
ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಬಿಗ್ ಬ್ಯಾಷ್ ಲೀಗ್ನಲ್ಲಿ (BBL 2024) ಯುವ ಸ್ಪೋಟಕ ಬ್ಯಾಟರ್ ಜೋಶ್ ಬ್ರೌನ್ ಭರ್ಜರಿ ಸೆಂಚುರಿ ಸಿಡಿಸಿದ್ದಾರೆ. ಕ್ವಿನ್ಸ್ಲ್ಯಾಂಡ್ ಓವಲ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಅಡಿಲೇಡ್ ಸ್ಟ್ರೈಕರ್ಸ್ ಮತ್ತು ಬ್ರಿಸ್ಬೇನ್ ಹೀಟ್ ತಂಡಗಳು ಮುಖಾಮುಖಿಯಾಗಿತ್ತು. ಉಭಯ ತಂಡಗಳ ಪಾಲಿಗೆ ನಿರ್ಣಾಯಕವಾಗಿದ್ದ ಈ ಮ್ಯಾಚ್ನಲ್ಲಿ ಟಾಸ್ ಗೆದ್ದ ಬ್ರಿಸ್ಬೇನ್ ಹೀಟ್ ಬ್ಯಾಟಿಂಗ್ ಆಯ್ದುಕೊಂಡರು.
ನಾಯಕನ ನಿರ್ಧಾರವನ್ನು ಸಮರ್ಥಿಸುವಂತೆ ಬ್ರಿಸ್ಬೇನ್ ತಂಡಕ್ಕೆ ಆರಂಭಿಕ ಆಟಗಾರ ಜೋಶ್ ಬ್ರೌನ್ ಸಿಡಿಲಬ್ಬರದ ಆರಂಭ ಒದಗಿಸಿದ್ದರು. ಮೊದಲ ಓವರ್ನಿಂದ ಅಡಿಲೇಡ್ ಸ್ಟ್ರೈಕರ್ಸ್ ಬೌಲರ್ಗಳ ಬೆಂಡೆತ್ತಲಾರಂಭಿಸಿದ ಬ್ರೌನ್ ಮೈದಾನದ ಮೂಲೆ ಮೂಲೆಗೂ ಸಿಕ್ಸ್-ಫೋರ್ಗಳ ಸುರಿಮಳೆಗೈದರು. ಪರಿಣಾಮ ಕೇವಲ 41 ಎಸೆತಗಳಲ್ಲಿ ಶತಕ ಪೂರೈಸಿದರು.
ಈ ಪಂದ್ಯದಲ್ಲಿ 41 ಎಸೆತಗಳಲ್ಲಿ ಸೆಂಚುರಿ ಸಿಡಿಸುವ ಮೂಲಕ ಬಿಗ್ ಬ್ಯಾಷ್ ಲೀಗ್ನಲ್ಲಿ ಅತೀ ವೇಗವಾಗಿ ಶತಕ ಬಾರಿಸಿದ 2ನೇ ಬ್ಯಾಟರ್ ಎಂಬ ದಾಖಲೆ ಜೋಶ್ ಬ್ರೌನ್ ಪಾಲಾಗಿದೆ. ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವುದು ಆಸ್ಟ್ರೇಲಿಯಾದ ಕ್ರೇಗ್ ಸಿಮ್ಸನ್.
2014ರ ಬಿಗ್ ಬ್ಯಾಷ್ ಲೀಗ್ನಲ್ಲಿ ಪರ್ತ್ ಸ್ಕಾಚರ್ಸ್ ಪರ ಆಡಿದ್ದ ಸಿಮನ್ಸ್ ಅಡಿಲೇಡ್ ಸ್ಟ್ರೈಕರ್ಸ್ ವಿರುದ್ಧ ಕೇವಲ 39 ಎಸೆತಗಳಲ್ಲಿ ಶತಕ ಪೂರೈಸಿದ್ದರು. ಇದೀಗ ಅಡಿಲೇಡ್ ಸ್ಕ್ರೈಕರ್ಸ್ ವಿರುದ್ಧವೇ ಕೇವಲ 41 ಎಸೆತಗಳಲ್ಲಿ ಸೆಂಚುರಿ ಸಿಡಿಸಿ ಜೋಶ್ ಬ್ರೌನ್ ಈ ಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿದ್ದಾರೆ.
The most insane innings.
Here’s all of Josh Brown’s record-breaking 12(!!) sixes. #BBL13 pic.twitter.com/SGFndB8fc2
— KFC Big Bash League (@BBL) January 22, 2024
ಈ ಪಂದ್ಯದಲ್ಲಿ 57 ಎಸೆತಗಳನ್ನು ಎದುರಿಸಿದ ಜೋಶ್ ಬ್ರೌನ್ 12 ಸಿಕ್ಸ್ ಹಾಗೂ 10 ಫೋರ್ಗಳೊಂದಿಗೆ 140 ರನ್ ಬಾರಿಸಿದ್ದರು. ಈ ಭರ್ಜರಿ ಶತಕದ ನೆರವಿನೊಂದಿಗೆ ಬ್ರಿಸ್ಬೇನ್ ಹೀಟ್ ತಂಡವು 20 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು 214 ರನ್ ಕಲೆಹಾಕಿತು.
215 ರನ್ಗಳ ಕಠಿಣ ಗುರಿ ಪಡೆದ ಅಡಿಲೇಡ್ ಸ್ಟ್ರೈಕರ್ಸ್ ತಂಡವು ಉತ್ತಮ ಆರಂಭ ಪಡೆದಿರಲಿಲ್ಲ. ಆರಂಭಿಕರಾದ ಮ್ಯಾಥ್ಯೂ ಶಾರ್ಟ್ (19) ಹಾಗೂ ಡಿ ಆರ್ಸಿ ಶಾರ್ಟ್ (7) ಬೇಗನೆ ನಿರ್ಗಮಿಸಿದರೆ, ಆ ಬಳಿಕ ಬಂದ ಜೇಕ್ ವೆದರ್ಲ್ಯಾಂಡ್ (8) ವಿಕೆಟ್ ಕೈಚೆಲ್ಲಿಕೊಂಡರು.
ಈ ಹಂತದಲ್ಲಿ ಕಣಕ್ಕಿಳಿದ ಥಾಮಸ್ ಕೆಲ್ಲಿ 41 ರನ್ ಬಾರಿಸಿ ತಂಡವನ್ನು ಆರಂಭಿಕ ಆಘಾತದಿಂದ ಪಾರು ಮಾಡಲು ಯತ್ನಿಸಿದರು. ಇನ್ನು ಮಧ್ಯಮ ಕ್ರಮಾಂಕದಲ್ಲಿ ವಿಕೆಟ್ ಕೀಪರ್ ಬ್ಯಾಟರ್ ಹ್ಯಾರಿ ನಿಲ್ಸನ್ 33 ಎಸೆತಗಳಲ್ಲಿ 1 ಸಿಕ್ಸ್ ಹಾಗೂ 6 ಫೋರ್ಗಳೊಂದಿಗೆ 50 ರನ್ಗಳ ಕೊಡುಗೆ ನೀಡಿದರು.
ಆದರೆ ಅತ್ತ ನಿಲ್ಸನ್ ವಿಕೆಟ್ ಸಿಗುತ್ತಿದ್ದಂತೆ ಪಂದ್ಯದ ಮೇಲೆ ಸಂಪೂರ್ಣ ಹಿಡಿತ ಸಾಧಿಸಿದ ಬ್ರಿಸ್ಬೇನ್ ಹೀಟ್ ಬೌಲರ್ಗಳು 19.5 ಓವರ್ಗಳಲ್ಲಿ ಅಡಿಲೇಡ್ ಸ್ಟ್ರೈಕರ್ಸ್ ತಂಡವನ್ನು 160 ರನ್ಗಳಿಗೆ ಆಲೌಟ್ ಮಾಡಿದರು. ಈ ಮೂಲಕ 54 ರನ್ಗಳ ಭರ್ಜರಿ ಜಯ ಸಾಧಿಸಿರುವ ಬ್ರಿಸ್ಬೇನ್ ಹೀಟ್ ತಂಡವು ಬಿಗ್ ಬ್ಯಾಷ್ ಲೀಗ್ನ 13ನೇ ಸೀಸನ್ನಲ್ಲಿ ಫೈನಲ್ ಪ್ರವೇಶಿಸಿದೆ.
ಬ್ರಿಸ್ಬೇನ್ ಹೀಟ್ ಪ್ಲೇಯಿಂಗ್ 11: ಜೋಶ್ ಬ್ರೌನ್ , ಜಿಮ್ಮಿ ಪೀರ್ಸನ್ (ವಿಕೆಟ್ ಕೀಪರ್) , ಮ್ಯಾಟ್ ರೆನ್ಶಾ , ನಾಥನ್ ಮೆಕ್ಸ್ವೀನಿ (ನಾಯಕ) , ಮ್ಯಾಕ್ಸ್ ಬ್ರ್ಯಾಂಟ್ , ಚಾರ್ಲಿ ವಕಿಮ್ , ಪಾಲ್ ವಾಲ್ಟರ್ , ಮೈಕೆಲ್ ನೆಸರ್ , ಕ್ಸೇವಿಯರ್ ಬಾರ್ಟ್ಲೆಟ್ , ಸ್ಪೆನ್ಸರ್ ಜಾನ್ಸನ್ , ಮ್ಯಾಥ್ಯೂ ಕುಹ್ನೆಮನ್.
ಇದನ್ನೂ ಓದಿ: Chris Lynn: ಬಿಗ್ ಬ್ಯಾಷ್ ಲೀಗ್ನಲ್ಲಿ ಹೊಸ ಇತಿಹಾಸ ಬರೆದ ಕ್ರಿಸ್ ಲಿನ್
ಅಡಿಲೇಡ್ ಸ್ಟ್ರೈಕರ್ಸ್ ಪ್ಲೇಯಿಂಗ್ 11: ಮ್ಯಾಥ್ಯೂ ಶಾರ್ಟ್ (ನಾಯಕ) , ಡಿ ಆರ್ಸಿ ಶಾರ್ಟ್ , ಜೇಕ್ ವೆಥರಾಲ್ಡ್ , ಥಾಮಸ್ ಕೆಲ್ಲಿ , ಹ್ಯಾರಿ ನಿಲ್ಸನ್ (ವಿಕೆಟ್ ಕೀಪರ್) , ಬೆನ್ ಮಾನೆಂಟಿ , ಜೇಮ್ಸ್ ಬಾಜ್ಲಿ , ಹೆನ್ರಿ ಥಾರ್ನ್ಟನ್ , ಡೇವಿಡ್ ಪೇನ್ , ಕ್ಯಾಮರೂನ್ ಬಾಯ್ಸ್ , ಲಾಯ್ಡ್ ಪೋಪ್.