AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಶ್ವ ಚಾಂಪಿಯನ್ನರನ್ನು ಎದುರಿಸಲಿರುವ ಟೀಮ್ ಇಂಡಿಯಾ

India vs South Africa Test Series: ಭಾರತ ಮತ್ತು ಸೌತ್ ಆಫ್ರಿಕಾ ಟೆಸ್ಟ್ ಕ್ರಿಕೆಟ್​ನಲ್ಲಿ ಈವರೆಗೆ 44 ಬಾರಿ ಮುಖಾಮುಖಿಯಾಗಿವೆ. ಈ ವೇಳೆ ಟೀಮ್ ಇಂಡಿಯಾ ಗೆದ್ದಿರುವುದು ಕೇವಲ 16 ಪಂದ್ಯಗಳನ್ನು. ಅತ್ತ ಸೌತ್ ಆಫ್ರಿಕಾ ತಂಡ 18 ಮ್ಯಾಚ್​ಗಳಲ್ಲಿ ಗೆಲುವು ದಾಖಲಿಸಿದೆ. ಇನ್ನು 10 ಪಂದ್ಯಗಳು ಡ್ರಾನಲ್ಲಿ ಕೊನೆಗೊಂಡಿವೆ.

ವಿಶ್ವ ಚಾಂಪಿಯನ್ನರನ್ನು ಎದುರಿಸಲಿರುವ ಟೀಮ್ ಇಂಡಿಯಾ
Team India
ಝಾಹಿರ್ ಯೂಸುಫ್
|

Updated on: Nov 09, 2025 | 9:31 AM

Share

ಬರೋಬ್ಬರಿ 2 ವರ್ಷಗಳ ಬಳಿಕ ಟೀಮ್ ಇಂಡಿಯಾ ಸೌತ್ ಆಫ್ರಿಕಾ ವಿರುದ್ಧ ಟೆಸ್ಟ್ ಸರಣಿ ಆಡಲು ಸಜ್ಜಾಗುತ್ತಿದೆ. ಆದರೆ ಈ ಬಾರಿ ಭಾರತ ತಂಡ ಎದುರಿಸುತ್ತಿರುವುದು ವಿಶ್ವ ಚಾಂಪಿಯನ್ ಸೌತ್ ಆಫ್ರಿಕಾ ತಂಡವನ್ನು. ಅಂದರೆ 2025 ರ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​​ನಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿದ ಬಳಿಕ ಇದೇ ಮೊದಲ ಬಾರಿಗೆ ಸೌತ್ ಆಫ್ರಿಕಾ ತಂಡ ಟೀಮ್ ಇಂಡಿಯಾವನ್ನು ಎದುರಿಸುತ್ತಿದೆ. ಹೀಗಾಗಿಯೇ ಈ ಸರಣಿಯು ಮಹತ್ವ ಪಡೆದುಕೊಂಡಿದೆ.

ಅದರಲ್ಲೂ ಭಾರತ ತಂಡ ಸೌತ್ ಆಫ್ರಿಕಾ ವಿರುದ್ಧ ಟೆಸ್ಟ್ ಸರಣಿ ಗೆದ್ದು 6 ವರ್ಷಗಳಾಗಿವೆ. ಕೊನೆಯ ಬಾರಿಗೆ ಟೀಮ್ ಇಂಡಿಯಾ ಆಫ್ರಿಕನ್ನರ ವಿರುದ್ಧ ಟೆಸ್ಟ್ ಸರಣಿ ಗೆದ್ದಿದ್ದು 2019 ರಲ್ಲಿ. ಅಂದು ಭಾರತ ತಂಡದ ನಾಯಕರಾಗಿದ್ದ ವಿರಾಟ್ ಕೊಹ್ಲಿ ಈಗ ಟೆಸ್ಟ್ ಕ್ರಿಕೆಟ್​ನಿಂದ ನಿವೃತ್ತರಾಗಿದ್ದಾರೆ.

ಇದೀಗ ಹಾಲಿ ಟೆಸ್ಟ್ ಚಾಂಪಿಯನ್ ಸೌತ್ ಆಫ್ರಿಕಾ ತಂಡವನ್ನು ಎದುರಿಸಲು ಯಂಗ್ ಇಂಡಿಯಾ ಸಜ್ಜಾಗುತ್ತಿದೆ. ಅದು ಸಹ ಶುಭ್​​ಮನ್ ಗಿಲ್ ನಾಯಕತ್ವದಲ್ಲಿ. ಹೀಗಾಗಿಯೇ ಈ ಬಾರಿಯ ಮುಖಾಮುಖಿ ಮತ್ತಷ್ಟು ಕುತೂಹಲವನ್ನು ಹುಟ್ಟುಹಾಕಿದೆ. ಇನ್ನು ಈ ಸರಣಿಯಲ್ಲಿ ಒಟ್ಟು 2 ಪಂದ್ಯಗಳನ್ನಾಡಲಿದ್ದು, ಈ ಪಂದ್ಯಗಳ ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ…

ಭಾರತ vs ಸೌತ್ ಆಫ್ರಿಕಾ ಟೆಸ್ಟ್ ಸರಣಿ ವೇಳಾಪಟ್ಟಿ:

ದಿನಾಂಕ ಪಂದ್ಯ ಸ್ಥಳ ತಂಡಗಳು  ಸಮಯ (IST)
 ನವೆಂಬರ್ 14 2025 1ನೇ ಟೆಸ್ಟ್ ಈಡನ್ ಗಾರ್ಡನ್ಸ್, ಕೋಲ್ಕತ್ತಾ ಭಾರತ vs ಸೌತ್ ಆಫ್ರಿಕಾ ಬೆಳಗ್ಗೆ 9:30
 ನವೆಂಬರ್ 22 2025 2ನೇ ಟೆಸ್ಟ್ ಬರ್ಸಪಾರ ಕ್ರಿಕೆಟ್ ಕ್ರೀಡಾಂಗಣ, ಗುವಾಹಟಿ ಭಾರತ vs ಸೌತ್ ಆಫ್ರಿಕಾ ಬೆಳಿಗ್ಗೆ 9:00

ಉಭಯ ತಂಡಗಳು:

ಭಾರತ ಟೆಸ್ಟ್​ ತಂಡ: ಶುಭ್​ಮನ್ ಗಿಲ್ (ನಾಯಕ), ರಿಷಭ್ ಪಂತ್ (ಉಪನಾಯಕ), ಯಶಸ್ವಿ ಜೈಸ್ವಾಲ್, ಕೆಎಲ್ ರಾಹುಲ್, ಸಾಯಿ ಸುದರ್ಶನ್, ದೇವದತ್ ಪಡಿಕ್ಕಲ್, ಧ್ರುವ್ ಜುರೆಲ್, ರವೀಂದ್ರ ಜಡೇಜಾ, ವಾಷಿಂಗ್ಟನ್ ಸುಂದರ್, ಜಸ್​ಪ್ರೀತ್ ಬುಮ್ರಾ, ಅಕ್ಷರ್ ಪಟೇಲ್, ನಿತೀಶ್ ಕುಮಾರ್ ರೆಡ್ಡಿ, ಮೊಹಮ್ಮದ್ ಸಿರಾಜ್, ಕುಲ್ದೀಪ್ ಯಾದವ್, ಆಕಾಶ್ ದೀಪ್.

ಇದನ್ನೂ ಓದಿ: RCB ನಾಯಕ ರಜತ್ ಪಾಟಿದಾರ್ 4 ತಿಂಗಳು ಕಣಕ್ಕಿಳಿಯುವಂತಿಲ್ಲ..!

ಸೌತ್ ಆಫ್ರಿಕಾ ಟೆಸ್ಟ್​ ತಂಡ: ಟೆಂಬಾ ಬವುಮಾ (ನಾಯಕ), ಟೋನಿ ಡಿ ಝೋರ್ಝಿ, ಐಡೆನ್ ಮಾರ್ಕ್ರಾಮ್, ಜುಬೇರ್ ಹಮ್ಝ, ಡೆವಾಲ್ಡ್ ಬ್ರೆವಿಸ್, ಸೆನುರಾನ್ ಮುತ್ತುಸಾಮಿ, ಕಾರ್ಬಿನ್ ಬಾಷ್, ಮಾರ್ಕೊ ಯಾನ್ಸೆನ್, ವಿಯಾನ್ ಮುಲ್ಡರ್, ಟ್ರಿಸ್ಟನ್ ಸ್ಟಬ್ಸ್, ಕೈಲ್ ವೆರ್ರೆನ್ನೆ, ರಯಾನ್ ರಿಕೆಲ್ಟನ್, ಕೇಶವ್ ಮಹಾರಾಜ್, ಕಗಿಸೊ ರಬಾಡ, ಸೈಮನ್ ಹಾರ್ಮರ್.

ಗ್ಯಾಸ್ ಸೋರಿಕೆ: ಬೆಂಕಿಯ ಫೋರ್ಸ್‌ಗೆ ಇಡೀ ಮನೆಯೇ ಛಿದ್ರ ಛಿದ್ರ
ಗ್ಯಾಸ್ ಸೋರಿಕೆ: ಬೆಂಕಿಯ ಫೋರ್ಸ್‌ಗೆ ಇಡೀ ಮನೆಯೇ ಛಿದ್ರ ಛಿದ್ರ
‘ಬಿಗ್​​ಬಾಸ್ ಬಳಿಕ ಹೇಗಿದೆ ಜೀವನ?’ ಕಾರ್ತಿಕ್ ಮಹೇಶ್ ಮಾತು: ವಿಡಿಯೋ ನೋಡಿ
‘ಬಿಗ್​​ಬಾಸ್ ಬಳಿಕ ಹೇಗಿದೆ ಜೀವನ?’ ಕಾರ್ತಿಕ್ ಮಹೇಶ್ ಮಾತು: ವಿಡಿಯೋ ನೋಡಿ
ರಂಗೋಲಿಯಲ್ಲಿ ಅರಳಿದ ಶಿವ: ಡ್ರೋಣ್ ನಲ್ಲಿ ಶಿವನ ಚಿತ್ರ ಸೆರೆ
ರಂಗೋಲಿಯಲ್ಲಿ ಅರಳಿದ ಶಿವ: ಡ್ರೋಣ್ ನಲ್ಲಿ ಶಿವನ ಚಿತ್ರ ಸೆರೆ
ಇಶಾ ಫೌಂಡೇಷನ್​​ನಲ್ಲಿ ಅದ್ದೂರಿ ಶಿವರಾತ್ರಿ ಸಂಭ್ರಮ; ನೇರ ಪ್ರಸಾರ ಇಲ್ಲಿದೆ
ಇಶಾ ಫೌಂಡೇಷನ್​​ನಲ್ಲಿ ಅದ್ದೂರಿ ಶಿವರಾತ್ರಿ ಸಂಭ್ರಮ; ನೇರ ಪ್ರಸಾರ ಇಲ್ಲಿದೆ
50ನೇ ಸಿನಿಮಾ ‘ಕಿಂಗ್’ ಬಗ್ಗೆ ಲೂಸ್ ಮಾದ ಯೋಗಿ ಮಾತು: ವಿಡಿಯೋ ನೋಡಿ
50ನೇ ಸಿನಿಮಾ ‘ಕಿಂಗ್’ ಬಗ್ಗೆ ಲೂಸ್ ಮಾದ ಯೋಗಿ ಮಾತು: ವಿಡಿಯೋ ನೋಡಿ
ಕರಾವಳಿ ಯುವತಿಯರೇ ಟಾರ್ಗೆಟ್: ಇದು ಮಂಗಳೂರು ಮನ್ಮಥನ ಭಯಾನಕ ಸ್ಟೋರಿ
ಕರಾವಳಿ ಯುವತಿಯರೇ ಟಾರ್ಗೆಟ್: ಇದು ಮಂಗಳೂರು ಮನ್ಮಥನ ಭಯಾನಕ ಸ್ಟೋರಿ
ಮಹಾಶಿವರಾತ್ರಿ ಸಂಭ್ರಮದ ಮಧ್ಯೆ ಶಿವಲಿಂಗ ಮೂರ್ತಿ ಭಗ್ನ: ರೊಚ್ಚಿಗೆದ್ದ ಜನ
ಮಹಾಶಿವರಾತ್ರಿ ಸಂಭ್ರಮದ ಮಧ್ಯೆ ಶಿವಲಿಂಗ ಮೂರ್ತಿ ಭಗ್ನ: ರೊಚ್ಚಿಗೆದ್ದ ಜನ
ದೇವದತ್ ಪಡಿಕ್ಕಲ್ ಶತಕ; ಬಲಿಷ್ಠ ಸ್ಥಿತಿಯಲ್ಲಿ ಕರ್ನಾಟಕ
ದೇವದತ್ ಪಡಿಕ್ಕಲ್ ಶತಕ; ಬಲಿಷ್ಠ ಸ್ಥಿತಿಯಲ್ಲಿ ಕರ್ನಾಟಕ
ರಣಜಿ ಟ್ರೋಫಿ ಸೆಮಿಫೈನಲ್; ಸತತ 2ನೇ ಶತಕ ಸಿಡಿಸಿದ ರಾಹುಲ್
ರಣಜಿ ಟ್ರೋಫಿ ಸೆಮಿಫೈನಲ್; ಸತತ 2ನೇ ಶತಕ ಸಿಡಿಸಿದ ರಾಹುಲ್
ಕುಟುಂಬ ಸಮೇತ ಕೊಲ್ಲೂರು ಮೂಕಾಂಬಿಕೆ ದರ್ಶನ ಪಡೆದ ರಿಷಬ್ ಶೆಟ್ಟಿ; ವಿಡಿಯೋ
ಕುಟುಂಬ ಸಮೇತ ಕೊಲ್ಲೂರು ಮೂಕಾಂಬಿಕೆ ದರ್ಶನ ಪಡೆದ ರಿಷಬ್ ಶೆಟ್ಟಿ; ವಿಡಿಯೋ