Daily Devotional: ಫಲ ಸಿಗಬೇಕು ಎಂದರೆ ನೀವು ಯಾವ ದಿನ ಉಪವಾಸ ಮಾಡಬೇಕು ಗೊತ್ತಾ?
ಯಾವ ದಿನ ಉಪವಾಸ ಮಾಡಿದರೆ ಏನು ಫಲ ಎಂದು ಟಿವಿ9 ನಿತ್ಯ ಭಕ್ತಿ ಕಾರ್ಯಕ್ರಮದಲ್ಲಿ ಡಾ. ಬಸವರಾಜ ಗುರೂಜಿ ವಿವರಿಸಿದ್ದಾರೆ. ಉಪವಾಸವು ಅನಾದಿ ಕಾಲದಿಂದಲೂ ಭಗವಂತನ ಕೃಪೆಗೆ ಪಾತ್ರವಾಗಲು ಇರುವ ಒಂದು ದೈಹಿಕ ಶಿಸ್ತು ಮತ್ತು ಭಕ್ತಿಯ ಮಾರ್ಗ. ಇದು ಕೇವಲ ಆಹಾರ ತ್ಯಾಗವಲ್ಲ, ಬದಲಿಗೆ ಉಪ ಎಂದರೆ ಸಮೀಪ ಮತ್ತು ವಾಸ ಎಂದರೆ ಜೀವಿಸುವುದು – ಅಂದರೆ ಭಗವಂತನ ಸನ್ನಿಧಿಯಲ್ಲಿ ಜೀವಿಸುವುದು. ನಮ್ಮ ಆಸೆ ಆಕಾಂಕ್ಷೆಗಳು, ವಿವಾಹ, ವಿದ್ಯಾಭ್ಯಾಸ, ಉದ್ಯೋಗ, ಮನೆ ನಿರ್ಮಾಣ, ಅಥವಾ ಗ್ರಹದೋಷ ನಿವಾರಣೆಗಾಗಿ ಉಪವಾಸ ವ್ರತಗಳನ್ನು ಆಚರಿಸಲಾಗುತ್ತದೆ.

ಸಾಮಾನ್ಯವಾಗಿ ನಾವು ಏಕಾದಶಿ ಮತ್ತು ಹಬ್ಬ ಹರಿದಿನಗಳಲ್ಲಿ ಉಪವಾಸ ಮಾಡುತ್ತೇವೆ. ಆದರೆ ಹಿಂದೂ ಪಂಚಾಂಗದ ಪ್ರಕಾರ ಶುಕ್ಲ ಪಕ್ಷ ಮತ್ತು ಕೃಷ್ಣ ಪಕ್ಷದ ಪ್ರತಿಯೊಂದು ತಿಥಿಯ ಉಪವಾಸಕ್ಕೂ ತನ್ನದೇ ಆದ ವಿಶೇಷ ಫಲವಿದೆ. ಉದಾಹರಣೆಗೆ, ಶುಕ್ಲ ಪಕ್ಷದ ಉಪವಾಸಗಳು ಬೇಗ ಫಲ ನೀಡಿದರೆ, ಕೃಷ್ಣ ಪಕ್ಷದ ಉಪವಾಸಗಳು ಧೈರ್ಯ ಮತ್ತು ಆಧ್ಯಾತ್ಮಿಕ ಶಕ್ತಿಯನ್ನು ಒದಗಿಸುತ್ತವೆ. ಪ್ರತಿಯೊಂದು ತಿಥಿಯ ಉಪವಾಸದ ವಿಶಿಷ್ಟ ಲಾಭಗಳನ್ನು ತಿಳಿಯುವ ಮೂಲಕ ನಾವು ನಮ್ಮ ಇಷ್ಟಾರ್ಥಗಳನ್ನು ಈಡೇರಿಸಿಕೊಳ್ಳಬಹುದು ಎಂದು ಗುರೂಜಿ ವಿವರಿಸಿದ್ದಾರೆ.