ಬಿಗ್ ಬ್ಯಾಷ್ ಲೀಗ್‌ನಲ್ಲಿ (Big Bash League) ಶುಕ್ರವಾರ ನಡೆದ ಅಡಿಲೇಡ್ ಸ್ಟ್ರೈಕರ್ಸ್ ಹಾಗೂ ಸಿಡ್ನಿ ಥಂಡರ್ ( Adelaide Strikers vs Sydney Thunder) ನಡುವಿನ ಪಂದ್ಯದಲ್ಲಿ, ಸಿಡ್ನಿ ಥಂಡರ್ ತಂಡ ಕೇವಲ 15 ರನ್‌ಗಳಿಗೆ ಆಲೌಟ್ ಆಗುವ ಮೂಲಕ ಹೀನಾಯ ಸೋಲು ಕಂಡಿದೆ. ಈ ಪಂದ್ಯದಲ್ಲಿ ಕೇವಲ 35 ಎಸೆತಗಳನ್ನು ಎದುರಿಸಿದ ಸಿಡ್ನಿ ಥಂಡರ್ ತಂಡ ಅಲೆಕ್ಸ್ ಹೇಲ್ಸ್ (Alex Hales), ರಿಲೆ ರುಸ್ಸೋ ಅವರಂತಹ ಸ್ಟಾರ್ ಬ್ಯಾಟ್ಸ್ಮನ್ಗಳ ಬಳಗವನ್ನೇ ಹೊಂದಿದ್ದರೂ ಮುಜುಗರದ ಸೋಲಿನಿಂದ ಪಾರಾಗಲು ಸಾಧ್ಯವಾಗಲಿಲ್ಲ. ಇದು ಬಿಗ್ ಬ್ಯಾಷ್ ಲೀಗ್ ಇತಿಹಾಸದಲ್ಲಿ ತಂಡವೊಂದು ಅತ್ಯಂತ ಕಡಿಮೆ ಸ್ಕೋರ್ಗೆ ಆಲೌಟ್ ಆದ ಮೊದಲ ಪಂದ್ಯವಾಗಿದೆ. ಇದಕ್ಕೂ ಮೊದಲು 2015ರಲ್ಲಿ ಮೆಲ್ಬೋರ್ನ್ ರೆನೆಗೇಡ್ಸ್ ತಂಡ 57 ರನ್‌ಗಳಿಗೆ ಆಲೌಟ್ ಆಗಿತ್ತು.
ಅಲ್ಲದೆ ಪುರುಷರ ಕ್ರಿಕೆಟ್‌ನಲ್ಲಿ ಮೊದಲ ಬಾರಿಗೆ 20 ಕ್ಕಿಂತ ಕಡಿಮೆ ಸ್ಕೋರ್ಗೆ ತಂಡವೊಂದು ಆಲೌಟ್ ಆಗಿರುವುದು ಕೂಡ ಇದೇ ಮೊದಲು. ಕೇವಲ 15 ರನ್‌ಗಳಿಗೆ ಆಲೌಟ್ ಆಗುವ ಮೂಲಕ ಸಿಡ್ನಿ ಥಂಡರ್ ಈ ಅನಗತ್ಯ ದಾಖಲೆಯನ್ನು ತನ್ನದಾಗಿಸಿಕೊಂಡಿದೆ. ಈ ಹಿಂದೆ ಈ ಅನಗತ್ಯ ದಾಖಲೆಯು 2019 ರಲ್ಲಿ ಜೆಕ್ ರಿಪಬ್ಲಿಕ್ ವಿರುದ್ಧ 21 ರನ್ ಪೇರಿಸಿದ ಟರ್ಕಿ ಹೆಸರಿನಲ್ಲಿತ್ತು. ಈಗ ಈ ದಾಖಲೆಯನ್ನು ಸಿಡ್ನಿ ಥಂಡರ್ ಮಡಿಲಿಗೆ ಹಾಕಲಾಗಿದೆ. ಕಡಿಮೆ ರನ್‌ಗಳಿಗೆ ಆಲೌಟ್ ಆಗುವುದರೊಂದಿಗೆ ಇಷ್ಟು ಕಡಿಮೆ ಎಸೆತಗಳನ್ನು ಎದುರಿಸಿದ ಮೊದಲ ತಂಡ ಎಂಬ ಕಳಪೆ ದಾಖಲೆಗೂ ಸಿಡ್ನಿ ಥಂಡರ್ ಕೊರಳೊಡ್ಡಿದೆ.
IPL vs PSL: 500 ಆಟಗಾರರ ಪಟ್ಟಿ ಪ್ರಕಟ; ಐಪಿಎಲ್ ಹರಾಜಿಗೂ ಮುನ್ನ ಪಾಕಿಸ್ತಾನದ ಗಿಮಿಕ್..!
2. ಸಿಡ್ನಿ ಥಂಡರ್ಗೆ ಕೇವಲ 140 ರನ್ ಟಾರ್ಗೆಟ್
ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಅಡಿಲೇಡ್ ಸ್ಟ್ರೈಕರ್ಸ್ ಕ್ರಿಸ್ ಲಿನ್ (33 ರನ್) ಹಾಗೂ ಕಾಲಿನ್ ಡಿ ಗ್ರಾಂಡ್ಹೋಮ್ (36 ರನ್) ಅವರ ಉಪಯುಕ್ತ ಇನ್ನಿಂಗ್ಸ್ ನೆರವಿನಿಂದ ಅಂತಿಮ 20 ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡು 140 ರನ್ ಟಾರ್ಗೆಟ್ ನೀಡಿತು. ಆದರೆ ಈ ಗುರಿ ಬೆನ್ನಟ್ಟಿದ ಸಿಡ್ನಿ ಥಂಡರ್ ತಂಡದ ಬ್ಯಾಟ್ಸ್‌ಮನ್‌ಗಳು ಬಂದಷ್ಟೇ ವೇಗವಾಗಿ ಪೆವಿಲಿಯನ್ ಸೇರಿಕೊಂಡರು. ಆರಂಭಿಕರಾದ ಅಲೆಕ್ಸ್ ಹೇಲ್ಸ್, ಮ್ಯಾಥ್ಯೂ ಗಿಲ್ಕ್ಸ್ ಖಾತೆ ತೆರೆಯದೆ ವಿಕೆಟ್ ಒಪ್ಪಿಸಿದರು. ಬಳಿಕ ಬಂದ ರಿಲಿ ರುಸ್ಸೋ ಖಾತೆ ತೆರೆದರಾದರೂ 3 ರನ್ ಗಳಿಸಿ ಔಟಾದರು. ನಾಯಕ ಜೇಸನ್ ಸಂಘ ಕೂಡ ಖಾತೆ ತೆರೆಯಲು ಸಾಧ್ಯವಾಗಲಿಲ್ಲ. ಅಲೆಕ್ಸ್ ರಾಸ್, ಡೇನಿಯಲ್ ಸ್ಯಾಮ್ಸ್ ಎಲ್ಲರೂ ಕ್ರೀಸ್‌ಗೆ ಬಂದಷ್ಟೇ ವೇಗವಾಗಿ ಪೆವಿಲಿಯನ್‌ಗೆ ಹಿಂದಿರುಗಿದರು.
3. ಸಿಡ್ನಿ ಥಂಡರ್‌ನ ಮುಜುಗರದ ಬ್ಯಾಟಿಂಗ್
4. ಅಡಿಲೇಡ್ ಸ್ಟ್ರೈಕರ್ಸ್ ಬೌಲರ್‌ಗಳ ಅಟ್ಟಹಾಸ
ಒಂದೆಡೆ, ಸಿಡ್ನಿ ಥಂಡರ್ ಕಳಪೆ ಬ್ಯಾಟಿಂಗ್ ಪ್ರದರ್ಶಿಸಿದರೆ, ಮತ್ತೊಂದೆಡೆ, ಅಡಿಲೇಡ್ ಸ್ಟ್ರೈಕರ್ಸ್ ಬೌಲರ್‌ಗಳು ಆಕರ್ಷಕ ಪ್ರದರ್ಶನ ನೀಡಿದರು. ಮ್ಯಾಥ್ಯೂ ಶಾರ್ಟ್ ಮೊದಲ ವಿಕೆಟ್ ಪಡೆದು ಹಾವಳಿ ಆರಂಭಿಸಿದರೆ, ಹೆನ್ರಿ ಥಾರ್ನ್ಟನ್ ಮತ್ತು ವೆಸ್ ಅಗರ್ ಸಿಡ್ನಿಯಲ್ಲಿ ಉಗ್ರರೂಪ ತಾಳಿದರು. ಥಾರ್ನ್ಟನ್ ಕೇವಲ 2.5 ಓವರ್ಗಳಲ್ಲಿ ಕೇವಲ 3 ರನ್ ನೀಡಿ 5 ವಿಕೆಟ್ ಪಡೆದರೆ, ವೆಸ್ ಅಗರ್ 6 ರನ್ ನೀಡಿ 4 ವಿಕೆಟ್ ಪಡೆದರು.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 5:55 pm, Fri, 16 December 22