2,4,4,2,7,6,6..; ಒಂದೇ ಓವರ್​ನಲ್ಲಿ 31 ರನ್ ಚಚ್ಚಿದ ಮಾಜಿ ಆರ್​ಸಿಬಿ ಆಟಗಾರ..! ವಿಡಿಯೋ ನೋಡಿ

ತಂಡದ ಪರ ಫಿಂಚ್ 35 ಎಸೆತಗಳಲ್ಲಿ 7 ಬೌಂಡರಿ ಮತ್ತು 5 ಸಿಕ್ಸರ್‌ಗಳ ಸಹಿತ ಅಜೇಯ 76 ರನ್ ಗಳಿಸಿದರು. ಆದರೆ ಫಿಂಚ್ ಅಬ್ಬರದ ಹೊರತಾಗಿಯೂ ಮೆಲ್ಬೋರ್ನ್ ತಂಡ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್‌ಗೆ 202 ರನ್ ಗಳಿಸಲಷ್ಟೇ ಶಕ್ತವಾಗಿ 10 ರನ್‌ಗಳಿಂದ ಸೋಲನುಭವಿಸಿತು.

2,4,4,2,7,6,6..; ಒಂದೇ ಓವರ್​ನಲ್ಲಿ 31 ರನ್ ಚಚ್ಚಿದ ಮಾಜಿ ಆರ್​ಸಿಬಿ ಆಟಗಾರ..! ವಿಡಿಯೋ ನೋಡಿ
ಆರನ್ ಫಿಂಚ್
Follow us
TV9 Web
| Updated By: ಪೃಥ್ವಿಶಂಕರ

Updated on:Jan 23, 2023 | 1:39 PM

2,4,4,2,7,6,6… ಇದು ಯಾವುದೋ ಮೊಬೈಲ್ ನಂಬರ್ ಅಲ್ಲ. ಬದಲಿಗೆ ಆಸೀಸ್ ಮಾಜಿ ನಾಯಕನೊಬ್ಬ ಒಂದೇ ಓವರ್​ನಲ್ಲಿ ಸಿಡಿಸಿದ ರನ್​ಗಳ ಪಟ್ಟಿ. ತನ್ನ ಕಳಪೆ ಫಾರ್ಮ್​ನಿಂದಾಗಿ ಆಸ್ಟ್ರೇಲಿಯಾ ಕ್ರಿಕೆಟ್​ನಿಂದ ಬಹು ದೂರ ಸಾಗಿರುವ ತಂಡದ ಮಾಜಿ ನಾಯಕ ಆರನ್ ಫಿಂಚ್ (Aaron Finch) ಬಿಗ್​ ಬ್ಯಾಷ್​ನಲ್ಲಿ (Big Bash League) ಸ್ಫೋಟಕ ಇನ್ನಿಂಗ್ಸ್ ಆಡುವ ಮೂಲಕ ತನ್ನಲ್ಲಿ ಇನ್ನು ರಾಷ್ಟ್ರೀಯ ತಂಡದಲ್ಲಿ ಆಡುವಷ್ಟು ಸಾಮಥ್ಯ್ರವಿದೆ ಎಂಬುದನ್ನ ಸಾಭೀತುಪಡಿಸಿದ್ದಾರೆ. ಬಿಗ್​ ಬ್ಯಾಷ್ ಲೀಗ್​ನಲ್ಲಿ ಮೆಲ್ಬೋರ್ನ್ ರೆನೆಗೇಡ್ಸ್ ತಂಡದ ನಾಯಕರಾಗಿ ಆರನ್ ಫಿಂಚ್ ಪರ್ತ್ ಸ್ಕಾರ್ಚರ್ಸ್ ತಂಡದ (Melbourne Renegades vs Perth Scorchers) ಬೌಲರ್ ಆಂಡ್ರ್ಯೂ ಟೈಗೆ ಒಂದೇ ಓವರ್‌ನಲ್ಲಿ ಬರೋಬ್ಬರಿ 31 ರನ್ ಬಾರಿಸಿದ್ದಾರೆ. ಆದಾಗ್ಯೂ, ಫಿಂಚ್ ಅಬ್ಬರದ ಹೊರತಾಗಿಯೂ, ಮೆಲ್ಬೋರ್ನ್ ರೆನೆಗೇಡ್ಸ್ ತಂಡವನ್ನು ಮಣಿಸುವಲ್ಲಿ ಪರ್ತ್ ಸ್ಕಾರ್ಚರ್ಸ್ ಯಶಸ್ವಿಯಾಗಿದೆ.

ಲೀಗ್​ನ 52ನೇ ಪಂದ್ಯದಲ್ಲಿ ಮೆಲ್ಬೋರ್ನ್ ರೆನೆಗೇಡ್ಸ್ ಮತ್ತು ಪರ್ತ್ ಸ್ಕಾರ್ಚರ್ಸ್ ತಂಡದ ನಡುವೆ ರೋಚಕ ಹಣಾಹಣಿ ನಡೆಯಿತು. ಈ ವೇಳೆ ಮೊದಲು ಬ್ಯಾಟಿಂಗ್ ಮಾಡಿದ ಪರ್ತ್ ಸ್ಕಾರ್ಚರ್ಸ್ ತಂಡ ಬರೋಬ್ಬರಿ 213 ರನ್​ಗಳ ಟಾರ್ಗೆಟ್ ಸೆಟ್ ಮಾಡಿತು. ಈ ವೇಳೆ ಮೆಲ್ಬೋರ್ನ್ ತಂಡದ ಪರ ಅಬ್ಬರದ ಬ್ಯಾಟಿಂಗ್ ಮಾಡಿದ ಫಿಂಚ್, ಆಂಡ್ರ್ಯೂ ಟೈ ಅವರ ಒಂದೇ ಓವರ್‌ನಲ್ಲಿ ರನ್ ಲೂಟಿ ಮಾಡಿದರು.

IPL 2021: ಡೆಲ್ಲಿ ತಂಡಕ್ಕೆ ಕೈಕೊಟ್ಟ ಮತ್ತೊಬ್ಬ ಇಂಗ್ಲೆಂಡ್​ ಕ್ರಿಕೆಟಿಗ; ಬದಲಿಯಾಗಿ ಬಂದ ಬಿಗ್ ಬ್ಯಾಷ್​ ಲೀಗ್ ಸೂಪರ್​ಸ್ಟಾರ್!

ಲೀಗ್‌ನ ಅತ್ಯಂತ ದುಬಾರಿ ಓವರ್

ಪಂದ್ಯದ 18ನೇ ಓವರ್‌ನಲ್ಲಿ ಪರ್ತ್ ಸ್ಕಾರ್ಚರ್ಸ್ ತಂಡದ ಪರ ಆಂಡ್ರ್ಯೂ ಟೈ ದಾಳಿಗಿಳಿದರೆ, ಎದುರಾಳಿ ತಂಡದ ನಾಯಕ ಆರನ್ ಫಿಂಚ್ ಸ್ಟ್ರೈಕ್​ನಲ್ಲಿದ್ದರು. ಓವರ್‌ನ ಮೊದಲ ಎಸೆತದಲ್ಲಿ 2 ರನ್ ಬಾರಿಸಿದ ಫಿಂಚ್, ನಂತರದ 2 ಎಸೆತಗಳಲ್ಲಿ ಸತತ 2 ಬೌಂಡರಿ ಬಾರಿಸಿದರು. ನಾಲ್ಕನೇ ಎಸೆತದಲ್ಲಿ ಮತ್ತೆ 2 ರನ್ ಕದಿಯುವಲ್ಲಿ ಫಿಂಚ್ ಯಶಸ್ವಿಆದರು. ಈ ವೇಳೆ ಒತ್ತಡಕ್ಕೆ ಸಿಲುಕಿದ್ದ ಟೈ 5ನೇ ಎಸೆತವನ್ನು ನೋ ಬಾಲ್‌ ಮಾಡಿದರು. ಈ ನೋ ಬಾಲ್‌ನ ಲಾಭ ಪಡೆದ ಫಿಂಚ್, ಅಪ್ಪರ್ ಕಟ್ ಮೂಲಕ ಸಿಕ್ಸರ್ ಬಾರಿಸಿದರು. ಬಳಿಕ ಫ್ರೀ ಹಿಟ್‌ ಬಾಲ್​ನಲ್ಲಿಯೂ ಫಿಂಚ್ ಮತ್ತೊಂದು ಸಿಕ್ಸರ್ ಹೊಡೆದರು. ಅಂತಿಮವಾಗಿ ಓವರ್​ನ ಕೊನೆಯ ಎಸೆತವನ್ನು ಫಿಂಚ್ ಸಿಕ್ಸರ್‌ಗಟ್ಟುವ ಮೂಲಕ ಲೀಗ್‌ನಲ್ಲಿ ಅದರಲ್ಲೂ ಒಂದೇ ಓವರ್​ನಲ್ಲಿ ಅತಿ ಹೆಚ್ಚು ರನ್ ಕಲೆ ಹಾಕಿದ ಆಟಗಾರ ಎನಿಸಿಕೊಂಡರು.

ಆಸ್ಟ್ರೇಲಿಯ ತಂಡದಿಂದ ಫಿಂಚ್ ಔಟ್

ಈ ಒಂದು ಓವರ್‌ನಲ್ಲಿ ಫಿಂಚ್ 31 ರನ್ ಸಿಡಿಸಿದರೆ ಇದರಿಂದ ಆಘಾತಕ್ಕೊಳಗಾದ ಟೈ, ಮುಂದಿನ ಓವರ್​ನಲ್ಲಿ ಕ್ಯಾಚ್​ ಕೂಡ ಕೈಚೆಲ್ಲಿದರು. ತಂಡದ ಪರ ಫಿಂಚ್ 35 ಎಸೆತಗಳಲ್ಲಿ 7 ಬೌಂಡರಿ ಮತ್ತು 5 ಸಿಕ್ಸರ್‌ಗಳ ಸಹಿತ ಅಜೇಯ 76 ರನ್ ಗಳಿಸಿದರು. ಆದರೆ ಫಿಂಚ್ ಅಬ್ಬರದ ಹೊರತಾಗಿಯೂ ಮೆಲ್ಬೋರ್ನ್ ತಂಡ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್‌ಗೆ 202 ರನ್ ಗಳಿಸಲಷ್ಟೇ ಶಕ್ತವಾಗಿ 10 ರನ್‌ಗಳಿಂದ ಸೋಲನುಭವಿಸಿತು.

ಕಳೆದ ವರ್ಷ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಫಿಂಚ್, ನಂತರ ಟಿ20 ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯನ್ ತಂಡವನ್ನು ಮುನ್ನಡೆಸಿದರು. ಆದರೆ ಪಂದ್ಯಾವಳಿಯ ಮಧ್ಯದಲ್ಲಿ ಗಾಯಗೊಂಡ ಅವರನ್ನು ತಂಡದಿಂದ ಕೈಬಿಡಲಾಯಿತು. ಅಂದಿನಿಂದ ಇಲ್ಲಿಯವರೆಗೆ ಫಿಂಚ್​ಗೆ ಮತ್ತೆ ಆಸ್ಟ್ರೇಲಿಯಾ ತಂಡಕ್ಕೆ ಮರಳಲು ಸಾಧ್ಯವಾಗಿಲ್ಲ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 1:37 pm, Mon, 23 January 23

ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ