India New Selectors: ಟೀಂ ಇಂಡಿಯಾಕ್ಕೆ ಇಬ್ಬರು ಹೊಸ ಆಯ್ಕೆದಾರರ ನೇಮಕ

India New Selectors:ಬಿಸಿಸಿಐ ವಾರ್ಷಿಕ ಮಹಾಸಭೆಯಲ್ಲಿ ಟೀಂ ಇಂಡಿಯಾಕ್ಕೆ ಹೊಸ ಆಯ್ಕೆದಾರರಾಗಿ ಮಾಜಿ ಕ್ರಿಕೆಟಿಗರಾದ ಪ್ರಗ್ಯಾನ್ ಓಜಾ ಮತ್ತು ಆರ್‌ಪಿ ಸಿಂಗ್ ಅವರನ್ನು ನೇಮಿಸಲಾಗಿದೆ. ಈ ಸ್ಥಾನಕ್ಕೆ ಪ್ರಮುಖ ಸ್ಪರ್ಧಿಯಾಗಿದ್ದ ಪ್ರವೀಣ್ ಕುಮಾರ್ ಅವರಿಗೆ ಜವಾಬ್ದಾರಿ ಸಿಕ್ಕಿಲ್ಲ. ಸಭೆಯಲ್ಲಿ ಬಿಸಿಸಿಐನ ಅಧ್ಯಕ್ಷ, ಉಪಾಧ್ಯಕ್ಷ, ಕಾರ್ಯದರ್ಶಿ, ಖಜಾಂಚಿ ಸೇರಿದಂತೆ ಹಲವು ಪ್ರಮುಖ ಹುದ್ದೆಗಳಿಗೆ ಹೊಸ ಸದಸ್ಯರನ್ನು ಆಯ್ಕೆ ಮಾಡಲಾಗಿದೆ.

India New Selectors: ಟೀಂ ಇಂಡಿಯಾಕ್ಕೆ ಇಬ್ಬರು ಹೊಸ ಆಯ್ಕೆದಾರರ ನೇಮಕ
Team India

Updated on: Sep 28, 2025 | 5:51 PM

ಬಿಸಿಸಿಐ (BCCI) ವಾರ್ಷಿಕ ಮಹಾಸಭೆಯಲ್ಲಿ ಟೀಂ ಇಂಡಿಯಾಕ್ಕೆ ಇಬ್ಬರು ಹೊಸ ಆಯ್ಕೆದಾರರನ್ನು ನೇಮಿಸಲಾಗಿದೆ. ಈ ಹಿಂದೆ ಆಯ್ಕೆ ಮಂಡಳಿಯಲಿದ್ದ ಎಸ್. ಶರತ್ ಮತ್ತು ಸುಬ್ರೋತೋ ಬ್ಯಾನರ್ಜಿ ಬದಲಿಗೆ ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗರಾದ ಪ್ರಗ್ಯಾನ್ ಓಜಾ ( Pragyan Ojha) ಮತ್ತು ಆರ್‌ಪಿ ಸಿಂಗ್ (RP Singh) ಅವರನ್ನು ಹೊಸ ಆಯ್ಕೆದಾರರನ್ನಾಗಿ ಆಯ್ಕೆ ಮಾಡಲಾಗಿದೆ. ಮುಖ್ಯವಾದ ವಿಷಯವೆಂದರೆ ಈ ಹುದ್ದೆಗೆ ಪ್ರಮುಖ ಸ್ಪರ್ಧಿಯಾಗಿದ್ದ ಭಾರತದ ಮಾಜಿ ವೇಗಿ ಪ್ರವೀಣ್ ಕುಮಾರ್ ಅವರಿಗೆ ಈ ಜವಾಬ್ದಾರಿ ಸಿಕ್ಕಿಲ್ಲ.

ಆರ್‌ಪಿ ಸಿಂಗ್ ವೃತ್ತಿಜೀವನ

ಭಾರತದ ಪರ 24 ಟೆಸ್ಟ್, 18 ಏಕದಿನ ಮತ್ತು 6 ಟಿ20 ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಿರುವ ಪ್ರಗ್ಯಾನ್ ಓಜಾ, ಪೂರ್ವ ವಲಯದಿಂದ ಆಯ್ಕೆದಾರರಾಗಿದ್ದಾರೆ. ಇನ್ನು ಆರ್‌ಪಿ ಸಿಂಗ್ ಭಾರತ ಪರ 14 ಟೆಸ್ಟ್ ಪಂದ್ಯಗಳಲ್ಲಿ 40 ವಿಕೆಟ್‌ಗಳನ್ನು ಕಬಳಿಸಿದ್ದು, 58 ಏಕದಿನ ಪಂದ್ಯಗಳಲ್ಲಿ 69 ವಿಕೆಟ್‌ಗಳನ್ನು ಮತ್ತು 10 ಟಿ20ಪಂದ್ಯಗಳಲ್ಲಿ 15 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಆರ್‌ಪಿ ಸಿಂಗ್ ದೀರ್ಘಕಾಲದವರೆಗೆ ಪ್ರಥಮ ದರ್ಜೆ ಕ್ರಿಕೆಟ್ ಆಡಿದ್ದು, 94 ಪ್ರಥಮ ದರ್ಜೆ ಪಂದ್ಯಗಳಲ್ಲಿ 301 ವಿಕೆಟ್‌ಗಳನ್ನು ಕಬಳಿಸಿದ್ದಾರೆ.

ಪ್ರಗ್ಯಾನ್ ಓಜಾ ವೃತ್ತಿಜೀವನ

ಪ್ರಗ್ಯಾನ್ ಓಜಾ ಬಗ್ಗೆ ಹೇಳುವುದಾದರೆ, ಸಚಿನ್ ತೆಂಡೂಲ್ಕರ್ ಅವರ ಕೊನೆಯ ಅಂತರರಾಷ್ಟ್ರೀಯ ಪಂದ್ಯದ ನಂತರ ಅವರ ವೃತ್ತಿಜೀವನವೂ ಕೊನೆಗೊಂಡಿತು. ಆ ಪಂದ್ಯದಲ್ಲಿ ಅವರನ್ನು ಪಂದ್ಯಶ್ರೇಷ್ಠ ಪ್ರಶಸ್ತಿಗೂ ಆಯ್ಕೆ ಮಾಡಲಾಗಿತ್ತು. ಓಜಾ 108 ಪ್ರಥಮ ದರ್ಜೆ ಪಂದ್ಯಗಳಲ್ಲಿ ಅನುಭವ ಹೊಂದಿದ್ದು, 424 ವಿಕೆಟ್‌ಗಳನ್ನು ಪಡೆದಿದ್ದಾರೆ. ಹಾಗೆಯೇ ಟಿ20ಯಲ್ಲಿ 156 ವಿಕೆಟ್‌ಗಳನ್ನು ಪಡೆದಿದ್ದಾರೆ.

ವಾರ್ಷಿಕ ಮಹಾಸಭೆಯಲ್ಲಿ ಹಲವು ನಿರ್ಧಾರ

ಬಿಸಿಸಿಐ ವಾರ್ಷಿಕ ಮಹಾಸಭೆಯಲ್ಲಿ ಹಲವಾರು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ. ಮಿಥುನ್ ಮನ್ಹಾಸ್ ಅವರನ್ನು ಬಿಸಿಸಿಐನ ಹೊಸ ಅಧ್ಯಕ್ಷರಾಗಿ ಆಯ್ಕೆ ಮಾಡಿದ್ದರೆ, ರಾಜೀವ್ ಶುಕ್ಲಾ ಉಪಾಧ್ಯಕ್ಷರಾಗಿ ಮರು ಆಯ್ಕೆಯಾಗಿದ್ದಾರೆ. ದೇವಜಿತ್ ಸೈಕಿಯಾ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದರೆ, ಎ. ರಘುರಾಮ್ ಭಟ್ ಖಜಾಂಚಿಯಾಗಿ ಮತ್ತು ಪ್ರಭತೇಜ್ ಸಿಂಗ್ ಭಾಟಿಯಾ ಜಂಟಿ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ