AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

INDW vs BANW: ಫೈನಲ್ ಪಂದ್ಯ ಟೈ: ಜಂಟಿ ವಿಜೇತರಾದ ಭಾರತ-ಬಾಂಗ್ಲಾದೇಶ್

Bangladesh Women vs India Women, 3rd ODI: ಈ ಹಂತದಲ್ಲಿ ಸ್ಮೃತಿ ಮಂಧಾನ ಜೊತೆಗೂಡಿದ ಹರ್ಲೀನ್ ಡಿಯೋಲ್ ಅದ್ಭುತ ಹೊಂದಾಣಿಕೆಯ ಆಟ ಪ್ರದರ್ಶಿಸಿದರು. ಪರಿಣಾಮ 3ನೇ ವಿಕೆಟ್​ಗೆ 107 ರನ್​ಗಳ ಜೊತೆಯಾಟ ಮೂಡಿಬಂತು.

INDW vs BANW: ಫೈನಲ್ ಪಂದ್ಯ ಟೈ: ಜಂಟಿ ವಿಜೇತರಾದ ಭಾರತ-ಬಾಂಗ್ಲಾದೇಶ್
BANW vs INDW
TV9 Web
| Updated By: ಝಾಹಿರ್ ಯೂಸುಫ್|

Updated on:Jul 22, 2023 | 5:22 PM

Share

Bangladesh Women vs India Women: ಢಾಕಾದ ಶೇರೆ ಬಾಂಗ್ಲಾ ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆದ ಬಾಂಗ್ಲಾದೇಶ್ ವನಿತೆಯರ ಹಾಗೂ ಭಾರತ ವನಿತೆಯರ ನಡುವಣ 3ನೇ ಏಕದಿನ ಪಂದ್ಯವು ರೋಚಕ ಟೈನಲ್ಲಿ ಅಂತ್ಯಗೊಂಡಿದೆ.  ಇದರೊಂದಿಗೆ ಮೂರು ಪಂದ್ಯಗಳ ಏಕದಿನ ಸರಣಿಯು 1-1 ಅಂತರದಿಂದ ಅಂತ್ಯಗೊಂಡಿದೆ. ಇದಕ್ಕೂ ಮುನ್ನ ಈ ಸರಣಿಯ ಮೊದಲ ಪಂದ್ಯದಲ್ಲಿ ಬಾಂಗ್ಲಾದೇಶ್ ಜಯ ಸಾಧಿಸಿತ್ತು. ಇನ್ನು 2ನೇ ಪಂದ್ಯದಲ್ಲಿ ಟೀಮ್ ಇಂಡಿಯಾ ಗೆಲುವು ದಾಖಲಿಸಿತು. ಆದರೆ ಮೂರನೇ ಪಂದ್ಯ ಟೈ ಆಗುವುದರೊಂದಿಗೆ ಸರಣಿಯು ಸಮಬಲದೊಂದಿಗೆ ಅಂತ್ಯಗೊಂಡಿತು. ಹೀಗಾಗಿ ಬಾಂಗ್ಲಾ-ಭಾರತವನ್ನು ಜಂಟಿ ವಿಜೇತರೆಂದು ಘೋಷಿಸಲಾಗಿದೆ.

ಇನ್ನು ಈ ಪಂದ್ಯದಲ್ಲಿ ಟಾಸ್ ಗೆದ್ದ ಬಾಂಗ್ಲಾದೇಶ್ ತಂಡವು ಮೊದಲು ಬ್ಯಾಟಿಂಗ್ ಮಾಡಿತು. ಆರಂಭಿಕರಾಗಿ ಕಣಕ್ಕಿಳಿದ ಶಮೀಮಾ ಸುಲ್ತಾನ ಹಾಗೂ ಫರ್ಗಾನಾ ಹಕ್ ತಂಡಕ್ಕೆ ಭರ್ಜರಿ ಆರಂಭ ಒದಗಿಸಿದ್ದರು. ಮೊದಲ ವಿಕೆಟ್​ಗೆ 91 ರನ್​ ಕಲೆಹಾಕಿದ ಬಳಿಕ ಶಮೀಮಾ (52) ಸ್ನೇಹ್ ರಾಣಾ ಎಸೆತದಲ್ಲಿ ಔಟಾದರು. ಮತ್ತೊಂದೆಡೆ ಉತ್ತಮ ಬ್ಯಾಟಿಂಗ್ ಮುಂದುವರೆಸಿದ ಫರ್ಗಾನಾ ಆಕರ್ಷಕ ಶತಕ ಸಿಡಿಸಿದರು.

160 ಎಸೆತಗಳನ್ನು ಎದುರಿಸಿದ ಫರ್ಗಾನಾ ಹಕ್ 7 ಫೋರ್​ಗಳೊಂದಿಗೆ 107 ರನ್​ ಬಾರಿಸಿ ರನೌಟ್ ಆಗಿ ನಿರ್ಗಮಿಸಿದರು. ಅಷ್ಟರಲ್ಲಾಗಲೇ ಬಾಂಗ್ಲಾದೇಶ್ ತಂಡದ ಒಟ್ಟು ಮೊತ್ತ 200ರ ಗಡಿದಾಟಿತ್ತು. ಅಂತಿಮವಾಗಿ 50 ಓವರ್​ಗಳಲ್ಲಿ 4 ವಿಕೆಟ್ ನಷ್ಟಕ್ಕೆ ಬಾಂಗ್ಲಾ ವನಿತೆಯರು 225 ರನ್​ ಕಲೆಹಾಕಿದರು.

226 ರನ್​ಗಳ ಸ್ಪರ್ಧಾತ್ಮಕ ಗುರಿ ಪಡೆದ ಭಾರತ ತಂಡಕ್ಕೆ ಸ್ಮೃತಿ ಮಂಧಾನ ಉತ್ತಮ ಆರಂಭ ಒದಗಿಸಿದ್ದರು. ಆದರೆ ಮತ್ತೊಂದೆಡೆ ಶಫಾಲಿ ವರ್ಮಾ (4) ಹಾಗೂ ಯಾಸ್ತಿಕ ಭಾಟಿಯಾ (5) ಬೇಗನೆ ನಿರ್ಗಮಿಸುವ ಮೂಲಕ ನಿರಾಸೆ ಮೂಡಿಸಿದರು. ಈ ಹಂತದಲ್ಲಿ ಸ್ಮೃತಿ ಮಂಧಾನ ಜೊತೆಗೂಡಿದ ಹರ್ಲೀನ್ ಡಿಯೋಲ್ ಅದ್ಭುತ ಹೊಂದಾಣಿಕೆಯ ಆಟ ಪ್ರದರ್ಶಿಸಿದರು. ಪರಿಣಾಮ 3ನೇ ವಿಕೆಟ್​ಗೆ 107 ರನ್​ಗಳ ಜೊತೆಯಾಟ ಮೂಡಿಬಂತು.

ಈ ಶತಕದ ಜೊತೆಯಾಟದ ಬೆನ್ನಲ್ಲೇ 85 ಎಸೆತಗಳಲ್ಲಿ 59 ರನ್ ಬಾರಿಸಿದ್ದ ಸ್ಮೃತಿ ಮಂಧಾನ ಕ್ಯಾಚ್ ನೀಡಿದರು. ಇದರ ಬೆನ್ನಲ್ಲೇ 108 ಎಸೆತಗಳಲ್ಲಿ 77 ರನ್ ಬಾರಿಸಿ ತಂಡಕ್ಕೆ ಆಸರೆಯಾಗಿದ್ದ ಹರ್ಲೀನ್ ಡಿಯೋಲ್ ಕೂಡ ಪೆವಿಲಿಯನ್ ಕಡೆ ಹೆಜ್ಜೆ ಹಾಕಿದರು.

ಆ ಬಳಿಕ ಬಂದ ನಾಯಕಿ ಹರ್ಮನ್​ಪ್ರೀತ್ ಕೌರ್ 14 ರನ್​ಗಳಿಸಲಷ್ಟೇ ಶಕ್ತರಾದರು. ಮತ್ತೊಂದೆಡೆ ಜೆಮಿಮಾ ರೊಡ್ರಿಗಸ್ ಎಚ್ಚರಿಕೆಯ ಬ್ಯಾಟಿಂಗ್ ಪ್ರದರ್ಶಿಸಿದರೆ, ಇನ್ನೊಂದೆಡೆ ದೀಪ್ತಿ ಶರ್ಮಾ (1) ರನೌಟ್ ಆಗುವ ಮೂಲಕ ವಿಕೆಟ್ ಕೈಚೆಲ್ಲಿದರು. ಪರಿಣಾಮ ಅಂತಿಮ 6 ಓವರ್​ಗಳಲ್ಲಿ ಟೀಮ್ ಇಂಡಿಯಾಗೆ ಗೆಲ್ಲಲು 25 ರನ್​ಗಳ ಅವಶ್ಯಕತೆಯಿತ್ತು.

ಈ ಹಂತದಲ್ಲಿ ಜೆಮಿಮಾ ಅನುಭವಕ್ಕೆ ತಕ್ಕಂತೆ ಬ್ಯಾಟಿಂಗ್ ಪ್ರದರ್ಶಿಸಿದರು. ಆದರೆ ಮತ್ತೊಂದೆಡೆ ಅಮನ್ಜೋತ್ ಕೌರ್ (10), ಸ್ನೇಹ್ ರಾಣಾ (0) ಹಾಗೂ ದೇವಿಕಾ ವೈದ್ಯ (0) ಬ್ಯಾಕ್ ಟು ಬ್ಯಾಕ್ ವಿಕೆಟ್ ಒಪ್ಪಿಸಿದರು. ಪರಿಣಾಮ ಗೆಲುವಿನ ಅಂಚಿನಲ್ಲಿ 9 ವಿಕೆಟ್ ಕಳೆದುಕೊಂಡು ಟೀಮ್ ಇಂಡಿಯಾ ಸಂಕಷ್ಟಕ್ಕೆ ಸಿಲುಕಿತು. ಅಲ್ಲದೆ ಭಾರತ ತಂಡವು ಗೆಲ್ಲಲು 12 ಎಸೆತಗಳಲ್ಲಿ 9 ರನ್​ ಕಲೆಹಾಕಬೇಕಿತ್ತು.

49ನೇ ಓವರ್​ನಲ್ಲಿ ಮೇಘನಾ ಸಿಂಗ್ ಬಾರಿಸಿದ ಫೋರ್​ನೊಂದಿಗೆ ಟೀಮ್ ಇಂಡಿಯಾ ಒಟ್ಟು 6 ರನ್​ ಕಲೆಹಾಕಿತು. ಅದರಂತೆ ಕೊನೆಯ ಓವರ್​ನಲ್ಲಿ 3 ರನ್​ಗಳ ಗುರಿಯಿತ್ತು. ಮಾರುಫಾ ಎಸೆದ ಅಂತಿಮ ಓವರ್​ನ ಮೊದಲ ಎಸೆತದಲ್ಲಿ ಮೇಘನಾ 1 ರನ್ ಓಡಿದರು. 2ನೇ ಎಸೆತದಲ್ಲಿ ಮತ್ತೊಂದು ರನ್ ಕಲೆಹಾಕುವ ಮೂಲಕ ಜೆಮಿಮಾ (33) ಸ್ಕೋರ್ ಅನ್ನು ಟೈ ಮಾಡಿದರು. ಆದರೆ ಮೂರನೇ ಎಸೆತದಲ್ಲಿ ಮೇಘನಾ ಸಿಂಗ್ (6) ವಿಕೆಟ್ ಕೀಪರ್​ಗೆ ಕ್ಯಾಚ್ ನೀಡಿದರು.

ಇದರೊಂದಿಗೆ 225 ರನ್​ಗಳ ಸಮಬಲದೊಂದಿಗೆ ಪಂದ್ಯವು ಟೈ ಆಯಿತು. ಇದರೊಂದಿಗೆ ಸರಣಿ ಗೆಲ್ಲುವ ಟೀಮ್ ಇಂಡಿಯಾ ಕನಸು ಕಮರಿತು. ಅತ್ತ ಬಾಂಗ್ಲಾದೇಶ್ ತಂಡವು ಇದೇ ಮೊದಲ ಬಾರಿಗೆ ಭಾರತದ ವಿರುದ್ಧ ಸರಣಿಯನ್ನು ಸಮಬಲಗೊಳಿಸುವಲ್ಲಿ ಯಶಸ್ವಿಯಾಗಿದೆ. ಅಂದರೆ ಬಾಂಗ್ಲಾದೇಶ್ ವನಿತೆಯರು ಇದುವರೆಗೆ ಟೀಮ್ ಇಂಡಿಯಾ ವಿರುದ್ಧ ಸರಣಿ ಗೆದ್ದಿಲ್ಲ. ಆದರೆ ಈ ಬಾರಿ 1-1 ಅಂತರದಿಂದ ಸರಣಿ ಸಮಬಲಗೊಳಿಸಿ ಜಂಟಿ ವಿಜೇತರಾಗುವಲ್ಲಿ ಯಶಸ್ವಿಯಾಗಿದ್ದಾರೆ.

ಬಾಂಗ್ಲಾದೇಶ್ ಪ್ಲೇಯಿಂಗ್ 11: ಶಮೀಮಾ ಸುಲ್ತಾನ , ಫರ್ಗಾನಾ ಹಕ್ , ಸೋಭಾನಾ ಮೊಸ್ತರಿ , ಲತಾ ಮೊಂಡಲ್ , ರಿತು ಮೋನಿ , ನಿಗರ್ ಸುಲ್ತಾನಾ (ನಾಯಕಿ) , ರಬೇಯಾ ಖಾನ್ , ನಹಿದಾ ಅಕ್ತರ್ , ಫಾಹಿಮಾ ಖಾತುನ್ , ಸುಲ್ತಾನಾ ಖಾತುನ್ , ಮಾರುಫಾ ಅಕ್ತರ್.

ಇದನ್ನೂ ಓದಿ: Team India: ಒಟ್ಟು 47 ಪ್ಲೇಯರ್ಸ್​: ಟೀಮ್ ಇಂಡಿಯಾದಿಂದ 32 ಆಟಗಾರರು ಔಟ್..!

ಭಾರತ ಪ್ಲೇಯಿಂಗ್ 11: ಸ್ಮೃತಿ ಮಂಧಾನ , ಶಫಾಲಿ ವರ್ಮಾ , ಯಾಸ್ತಿಕಾ ಭಾಟಿಯಾ (ವಿಕೆಟ್ ಕೀಪರ್) , ಹರ್ಮನ್‌ಪ್ರೀತ್ ಕೌರ್ (ನಾಯಕ) , ಜೆಮಿಮಾ ರೊಡ್ರಿಗಸ್ , ಹರ್ಲೀನ್ ಡಿಯೋಲ್ , ದೀಪ್ತಿ ಶರ್ಮಾ , ಅಮನ್ಜೋತ್ ಕೌರ್ , ಸ್ನೇಹ್ ರಾಣಾ , ದೇವಿಕಾ ವೈದ್ಯ , ಮೇಘನಾ ಸಿಂಗ್.

Published On - 5:20 pm, Sat, 22 July 23

ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ