IND vs ENG Test: ಇಂಗ್ಲೆಂಡ್ ಸರಣಿಗೆ ಕಿಶನ್ ಅವರನ್ನು ಕೇಳಲಾಗಿತ್ತು: ಆಗ ಇಶಾನ್ ಕೊಟ್ಟ ಉತ್ತರ ಏನು ಗೊತ್ತೇ?

Ishan Kishan, India vs England Test Series: ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಆಡದಿರುವಾಗ ದೇಶೀಯ ಕ್ರಿಕೆಟ್‌ನಲ್ಲಿ ಆಡಬೇಕು ಎಂಬ ಬಿಸಿಸಿಐ ಆದೇಶವನ್ನು ನಿರ್ಲಕ್ಷಿಸಿದ ನಂತರ ಇಶಾನ್ ಕಿಶನ್ ಅವರನ್ನು ವಾರ್ಷಿಕ ಒಪ್ಪಂದದಿಂದ ಕೈಬಿಟ್ಟಿದೆ. ಇದೀಗ ಕಿಶನ್ ಬಗ್ಗೆ ಹೊಸ ಸುದ್ದಿ ಹೊರಬಿದ್ದಿದ್ದು, ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಸಮಯದಲ್ಲಿ ಬಿಸಿಸಿಐ ಇಶಾನ್ ಕಿಶನ್ ಅವರನ್ನು ಸಂಪರ್ಕಿಸಿತ್ತಂತೆ.

IND vs ENG Test: ಇಂಗ್ಲೆಂಡ್ ಸರಣಿಗೆ ಕಿಶನ್ ಅವರನ್ನು ಕೇಳಲಾಗಿತ್ತು: ಆಗ ಇಶಾನ್ ಕೊಟ್ಟ ಉತ್ತರ ಏನು ಗೊತ್ತೇ?
Ishan Kishan and IND vs ENG
Follow us
Vinay Bhat
|

Updated on: Mar 02, 2024 | 9:09 AM

ಬಿಸಿಸಿಐ ವಾರ್ಷಿಕ ಗುತ್ತಿಗೆ ಪಟ್ಟಿಯಿಂದ ಕೈಬಿಟ್ಟ ನಂತರ ಭಾರತ ಕ್ರಿಕೆಟಿಗರಾದ ಇಶಾನ್ ಕಿಶನ್ (Ishan Kishan) ಅವರ ಭವಿಷ್ಯವು ಅಪಾಯದಲ್ಲಿದೆ. ಕಿಶನ್ ಮಾನಸಿಕ ಆಯಾಸದಿಂದ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯಿಂದ ಹಿಂದೆ ಸರಿದಿದ್ದರು ಮತ್ತು ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯನ್ನು ಕೂಡ ಆಡಲಿಲ್ಲ. ಆಟಗಾರರಿಗೆ ರಾಷ್ಟ್ರೀಯ ತಂಡದಲ್ಲಿ ಆಡಲು ಅವಕಾಶವಿಲ್ಲದಿದ್ದರೆ ದೇಶೀಯ ಕ್ರಿಕೆಟ್‌ನಲ್ಲಿ ತಮ್ಮ ರಾಜ್ಯ ತಂಡಗಳನ್ನು ಪ್ರತಿನಿಧಿಸಲು ಬಿಸಿಸಿಐ ಆದೇಶವನ್ನು ಹೊರಡಿಸಿತು. ಆದಾಗ್ಯೂ, ಇಶಾನ್ ಇದಕ್ಕೆ ಯಾವುದೇ ಗಮನ ಕೊಡಲಿಲ್ಲ ಮತ್ತು ಪಾಂಡ್ಯ ಸಹೋದರರೊಂದಿಗೆ ಐಪಿಎಲ್ 2024 ಕ್ಕಾಗಿ ತಯಾರಿ ನಡೆಸಲು ಬರೋಡಾಕ್ಕೆ ತೆರಳಿದರು.

ಕಿಶನ್ ಅವರ ಈ ವರ್ತನೆಯಿಂದ ಕೋಪಗೊಂಡ ಬಿಸಿಸಿಐ ಅವರನ್ನು ವಾರ್ಷಿಕ ಒಪ್ಪಂದದಿಂದ ಕೈಬಿಟ್ಟಿತು. ಬರೋಡಾ ವಿರುದ್ಧದ ರಣಜಿ ಟ್ರೋಫಿ ಕ್ವಾರ್ಟರ್ ಫೈನಲ್‌ನಲ್ಲಿ ಮುಂಬೈ ಪರ ಆಡದ ಕಾರಣ ಇಶಾನ್ ಕಿಶನ್ ಮಾತ್ರವಲ್ಲದೆ ಶ್ರೇಯಸ್ ಅಯ್ಯರ್ ಕೂಡ ಬಿಸಿಸಿಐಯ ಕಠಿಣ ಕ್ರಮವನ್ನು ಎದುರಿಸಿದರು ಮತ್ತು ಇಬ್ಬರನ್ನೂ ಒಪ್ಪಂದದಿಂದ ಕೈಬಿಡಲಾಯಿತು.

ಬಿಸಿಸಿಐ ನಿಯಮಕ್ಕೆ ಡೋಂಟ್ ಕೇರ್: ಇಶಾನ್ ಕಿಶನ್​ರಿಂದ​ ಮತ್ತೊಂದು ದೊಡ್ಡ ತಪ್ಪು

ಸ್ಟಾರ್ ಆಟಗಾರರನ್ನು ಕೈಬಿಡಲು ಬಿಸಿಸಿಐ ಸ್ಪಷ್ಟ ಕಾರಣವನ್ನು ನೀಡಿಲ್ಲ ಆದರೆ ಆಟಗಾರರನ್ನು ಒಪ್ಪಂದಕ್ಕೆ ಪರಿಗಣಿಸಲಾಗಿಲ್ಲ ಎಂದು ಖಚಿತಪಡಿಸಿದೆ. ಈಗ, ESPNCricnfo ನಲ್ಲಿನ ವರದಿಯ ಪ್ರಕಾರ, ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಸಮಯದಲ್ಲಿ ಬಿಸಿಸಿಐ ಇಶಾನ್ ಕಿಶನ್ ಅವರನ್ನು ಸಂಪರ್ಕಿಸಿದೆ ಎಂದು ತಿಳಿದುಬಂದಿದೆ. ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಆಡಿ ಎಂದು ಬಿಸಿಸಿಐ ಕಿಶನ್ ಬಳಿ ಕೇಳಿದೆ. ಆದರೆ ವಿಕೆಟ್ ಕೀಪರ್-ಬ್ಯಾಟರ್ ಇದಕ್ಕೂ ನೋ ಎಂದಿದ್ದಾರೆ. ನಾನು ಇನ್ನೂ ಟೆಸ್ಟ್ ಕ್ರಿಕೆಟ್ ಆಡಲು ಸಿದ್ಧವಾಗಿಲ್ಲ ಎಂದು ಹೇಳಿದ್ದರಂತೆ. ಕಿಶನ್ ನಿರಾಕರಿಸಿದ ನಂತರ, ಮಂಡಳಿಯು ಧ್ರುವ್ ಜುರೆಲ್ ಅವರನ್ನು ಕೆಎಸ್ ಭರತ್‌ಗೆ ಬ್ಯಾಕ್‌ಅಪ್ ವಿಕೆಟ್‌ಕೀಪರ್ ಆಗಿ ಆಯ್ಕೆ ಮಾಡಿತು.

ಉದ್ದ ಕೂದಲು, ಫಿಟ್ ಬಾಡಿ: ಹಳೇ ಲುಕ್​ನಲ್ಲಿ ಮಿಂಚಿದ ಎಂಎಸ್ ಧೋನಿ

ಇನ್ನು ಭಾರತ- ಇಂಗ್ಲೆಂಡ್ ಐದನೇ ಟೆಸ್ಟ್‌ ಪಂದ್ಯ ಮಾರ್ಚ್ 7 ರಿಂದ ಶುರುವಾಗಲಿದೆ. ಈ ಪಂದ್ಯದಿಂದ ಕೆಎಲ್ ರಾಹುಲ್ ಹೊರಬಿದ್ದಿದ್ದಾರೆ. ರಾಹುಲ್ ಇನ್ನೂ ಫಿಟ್ನೆಸ್ ಮರಳಿ ಪಡೆಯದ ಕಾರಣ ಆಟದಿಂದ ಹೊರಗುಳಿದಿದ್ದಾರೆ. ಕ್ವಾಡ್ರೈಸ್ಪ್ ಸ್ನಾಯುರಜ್ಜು ಗಾಯದ ಬಗ್ಗೆ ತಜ್ಞರ ಅಭಿಪ್ರಾಯವನ್ನು ಪಡೆಯಲು ರಾಹುಲ್ ಲಂಡನ್‌ಗೆ ಹೋಗಿದ್ದಾರೆ. ಹಾಗೆಯೆ ನಾಲ್ಕನೇ ಟೆಸ್ಟ್‌ನಿಂದ ವಿಶ್ರಾಂತಿ ಪಡೆದಿದ್ದ ವೇಗಿ ಮತ್ತು ಉಪನಾಯಕ ಜಸ್ಪ್ರೀತ್ ಬುಮ್ರಾ ಅವರು ಐದನೇ ಟೆಸ್ಟ್​ನಲ್ಲಿ ಆಡುವ XI ಗೆ ಮರಳಲಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು
ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು
ಸಚಿನ್ ಸಾವಿನ ಪ್ರಕರಣದಲ್ಲಿ ಖರ್ಗೆ ಪಾತ್ರವಿಲ್ಲ, ರಾಜೀನಾಮೆ ಯಾಕೆ? ಸುರೇಶ್
ಸಚಿನ್ ಸಾವಿನ ಪ್ರಕರಣದಲ್ಲಿ ಖರ್ಗೆ ಪಾತ್ರವಿಲ್ಲ, ರಾಜೀನಾಮೆ ಯಾಕೆ? ಸುರೇಶ್
ಚಪ್ಪಾಳೆ ಮತ್ತು ಶಿಳ್ಳೆ ಗಿಟ್ಟಿಸಲು ಸೂರಜ್ ರೇವಣ್ಣ ಮಾತಾಡಿದ್ದಾರೆ: ಶ್ರೇಯಸ್
ಚಪ್ಪಾಳೆ ಮತ್ತು ಶಿಳ್ಳೆ ಗಿಟ್ಟಿಸಲು ಸೂರಜ್ ರೇವಣ್ಣ ಮಾತಾಡಿದ್ದಾರೆ: ಶ್ರೇಯಸ್
ಕೇಂದ್ರ ಸರ್ಕಾರ ನಮಗೆ ಎಲೆಕ್ಟ್ರಿಕ್ ಬಸ್​​ಗಳನ್ನು ನೀಡುತ್ತಿಲ್ಲ: ಸಚಿವ
ಕೇಂದ್ರ ಸರ್ಕಾರ ನಮಗೆ ಎಲೆಕ್ಟ್ರಿಕ್ ಬಸ್​​ಗಳನ್ನು ನೀಡುತ್ತಿಲ್ಲ: ಸಚಿವ
ಉದಯಪುರ ಘೋಷಣೆ ಕೆಲ ರಾಜ್ಯಗಳಲ್ಲಿ ಜಾರಿಯಾಗಿಲ್ಲ: ಸತೀಶ್ ಜಾರಕಿಹೊಳಿ
ಉದಯಪುರ ಘೋಷಣೆ ಕೆಲ ರಾಜ್ಯಗಳಲ್ಲಿ ಜಾರಿಯಾಗಿಲ್ಲ: ಸತೀಶ್ ಜಾರಕಿಹೊಳಿ