ಭಾರತ vs ಸೌತ್ ಆಫ್ರಿಕಾ ಟೆಸ್ಟ್ ಸರಣಿಯ ವೇಳಾಪಟ್ಟಿಯಲ್ಲಿ ಮಹತ್ವದ ಬದಲಾವಣೆ

India vs South Africa Test Series: ಭಾರತ ಮತ್ತು ಸೌತ್ ಆಫ್ರಿಕಾ ಟೆಸ್ಟ್ ಕ್ರಿಕೆಟ್​ನಲ್ಲಿ ಈವರೆಗೆ 44 ಬಾರಿ ಮುಖಾಮುಖಿಯಾಗಿವೆ. ಈ ವೇಳೆ ಟೀಮ್ ಇಂಡಿಯಾ ಗೆದ್ದಿರುವುದು ಕೇವಲ 16 ಪಂದ್ಯಗಳನ್ನು. ಅತ್ತ ಸೌತ್ ಆಫ್ರಿಕಾ ತಂಡ 18 ಮ್ಯಾಚ್​ಗಳಲ್ಲಿ ಗೆಲುವು ದಾಖಲಿಸಿದೆ. ಇನ್ನು 10 ಪಂದ್ಯಗಳು ಡ್ರಾನಲ್ಲಿ ಕೊನೆಗೊಂಡಿವೆ.

ಭಾರತ vs ಸೌತ್ ಆಫ್ರಿಕಾ ಟೆಸ್ಟ್ ಸರಣಿಯ ವೇಳಾಪಟ್ಟಿಯಲ್ಲಿ ಮಹತ್ವದ ಬದಲಾವಣೆ
Team India

Updated on: Nov 12, 2025 | 8:54 AM

ಭಾರತ ಮತ್ತು ಸೌತ್ ಆಫ್ರಿಕಾ ನಡುವಣ ಟೆಸ್ಟ್ ಸರಣಿಯ ವೇಳಾಪಟ್ಟಿಯಲ್ಲಿ ಮಹತ್ವದ ಬದಲಾವಣೆ ಮಾಡಲಾಗಿದೆ. ಈ ಸರಣಿಯ ಮೊದಲ ಮ್ಯಾಚ್ ನವೆಂಬರ್ 14 ರಿಂದ ಶುರುವಾಗಲಿದ್ದು, ಈ ಪಂದ್ಯಕ್ಕೆ ಕೊಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನ ಆತಿಥ್ಯವಹಿಸಲಿದೆ. ಇನ್ನು ದ್ವಿತೀಯ ಪಂದ್ಯವು ನವೆಂಬರ್ 22 ರಿಂದ ಶುರುವಾಗಲಿದೆ. ಈ ಪಂದ್ಯ ನಡೆಯುವುದು ಗುವಾಹಟಿಯ ಬರ್ಸಪಾರ ಸ್ಟೇಡಿಯಂನಲ್ಲಿ. ಹೀಗಾಗಿಯೇ ಇದೀಗ ದ್ವಿತೀಯ ಟೆಸ್ಟ್ ಪಂದ್ಯದ ಸಮಯದಲ್ಲಿ ಮಹತ್ವದ ಬದಲಾವಣೆ ಮಾಡಲಾಗಿದೆ.

ಗುವಾಹಟಿಯಲ್ಲಿ ನಡೆಯಲಿರುವ ಭಾರತ ಮತ್ತು ಸೌತ್ ಆಫ್ರಿಕಾ ನಡುವಣ 2ನೇ ಟೆಸ್ಟ್ ಪಂದ್ಯವು ಭಾರತೀಯ ಕಾಲಮಾನ ಬೆಳಿಗ್ಗೆ 9 ಗಂಟೆಗೆ ಶುರುವಾಗಲಿದೆ ಎಂದು ಬಿಸಿಸಿಐ ತಿಳಿಸಿದೆ. ಅಲ್ಲದೆ ಟಾಸ್ ಪ್ರಕ್ರಿಯೆ 8.30 ಕ್ಕೆ ನಡೆಯಲಿದೆ.

ಆದರೆ ಕೊಲ್ಕತ್ತಾ ಟೆಸ್ಟ್ ಪಂದ್ಯವು ಎಂದಿನಂತೆ ಬೆಳಿಗ್ಗೆ 9.30 ರಿಂದ ಆರಂಭವಾಗಲಿದೆ. ಈ ಸಮಯದಲ್ಲಿ ಮತ್ತು ವೇಳಾಪಟ್ಟಿಯಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ.

ಸಮಯ ಬದಲಾವಣೆ ಏಕೆ?

ಈಶಾನ್ಯ ಭಾರತದಲ್ಲಿ ಚಳಿಗಾಲದಲ್ಲಿ ಸೂರ್ಯೋದಯ ಮತ್ತು ಸೂರ್ಯಾಸ್ತವು ಬಹಳ ಬೇಗನೆ ಸಂಭವಿಸುತ್ತದೆ. ಅದರಂತೆ ಗುವಾಹಟಿಯಲ್ಲಿ ಈಗ ಸುಯೋರ್ದಯವು ಬೇಗನೆ ಆಗುತ್ತಿದ್ದರೆ, ಸಂಜೆ 4 ಗಂಟೆಯ ಹೊತ್ತಿಗೆ ಬೆಳಕು ಕಡಿಮೆಯಾಗುತ್ತದೆ. ಹೀಗಾಗಿ 9.30 ಕ್ಕೆ ಪಂದ್ಯ ಆರಂಭಿಸಿದರೆ ಹೆಚ್ಚು ಸಮಯ ಆಡಲು ಸಾಧ್ಯವಾಗುವುದಿಲ್ಲ. ಅದಕ್ಕಾಗಿ ಅರ್ಧಗಂಟೆ ಬೇಗನೆ ದ್ವಿತೀಯ ಟೆಸ್ಟ್ ಪ್ರಾರಂಭಿಸಲು ನಿರ್ಧರಿಸಲಾಗಿದೆ.

ಬ್ರೇಕ್ ಟೈಮ್​ನಲ್ಲೂ ಬದಲಾವಣೆ:

ಪಂದ್ಯ ಬೇಗನೆ ಆರಂಭವಾಗುವುದರ ಜೊತೆಗೆ 2ನೇ ಟೆಸ್ಟ್​​ನ ಸೆಷನ್ ಬ್ರೇಕ್ ಟೈಮ್​ನಲ್ಲೂ ಬದಲಾವಣೆ ಮಾಡಲಾಗಿದೆ. ಅದರಂತೆ 9 ಗಂಟೆಯಿಂದ 11 ರವರೆಗೆ ಮೊದಲ ಸೆಷನ್ ನಡೆಯಲಿದ್ದು, ಇದರ ಬೆನ್ನಲ್ಲೇ ಟೀ ಬ್ರೇಕ್ ನೀಡಲಾಗುತ್ತದೆ.

ಟೀ ಬ್ರೇಕ್ ಬಳಿಕ 11.20 ರಿಂದ 1.20 ರವರೆಗೆ ಎರಡನೇ ಸೆಷನ್ ಆಡಲಾಗುತ್ತದೆ. ಆ ನಂತರ ಲಂಚ್ ಬ್ರೇಕ್ ನೀಡಲಾಗುತ್ತದೆ. ಊಟದ ವಿರಾಮದ ಬಳಿಕ 2 ಗಂಟೆಯಿಂದ ಮೂರನೇ ಸೆಷನ್ ಆರಂಭವಾಗಲಿದ್ದು, 4 ಗಂಟೆಯವರೆಗೆ ಪಂದ್ಯ ಮುಂದುವರೆಯಲಿದೆ.

ಅಂದರೆ ಲಂಚ್ ಬ್ರೇಕ್ ಬಳಿಕ ಇಲ್ಲಿ ಟೀ ಬ್ರೇಕ್ ನೀಡಲಾಗಿಲ್ಲ. ಸಾಮಾನ್ಯವಾಗಿ ಭಾರತದ ಟೆಸ್ಟ್ ಪಂದ್ಯಗಳ ವೇಳೆ 12 ಗಂಟೆಗೆ  ಲಂಚ್ ಬ್ರೇಕ್ ತೆಗೆದುಕೊಂಡರೆ, ಮಧ್ಯಾಹ್ನ 2.10 ರ ಬಳಿಕ ಟೀ ಬ್ರೇಕ್ ತೆಗೆದುಕೊಳ್ಳಲಾಗುತ್ತಿತ್ತು. ಆದರೆ ಈ ಬಾರಿ ಈ ಬ್ರೇಕ್ ಅನ್ನು ಕೈ ಬಿಡಲಾಗಿದೆ.

ಭಾರತ vs ಸೌತ್ ಆಫ್ರಿಕಾ ಟೆಸ್ಟ್ ಸರಣಿ ವೇಳಾಪಟ್ಟಿ:

  • ನವೆಂಬರ್ 14 2025: 1ನೇ ಟೆಸ್ಟ್ ಈಡನ್ ಗಾರ್ಡನ್ಸ್, ಕೋಲ್ಕತ್ತಾ ಭಾರತ vs ಸೌತ್ ಆಫ್ರಿಕಾ ಬೆಳಗ್ಗೆ 9:30
  • ನವೆಂಬರ್ 22 2025: 2ನೇ ಟೆಸ್ಟ್ ಬರ್ಸಪಾರ ಕ್ರಿಕೆಟ್ ಕ್ರೀಡಾಂಗಣ, ಗುವಾಹಟಿ ಭಾರತ vs ಸೌತ್ ಆಫ್ರಿಕಾ ಬೆಳಿಗ್ಗೆ 9:00

ಉಭಯ ತಂಡಗಳು:

ಭಾರತ ಟೆಸ್ಟ್​ ತಂಡ: ಶುಭ್​ಮನ್ ಗಿಲ್ (ನಾಯಕ), ರಿಷಭ್ ಪಂತ್ (ಉಪನಾಯಕ), ಯಶಸ್ವಿ ಜೈಸ್ವಾಲ್, ಕೆಎಲ್ ರಾಹುಲ್, ಸಾಯಿ ಸುದರ್ಶನ್, ದೇವದತ್ ಪಡಿಕ್ಕಲ್, ಧ್ರುವ್ ಜುರೆಲ್, ರವೀಂದ್ರ ಜಡೇಜಾ, ವಾಷಿಂಗ್ಟನ್ ಸುಂದರ್, ಜಸ್​ಪ್ರೀತ್ ಬುಮ್ರಾ, ಅಕ್ಷರ್ ಪಟೇಲ್, ನಿತೀಶ್ ಕುಮಾರ್ ರೆಡ್ಡಿ, ಮೊಹಮ್ಮದ್ ಸಿರಾಜ್, ಕುಲ್ದೀಪ್ ಯಾದವ್, ಆಕಾಶ್ ದೀಪ್.

ಇದನ್ನೂ ಓದಿ: RCB ನಾಯಕ ರಜತ್ ಪಾಟಿದಾರ್ 4 ತಿಂಗಳು ಕಣಕ್ಕಿಳಿಯುವಂತಿಲ್ಲ..!

ಸೌತ್ ಆಫ್ರಿಕಾ ಟೆಸ್ಟ್​ ತಂಡ: ಟೆಂಬಾ ಬವುಮಾ (ನಾಯಕ), ಟೋನಿ ಡಿ ಝೋರ್ಝಿ, ಐಡೆನ್ ಮಾರ್ಕ್ರಾಮ್, ಜುಬೇರ್ ಹಮ್ಝ, ಡೆವಾಲ್ಡ್ ಬ್ರೆವಿಸ್, ಸೆನುರಾನ್ ಮುತ್ತುಸಾಮಿ, ಕಾರ್ಬಿನ್ ಬಾಷ್, ಮಾರ್ಕೊ ಯಾನ್ಸೆನ್, ವಿಯಾನ್ ಮುಲ್ಡರ್, ಟ್ರಿಸ್ಟನ್ ಸ್ಟಬ್ಸ್, ಕೈಲ್ ವೆರ್ರೆನ್ನೆ, ರಯಾನ್ ರಿಕೆಲ್ಟನ್, ಕೇಶವ್ ಮಹಾರಾಜ್, ಕಗಿಸೊ ರಬಾಡ, ಸೈಮನ್ ಹಾರ್ಮರ್.