AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇರಾನ್​ನಲ್ಲಿ ಸದ್ಯದ ಪರಿಸ್ಥಿತಿ ಹೇಗಿದೆ? ಯುದ್ಧದ ನೆಲದಿಂದ ವರದಿ ಮಾಡಿದ ಟಿವಿ9 ರಿಪೋರ್ಟರ್ ಸುಮೈರಾ ಖಾನ್

ಇರಾನ್​ನಲ್ಲಿ ಸದ್ಯದ ಪರಿಸ್ಥಿತಿ ಹೇಗಿದೆ? ಯುದ್ಧದ ನೆಲದಿಂದ ವರದಿ ಮಾಡಿದ ಟಿವಿ9 ರಿಪೋರ್ಟರ್ ಸುಮೈರಾ ಖಾನ್

ಸುಷ್ಮಾ ಚಕ್ರೆ
|

Updated on: May 01, 2026 | 8:41 PM

Share

ಟಿವಿ9 ಟೆಹ್ರಾನ್ ತಲುಪಿದ ಮೊದಲ ಭಾರತೀಯ ಸುದ್ದಿ ವಾಹಿನಿಯಾಗಿದೆ. ಸುಮೈರಾ ಖಾನ್ ಪ್ರಸ್ತುತ ಟೆಹ್ರಾನ್‌ನ ಫ್ರೀಡಂ ಸ್ಕ್ವೇರ್ ಬಳಿಯಿಂದ ವರದಿ ಮಾಡುತ್ತಿದ್ದು, ವೀಕ್ಷಕರಿಗೆ ಅಲ್ಲಿನ ಪರಿಸ್ಥಿತಿಗಳನ್ನು ವಿವರಿಸುತ್ತಿದ್ದಾರೆ. ಇರಾನ್ ನೆಲದ ವಾಸ್ತವ ಈಗ ಸ್ಪಷ್ಟವಾಗಿದೆ. ಇಲ್ಲಿ ಎಲ್ಲವೂ ಸಾಮಾನ್ಯವೆಂದು ತೋರುತ್ತಿದೆ. ಮೇಲ್ನೋಟಕ್ಕೆ ಶಾಂತಿಯುತವಾಗಿ ಕಂಡುಬಂದರೂ, ಅತಿ ಹೆಚ್ಚು ಕ್ಷಿಪಣಿ ದಾಳಿಗಳು ನಡೆದ ಪ್ರದೇಶ ಇದಾಗಿದೆ ಎಂದು ಸುಮೈರಾ ವಿವರಿಸಿದ್ದಾರೆ. 

ಟೆಹ್ರಾನ್, ಮೇ 1: ಟಿವಿ9 ವರದಿಗಾರ್ತಿ ಸುಮೈರಾ ಖಾನ್ ಇರಾನ್​ನ ಟೆಹ್ರಾನ್‌ನಲ್ಲಿದ್ದಾರೆ. ಅಲ್ಲಿಂದ ನೆಲದ ವರದಿಗಳನ್ನು ಪ್ರಸ್ತುತಪಡಿಸುತ್ತಿದ್ದಾರೆ. ಟಿವಿ9 ತಂಡವು ಬಾಗ್ದಾದ್ ಮೂಲಕ ಬಹಳ ದೂರ ಪ್ರಯಾಣಿಸಿ ಮೆಹ್ರಾನ್ ಗಡಿಯನ್ನು ದಾಟಿ ರಸ್ತೆಯ ಮೂಲಕ ಟೆಹ್ರಾನ್ ತಲುಪಿತು. 40 ದಿನಗಳ ಸಂಘರ್ಷದ ನಡುವೆ ಇರಾನ್‌ನಲ್ಲಿನ (Iran War) ನೆಲದ ಪರಿಸ್ಥಿತಿಯನ್ನು ಭಾರತದಲ್ಲಿ ಮೊದಲ ಬಾರಿಗೆ ಬಹಳ ಹತ್ತಿರದಿಂದ ಮತ್ತು ಯುದ್ಧಭೂಮಿಯಿಂದಲೇ ತೋರಿಸಲಾಗುತ್ತಿದೆ.

ಟೆಹ್ರಾನ್‌ನಲ್ಲಿ ಸಾಮಾನ್ಯ ಜೀವನ ಎಂದಿನಂತೆ ಮುಂದುವರೆದಿದೆ ಎಂದು ಸುಮೈರಾ ವಿವರಿಸಿದ್ದಾರೆ. ಸುಮೈರಾ ಪ್ರಕಾರ, ಇರಾನ್ ನೆಲದ ವಾಸ್ತವ ಈಗ ಸ್ಪಷ್ಟವಾಗಿದೆ. ಇಲ್ಲಿ ಎಲ್ಲವೂ ಸಾಮಾನ್ಯವೆಂದು ತೋರುತ್ತಿದೆ. ಮೇಲ್ನೋಟಕ್ಕೆ ಶಾಂತಿಯುತವಾಗಿ ಕಂಡುಬಂದರೂ, ಅತಿ ಹೆಚ್ಚು ಕ್ಷಿಪಣಿ ದಾಳಿಗಳು ನಡೆದ ಪ್ರದೇಶ ಇದಾಗಿದೆ ಎಂದು ಸುಮೈರಾ ವಿವರಿಸಿದ್ದಾರೆ. ಮುಂಬರುವ ದಿನಗಳಲ್ಲಿಯೂ ಅವರು ಟೆಹ್ರಾನ್‌ನಿಂದ ನೇರ ವರದಿ ಮಾಡಲಿದ್ದಾರೆ.

ಏಪ್ರಿಲ್ 8ರಿಂದ ಇರಾನ್ ಮತ್ತು ಅಮೆರಿಕ ನಡುವೆ ಕದನ ವಿರಾಮ ಜಾರಿಯಲ್ಲಿದೆ. ಆದರೂ ಮಧ್ಯಪ್ರಾಚ್ಯದಲ್ಲಿ ಪರಿಸ್ಥಿತಿ ಉದ್ವಿಗ್ನವಾಗಿದೆ. ಇರಾನ್, ಅಮೆರಿಕ ಮತ್ತು ಇಸ್ರೇಲ್ ನಡುವೆ ನಿರಂತರವಾಗಿ ಮಾತಿನ ಚಕಮಕಿ ನಡೆಯುತ್ತಿದೆ. ಅಗತ್ಯ ಬಂದರೆ ಯುದ್ಧ ಪುನರಾರಂಭವಾಗಬಹುದು ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಈ ಸಂಘರ್ಷದಲ್ಲಿ ಇದುವರೆಗೆ 250 ಕ್ಕೂ ಹೆಚ್ಚು ಮಕ್ಕಳು ಸೇರಿದಂತೆ 1,700ಕ್ಕೂ ಹೆಚ್ಚು ನಾಗರಿಕರು ಸಾವನ್ನಪ್ಪಿದ್ದಾರೆ. ಇರಾನ್​ನ ಯುದ್ಧಭೂಮಿಯಿಂದ ವರದಿ ಮಾಡುತ್ತಿರುವ ಮೊದಲ ಭಾರತೀಯ ಚಾನೆಲ್ ಟಿವಿ9 ಎಂಬುದು ವಿಶೇಷ. ಅದರಲ್ಲೂ ಓರ್ವ ಮಹಿಳಾ ರಿಪೋರ್ಟರ್ ಯುದ್ಧಪೀಡಿತ ಮುಸ್ಲಿಂ ದೇಶದಿಂದ ನೇರ ವರದಿ ಮಾಡುತ್ತಿರುವುದು ಇನ್ನೂ ವಿಶೇಷ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Follow Us
Sushma Chakre
Sushma Chakre

ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವಳು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ.

Read More