Ishan Kishan: ಬಿಸಿಸಿಐ ನಿಯಮಕ್ಕೆ ಡೋಂಟ್ ಕೇರ್: ಇಶಾನ್ ಕಿಶನ್ರಿಂದ ಮತ್ತೊಂದು ದೊಡ್ಡ ತಪ್ಪು
DY Patil T20 Tournament: ಟೀಮ್ ಇಂಡಿಯಾದಿಂದ ಹೊರಗುಳಿದಿರುವ ಎಡಗೈ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಇಶಾನ್ ಕಿಶನ್ ಇದೀಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಮುಂಬೈನಲ್ಲಿ ನಡೆಯುತ್ತಿರುವ ಡಿವೈ ಪಾಟೀಲ್ ಟಿ20 ಟೂರ್ನಿಯಲ್ಲಿ ಕಣಕ್ಕಿಳಿದಿರುವ ಕಿಶನ್ ಮತ್ತೊಂದು ದೊಡ್ಡ ತಪ್ಪು ಮಾಡಿದ್ದು, ಇದಕ್ಕಾಗಿ ಶಿಕ್ಷೆಗೆ ಒಳಗಾಗುವ ಸಂಭವವಿದೆ.
ಟೀಮ್ ಇಂಡಿಯಾದ ಯುವ ವಿಕೆಟ್ ಕೀಪರ್ ಬ್ಯಾಟರ್ ಇಶಾನ್ ಕಿಶನ್ (Ishan Kishan) ಈಗ ಎಷ್ಟೇ ಸಣ್ಣ ತಪ್ಪು ಮಾಡಿದರು ಅದು ದೊಡ್ಡದರಂತೆ ಕಾಣುತ್ತಿದೆ. ಅಂಥ ಪರಿಸ್ಥಿತಿಯಲ್ಲಿ ಈಗ ಇವರಿದ್ದಾರೆ. ದಕ್ಷಿಣ ಆಫ್ರಿಕಾ ಪ್ರವಾಸದ ಸಂದರ್ಭ ಭಾರತ ತಂಡದಿಂದ ವಿಶ್ರಾಂತಿ ಕೇಳಿದ ಬಳಿಕ ಕಿಶನ್ ತಂಡಕ್ಕೆ ಮರಳಲು ಸಾಧ್ಯವಾಗಿಲ್ಲ. ಕೋಚ್ ರಾಹುಲ್ ದ್ರಾವಿಡ್ ಮಾತನ್ನು ನಿರ್ಲಕ್ಷಿಸಿದ ಅವರು, ಬಿಸಿಸಿಐ ಆದೇಶವನ್ನೂ ಪಾಲಿಸದೆ ಇದೀಗ ಕೇಂದ್ರ ಗುತ್ತಿಗೆಯಿಂದ ಹೊರ ಬಿದ್ದಿದ್ದಾರೆ. ಇವೆಲ್ಲದರ ನಡುವೆ ಇವರ ಮತ್ತೊಂದು ತಪ್ಪು ಬೆಳಕಿಗೆ ಬಂದಿದ್ದು, ಮತ್ತೆ ಬಿಸಿಸಿಐ ಕೆಂಗಣ್ಣಿಗೆ ಗುರಿಯಾಗಲಿದ್ದಾರೆ.
ಡಿಸೆಂಬರ್ 2023 ರಿಂದ ಟೀಮ್ ಇಂಡಿಯಾದಿಂದ ಹೊರಗುಳಿದಿರುವ ಇಶಾನ್ ಕಿಶನ್ ಇತ್ತೀಚಿನ ರಣಜಿ ಟ್ರೋಫಿ ಪಂದ್ಯಗಳಿಂದ ಕೂಡ ದೂರ ಉಳಿದಿದ್ದರು. ಇದೀಗ ಮುಂಬೈನಲ್ಲಿ ನಡೆಯುತ್ತಿರುವ ಡಿವೈ ಪಾಟೀಲ್ ಟಿ20 ಟೂರ್ನಿಯಲ್ಲಿ ಕಣಕ್ಕಿಳಿದಿದ್ದಾರೆ. ಆದರೆ, ಇವರ ಪುನರಾಗಮನವು ಉತ್ತಮವಾಗಿಲ್ಲ. ಬಿಸಿಸಿಐನ ಪ್ರಮುಖ ನಿಯಮವನ್ನು ನಿರ್ಲಕ್ಷಿಸಿದ್ದು, ಇದಕ್ಕಾಗಿ ಶಿಕ್ಷೆಗೆ ಒಳಗಾಗುವ ಸಂಭವವಿದೆ.
ಪ್ರಥಮ ಸೋಲು: ದಿಢೀರ್ ಎರಡನೇ ಸ್ಥಾನಕ್ಕೆ ಕುಸಿದ ಆರ್ಸಿಬಿ
ಇಶಾನ್ ಕಿಶನ್ ನಿಯಮ ಉಲ್ಲಂಘನೆ
ಡಿವೈ ಪಾಟೀಲ್ ಟಿ20 ಟೂರ್ನಿಯಲ್ಲಿ, ಇಶಾನ್ ಕಿಶನ್ ರಿಲಯನ್ಸ್ 1 ತಂಡದ ಪರ ಆಡುತ್ತಿದ್ದಾರೆ. ಆದರೆ ಮೊದಲ ಪಂದ್ಯದಲ್ಲಿ ಕಣಕ್ಕಿಳಿದಾಗ ಅವರ ಬ್ಯಾಟಿಂಗ್‌ಗಿಂತ ಹೆಲ್ಮೆಟ್ ಎಲ್ಲರ ಗಮನ ಸೆಳೆಯಿತು. ಇಶಾನ್ ಅವರ ಹೆಲ್ಮೆಟ್ ಮೇಲೆ ಬಿಸಿಸಿಐ ಲಾಂಛನವನ್ನು ಮುದ್ರಿಸಲಾಗಿತ್ತು. ಈ ಮೂಲಕ ದೊಡ್ಡ ನಿಯಮವನ್ನು ಮುರಿದಿದ್ದಾರೆ. ಬಿಸಿಸಿಐ ಆಟಗಾರರಿಗೆ ಕಟ್ಟುನಿಟ್ಟಾದ ನಿಯಮವನ್ನು ಮಾಡಿದೆ, ಆಟಗಾರರು ದೇಶೀಯ ಮಟ್ಟದಲ್ಲಿ ಯಾವುದೇ ರೀತಿಯ ಪಂದ್ಯವನ್ನು ಆಡುವಾಗ ಹೆಲ್ಮೆಟ್‌ಗಳು, ಜೆರ್ಸಿಗಳು ಅಥವಾ ಯಾವುದೇ ಸಲಕರಣೆಗಳ ಮೇಲೆ ಬಿಸಿಸಿಐ ಲೋಗೋವನ್ನು ಬಳಸುವಂತಿಲ್ಲ.
ಬಿಸಿಸಿಐ ಲೋಗೋ ಹೆಲ್ಮೆಟ್ ಧರಿಸಿರುವ ಇಶಾನ್ ಕಿಶನ್:
View this post on Instagram
ಈ ಹಿಂದೆ ಟೀಮ್ ಇಂಡಿಯಾ ಪರ ಆಡುವ ಆಟಗಾರರು ದೇಶೀಯ ಕ್ರಿಕೆಟ್‌ನಲ್ಲಿ ತಮ್ಮ ತಂಡಗಳಿಗೆ ಆಡುವಾಗ ಇದನ್ನು ಬಳಸುತ್ತಿದ್ದರು. ಆದರೆ, ಕೆಲವು ವರ್ಷಗಳ ಹಿಂದೆ, ಬಿಸಿಸಿಐ ಲೋಗೋವನ್ನು ಬಳಸುವಂತಿಲ್ಲ ಎಂಬ ನಿಯಮವನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಆದೇಶಿಸಿತ್ತು, ನಂತರ ಅಂತಹ ಹೆಲ್ಮೆಟ್‌ಗಳನ್ನು ಧರಿಸಿದ ಆಟಗಾರರು ಬಿಸಿಸಿಐ ಲಾಂಛನದ ಮೇಲೆ ಟೇಪ್ ಹಾಕುವ ಮೂಲಕ ಅವುಗಳನ್ನು ಮರೆಮಾಡುತ್ತಿದ್ದಾರೆ. ಆದರೆ ಕಿಶನ್ ಹಾಗೆ ಮಾಡದೆ ಬೋರ್ಡ್ ಲಾಂಛನವಿರುವ ಹೆಲ್ಮೆಟ್ ಧರಿಸಿ ಆಟವಾಡಿದ್ದಾರೆ. ಇದೀಗ ಬಿಸಿಸಿಐ ಇವರಿಗೆ ದಂಡ ವಿಧಿಸುವ ಸಂಭವವಿದೆ.
ಸ್ಮೃತಿ ಏಕಾಂಗಿ ಹೋರಾಟ ವ್ಯರ್ಥ; ಲೀಗ್ನಲ್ಲಿ ಮೊದಲ ಸೋಲನುಭವಿಸಿದ ಆರ್ಸಿಬಿ
ಎರಡು ದಿನಗಳ ಹಿಣದೆಯಷ್ಟೆ, ಬಿಸಿಸಿಐ ಈ ವರ್ಷದ ಕೇಂದ್ರ ಒಪ್ಪಂದಗಳಿಂದ ಇಶಾನ್ ಅವರನ್ನು ಹೊರಗಿಟ್ಟಿತ್ತು. ಟೀಮ್ ಇಂಡಿಯಾದಿಂದ ವಿರಾಮ ತೆಗೆದುಕೊಂಡ ನಂತರ, ಕಮ್ಬ್ಯಾಕ್ಗಾಗಿ ದೇಶೀಯ ಕ್ರಿಕೆಟ್ ಆಡಲು ಅವರ ಬಳಿ ಹೇಳಿತ್ತು. ಟೀಮ್ ಇಂಡಿಯಾದಿಂದ ಹೊರಗಿರುವ ಆಟಗಾರರು ರಣಜಿ ಟ್ರೋಫಿಯಲ್ಲಿ ಆಡಬೇಕು ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಆದೇಶ ನೀಡಿದ್ದರು. ಆದರೆ ಇಶಾನ್ ಈ ಯಾವುದೇ ಮಾತನ್ನು ಕೇಳಿರಲಿಲ್ಲ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ