲಿ ವಿಕೆಟ್ ಪತನಕ್ಕೆ ಶಕೀಬ್ ಅಲ್ ಹಸನ್ ಮತ್ತು ಮೊಹಮ್ಮದ್ ಸೈಫುದ್ದೀನ್ ಕಾರಣರಾಗಿದ್ದರು. ಶಕೀಬ್ ಒಂಬತ್ತು ರನ್ ಗೆ ನಾಲ್ಕು ವಿಕೆಟ್ ಪಡೆದರೆ, ಸೈಫುದ್ದೀನ್ 12 ರನ್ ನೀಡಿ ಮೂರು ವಿಕೆಟ್ ಪಡೆದರು.

’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ