3 ಓವರ್ನಲ್ಲಿ ಆಲೌಟ್: ನೇಪಾಳ ವಿರುದ್ಧ ಕೂಡ ಸೋತ ಟೀಮ್ ಇಂಡಿಯಾ
Hong Kong Sixes: ಹಾಂಗ್ ಕಾಂಗ್ ಸಿಕ್ಸಸ್ ಟೂರ್ನಿಯು 1993 ರಲ್ಲೇ ಪ್ರಾರಂಭವಾಗಿತ್ತು. 1997 ರವರೆಗೆ ಪ್ರತಿ ವರ್ಷ ಆಯೋಜನೆಗೊಂಡಿದ್ದ ಈ ಟೂರ್ನಿಯನ್ನು ಆ ಬಳಿಕ ಕೆಲ ಕಾಲ ಸ್ಥಗಿತಗೊಳಿಸಲಾಗಿತ್ತು. ಇದಾದ ಬಳಿಕ 2001 ರಲ್ಲಿ ಮತ್ತೆ ಶುರುವಾದ ಹಾಂಗ್ ಕಾಂಗ್ ಸಿಕ್ಸಸ್ ಟೂರ್ನಿಯಲ್ಲಿ ಸತತ 13 ಸೀಸನ್ಗಳನ್ನು ಆಡಲಾಗಿದೆ.
ಹಾಂಗ್ ಕಾಂಗ್ನ ಮಿಷನ್ ರೋಡ್ ಗ್ರೌಂಡ್ನಲ್ಲಿ ನಡೆದ ಹಾಂಗ್ ಕಾಂಗ್ ಸಿಕ್ಸಸ್ ಟೂರ್ನಿಯಲ್ಲಿ ಭಾರತ ತಂಡ ಒಂದೇ ದಿನ ಹ್ಯಾಟ್ರಿಕ್ ಸೋಲನುಭವಿಸಿದೆ. ಅದರಲ್ಲೂ ನೇಪಾಳ ತಂಡದ ವಿರುದ್ಧ ಸೋತು ಭಾರೀ ಮುಖಭಂಗ ಅನುಭವಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ನೇಪಾಳ ತಂಡವು ನಿಗದಿತ 6 ಓವರ್ಗಳಲ್ಲಿ 137 ರನ್ ಕಲೆಹಾಕಿದ್ದರು.
138 ರನ್ಗಳ ಗುರಿ ಬೆನ್ನತ್ತಿದ ಭಾರತ ತಂಡವು 3 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 45 ರನ್ಗಳಿಸಿ ಆಲೌಟ್ ಆಗಿದೆ. ಈ ಮೂಲಕ ನೇಪಾಳ ತಂಡವು 92 ರನ್ಗಳ ಅಮೋಘ ಜಯ ಸಾಧಿಸಿದೆ. ಇದಕ್ಕೂ ಮುನ್ನ ನಡೆದ ಕುವೈತ್ ಹಾಗೂ ಯುಎಇ ವಿರುದ್ಧದ ಪಂದ್ಯಗಳಲ್ಲೂ ಭಾರತ ತಂಡ ಪರಾಜಯಗೊಂಡಿತ್ತು.
ಟೀಮ್ ಇಂಡಿಯಾ ವಿರುದ್ಧದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದಕುವೈತ್ ತಂಡವು ನಿಗದಿತ 6 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 105 ರನ್ ಕಲೆಹಾಕಿದ್ದರು. ಈ ಗುರಿಯನ್ನು ಬೆನ್ನತ್ತಿದ ಭಾರತ ತಂಡ 5.4 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 79 ರನ್ಗಳಿಸಿ ಆಲೌಟ್ ಆಯಿತು. ಈ ಮೂಲಕ ಕುವೈತ್ ತಂಡ 27 ರನ್ಗಳ ಜಯ ಸಾಧಿಸಿದ್ದರು.
ಇನ್ನು ದ್ವಿತೀಯ ಪಂದ್ಯದಲ್ಲಿ ಭಾರತ ಮತ್ತು ಯುಎಇ ತಂಡಗಳು ಮುಖಾಮುಖಿಯಾಗಿದ್ದವು. ಈ ಮ್ಯಾಚ್ನಲ್ಲಿ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ ಪರ ಅಭಿಮನ್ಯು ಮಿಥುನ್ 16 ಎಸೆತಗಳಲ್ಲಿ 50 ರನ್ ಬಾರಿಸಿದರೆ, ದಿನೇಶ್ ಕಾರ್ತಿಕ್ 14 ಎಸೆತಗಳಲ್ಲಿ 42 ರನ್ಗಳಿಸಿದ್ದರು. ಈ ಮೂಲಕ 6 ಓವರ್ಗಳಲ್ಲಿ ಟೀಮ್ ಇಂಡಿಯಾ 107 ರನ್ ಕಲೆಹಾಕಿತು.
108 ರನ್ಗಳ ಗುರಿ ಬೆನ್ನತ್ತಿದ ಯುಎಇ ಪರ ಖಾಲಿದ್ ಶಾ 14 ಎಸೆತಗಳಲ್ಲಿ 50 ರನ್ ಸಿಡಿಸಿದ್ದಾರೆ. ಈ ಅರ್ಧಶತಕದ ನೆರವಿನೊಂದಿಗೆ ಯುಎಇ ತಂಡವು 5.5 ಓವರ್ಗಳಲ್ಲಿ 111 ರನ್ ಬಾರಿಸಿ 4 ವಿಕೆಟ್ಗಳ ಭರ್ಜರಿ ಜಯ ಸಾಧಿಸಿತು. ಈ ಎರಡು ಸೋಲುಗಳ ಬಳಿಕ ಇದೀಗ ನೇಪಾಳ ವಿರುದ್ಧ 92 ರನ್ಗಳ ಹೀನಾಯ ಸೋಲನುಭವಿಸಿದೆ.
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್ಪೋರ್ಟ್ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!

