AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇರಾನ್​ ಯುದ್ಧಭೂಮಿಯಲ್ಲಿ ಟಿವಿ9; ಟೆಹ್ರಾನ್​ನಿಂದ ನೈಜ ಚಿತ್ರಣ ನೀಡಿದ ವರದಿಗಾರ್ತಿ

ಇರಾನ್​ ಯುದ್ಧಭೂಮಿಯಲ್ಲಿ ಟಿವಿ9; ಟೆಹ್ರಾನ್​ನಿಂದ ನೈಜ ಚಿತ್ರಣ ನೀಡಿದ ವರದಿಗಾರ್ತಿ

ಸುಷ್ಮಾ ಚಕ್ರೆ
|

Updated on:May 01, 2026 | 8:12 PM

Share

ಇರಾನ್​ನಲ್ಲಿ ನಡೆಯುತ್ತಿರುವ ಅಮೆರಿಕ ಮತ್ತು ಇಸ್ರೇಲ್ ಜೊತೆಗಿನ ಯುದ್ಧದ ನಡುವೆ ಟಿವಿ9 ಭಾರತ್​ವರ್ಷ್ ವರದಿಗಾರ್ತಿ ಸುಮೈರಾ ಖಾನ್​ ಟೆಹ್ರಾನ್​ನಿಂದ ವರದಿ ಮಾಡುತ್ತಿದ್ದಾರೆ. ಯುದ್ಧದ ಭರದಿಂದ ಸಾಗುತ್ತಿರುವ ಈ ಸಮಯದಲ್ಲಿ, ಟಿವಿ9 ಭಾರತವರ್ಷ ತಂಡ ಇರಾನ್‌ಗೆ ಆಗಮಿಸಿದೆ. ಈ ಮೂಲಕ ಯುದ್ಧದ ಸಮಯದಲ್ಲಿ ಇರಾನ್‌ನಿಂದ ವರದಿ ಮಾಡಿದ ಮೊದಲ ಭಾರತೀಯ ಚಾನೆಲ್ ಇದಾಗಿದೆ. ಟಿವಿ9 ವರದಿಗಾರ್ತಿ ಸುಮೈರಾ ಖಾನ್ ಇರಾಕ್ ಮೂಲಕ ಟೆಹ್ರಾನ್‌ಗೆ ಆಗಮಿಸಿ ಇರಾನ್​ನಿಂದಲೇ ವರದಿ ಮಾಡುತ್ತಿದ್ದಾರೆ.

ಟೆಹ್ರಾನ್, ಮೇ 1: ಇರಾನ್​ನಲ್ಲಿ ಇನ್ನೂ ಯುದ್ಧದ ಭೀತಿ ಕಡಿಮೆಯಾಗಿಲ್ಲ. ಇರಾನ್​ನಲ್ಲಿನ (Iran War) ಪರಿಸ್ಥಿತಿ ಈಗ ಹೇಗಿದೆ ಎಂಬುದನ್ನು ತಿಳಿಯಲು ಟಿವಿ9 ತಂಡ ಟೆಹ್ರಾನ್​ಗೆ ತೆರಳಿದೆ. ಈ ಮೂಲಕ ಇರಾನ್​ನಿಂದ ನೇರ ವರದಿ ಮಾಡುತ್ತಿರುವ ಮೊದಲ ಭಾರತೀಯ ಚಾನೆಲ್ ಎಂಬ ಹೆಗ್ಗಳಿಕೆಗೆ ಟಿವಿ9 ಪಾತ್ರವಾಗಿದೆ. ಟಿವಿ9 ವರದಿಗಾರ್ತಿ ಸುಮೈರಾ ಖಾನ್ ಇರಾಕ್ ಮೂಲಕ ಟೆಹ್ರಾನ್‌ಗೆ ಆಗಮಿಸಿ ಇರಾನ್​ನಿಂದಲೇ ವರದಿ ಮಾಡುತ್ತಿದ್ದಾರೆ. ರಸ್ತೆ ಮತ್ತು ಕಾಲ್ನಡಿಗೆಯ ಮೂಲಕ ಪ್ರಯಾಣಿಸಿದ ಅವರು ಫ್ರೀಡಂ ಸ್ಕ್ವೇರ್ ಬಳಿಯಿಂದ ಅಲ್ಲಿನ ಪರಿಸ್ಥಿತಿಯ ಬಗ್ಗೆ ವರದಿ ಮಾಡಿದ್ದಾರೆ.

ಟಿವಿ9 ಭಾರತ್‌ವರ್ಷ್ ವರದಿಗಾರ್ತಿ ಸುಮೈರಾ ಖಾನ್ ಟೆಹ್ರಾನ್‌ನಿಂದ ವರದಿ ಮಾಡುತ್ತಿದ್ದಾರೆ. ಸುಮೈರಾ ಫ್ರೀಡಂ ಸ್ಕ್ವೇರ್‌ನಿಂದ ಟೆಹ್ರಾನ್‌ನಲ್ಲಿನ ವಿನಾಶ ಮತ್ತು ನೆಲದ ಪರಿಸ್ಥಿತಿಗಳ ಚಿತ್ರಣವನ್ನು ಹಂಚಿಕೊಂಡಿದ್ದಾರೆ. ಟೆಹ್ರಾನ್‌ಗೆ ಅವರ ಪ್ರಯಾಣ ಸುಲಭವಾಗಿರಲಿಲ್ಲ. ಅವರು ಮೊದಲು ವಿಮಾನದ ಮೂಲಕ ಇರಾಕ್‌ಗೆ ಪ್ರಯಾಣ ಬೆಳೆಸಿದರು. ನಂತರ ಬಾಗ್ದಾದ್‌ನಿಂದ ಸುದೀರ್ಘವಾದ ಕಾರು ಪ್ರಯಾಣ ಮಾಡಿದರು. ನಂತರ ಸ್ವಲ್ಪ ದೂರ ನಡೆಯಬೇಕಾಯಿತು. ಅನೇಕ ತೊಂದರೆಗಳು ಮತ್ತು ಸವಾಲುಗಳ ಹೊರತಾಗಿಯೂ, ಸುಮೈರಾ ಖಾನ್ ಟೆಹ್ರಾನ್ ತಲುಪಿದರು.

ಸುಮೈರಾ ಅವರು ಫ್ರೀಡಂ ಸ್ಕ್ವೇರ್ ಹಲವಾರು ದಾಳಿಗಳನ್ನು ಕಂಡಿದ್ದರೂ ತಕ್ಷಣ ಅದನ್ನು ಇರಾನ್ ಮರು ನಿರ್ಮಿಸಿದೆ. ದಾಳಿಗಳು ಹೋಟೆಲ್‌ಗಳು ಮತ್ತು ಕಟ್ಟಡಗಳ ಗಾಜಿನ ಕಿಟಕಿಗಳನ್ನು ಸಹ ಹಾನಿಗೊಳಿಸಿವೆ. ಈಗಾಗಲೇ ಅವುಗಳನ್ನು ದುರಸ್ತಿ ಮಾಡಲಾಗಿದೆ. ಟೆಹ್ರಾನ್‌ನಲ್ಲಿ ಸಾಮಾನ್ಯ ಜೀವನ ಎಂದಿನಂತೆ ಮುಂದುವರೆದಿದೆ ಎಂದು ಸುಮೈರಾ ವಿವರಿಸಿದರು. ಸುಮೈರಾ ಇಂಕಿಲಾಬ್ ಬೀದಿಯಲ್ಲಿರುವ ಅಯತೊಲ್ಲಾ ಅಲಿ ಖಮೇನಿ ಅವರ ಫೋಟೋವನ್ನು ಕೂಡ ತೋರಿಸಿದರು. ಈ ಫೋಟೋ ಇರಾನಿನ ಜನರ ಚೈತನ್ಯವನ್ನು ಪ್ರತಿನಿಧಿಸುವುದರಿಂದ ಬಹಳ ಮುಖ್ಯವಾಗಿದೆ. ಅಮೆರಿಕದೊಂದಿಗಿನ ಯುದ್ಧದ ನಡುವೆ ಇರಾನ್ ಬಲವಾಗಿ ನಿಂತಿದೆ ಎಂದು ಈ ಚಿತ್ರ ತೋರಿಸುತ್ತದೆ ಎಂದು ಅವರು ಹೇಳಿದ್ದಾರೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Published on: May 01, 2026 08:12 PM
Follow Us